ಸುಖಕರ ನಿದ್ದೆಯನ್ನು ದಯಪಾಲಿಸುವ ಸೂಪರ್ ಆಪ್ಸ್

Written By:

ದಿನದಿಂದ ದಿನಕ್ಕೆ ನಮ್ಮ ಜೀವನ ವೇಗಗೊಳ್ಳುತ್ತಿದೆ. ಇದರ ಪರಿಣಾಮವಾಗಿ ನಾವು ನಿದ್ರಾಹೀನತೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆ. ಎಲ್ಲರಿಗೂ ಅತ್ಯುತ್ತಮ ನಿದ್ರೆ ಹೆಚ್ಚು ಅವಶ್ಯಕವಾಗಿದೆ.

ಸುಖಕರ ನಿದ್ದೆಯನ್ನು ದಯಪಾಲಿಸುವ ಸೂಪರ್ ಆಪ್ಸ್

ಅಧ್ಯಯನದ ಪ್ರಕಾರ ನಿದ್ರಾಹೀನತೆಯ ಕೊರತೆ ಉಂಟಾಗುತ್ತಿರುವ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆಯಿಂದಾಗಿದೆಯಂತೆ. ನಿದ್ದೆ ಮಾಡುವ ಸಮಯದಲ್ಲಿ ಹೆಚ್ಚಿನವರು ಫೋನ್ ಸ್ವಿಚ್ ಆಫ್ ಮಾಡುವುದಿಲ್ಲ. ತುರ್ತು ಕರೆ ಬರಬಹುದು ಎಂಬ ಮುನ್ಸೂಚನೆಯಿಂದ ಫೋನ್ ಅನ್ನು ಆನ್‌ನಲ್ಲಿಟ್ಟುಕೊಂಡೇ ನಿದ್ದೆ ಮಾಡುತ್ತಾರೆ. ಆಗಾಗ್ಗೆ ಫೋನ್‌ಗೆ ಬರುವ ಕರೆ, ಸಂದೇಶಗಳಿಂದ ಜನರು ತೊಂದರೆಗೆ ಒಳಗಾಗುವುದರಿಂದ ನಿದ್ದೆಯ ಕೊರತೆಯನ್ನು ಇವರು ಅನುಭವಿಸುತ್ತಿದ್ದಾರೆ. ಹಾಗಿದ್ದರೆ ಈ ಸಮಸ್ಯೆಗೆ ಪರಿಹಾರವೇನು?

ಸುಖಕರ ನಿದ್ದೆಯನ್ನು ದಯಪಾಲಿಸುವ ಸೂಪರ್ ಆಪ್ಸ್

ಸ್ಲೀಪ್ ಪೀಸ್‌ಫುಲ್ಲಿ ಎಂಬ ಹೊಸ ಅಪ್ಲಿಕೇಶನ್ ಮಾರುಕಟ್ಟೆಗೆ ಬಂದಿದ್ದು ಇದು ಸಾಮಾನ್ಯವಾಗಿ ನಿಮ್ಮ ಮಲಗುವ ಸಮಯದಲ್ಲಿ ನಿತ್ಯವೂ ನಿಮ್ಮ ಫೋನ್ ಅನ್ನು ಸೈಲೆಂಟ್ ಮೋಡ್‌ಗೆ ಹಾಕುತ್ತದೆ. ಆದರೆ ಇಂತಹ ಅದ್ಭುತವನ್ನು ಮಾಡುವ ಯಾವುದೇ ಅಪ್ಲಿಕೇಶನ್ ಮಾರುಕಟ್ಟೆಗೆ ಇದುವರೆಗೆ ಬಂದಿಲ್ಲ ಎಂಬುದನ್ನು ಮರೆಯದಿರಿ.

ಈ ಅಪ್ಲಿಕೇಶನ್‌ನ ಯುಎಸ್‌ಪಿ ನಿಮಗೆ ತಡ ರಾತ್ರಿ ಕರೆ ಮಾಡುವವರಿಗೆ ಒಂದು ಎಸ್‌ಎಮ್‌ಎಸ್ ಅನ್ನು ಕಳುಹಿಸುತ್ತದೆ. ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದೆ ಮತ್ತು ತುರ್ತು ಮಾಹಿತಿ ಎಂದಾದಲ್ಲಿ "ಅರ್ಜೆಂಟ್" ಎಂಬ ಒಂದು ಪದದ ಎಸ್‌ಎಮ್‌ಎಸ್ ಅನ್ನು ಕಳುಹಿಸಿ ನಿಮ್ಮನ್ನು ಎಚ್ಚರಗೊಳಿಸಬಹುದು ಎಂಬ ವ್ಯವಸ್ಥೆಯನ್ನು ಇದು ಹೊಂದಿದೆ. ಮತ್ತು ಈ ಅಪ್ಲಿಕೇಶನ್ ಸಂಪೂರ್ಣ ಉಚಿತವಾಗಿದೆ.

ಸುಖಕರ ನಿದ್ದೆಯನ್ನು ದಯಪಾಲಿಸುವ ಸೂಪರ್ ಆಪ್ಸ್

ನನ್ನ ಫೋನ್ ನನಗೆ ಎಷ್ಟು ತೊಂದರೆಯನ್ನುಂಟು ಮಾಡುತ್ತಿದೆ ಎಂಬುದು ಇದೀಗ ನನಗೆ ತಿಳಿದು ಬಂದಿದೆ. ಮೊದಲೆಲ್ಲಾ ನಾನು ರಾತ್ರಿ 5 ರಿಂದ 10 ಬಾರಿ ಏಳುತ್ತಿದ್ದೆ ಆದರೆ ಇದೀಗ ಬೆಳಗ್ಗೆ ನನ್ನ ಫೋನ್ ಅಲರಾಮ್ ಬಡಿದಾಗ ಮಾತ್ರ ನಾನು ಎಚ್ಚರಗೊಳ್ಳುತ್ತೇನೆ. ಬೆಳಗ್ಗಿನ ಜಾವ ನಾನು ಹೆಚ್ಚು ತಾಜಾ ಮತ್ತು ಉತ್ಸಾಹಭರಿತನಾಗಿರುತ್ತೇನೆ ಎಂಬುದು ಸ್ಲೀಪ್ ಪೀಸ್‌ಫುಲ್ ಅಪ್ಲಿಕೇಶನ್ ಬಳಸುವ ಬಳಕೆದಾರರಲ್ಲೊಬ್ಬರಾದ ರೋಹನ್ ಮಾತಾಗಿದೆ.

ಇನ್ನು ಈ ಅಪ್ಲಿಕೇಶನ್ ನಿಮ್ಮೆಲ್ಲಾ ಅಗತ್ಯಗಳನ್ನು ಸಂಧಿಸಿದೆ ಎಂದಾದಲ್ಲಿ www.sleeppeacefully.in. ಇಲ್ಲಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇನ್ನು ಪ್ಲೇಸ್ಟೋರ್‌ನಲ್ಲಿ ಕೂಡ ನೇರವಾಗಿ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಸದ್ಯಕ್ಕೆ ಈ ಅಪ್ಲಿಕೇಶನ್ ಆಂಡ್ರಾಯ್ಡ್‌ಗೆ ಮಾತ್ರ ಲಭ್ಯವಿದ್ದು ನಂತರದ ದಿನಗಳಲ್ಲಿ ಡೆವಲಪರ್ ವಿಂಡೋಸ್ ಮತ್ತು ಐಓಎಸ್‌ಗೂ ಇದನ್ನು ವಿಸ್ತರಿಸಬಹುದು.

English summary
There a new app on the market named Sleep Peacefully which basically puts your phone in silentmode everyday at your preset regular bedtime. But that's no cool stuff asany other apps in the market can do that.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot