TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ದಿಂಬಿನಡಿಯಲ್ಲಿ ಫೋನ್ ಇರಿಸಿ ಮಲಗಿದಿರಿ ಜೋಕೆ!!!
ಆಧುನಿಕ ತಂತ್ರಜ್ಞಾನಕ್ಕೆ ನಾವು ಎಷ್ಟು ನಮ್ಮನ್ನು ಅಳವಡಿಸಿಕೊಂಡಿದ್ದೇವೆ ಎಂದರೆ ಅದನ್ನು ಹೆಚ್ಚು ಸಮಯ ಬಿಟ್ಟು ಇರಲಾರದಂತಹ ಸ್ಥಿತಿ ನಮ್ಮದಾಗಿದೆ. ಮೊಬೈಲ್ ಫೋನ್‌ಗಳ ಬಳಕೆಯನ್ನು ನಾವು ಈಗೀಗ ಎಷ್ಟು ಮಾಡುತ್ತಿದ್ದೇವೆ ಎಂದಾದಲ್ಲಿ ಫೋನ್ ಅನ್ನು ಬಿಟ್ಟು ಐದು ನಿಮಿಷ ಕೂಡ ಇರಲಾರಿರಿ. ಸಂದೇಶ ಕಳುಹಿಸುವುದು, ಚಿತ್ರಗಳನ್ನು ಹಂಚುವುದು ಹೀಗೆ ಹತ್ತು ಹಲವು ಕೆಲಸಗಳನ್ನು ಫೋನ್ ಬಳಸಿ ನಾವು ಮಾಡುತ್ತೇವೆ.
ಆದರೆ ಫೋನ್ ಅನ್ನು ನಿಮ್ಮ ಪಕ್ಕದಲ್ಲಿಯೇ ಇರಿಸಿಕೊಳ್ಳಬೇಕೆಂಬ ಬಯಕೆ ಹೊಂದಿರುವವರು ನೀವಾಗಿದ್ದು ನಿಮ್ಮ ದಿಂಬಿನಡಿಯಲ್ಲೇ ಅದನ್ನಿಟ್ಟು ನೀವು ಮಲಗುತ್ತೀರಿ ಎಂದಾದಲ್ಲಿ ಇದು ನಿಮಗೆ ಕಷ್ಟವನ್ನು ತಂದೊಡ್ಡುವುದು ಖಂಡಿತ. ಆ ಕಷ್ಟಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.
ತಲೆದಿಂಬು ಸುಡುವುದು
ತಲೆದಿಂಬಿನಡಿಯಲ್ಲಿ ತನ್ನ ಫೋನ್ ಇರಿಸಿದ ಟೆಕ್ಸಾಸ್‌ನ ಹುಡುಗಿ ಬೆಳಗ್ಗೆ ಎದ್ದಾಗ ತನ್ನ ಸ್ಯಾಮ್‌ಸಂಗ್ ಫೋನ್ ಸುಟ್ಟು ತಲೆದಿಂಬಿಗೆ ಬೆಂಕಿ ಹತ್ತಿಕೊಂಡು ಅದು ಕರಕಲಾಗಿತ್ತು. ಅದೃಷ್ಟವಶಾತ್ ಈಕೆ ಈ ಅವಘಢದಿಂದ ಬಚಾವಾಗಿದ್ದಳು.
ನಿದ್ದೆಗೆ ಭಂಗ
ನಿಮ್ಮ ಮಲಗುವ ವೇಳೆಯಲ್ಲಿ ನೀವು ಅಧಿಕವಾಗಿ ಫೋನ್ ಬಳಸುತ್ತಿದ್ದೀರಿ ಎಂದಾದಲ್ಲಿ ಇದು ನಿಮ್ಮ ನಿದ್ದೆಗೆ ಭಂಗವುಂಟು ಮಾಡುವುದು ಖಂಡಿತ. ನಿದ್ದೆಯ ಸಮಯದಲ್ಲಿ ಇಲೆಕ್ಟ್ರಾನಿಕ್ ಉಪಕರಣಗಳನ್ನು ಆಫ್ ಮಾಡಿಟ್ಟುಕೊಳ್ಳಿ.
ಕ್ಯಾನ್ಸರ್ ಸಂಭವ
ಸೆಲ್‌ಫೋನ್‌ಗಳಿಂದ ಹೊರಬೀಳುವ ಅಪಾಯಕಾರಿ ರೇಡಿಯೇಷನ್‌ಗಳು ಕ್ಯಾನ್ಸರ್‌ಗೆ ಕಾರಣವಾಗಿವೆ ಎಂಬುದಾಗಿ ಸಂಶೋಧನೆಯಿಂದ ಪತ್ತೆಯಾಗಿದೆ. ಸ್ನಾಯು ಸೆಳೆತ ಮತ್ತು ತಲೆನೋವನ್ನು ಸೆಲ್‌ಫೋನ್‌ಗಳು ಉಂಟುಮಾಡುತ್ತವೆ.
ಅಲರಾಮ್‌ಗಾಗಿ ಫೋನ್ ಬಳಕೆ ಬೇಡ
ಬೆಳಗ್ಗೆ ಏಳುವುದಕ್ಕಾಗಿ ಅಲರಾಮ್ ಹೊಂದಿಸಿ ನಿಮ್ಮ ಪಕ್ಕ ನೀವು ಇಡುತ್ತೀರಿ ಎಂದಾದಲ್ಲಿ ಫೋನ್ ಬಳಸುವ ಬದಲಿಗೆ ಕಡಿಮೆ ಹಣದ ಅಲರಾಮ್ ಕ್ಲಾಕ್ ಅನ್ನು ಬಳಸಿ. ನಿಮ್ಮ ಜೀವ ಜೀವನ ಇದರಿಂದ ಸುಭದ್ರವಾಗಿರುತ್ತದೆ.
ಚರ್ಮ ಸಂಬಂಧಿ ರೋಗಗಳು
ಫೋನ್‌ಗಳಿಂದ ಹೊರಬೀಳುವ ಕೆಲವೊಂದು ರಾಸಾಯನಿಕಗಳು ಚರ್ಮ ಸಂಬಂಧಿ ರೋಗಗಳನ್ನು ನಿಮಗೆ ಉಂಟುಮಾಡಬಲ್ಲವು.
ಗಿಜ್‌ಬಾಟ್ ಲೇಖನಗಳು
ಅತಿಯಾದ ಫೋನ್ ಬಳಕೆ ಮಾಡಲಿದೆ ಆರೋಗ್ಯದಲ್ಲಿ ಏರುಪೇರು
ವೈಫೈ ಅಪಾಯಕಾರಿ ಎಂಬುದು ನಿಮಗೆಷ್ಟು ಗೊತ್ತು?
ಸ್ಮಾರ್ಟ್‌ಫೋನ್ ಬ್ಯಾಟರಿ ಸಮಸ್ಯೆಗೆ 10 ಪರಿಹಾರಗಳು
ವೈಫೈ ಬಳಸುವವರು ಸುರಕ್ಷತೆಗೆ ಪಾಲಿಸಲೇ ಬೇಕಾದ ನಿಯಮಗಳು