Home
ಸುದ್ದಿಜಾಲ

ವಾಟ್ಸಾಪ್‌ನಿಂದ ಈ ರೀತಿಯ ಉಪಯೋಗ ಕೂಡ ಸಾಧ್ಯ! ಕೇಳಿದ್ರೆ ಶಾಕ್‌ ಆಗ್ತೀರಾ?

ತುರ್ತು ಸಂದರ್ಭಗಳಲ್ಲಿ ವಾಟ್ಸಾಪ್‌ನಿಂದ ಹಲವು ರೀತಿಯ ಉಪಯೋಗ ಪಡೆದುಕೊಂಡ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇವೆ. ಆದರೆ ಇದೀಗ ಭಾರತದ ಜಮ್ಮು ಕಾಶ್ಮೀರದಲ್ಲಿ ನಡೆದಿರುವ ಈ ಪ್ರಕರಣ ನಿಮ್ಮನ್ನು ಹುಬ್ಬೆರುವಂತೆ ಮಾಡುವುದಂತೂ ಖಂಡಿತ. ವಾಟ್ಸಾಪ್‌ ಅಪ್ಲಿಕೇಶನ್‌ ಸಹಾಯ ಪಡೆದುಕೊಂಡ ವೈದ್ಯರೊಬ್ಬರು ಗರ್ಭಿಣಿ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಿದ್ದಾರೆ. ಈ ಮೂಲಕ ವಾಟ್ಸಾಪ್‌ ಅಪ್ಲಿಕೇಶನ್‌ ಅನ್ನು ವೈದ್ಯಕೀಯ ತುರ್ತುಸ್ಥಿತಿ ಸಂದರ್ಭದಲ್ಲಿಯೂ ಬಳಸಬಹುದು ಅನ್ನೊದನ್ನ ತೋರಿಸಿದೆ.

ಹೌದು, ವಾಟ್ಸಾಪ್‌ ಅಪ್ಲಿಕೇಶನ್‌ ಸಹಾಯ ಪಡೆದುಕೊಂಡ ವೈದ್ಯರೊಬ್ಬರು ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಈ ಪ್ರಕರಣ ಜಮ್ಮು ಮತ್ತು ಕಾಶ್ಮೀರದ ಕೆರಾನ್‌ ಎಂಬ ಪ್ರದೇಶದಲ್ಲಿ ನಡೆದಿದೆ. ಪ್ರಸ್ತುತ ಹೆರಿಗೆ ಯಶಸ್ವಿಯಾಗಿದ್ದು ಮಹಿಳೆಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎನ್ನಲಾಗಿದೆ. ಹಾಗಾದ್ರೆ ವೈದ್ಯರಿಗೆ ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸುವಲ್ಲಿ ವಾಟ್ಸಾಪ್‌ ಹೇಗೆ ಸಹಾಯ ಮಾಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಿಂದ ಈ ರೀತಿಯ ಉಪಯೋಗ ಕೂಡ ಸಾಧ್ಯ! ಕೇಳಿದ್ರೆ ಶಾಕ್‌ ಆಗ್ತೀರಾ?

ಜಮ್ಮು ಕಾಶ್ಮೀರದಲ್ಲಿ ಹಿಮಪಾತದ ಕಾರಣದಿಂದಾಗಿ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಕೆರಾನ್‌ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಇಲ್ಲಿ ಕ್ರಾಲ್ಪೋರಾದ ಬ್ಲಾಕ್ ವೈದ್ಯಾಧಿಕಾರಿ ಡಾ.ಮೀರ್ ಮೊಹಮ್ಮದ್ ಶಾಫಿ ಹೆರಿಗೆ ಮಾಡಿಸುವುದಕ್ಕೆ ಮುಂದಾಗಿದ್ದಾರೆ. ಆದರೆ ಇಲ್ಲಿನ ವೈದ್ಯರಿಗೆ ಹೆರಿಗೆ ಮಾಡಿಸುವುದರಲ್ಲಿ ಹೆಚ್ಚಿನ ಅನುಭವವಿಲ್ಲದ ಕಾರಣ ಅನುಭವಸ್ಥ ವೈದ್ಯರಿಂದ ಅಗತ್ಯ ಮಾಹಿತಿ ಪಡೆಯಲು ವಾಟ್ಸಾಪ್‌ ಸಹಾಯಕವಾಗಿದೆ.

ಹಿಮದ ಕಾರಣದಿಂದಾಗಿ ಕೆರಾನ್ ಪ್ರದೇಶದಲ್ಲಿ ಎಲ್ಲಾ ರೀತಿಯ ಸಂಪರ್ಕ ಕಡಿತವಾಗಿದ್ದರಿಂದ ಟೆಕ್ನಾಲಜಿಯನ್ನು ಬಳಸಿಕೊಳ್ಳಲು ವೈದ್ಯರು ಮುಂದಾಗಿದ್ದಾರೆ. ಅದರಂತೆ ವಾಟ್ಸಾಪ್‌ ಅನ್ನು ಬಳಸಿಕೊಂಡ ವೈದ್ಯರು ವೀಡಿಯೊ ಕರೆಯ ಮೂಲಕ ಹೆರಿಗೆ ಪ್ರಕ್ರಿಯೆಯ ಬಗ್ಗೆ ಅಗತ್ಯ ಮಾಹಿತಿ ಪಡೆದಿದ್ದಾರೆ. ಈ ಮೂಲಕ ಹೆರಿಗೆ ಚಿಕಿತ್ಸೆ ಯಶಸ್ವಿಯಾಗಿ ಮಹಿಳೆ ಆರೋಗ್ಯಕರ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ವಾಟ್ಸಾಪ್‌ ಕೇವಲ ಮೆಸೇಜ್‌, ಫೋಟೋ ಹಾಗೂ ವೀಡಿಯೊ ಶೇರ್‌ ಮಾಡುವುದಕ್ಕೆ ಮಾತ್ರವಲ್ಲ ಅಗತ್ಯ ಸದಂರ್ಭದಲ್ಲಿ ಸೂಕ್ತ ಉಪಯೋಗವನ್ನು ಕೂಡ ಪಡೆದುಕೊಳ್ಳಬಹುದು ಅನ್ನೊದಕ್ಕೆ ಇದು ಸಾಕ್ಷಿಯಾಗಿದೆ.

ವಾಟ್ಸಾಪ್‌ನಿಂದ ಈ ರೀತಿಯ ಉಪಯೋಗ ಕೂಡ ಸಾಧ್ಯ! ಕೇಳಿದ್ರೆ ಶಾಕ್‌ ಆಗ್ತೀರಾ?

ಇನ್ನು ವಾಟ್ಸಾಪ್‌ ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುತ್ತಲೇ ಬಂದಿದೆ. ಇದರಿಂದ ಬಳೆದಾರರು ಒಂದಲ್ಲ ಒಂದು ರೀತಿಯ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಅದರಂತೆ ಇತ್ತೀಚಿಗೆ ವಾಟ್ಸಾಪ್‌ ಐಒಎಸ್‌ ಆವೃತ್ತಿಯಲ್ಲಿ ಹೊಸ ಲಿಪ್ಯಂತರ ಫೀಚರ್ಸ್‌ ಸೇರ್ಪಡೆ ಮಾಡಲು ಸಿದ್ಧತೆ ನಡೆಸಿದೆ. ಇದರಿಂದ ಐಒಎಸ್‌ ಬಳಕೆದಾರರಿಗೆ ಸಾಕಷ್ಟು ಉಪಯೋಗವಾಗಲಿದೆ. ಇದರಿಂದ ನಿಮಗೆ ಬಂದಿರುವ ಧ್ವನಿ ಸಂದೇಶದಲ್ಲಿ ಏನು ಹೇಳಲಾಗಿದೆ ಅನ್ನೊದನ್ನ ಗುರುತಿಸಲು ಸುಲಭವಾಗಲಿದೆ. ಅಲ್ಲದೆ ಆಡಿಯೊವನ್ನು ಟೆಕ್ಸ್ಟ್‌ ಆಗಿ ಕನ್ವರ್ಟ್‌ ಮಾಡಲಿದೆ.

ವಾಟ್ಸಾಪ್‌ ತನ್ನ ಐಒಎಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಲಿಪ್ಯಂತರ ಆಯ್ಕೆಯನ್ನು ನೀಡುವುದರಿಂದ ಆಡಿಯೋ ಸಂದೇಶದ ವಿವರ ತಿಳಿಯಲು ಸಾಧ್ಯವಾಗಲಿದೆ. ಇದರಿಂದ ನೀವು ಆಡಿಯೋ ಸಂದೇಶವನ್ನು ಟೆಕ್ಸ್ಟ್‌ ಮೆಸೇಜ್‌ ರೀತಿಯಲ್ಲಿಯೇ ಓದುವುದಕ್ಕೆ ಅವಕಾಶ ಸಿಗಲಿದೆ. ಸದ್ಯ ಈ ಆಯ್ಕೆಯು ಇನ್ನು ಕೂಡ ಅಭಿವೃದ್ಧಿಯ ಹಂತದಲ್ಲಿದೆ. ಇದಲ್ಲದೆ ಈ ಫೀಚರ್ಸ್‌ನಲ್ಲಿ ಕೆಲವು ಮಿತಿಗಳನ್ನು ಸಹ ವಿಧಿಸಲಾಗಿದೆ. ಅದರಂತೆ ನಿಮ್ಮ ಆಡಿಯೋ ಸಂದೇಶವು ಪ್ರತಿಲೇಖನಗಳಿಗೆ ಹೊಂದಿಸಲಾದ ಭಾಷೆಯಲ್ಲಿದ್ದರೆ, ಆ ಪದಗಳನ್ನು ಗುರುತಿಸುವುದಿಲ್ಲ ಎಂದು ಹೇಳಲಾಗಿದೆ.

ವಾಟ್ಸಾಪ್‌ನಿಂದ ಈ ರೀತಿಯ ಉಪಯೋಗ ಕೂಡ ಸಾಧ್ಯ! ಕೇಳಿದ್ರೆ ಶಾಕ್‌ ಆಗ್ತೀರಾ?

ಇಂತಹ ಸಮಯದಲ್ಲಿ ನಿಮಗೆ ಆಡಿಯೋ ಸಂದೇಶದ ಭಾಷೆಯನ್ನು ಬದಲಾಯಿಸಲು ಕೇಳುವ ಪ್ರಾಂಪ್ಟ್ ಅನ್ನು ನೀಡುತ್ತದೆ. ಆದರೆ ಈ ಫೀಚರ್ಸ್‌ ಯಾವೆಲ್ಲಾ ಭಾಷೆಗಳನ್ನು ಬೆಂಬಲಿಸಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇದಲ್ಲದೆ ನೀವು ಸ್ವೀಕರಿಸುವ ಧ್ವನಿ ಸಂದೇಶಗಳನ್ನು ಮಾತ್ರ ಕೇಳಬಹುದು ಅಥವಾ ಓದಬಹುದು. ಇನ್ನು ವಾಟ್ಸಾಪ್‌ ಪರಿಚಯಿಸಲಿರುವ ಈ ಫೀಚರ್ಸ್ ಐಒಎಸ್‌ನಲ್ಲಿ ಮಾತ್ರ ಲಭ್ಯವಾಗಲಿದೆ. ಆದರೆ ಇದು ಆಡ್ರಾಯ್ಡ್‌ ಆವೃತ್ತಿಯಲ್ಲಿ ಯಾವಾಗ ಲಭ್ಯವಾಗಲಿದೆ ಅನ್ನೊದು ಇನ್ನು ತಿಳಿದುಬಂದಿಲ್ಲ.

Best Mobiles in India

English summary
As per a PTI report, a pregnant woman with a history of labor complications needed urgent medical attention.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+