Just In
- 9 hrs ago Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- 9 hrs ago ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- 10 hrs ago Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- 12 hrs ago Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
Don't Miss
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
32 ಕಿ.ಮೀ ದೂರದಲ್ಲೇ ಕುಳಿತು ಆಪರೇಷನ್ ಮಾಡಿದ ಭಾರತೀಯ ವೈದ್ಯ!!
ತಂತ್ರಜ್ಞಾನ ಕ್ಷೇತ್ರ ಬೆಳವಣಿಗೆಯಾದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಮೈಲಿಗಲ್ಲುಗಳು ಸೃಷ್ಟಿಯಾಗುತ್ತಿವೆ. ಇತ್ತೀಚಿನ ತಂತ್ರಜ್ಞಾನದ ಸಹಾಯದಿಂದ ಭಾರತೀಯ ವೈದ್ಯರೊಬ್ಬರು 32 ಕಿ.ಮೀ ದೂರದಲ್ಲಿ ಕುಳಿತುಕೊಂಡೇ ರೋಗಿಗೆ ಆಂಜಿಯೋಪ್ಲಾಸ್ಟಿ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದು ವೈದ್ಯಕೀಯ ಕ್ಷೇತ್ರವನ್ನು ಮತ್ತೊಂದು ಮಜಲಿಗೆ ಕೊಂಡೊಯ್ದಿದೆ.
ಹಿರಿಯ ಕಾರ್ಡಿಯಾಲಾಜಿಸ್ಟ್ ಆಗಿರುವ ಡಾ.ತೇಜಸ್ ಪಟೇಲ್ ಅವರು ಗುಜರಾತ್ನ ಗಾಂಧಿನಗರದ ಆಕರ್ಷಧಾಮ್ ಸ್ವಾಮಿನಾರಾಯಣ ಟೆಂಪಲ್ನ ಲ್ಯಾಬ್ನಿಂದಲೇ 32 ಕಿ.ಮೀ ದೂರದ ಆಸ್ಪತ್ರೆಯಲ್ಲಿದ್ದ ಮಹಿಳೆಗೆ ಆಂಜಿಯೋಪ್ಲಾಸ್ಟಿ ಮಾಡಿದ್ದಾರೆ. ಇನ್-ಹ್ಯೂಮನ್ ಟೆಲಿರೋಬೋಟಿಕ್ ಕೊರೋನರಿ ಇಂಟರ್ವೆನ್ಷನ್ ಮೂಲಕ ಈ ಸರ್ಜರಿಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ಕ್ಯಾತ್ ಲ್ಯಾಬ್, ರೋಬೋಟಿಕ್ ಆರ್ಮ್ ಹಾಗೂ ಇಂಟರ್ನೆಟ್ ಸೌಲಭ್ಯ ಇದ್ದರೆ ಜಗತ್ತಿನ ಯಾವುದೇ ಮೂಲೆಯಲ್ಲಿರೋ ರೋಗಿಗೆ ವೈದ್ಯ ಇದ್ದರೂ ರೋಗಿಗೆ ಚಿಕಿತ್ಸೆ ನೀಡಬಹುದು ಎಂದು ಡಾ.ಪಟೇಲ್ ಹೇಳಿದ್ದಾರೆ. ಹಾಗಾದರೆ, ದೇಶದಲ್ಲೇ ಇತಿಹಾಸ ಸೃಷ್ಟಿಸಿರುವ ರೋಬೋಟಿಕ್ ಆಪರೇಷನ್ ಹೇಗೆ ನಡೆಯಿತು ಎಂಬ ಕುತೋಹಲ ಮಾಹಿತಿಯನ್ನು ಮುಂದೆ ಓದಿ ತಿಳಿಯಿರಿ.
ಸಂಪೂರ್ಣ ಲೈವ್ ಆಪರೇಷನ್
ಡಾ.ತೇಜಸ್ ಪಟೇಲ್ ಅವರು ಈವರೆಗೆ 300 ರೋಬೋಟಿಕ್ ಸರ್ಜರಿಗಳನ್ನ ಮಾಡಿದ್ದಾರೆ. ಆದರೆ ಈ ಬಾರಿ ಸಂಪೂರ್ಣ ಲೈವ್ ಆಪರೇಷನ್ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ಅವರು 2 ವರ್ಷಗಳಿಂದ ತಯಾರಾಗಿದ್ದರು. ಈಗ 32 ಕಿ.ಮೀ ದೂರದ ದೂರದಲ್ಲೇ ಕುಳಿತುಕೊಂಡು ರೋಬೋಟಿಕ್ ಕೈಗಳನ್ನ ಅಪರೇಟ್ ಮಾಡೋ ಮೂಲಕ ಮಹಿಳೆಗೆ ಆಂಜಿಯೋಪ್ಲಾಸ್ಟಿ ಮಾಡಿದ್ದಾರೆ.
ರೋಬೊ ಆಪರೇಷನ್ ಹೇಗಿತ್ತು?
ಆಪರೇಷನ್ ಥಿಯೇಟರ್ನ ಕ್ಯಾತ್ ಲ್ಯಾಬ್ನಲ್ಲಿ ಇಂಟರ್ನೆಟ್ ಚಾಲಿತ ರೋಬೋಟಿಕ್ ಕೈಗಳ ಸಹಾಯದಿಂದ ಈ ಪ್ರಕ್ರಿಯೆಯನ್ನು ನಡೆಸಲಾಗಿದೆ.. ಡಾ. ಪಟೇಲ್ ಅವರು ದೂರದಲ್ಲಿ ಕುಳಿತುಕೊಂಡೇ ಕಂಪ್ಯೂಟರ್ ಸಹಾಯದಿಂದ ರೋಬೋಟಿಕ್ ಕೈಗಳನ್ನ ಅಪರೇಟ್ ಮಾಡುವ ಮೂಲಕ ಮಹಿಳೆಗೆ ಆಂಜಿಯೋಪ್ಲಾಸ್ಟಿ ಚಿಕಿತ್ಯೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ.
ವೈದ್ಯರ ತಂಡ ಮಹಿಳೆಯ ಜೊತೆ ಇತ್ತು
ಯಾವುದೇ ತಂತ್ರಜ್ಞಾನವಾದರೂ ಮೊದಲಿಗೆ ಕಾನ್ಸೆಪ್ಟ್ ರೂಪದಲ್ಲಿ ಪ್ರಾಣಿಗಳು ಅಥವಾ ಡಮ್ಮಿಗಳ ಮೇಲೆ ಪ್ರಯೋಗ ಮಾಡಲಾಗುತ್ತದೆ. ಅದನ್ನು ಯಶಸ್ವಿಯಾಗಿ ಮುಗಿಸಿದ ನಂತರ ನಮಗೆ ಇನ್-ಹ್ಯೂಮನ್ ಟೆಲಿ-ರೋಬೋಟಿಕ್ಸ್ ಪ್ರಕ್ರಿಯೆ ನಡೆಸಲು ಧೈರ್ಯ ಬಂತು. ಆದರೂ ಆಪರೇಷನ್ ಥಿಯೇಟರ್ನಲ್ಲಿ ವೈದ್ಯರ ತಂಡ ಮಹಿಳೆಯ ಜೊತೆ ಇತ್ತು ಎಂದು ಪಟೇಲ್ ಹೇಳಿದ್ದಾರೆ.
ತಂತ್ರಜ್ಞಾನ ಒದಗಿಸಿದ್ದು ಅಮೆರಿಕಾ ಸಂಸ್ಥೆ!
ಇನ್ನು, ಶಸ್ತ್ರಚಿಕಿತ್ಸೆಗೆ ಈ ತಂತ್ರಜ್ಞಾನವನ್ನು ಅಮೆರಿಕಾ ಮೂಲದ ಕಾರಿಂಡಸ್ ಸಂಸ್ಥೆ ಒದಗಿಸಿದೆ. ಆ ಸಂಸ್ಥೆಯ ಸಿಇಓ ಈ ಬಗ್ಗೆ ಮಾತನಾಡಿ, 2001ರಲ್ಲಿ ಮೊದಲ ಟೆಲಿರೋಬೋಟಿಕ್ ಸರ್ಜರಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಅಟ್ಲಾಂಟಿಕ್ನಲ್ಲಿ ಈ ಪ್ರಕ್ರಿಯೆ ಬಳಸಿ ಲ್ಯಾಪ್ರೋಸ್ಕೋಪಿಕ್ ಗಾಲ್ ಬ್ಲಾಡರ್ ಸರ್ಜರಿಯನ್ನು ಸಹ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಜಗತ್ತಿನ ಎಲ್ಲಿಯಾದರೂ ರೋಗಿಗೆ ಆಪರೇಷನ್!
ಈಗ ರೋಗಿಗೆ 32 ಕಿ.ಮೀ ದೂರದಿಂದ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ದೇಶದ ಅಥವಾ ಜಗತ್ತಿನ ಯಾವುದೇ ಮೂಲೆಯಲ್ಲಿರೋ ರೋಗಿಗೆ ಇದೇ ರೀತಿ ಆಪರೇಷನ್ ಮಾಡಬಹುದು. ಕ್ಯಾತ್ ಲ್ಯಾಬ್, ರೋಬೋಟಿಕ್ ಆರ್ಮ್ ಹಾಗೂ ಇಂಟರ್ನೆಟ್ ಸೌಲಭ್ಯ ಇದ್ದರೆ ಸಾಕು ವೈದ್ಯಎಲ್ಲೇ ಇದ್ದರೂ ರೋಗಿಗೆ ಚಿಕಿತ್ಸೆ ನೀಡಬಹುದು ಎಂದು ಡಾ. ಪಟೇಲ್ ಹೇಳಿದ್ದಾರೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999