ಹೊಸ ಮೊಬೈಲ್ ಬಿಡುಗಡೆಯಾದರೆ ಹಳೆ ಫೋನ್ ವೇಗ ಕಡಿಯಾಗುವುದೇಕೆ?..ಇದು ಮೋಸವೇ?!!

ನವೆಂಬರ್‌ ಆರಂಭದಲ್ಲಿ ಆಪಲ್‌ ಕಂಪೆನಿಯು ‘ಐಫೋನ್ 8’ ಅನ್ನು ಬಿಡುಗಡೆ ಮಾಡಿತ್ತು. ಆ ಸಂದರ್ಭ ‘ಐಫೋನ್ ಸ್ಲೋ’ ಎಂಬ ವಿಷಯದ ಬಗ್ಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸಿದವರ ಪ್ರಮಾಣ ಶೇಕಡಾ 50ರಷ್ಟು ಹೆಚ್ಚಿತ್ತು ಎಂದು ಅಂಕಿಅಂಶಗಳು ದೃಢಪಡಿಸಿವೆ.!!

|

ಒಂದು ಸ್ಮಾರ್ಟ್‌ಫೋನ್ ಅನ್ನು ಗ್ರಾಹಕ ಖರೀದಿಸಿದರೂ ಸಹ ಆ ಫೋನ್‌ ಜುಟ್ಟು ಮೊಬೈಲ್ ಕಂಪೆನಿಯ ಕೈನಲ್ಲಿಯೇ ಇರುತ್ತದೆ ಎಂಬುದು ಇಂದು ಮುಚ್ಚುಮರೆಯಾಗಿ ಉಳಿದಿಲ್ಲ.! ಆದರೆ, ಮತ್ತು ಪ್ರತಿ ಬಾರಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದ್ದಂತೆ ನಮ್ಮ ಬಳಿ ಇರುವ ಹಳೆಯ ಫೋನ್‌ನ ಕಾರ್ಯ ನಿಧಾನವಾಗುತ್ತದೆ ಎನ್ನುವುದು ನಿಜವೇ?.

ಹೌದು, ಇಂತಹದೊಂದು ಪ್ರಶ್ನೆ ವಿಶ್ವದೆಲ್ಲೆಡೆ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಕಾಡುತ್ತಿದೆ.! ಉದಾಹರಣೆಗೆ, ಆಪಲ್ ಹೊಸ ಐಫೋನ್ ಬಿಡುಗಡೆಯಾದಗೆಲ್ಲಾ ಹಳೆ ಐಫೋನ್‌ನ ಕಾರ್ಯನಿರ್ವಹಣಾ ವೇಗ ಕಡಿಮೆಯಾಗುತ್ತದೆ ಎಂದು ಆಪಲ್‌ನ ಬಹತೇಕ ಗ್ರಾಹಕರು ಅಭಿಪ್ರಾಯಪಡುತ್ತಾರೆ ಎಂದರೆ ನೀವು ನಂಬಲೇಬೇಕು.!

ಹಾಗಾದರೆ, ಹೊಸ ಮೊಬೈಲ್ ಬಂದ ನಂತರ ನಿಜವಾಗಿಯೂ ಹಳೆ ಮೊಬೈಲ್‌ಗಳ ವೇಗ ಕಡಿಮೆಯಾಗುತ್ತದೆಯೇ? ಅಥವಾ ಮೊಬೈಲ್ ಕಂಪೆನಿಗಳು ತನ್ನ ಮಾರಾಟ ಹೆಚ್ಚಿಸಿಕೊಳ್ಳಲು ಹಳೆ ಗ್ರಾಹಕರಿಗೆ ಮೋಸ ಮಾಡುತ್ತವೆಯೇ ಎಂದು ನಿಮಗೆ ಅನಿಸುತ್ತಿದೆಯಾ? ಹಾಗಿದ್ದರೆ ಉತ್ತರವನ್ನು ಮುಂದೆ ತಿಳಿಯಿರಿ.!!

ಶೇಕಡಾ 50ರಷ್ಟು ಜನರು ಒಪ್ಪುತ್ತಾರೆ.!!

ಶೇಕಡಾ 50ರಷ್ಟು ಜನರು ಒಪ್ಪುತ್ತಾರೆ.!!

ನವೆಂಬರ್‌ ಆರಂಭದಲ್ಲಿ ಆಪಲ್‌ ಕಂಪೆನಿಯು ‘ಐಫೋನ್ 8' ಅನ್ನು ಬಿಡುಗಡೆ ಮಾಡಿತ್ತು. ಆ ಸಂದರ್ಭ ‘ಐಫೋನ್ ಸ್ಲೋ' ಎಂಬ ವಿಷಯದ ಬಗ್ಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸಿದವರ ಪ್ರಮಾಣ ಶೇಕಡಾ 50ರಷ್ಟು ಹೆಚ್ಚಿತ್ತು ಎಂದು ಅಂಕಿಅಂಶಗಳು ದೃಢಪಡಿಸಿದ್ದು, ಜನರಿಗೆ ಆಪಲ್‌ ಮೇಲೆ ಎಷ್ಟು ಅಪನಂಬಿಕೆ ಇದೆ ನೋಡಿ!!

ತಂತ್ರಜ್ಞಾನ ಕಂಪೆನಿಗಳ ಮೋಸವೇ?

ತಂತ್ರಜ್ಞಾನ ಕಂಪೆನಿಗಳ ಮೋಸವೇ?

ತಂತ್ರಜ್ಞಾನ ಕಂಪೆನಿಗಳು ಹೊಸ ಉತ್ಪನ್ನಗಳ ಮಾರಾಟ ಹೆಚ್ಚಿಸಲು ಹಳೆ ಮೊಬೈಲ್‌ಗಳ ವೇಗವನ್ನು ಕಡಿಮೆ ಮಾಡುತ್ತವೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಹೊಸ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ ಅವುಗಳ ಸೇಲ್ ಹೆಚ್ಚಿಸುವ ಸಲುವಾಗಿ ಕಂಪೆನಿ ಹೀಗೆ ಮಾಡುತ್ತವೆ ಎಂಬುದು ಹಲವರ ಲೆಕ್ಕಾಚಾರ.!!

ಹಳೆ ಮೊಬೈಲ್‌ಗಳ ವೇಗ ಕಡಿಮೆಯಾಗುತ್ತವೆಯೇ?!

ಹಳೆ ಮೊಬೈಲ್‌ಗಳ ವೇಗ ಕಡಿಮೆಯಾಗುತ್ತವೆಯೇ?!

ಹಳೆ ಮೊಬೈಲ್‌ಗಳ ವೇಗ ನಿಜವಾಗಿಯೂ ಕಡಿಮೆಯಾಗುತ್ತವೆ.! ಆದರೆ, ‘ಕಂಪೆನಿಗಳು ಉದ್ದೇಶಪೂರ್ವಕವಾಗಿ ಹಳೆಯ ಫೋನ್‌ ನಿಧಾನವಾಗುವಂತೆ ಮಾಡಲು ಯಾವುದೇ ಬಲವಾದ ಕಾರಣಗಳಿಲ್ಲ' ಎಂಬುದು ಮೈಕ್ರೋಸಾಫ್ಟ್‌ನ ಮಾಜಿ ಪ್ರೋಗ್ರಾಂ ಮ್ಯಾನೇಜರ್ ‘ಗ್ರೆಗ್‌ ರೈಜ್' ಅವರು ಅಭಿಪ್ರಾಯ ಪಟ್ಟಿದ್ದಾರೆ.!!

ಹಾಗಾದರೆ ವೇಗ ಕಡಿಮೆಯಾಗುವುದೇಕೆ?

ಹಾಗಾದರೆ ವೇಗ ಕಡಿಮೆಯಾಗುವುದೇಕೆ?

ಕಂಪೆನಿಗಳು ಉದ್ದೇಶಪೂರ್ವಕವಾಗಿ ಹಳೆಯ ಫೋನ್‌ ನಿಧಾನವಾಗುವಂತೆ ಮಾಡುವ ಆರೋಪ ಸುಳ್ಳು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಹೊಸ ಸ್ಮಾರ್ಟ್‌ಫೋನ್ ಅಸ್ತಿತ್ವಕ್ಕೆ ಬಂದಾಗ ಹಳೆಯದ್ದು ನಿಧಾನವಾಗಲು ‘ಸಾಫ್ಟ್‌ವೇರ್‌ ಅಪ್‌ಗ್ರೇಡ್‌' ಕಾರಣವಂತೆ.!!

'ಸಾಫ್ಟ್‌ವೇರ್‌ ಅಪ್‌ಗ್ರೇಡ್‌’ ಕಾರಣ!?

'ಸಾಫ್ಟ್‌ವೇರ್‌ ಅಪ್‌ಗ್ರೇಡ್‌’ ಕಾರಣ!?

ಹೌದು, ತಂತ್ರಜ್ಞಾನ ಕಂಪೆನಿಗಳು ಹೊಸ ಹಾರ್ಡ್‌ವೇರ್‌ಗಳನ್ನು ಬಿಡುಗಡೆ ಮಾಡಿದಾಗ ಅವುಗಳ ಆಪರೇಟಿಂಗ್ ಸಿಸ್ಟಂಗಳನ್ನು ಸಹ ಬಿಡುಗಡೆ ಮಾಡುತ್ತವೆ. ಇಲ್ಲಿ ಹಳೆ ಆಪರೇಟಿಂಗ್ ಸಿಸ್ಟಂನಿಂದ ಹೊಸದಕ್ಕೆ ಅಪ್‌ಡೇಟ್ ಮಾಡುವುದು ಬಹಳ ಸಂಕೀರ್ಣವಾದ ವಿಚಾರವಾಗಿದ್ದು, ಹಳೆ ಸಾಧನಗಳಿಗೆ ಹೊಸ ಆಪರೇಟಿಂಗ್‌ ಸಿಸ್ಟಂ ಇನ್‌ಸ್ಟಾಲ್ ಮಾಡಿದಂತೆಲ್ಲ ಸಮಸ್ಯೆಗಳು ಉದ್ಭವಿಸಿ ಮೊಬೈಲ್‌ಗಳು ಸ್ಲೋ ಆಗುತ್ತವೆ ಎಂದು ತಜ್ಞರು ಹೇಳುತ್ತಾರೆ.!!

ಒಟ್ಟಿಗೆ 3 ಫೋನ್‌ ಪರಿಚಯಿಸಿದ ಚೀನಾದ ಮತ್ತೊಂದು ಮೊಬೈಲ್ ಕಂಪೆನಿ 'ಕೊಮಿಯೋ'!!ಒಟ್ಟಿಗೆ 3 ಫೋನ್‌ ಪರಿಚಯಿಸಿದ ಚೀನಾದ ಮತ್ತೊಂದು ಮೊಬೈಲ್ ಕಂಪೆನಿ 'ಕೊಮಿಯೋ'!!

Best Mobiles in India

English summary
Last year, research in the US lent further weight to the deliberate slowdown theory.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X