ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಈ ಸಂದೇಶದ ಬಗ್ಗೆ ಎಚ್ಚರದಿಂದಿರಿ!

|

ಅಮುಲ್‌ ಸಂಸ್ಥೆಯ 75 ನೇ ವಾರ್ಷಿಕೋತ್ಸವ ಸಂಭ್ರಮದ ಸಂದೇಶ ನಿಮಗೂ ಬಂದಿದೆಯಾ. ಅಮುಲ್‌ ಸಂದೇಶವನ್ನು ಬೇರೆಯವರಿಗೆ ಪಾರ್ವಡ್‌ ಮಾಡಿದರೆ ನಿಮಗೆ 6,000ರೂ.ಗಳ ಬಹುಮಾನದ ದೊರೆಯಲಿದೆ ಎನ್ನುವ ಸಂದೇಶ ನಿಮಗೂ ಕೂಡ ಬಂದಿರಬಹುದು. ಈ ಸಂದೇಶವನ್ನು ಬೇರೆಯವರಿಗೆ ಪಾರ್ವಡ್‌ ಮಾಡುವ ಮುನ್ನ ಈ ಸ್ಟೋರಿಯನ್ನು ಒಮ್ಮೆ ಓದಿದರೆ ಒಳಿತು. ಏಕೆಂದರೆ ನೀವು ಅಂದುಕೊಂಡತೆ ಈ ಸಂದೇಶ ಪಾರ್ವಡ್‌ ಮಾಡುವುದರಿಂದ ನಿಮಗೆ ಯಾವುದೇ ಬಹುಮಾನ ಬರುವುದಿಲ್ಲ, ಬದಲಿಗೆ ನಿಮ್ಮ ವೈಯುಕ್ತಿಕ ಮಾಹಿತಿ ಹ್ಯಾಕರ್‌ಗಳ ಪಾಲಾಗಲಿದೆ.

ಅಮುಲ್‌

ಹೌದು, ಅಮುಲ್‌ ಸಂಸ್ಥೆಯ 75 ನೇ ವಾರ್ಷಿಕೋತ್ಸವದ ಹೆಸರಿನಲ್ಲಿ ನಕಲಿ ಸಂದೇಶವೊಂದು ಹರಿದಾಡ್ತಿದೆ. ಇದು ಸ್ಪ್ಯಾಮ್‌ ಸಂದೇಶವಾಗಿದ್ದು, ವಾಟ್ಸಾಪ್ ಗ್ರೂಪ್‌ಗಳ ಮೂಲಕ ಸಾಕಷ್ಟು ಮಂದಿಗೆ ಪಾರ್ವಡ್‌ ಆಗಿದೆ. ಈ ವಾಟ್ಸಾಪ್ ಸಂದೇಶದ ಸಮೀಕ್ಷೆಯಲ್ಲಿ ನೀವು ಭಾಗವಹಿಸಿದರೆ, 6,000ರೂ. ಬಹುಮಾನಕ್ಕೆ ಅರ್ಹರಾಗುತ್ತೀರಿ ಎಂದು ಹೇಳಲಾಗಿದೆ. ಆದರೆ ಈ ಸಂದೇಶ ಸಂಪೂರ್ಣ ನಕಲಿಯಾಗಿದೆ. ಹಾಗಾದ್ರೆ ಈ ಸಂದೇಶದ ಅಸಲಿಯತ್ತೇನು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ಹರಿದಾಡುವ ನಕಲಿ ಬಹುಮಾನಗಳ ಸಂದೇಶದ ಸಾಲಿಗೆ ಇದಿಗ ಅಮುಲ್‌ ಸಂಸ್ಥೆ ಹೆಸರಿನ ಸಂದೇಶ ಕೂಡ ಸೇರಿದೆ. ದೇಶದ ಪ್ರಖ್ಯಾತ ಸಂಸ್ಥೆ ಅಮುಲ್‌ ಹೆಸರಿನಲ್ಲಿ ಹರಿದಾಡುತ್ತಿರುವ ಸಂದೇಶ ಸಂಪೂರ್ಣ ನಕಲಿಯಾಗಿದೆ. ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಈ ಸಂದೇಶದ ಮೂಲಕ ಬಳಕೆದಾರರ ಮಾಹಿತಿಯನ್ನು ಹ್ಯಾಕ್‌ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಸಂದೇಶವನ್ನು ಸ್ವೀಕರಿಸಿದ ಹಲವಾರು ಜನರು ಈ ಮೆಸೇಜ್‌ ಸ್ಕ್ಯಾಮ್‌ ಬಗ್ಗೆ ಇತರರಿಗೆ ಎಚ್ಚರಿಕೆ ನೀಡಲು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸಂದೇಶದಲ್ಲಿ

ಇನ್ನು ಈ ಸಂದೇಶದಲ್ಲಿ ಬಳಕೆದಾರರು ಕೇವಲ ಒಂದು ಸಮೀಕ್ಷೆಯನ್ನು ಪೂರ್ಣಗೊಳಿಸಬೇಕಾಗಿದೆ. ಈ ಸಮೀಕ್ಷೆಯನ್ನು ಪೂರ್ಣಗೊಳಿಸದರೆ 6,000 ರೂಪಾಯಿ ಬಹುಮಾನ ನೀಡುವುದಾಗಿ ಹೇಳಿರುವ ಲಿಂಕ್ ಅನ್ನು ಟ್ಯಾಪ್ ಮಾಡಲು ಕೇಳಲಾಗುತ್ತದೆ. ಇನ್ನು ಈ ಲಿಂಕ್‌ "www.amuldairy.com" ನಿಂದ ಪ್ರಾರಂಭವಾಗಿರುವುದರಿಂದ ಸ್ಪ್ಯಾಮ್‌ ಲಿಂಕ್‌ ಮಾದರಿಯಲ್ಲಿ ಕಾಣುವುದಿಲ್ಲ. ಆದರೆ ಈ ಲಿಂಕ್ ಅನ್ನು ತೆರೆದಾಗ ಬಳಕೆದಾರರನ್ನು ಸಂಶಯಾಸ್ಪದ ಲಿಂಕ್‌ಗೆ ಕರೆದೊಯ್ಯಲಿದೆ. ಇದರಿಂದ ಬಳಕೆದಾರರು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ.

ಅಮುಲ್

ಈ ಸಂದೇಶದಲ್ಲಿರುವ ಅಮುಲ್ ಡೈರಿಯ ಲಿಂಕ್ ಬಾಡಿ ಟೆಕ್ಸ್ಟ್‌ಗಿಂತ ಭಿನ್ನವಾಗಿದೆ. ಸಂದೇಶದಲ್ಲಿರುವ ಲಿಂಕ್ ಹೀಗಿದೆ: "http://palacefault.top/amul/tb.php?_t=16339198711633920036488". ಆದ್ದರಿಂದ ಸಂದೇಶದಲ್ಲಿನ ಲಿಂಕ್ ಮತ್ತು ಸಂದೇಶ ಎರಡನ್ನೂ ನಿರ್ಲಕ್ಷಿಸುವುದು ಉತ್ತಮ. ಸದ್ಯ ಹೆಚ್ಚಿನ ಜನರು ಈ ಸಂದೇಶದ ಬಗ್ಗೆ ಸಂಶಯ ಹೊಂದಿದ್ದು, ಇದನ್ನು ಖಚಿತಪಡಿಸಿಕೊಳ್ಳಲು ಟ್ವಿಟರ್‌ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ಟ್ಯಾಗ್ ಮಾಡಿದ್ದಾರೆ. @Amul_Coop 75 ನೇ ವಾರ್ಷಿಕೋತ್ಸವಕ್ಕಾಗಿ ಅಮುಲ್ ಆನ್‌ಲೈನ್ ರಸಪ್ರಶ್ನೆ ಅಭಿಯಾನವನ್ನು ನಡೆಸುತ್ತಿದ್ದಾರೆಯೇ, ಭಾಗವಹಿಸುವವರಿಗೆ ಸಾವಿರಾರು ರೂಪಾಯಿಗಳ ನಗದನ್ನು ನೀಡುತ್ತಾರೆಯೇ? @WhatsApp ನಲ್ಲಿ ಲಿಂಕ್‌ಗಳನ್ನು ಸ್ವೀಕರಿಸಲಾಗುತ್ತಿದೆ ಎಂದೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ, ಇಲ್ಲಿಯವರೆಗೆ, ಅಮುಲ್ ಕಾರ್ಪೊರೇಶನ್‌ನ ಮೀಟಿವೈ ಅಥವಾ ಟ್ವಿಟರ್ ಹ್ಯಾಂಡಲ್ ಈ ಯಾವುದೇ ಟ್ವೀಟ್‌ಗಳಿಗೆ ಉತ್ತರಿಸಿಲ್ಲ. ಯಾವುದೇ ಸ್ಪಷ್ಟೀಕರಣವೂ ಲಭ್ಯವಿಲ್ಲ.

ವಾಟ್ಸಾಪ್‌ನಲ್ಲಿ

ಸದ್ಯ ವಾಟ್ಸಾಪ್‌ನಲ್ಲಿ ಅಮುಲ್‌ ಹೆಸರಿನ ಸಂದೇಶ ನಿಮಗೂ ಕೂಡ ಬಂದಿದ್ದರೆ ಈ ಕೂಡಲೇ ಡಿಲೀಟ್‌ ಮಾಡಿ. ಬಹುಮಾನದ ಹೆಸರಿನಲ್ಲಿ ಲಿಂಕ್‌ ಅನ್ನು ಟ್ಯಾಪ್‌ ಮಾಡುವ ಮೂಲಕ ಹ್ಯಾಕರ್‌ಗಳ ದಾಳಿಗೆ ಸುಲಭ ತುತ್ತಾಗಬೇಡಿ. ಅಷ್ಟೇ ಅಲ್ಲ ಬೇರಯವರಿಗೆ ಸಂದೇಶವನ್ನು ಪಾರ್ವಡ್‌ ಮಾಡುವ ಗೋಜಿಗೂ ಕೂಡ ಹೋಗದಿರುವುದು ಒಳ್ಳೆಯದು. ವಾಟ್ಸಾಪ್‌ನಲ್ಲಿ ಬರುವ ಬಹುಮಾನದ ಸಂದೇಶಗಳನ್ನು ಪಾರ್ವಡ್‌ ಮಾಡುವ ಮುನ್ನ ಅದರ ಬಗ್ಗೆ ಅವಲೋಕನ ನಡೆಸುವುದು ಒಳ್ಳೆಯ ನಡೆಯಾಗಿದೆ.

ವಾಟ್ಸಾಪ್‌

ಹಾಗಂತ ವಾಟ್ಸಾಪ್‌ನಲ್ಲಿ ಈ ಮಾದರಿಯ ಸಂದೇಶಗಳು ಹರಿದಾಡುತ್ತಿರುವುದು ಇದೇ ಮೊದಲೇನಲ್ಲ. ಪ್ರಧಾನಿ ಮೋದಿ ಅವರಿಂದ ಬಹುಮಾನ ಪಡೆಯಲು ಈ ಲಿಂಕ್‌ ಅನ್ನು ಟ್ಯಾಪ್‌ ಮಾಡಿ. ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ನಿಮ್ಮ ಹೆಸರನ್ನು ಸೇರಿಸಲು ಈ ಸಂದೇಶ ಪಾರ್ವಡ್‌ ಮಾಡಿ ಎನ್ನುವ ಲಿಂಕ್‌ಗಳು ಈ ಹಿಂದಿ ಸಂಚಲನ ಸೃಷ್ಟಿಸಿವೆ. ಜೊತೆಗೆ ಇ-ಕಾಮರ್ಸ್‌ ಸಯಟ್‌ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಆಫರ್‌ ಹೆಸರಿನಲ್ಲಿಯೂ ನಕಲಿ ಸಂದೇಶಗಳು ಹರಿದಾಡಿ ಸಾಕಷ್ಟು ಮಂದಿಗೆ ಮೋಸ ಮಾಡಿರುವುದು ಕೂಡ ನಡೆದಿದೆ. ಆದರಿಂದ ಯಾವುದೇ ಬಹುಮಾನದ ಸಂದೇಶ ಬಂದರೂ ಅದರ ಪೂರ್ವಪರ ತಿಳಿಯಬೇಕಾದ ಅಗತ್ಯ ಇದೆ.

Best Mobiles in India

Read more about:
English summary
he link when opened redirects the user to a suspicious link of “knowledgeable.xyz”, which does not look like it is related to Amul Corporation.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X