ವಾಟ್ಸಾಪ್ ಬಳಕೆದಾರರೇ ಎಚ್ಚರ! ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಡಿ!
ಇತ್ತೀಚಿನ ದಿನಗಳಲ್ಲಿ ಗೂಗಲ್‌ಪ್ಲೇ ಸ್ಟೋರ್‌ನಲ್ಲಿ ಮಾಲ್‌ವೇರ್ ಹೊಂದಿರುವ ಅನೇಕ ಅಪ್ಲಿಕೇಶನ್‌ಗಳನ್ನು ಬ್ಯಾನ್ ಮಾಡಲಾಗ್ತಿದೆ. ಇದರ ನಡುವೆ ಇನ್ನು ಅನೇಕ ಅಪ್ಲಿಕೇಶನ್‌ಗಳು ದೋಷಪೂರಿತವಾಗಿವೆ ಅನ್ನೊದು ಪತ್ತೆ ಆಗುತ್ತಲೇ ಇದೆ. ಆದಾಗ್ಯೂ, ಪ್ಲೇ ಸ್ಟೋರ್‌ನಲ್ಲಿ ವಿವಿಧ ಅಪ್ಲಿಕೇಶನ್‌ಗಳ ಮಾರ್ಪಡಿಸಿದ ಆವೃತ್ತಿಗಳಿವೆ. ಇವುಗಳು ಬಳಕೆದಾರರ ಡಿವೈಸ್‌ಗಳಗೆ ಸೋಂಕು ತರುವ ಸದ್ಯತೆ ಇದೆ. ಅದರಲ್ಲೂ ವಾಟ್ಸಾಪ್‌ನ ಮಾರ್ಪಡಿಸಿದ ಆವೃತ್ತಿಯಲ್ಲಿ ಹೊಸ ಟ್ರೋಜನ್ ಪತ್ತೆಯಾಗಿದೆ. ಇದನ್ನು ಟ್ರೋಜನ್ ಟ್ರಯಾಡಾ ಎಂದು ಕರೆಯಲಾಗುತ್ತದೆ.

ಹೌದು, ವಾಟ್ಸಾಪ್‌ನ ಮಾರ್ಪಡಿಸಿದ ಆವೃತ್ತಿಗಳಲ್ಲಿ ಮಾಲ್ವೇರ್‌ಗಳು ಪತ್ತೆಯಾಗಿವೆ. ಇವುಗಳಿಂದ ಬಳಕೆದಾರರ ಒಪ್ಪಿಗೆಯಿಲ್ಲದೆ ಸಾಧನದಲ್ಲಿ ದುರುದ್ದೇಶಪೂರಿತ ಚಟುವಟಿಕೆಗಳನ್ನು ನಡೆಸುವ ಪೇಲೋಡ್ ಅನ್ನು ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ. ಸದ್ಯ ವಾಟ್ಸಾಪ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುವ ಎಫ್‌ಎಂ ವಾಟ್ಸಾಪ್‌ನಲ್ಲಿ ಟ್ರೋಜನ್ ಪತ್ತೆಯಾಗಿದೆ. ಇದನ್ನು ಸೈಬರ್ ಸೆಕ್ಯುರಿಟಿ ನೀಡುವ ಕ್ಯಾಸ್ಪರ್ಸ್ಕಿ ಪತ್ತೆ ಹಚ್ಚಿದೆ. ಹಾಗಾದ್ರೆ ವಾಟ್ಸಾಪ್‌ನ ಮಾರ್ಪಾಡಿಸಿದ ಆವೃತ್ತಿಗಳಲ್ಲಿ ಕಂಡುಬಂದಿರುವ ದೋಷಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ಯಾಸ್ಪರ್ಸ್ಕಿ ಪತ್ತೆ ಹಚ್ಚಿರುವ ವರದಿಯಲ್ಲಿ ಟ್ರೋಜನ್ ಟ್ರಯಾಡಾ ವಾಟ್ಸಾಪ್ ನ ಮಾರ್ಪಡಿಸಿದ ಆವೃತ್ತಿಯಾದ ಎಫ್ ಎಂ ವಾಟ್ಸಾಪ್ 16.80.0 ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಕ್ಯಾಸ್ಪರ್ಸ್ಕಿಯ ಪ್ರಕಾರ, ಟ್ರೋಜನ್ ಟ್ರಯಾಡಾ ಈಗ ತನ್ನ ಜಾಹೀರಾತು ಸಾಫ್ಟ್‌ವೇರ್ ಅಭಿವೃದ್ಧಿ ಕಿಟ್ (SDK) ಜೊತೆಗೆ FMWhastApp ನ ಹೊಸ ಆವೃತ್ತಿಗೆ ಪ್ರವೇಶಿಸಿದೆ. ನೀವು ಟ್ರೋಜನ್ ಸೋಂಕಿತ ಆಪ್ ಅನ್ನು ಪ್ರಾರಂಭಿಸಿದರೆ, ಅದು ಸಾಧನ ಗುರುತಿಸುವಿಕೆಗಳನ್ನು (ಡಿವೈಸ್ ಐಡಿಗಳು, ಚಂದಾದಾರರ ಐಡಿಗಳು, ಎಂಎಸಿ ವಿಳಾಸಗಳು) ಸಂಗ್ರಹಿಸುತ್ತದೆ.

ಅಲ್ಲದೆ ಟ್ರೋಜನ್ ಟ್ರಯಾಡಾ ಮೂಲಕ ಬಳಕೆದಾರರ ಮಾಹಿತಿ ಕದ್ದು ಅವುಗಳನ್ನು ರಿಮೋಟ್ ಸರ್ವರ್‌ಗೆ ಕಳುಹಿಸುತ್ತದೆ. ಸರ್ವರ್ ಹೊಸ ಸಾಧನವನ್ನು ನೋಂದಾಯಿಸಲು ಮತ್ತು ಪೇಲೋಡ್‌ಗೆ ಲಿಂಕ್ ಅನ್ನು ಮರಳಿ ಕಳುಹಿಸಲು ಹೇಳಲಾಗುತ್ತದೆ. ಆಪ್‌ನಲ್ಲಿರುವ ಟ್ರೋಜನ್ ನಂತರ ಈ ಪೇಲೋಡ್ ಅನ್ನು ಸೋಂಕಿತ ಸಾಧನಕ್ಕೆ ಡೌನ್‌ಲೋಡ್ ಮಾಡುತ್ತದೆ. ಇದರ ನಂತರ, ಅದು ವಿಷಯವನ್ನು ಡೀಕ್ರಿಪ್ಟ್ ಮಾಡುತ್ತದೆ ಮತ್ತು ಅದನ್ನು ಕಾರ್ಯಾಚರಣೆಗಾಗಿ ಆರಂಭಿಸುತ್ತದೆ.

FMWhatsApp ಮೂಲಕ ಇಂತಹ ಚಟುವಟಿಕೆಗಳನ್ನು ನಡೆಸುತ್ತಿರುವ ವಿವಿಧ ರೀತಿಯ ಮಾಲ್ವೇರ್ಗಳನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಇದು ಪೂರ್ಣ-ಸ್ಕ್ರೀನ್ ಜಾಹೀರಾತುಗಳನ್ನು ಪ್ರದರ್ಶಿಸಬಹುದು, ಹಿನ್ನಲೆಯಲ್ಲಿ ಅದೃಶ್ಯ ಜಾಹೀರಾತುಗಳನ್ನು ರನ್ ವೀಕ್ಷಣೆಗಳ ಸಂಖ್ಯೆಯನ್ನು ಹೆಚ್ಚಿಸಬಹುದು ಮತ್ತು ಸಾಧನದ ಮಾಲೀಕರಿಗೆ ಅವರ ಅರಿವಿಲ್ಲದೆ ಪಾವತಿಸಿದ ಚಂದಾದಾರಿಕೆಗಳಿಗೆ ಸೈನ್ ಅಪ್ ಮಾಡಬಹುದು. ಇಂತಹ ಮಾರ್ಪಡಿಸಿದ ಆಪ್‌ಗಳನ್ನು ಡೌನ್‌ಲೋಡ್ ಮಾಡದಂತೆ ಕ್ಯಾಸ್ಪರ್ಸ್‌ಕಿ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಅನಗತ್ಯ ಪಾವತಿಸಿದ ಚಂದಾದಾರಿಕೆಗಳಿಗೆ ಸೈನ್ ಅಪ್ ಮಾಡುವುದನ್ನು ಹೊರತುಪಡಿಸಿ, ಬಳಕೆದಾರರು ತಮ್ಮ ಖಾತೆಗಳ ಸಂಪೂರ್ಣ ನಿಯಂತ್ರಣವನ್ನು ಸಹ ಕಳೆದುಕೊಳ್ಳಬಹುದು.


Click it and Unblock the Notifications








