Home
ಸುದ್ದಿಜಾಲ

ಫೇಕ್ ಮಿಂತ್ರಾ ಜಾಬ್ ಮತ್ತು ಆಫರ್ ಗಳಿಗೆ ಮರುಳಾಗಬೇಡಿ ಎಂದು ಎಚ್ಚರಿಸಿದ ಮಿಂತ್ರಾ ಕಂಪೆನಿ

By Gizbot Bureau

ಇ-ಕಾಮರ್ಸ್ ಸೈಟ್ ಮಿಂತ್ರಾ ತನ್ನ ಗ್ರಾಹಕರಿಗೆ ಎಚ್ಚಿರಿಕೆಯ ಸಂದೇಶವೊಂದನ್ನು ರವಾನಿಸಿದೆ. ಸುಳ್ಳು ಇಮೇಲ್ ಗಳು, ಮೋಸಗಾರರ ಕರೆಗಳು ಮತ್ತು ಇತರೆ ಯಾವುದೇ ಮಿಂತ್ರಾ ಸಂಬಂಧಿತ ಮೋಸದ ಜಾಲಕ್ಕೆ ಸಿಲುಕದಂತೆ ಎಚ್ಚರಿಕೆಯನ್ನು ನೀಡಿದೆ. ಇತ್ತೀಚೆಗೆ ಮಿಂತ್ರಾ ಕಂಪೆನಿಯ ಹೆಸರನ್ನು ಬಳಸಿಕೊಂಡು ಕೆಲವು ಕಳ್ಳರು ಜನರನ್ನು ಮೋಸಗೊಳಿಸುತ್ತಿರುವುದರ ಬಗ್ಗೆ ತಿಳಿದ ಕಂಪೆನಿ ಈ ಎಚ್ಚರಿಕೆಯನ್ನು ನೀಡಿದೆ.

ಇಮೇಲ್ ಮೂಲಕ ಎಚ್ಚರಿಕೆ:

ಇಮೇಲ್ ಮೂಲಕ ಎಚ್ಚರಿಕೆ:

ಇಮೇಲ್ ಮೂಲಕ ಈ ಎಚ್ಚರಿಕೆಯನ್ನು ನೀಡಿರುವ ಮಿಂತ್ರಾ ಸಂಸ್ಥೆ " ನಮ್ಮ ಕೆಲವು ಗ್ರಾಹಕರು ಮೋಸಗಾರರಿಂತ ನಮ್ಮ ಕಂಪೆನಿಯ ಹೆಸರಿನಲ್ಲಿ, ಏಜೆನ್ಸಿಯ ಹೆಸರಿನಲ್ಲಿ ಕರೆಗಳನ್ನು ಮಾಡಿ, ಇಮೇಲ್ ಗಳನ್ನು ಕಳುಹಿಸಿ ಆನ್ ಲೈನ್ ಮೋಸದ ಬಲೆಗೆ ಸಿಲುಕಿಸುತ್ತಿದ್ದಾರೆ ಎಚ್ಚರವಾಗಿರಿ" ಎಂದು ಕಂಪೆನಿ ತಿಳಿಸಿದೆ.

ಡೆಪಾಸಿಟ್ ಕೇಳುವುದೇ ಇಲ್ಲ:

ಡೆಪಾಸಿಟ್ ಕೇಳುವುದೇ ಇಲ್ಲ:

ಮಿಂತ್ರಾ ಯಾವತ್ತೂ ಕೂಡ ಗಿಫ್ಟ್ ಗಳಿಗಾಗಿ ಮತ್ತು ಕೆಲಸದ ಅವಕಾಶಕ್ಕಾಗಿ ಹಣವನ್ನು ಡೆಪಾಸಿಟ್ ಮಾಡುವಂತೆ ಕೇಳುವುದಿಲ್ಲ ( ರಿಕ್ರ್ಯೂಟ್ ಮೆಂಟ್ ಫೀಸ್, ಪ್ರೊಸೆಸ್ಸಿಂಗ್ ಫೀಚ್, ಸೆಕ್ಯುರಿಟಿ ಡೆಪಾಸಿಟ್, ಸಾಫ್ಟ್ ವೇರ್ ಅಥವಾ ಇಕ್ವಿಪ್ ಮೆಂಟ್ ಚಾರ್ಜಸ್, ಆನ್- ಬೋರ್ಡ್ ಚಾರ್ಜಸ್, ಸರ್ವೀಸ್ ಚಾರ್ಜಸ್ ) ಇಂತಹ ಯಾವುದೇ ಡೆಪಾಸಿಟ್ ನ್ನು ನಮ್ಮ ಸಂಸ್ಥೆ ಕೇಳುವುದಿಲ್ಲ ಎಂದು ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ.

ಫೇಕ್ ಕರೆಗಳಿಗೆ ಮರುಳಾಗಬೇಡಿ:

ಫೇಕ್ ಕರೆಗಳಿಗೆ ಮರುಳಾಗಬೇಡಿ:

ಒಂದು ವೇಳೆ ಯಾವುದೇ ಸಂದರ್ಬದಲ್ಲಿ ಯಾರಾದರೂ ಕರೆ ಮಾಡಿ ಮಿಂತ್ರದಲ್ಲಿ ಕೆಲಸ ಕೊಡುವುದಕ್ಕಾ ನಿಮ್ಮ ಬ್ಯಾಂಕ್ ಖಾತೆಯ ವಿವರ ಕೇಳುವುದು ಅಥವಾ ನಿಮ್ಮ ಬಳಿ ಹಣವನ್ನು ಕೇಳುವುದು ಮಾಡಿದರೆ ಖಂಡಿತ ಅದು ಮೋಸದ ಜಾಲ ಎಂಬುದನ್ನು ಅರಿತುಕೊಳ್ಳಿ. ಅಂತಹ ಯಾವುದೇ ಫೋನ್ ಕರೆಗಳು ಅಥವಾ ಇಮೇಲ್ ಅಥವಾ ಎಸ್ಎಂಎಸ್ ನಿಮಗೆ ಬಂದಿದ್ದೇ ಆದಲ್ಲಿ ಕೂಡಲೇ "+91-80-61561999" ಈ ನಂಬರ್ ಗೆ ತಿಳಿಸಿ.

ವಯಕ್ತಿಕ ವಿವರ ನೀಡಬೇಡಿ:

ವಯಕ್ತಿಕ ವಿವರ ನೀಡಬೇಡಿ:

ಜೊತೆಗೆ ನಿಮ್ಮ ಯಾವುದೇ ವಯಕ್ತಿಕ ವಿವರಗಳನ್ನು ಯಾರಿಗೂ ನೀಡಬೇಡಿ,. ಬ್ಯಾಂಕಿಂಗ್ ವಿವರಗಳು, ಯ್ಯೂಸರ್ ನೇಮ್, ಪಾಸ್ ವರ್ಡ್, ಓಟಿಪಿ ಮತ್ತು ಹಣಕಾಸಿಗೆ ಸಂಬಂಧಿಸಿದ ಕ್ರಿಡೆನ್ಶಿಯಲ್ಸ್ ಗಳು ಇತ್ಯಾದಿ ಯಾವುದೇ ಮಾಹಿತಿಯನ್ನು ಕೆಲಸಕ್ಕಾಗಿ ನೀಡುವ ಅಗತ್ಯವಿಲ್ಲ ಎಂಬುದನ್ನು ಅರಿತುಕೊಳ್ಳಿ. ಆಫರ್ ಲೆಟರ್, ಇಂಟರ್ ವ್ಯೂ ಕರೆಗಳು ಅಥವಾ ಕೆಲಸ ನೀಡುವ ಉದ್ದೇಶಕ್ಕಾಗಿ ಮಿಂತ್ರಾ ಯಾವತ್ತೂ ಕೂಡ ಹಣ ಕೇಳುವುದಿಲ್ಲ ಎಂಬುದು ನಿಮಗೆ ನೆನಪಿರಲಿ.

ಅನುಮಾನ ಬಂದರೆ ಮಾಹಿತಿ ನೀಡಿ:

ಅನುಮಾನ ಬಂದರೆ ಮಾಹಿತಿ ನೀಡಿ:

ಇತರೆ ಇ-ಕಾರ್ಮಸ್ ಕಂಪೆನಿಗಳಲ್ಲಿ ಬಹುಶ್ಯ ಇದು ನಿಜವಿರಬಹುದು. ಕೆಲಸಕ್ಕಾಗಿ ಯಾವುದೇ ಕಂಪೆನಿಯು ಕೂಡ ಹಣವನ್ನು ಡೆಪಾಸಿಟ್ ಮಾಡುವುದಕ್ಕೆ ಕೇಳುವುದಿಲ್ಲ ಎಂಬುದು ನಿಮಗೆ ಚೆನ್ನಾಗಿ ನೆನಪಿರಲಿ.ಯಾವುದೇ ರೀತಿಯ ಅನುಮಾನವಿದ್ದಲ್ಲಿ ಕೂಡಲೇ ರಿಜಿಸ್ಟರ್ ಆಫೀಸಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ. ನಿಮ್ ಬ್ಯಾಂಕ್ ಖಾತೆಯ ವಿವರವನ್ನು ಯಾವುದೇ ಕಾರಣಕ್ಕೂ ಕೂಡ ಯಾರಿಗೂ ನೀಡಬೇಡಿ ಎಂದು ಮಿಂತ್ರಾ ಎಚ್ಚರಿಸಿದೆ.

Best Mobiles in India

English summary
Don’t fall for fake Myntra jobs or offers, alerts company
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+