Subscribe to Gizbot

ಸ್ಮಾರ್ಟ್‌ಫೋನನ್ನು ಎಲ್ಲೆಂದರಲ್ಲಿ ಇಡಬೇಡಿ, ಇಟ್ಟರೆ ಮುಖ್ಯವಾದದ್ದೆ ಮಿಸ್ ಆಗುತ್ತೇ..!

Written By:

ಬೆಳಿಗ್ಗೆ ಎದ್ದ ನಂತರದಿಂದ ನಾವು ನಿದ್ದೆ ಮಾಡುವವರೆಗೂ ನಮ್ಮೊಂದಿಗೆ ಇರುವ ಒಂದೇ ಒಂದು ಗ್ಯಾಜೆಟ್ ಎಂದರೆ ಸ್ಮಾರ್ಟ್‌ಫೋನ್‌. ಇದು ನಮ್ಮ ನಿತ್ಯ ಜೀವನದ ಹೆಚ್ಚಿನ ಸಯಮವನ್ನು ಆಕ್ರಮಿಸಿಕೊಂಡಿದೆ ಎಂದರೆ ತಪ್ಪಾಗುವುದಿಲ್ಲ. ಈ ಹಿನ್ನಲೆಯಲ್ಲಿ ನಮ್ಮ ನಿದ್ದೆ ಯೊಂದಿಗೆ, ಊಟದೊಂದಿಗೆ, ಶೌಚ ಮಾಡುವ ಸಂದರ್ಭದಲ್ಲಿಯೂ ನಮ್ಮ ಜೊತೆ ಸ್ಮಾರ್ಟ್‌ಫೋನ್ ಸಹ ಇದೆ ಇರಲಿದೆ.

ಸ್ಮಾರ್ಟ್‌ಫೋನನ್ನು ಎಲ್ಲೆಂದರಲ್ಲಿ ಇಡಬೇಡಿ, ಇಟ್ಟರೆ ಮುಖ್ಯವಾದದ್ದೆ ಮಿಸ್ ಆಗುತ್ತೇ

ಕಟ್ಟಿಕೊಂಡಿರುವ ಹೆಂಡತಿಯನ್ನು ಬಿಟ್ಟರು ಸ್ಮಾರ್ಟ್‌ಫೋನ್ ಬಿಡಲು ಆಗುವುದಿಲ್ಲ ಎನ್ನುವವರು ನಮ್ಮ ನಿಮ್ಮ ನಡುವೆ ಕಾಣಸಿಗುತ್ತಾರೆ. ಇದೇ ಮಾದರಿಯಲ್ಲಿ ಸ್ಮಾರ್ಟ್‌ಫೋನ್‌ ಅನ್ನು ಎಲ್ಲೆಂದರಲ್ಲಿ ಇಡು ಅಭ್ಯಾಸ ಕೆಲವರಿಗಿದೆ. ಚಪ್ಪಲಿಯನ್ನು ಅದರದ್ದೆ ಆದ ಜಾಗದಲ್ಲಿ ಬಿಡುತ್ತಾರೆ. ಆದರೆ ಸ್ಮಾರ್ಟ್‌ಫೋನ್‌ ಅನ್ನು ಇಂತಹುದೆ ಜಾಗದಲ್ಲಿ ಇಡಬೇಕು ಎನ್ನುವ ನಿಯಮವನ್ನು ಮಾಡಿಕೊಂಡಿರುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮುಖ್ಯವಾದ್ದದೆ ಮಿಸ್ ಆಗಲಿದೆ:

ಮುಖ್ಯವಾದ್ದದೆ ಮಿಸ್ ಆಗಲಿದೆ:

ಕೆಲವೊಂದು ಸ್ಥಳಗಳಲ್ಲಿ ನೀವು ಸ್ಮಾರ್ಟ್‌ಫೋನ್ ಇಟ್ಟರೆ ಅದು ಸ್ಮಾರ್ಟ್‌ಫೋನ್ ಮೇಲೆ ಬಾರಿ ಪರಿಣಾಮ ಬೀರುತ್ತದೆ. ಅಲ್ಲದೇ ಸ್ಮಾರ್ಟ್‌ಫೋನ್ ನೆಟವರ್ಕ್ ಸಿಗದಿರುವ ಸಮಸ್ಯೆಗೆ ಈ ಅಭ್ಯಾಸ ಕಾರಣವಾಗುತ್ತಿದೆ. ಫೋನ್‌ ಸಿಗ್ನಲ್‌ ಪ್ರಾಬ್ಲಂ ಎನ್ನುವ ಸಮಸ್ಯೆಗೆ ನೀವು ಎಲ್ಲೆಂದರಲ್ಲಿ ಮೊಬೈಲ್ ಇಡುವುದು ಕಾರಣವಾಗುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲಿ ಮೊಬೈಲ್ ಇಡಬಾರದು ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಟಿವಿ ಪಕ್ಕ ಇಡಬೇಡಿ:

ಟಿವಿ ಪಕ್ಕ ಇಡಬೇಡಿ:

ಸಾಮಾನ್ಯವಾಗಿ ನಾವು ಟಿವಿ ಟೇಬಲ್ ಮೇಲೆ ನಮ್ಮ ಸ್ಮಾರ್ಟ್‌ಫೋನ್‌ಗಳನ್ನು ಇಡುವ ಅಭ್ಯಸವನ್ನು ಮಾಡಿಕೊಂಡಿರುತ್ತೇವೆ. ಆದರೆ ಇದು ಒಳ್ಳೆಯದಲ್ಲ. ಟಿವಿ ಮಾತ್ರವಲ್ಲ ನಿಮ್ಮ ಸ್ಮಾರ್ಟ್‌ಫೋನನ್ನು ಯಾವುದೇ ಎಲೆಕ್ಟ್ರಾನಿಕ್‌ ವಸ್ತುಗಳ ಬಳಿ ನಿಮ್ಮ ಇಡಬೇಡಿ. ಇದು ಎರಡು ವಸ್ತುಗಳಿಂದ ಬರುವ ರೆಡಿಯೇಷನ್ ನಡುವೆ ಕ್ಲಾಷ್ ಮಾಡಲಿದ್ದು, ಇದರಿಂದ ಎರಡಕ್ಕೂ ಹಾನಿಕಾರಕ.

ಆಯಸ್ಕಾಂತದ ಬಳಿ:

ಆಯಸ್ಕಾಂತದ ಬಳಿ:

ನಿಮ್ಮ ಸ್ಮಾರ್ಟ್‌ಫೋನ್‌ನ ಆಯಸ್ಕಾಂತದ ಬಳಿ ಇಡಬೇಡಿ. ಇದು ನಿಮ್ಮ ಫೋನಿನ ಮ್ಯಾಗ್ನೆಟಿಕ್‌ ಸೆನ್ಸರ್‌ನ್ನು ಹಾಳು ಮಾಡುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಆಪ್ ಬಳಕೆಗಾಗಿ ಮ್ಯಾಗ್ನೆಟಿಕ್‌ ಸೆನ್ಸರ್‌ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗೆ ಆಯಸ್ಕಾಂತದ ಬಳಿ ಫೋನ್ ಇಡುವುದರಿಂದ ಸಿಗ್ನಲ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಸೂರ್ಯನ ಬಿಸಿಲಿಗೆ ಇಡಬೇಡಿ:

ಸೂರ್ಯನ ಬಿಸಿಲಿಗೆ ಇಡಬೇಡಿ:

ಇದಲ್ಲದೇ ನಿಮ್ಮ ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗುವಂತೆ ನೇರಾವಾಗಿ ಸೂರ್ಯನ ಬಿಸಿಲು ಬೀಳುವಂತೆ ಇಡಬೇಡಿ. ಕಿಟಕಿಯಲ್ಲಿ ಇಟ್ಟಾಗ ಬಿಸಲು ಬಿಳುವ ಸಾಧ್ಯತೆ ಇರಲಿದೆ. ಬಿಸಿಲಿನಿಂದ ಸ್ಮಾರ್ಟ್‌ಫೋನ್‌ ಬಿಸಿಯಾದರೆ ಮದರ್‌ಬೋರ್ಡ್‌ನಿಂದ ಹಿಡಿದು ಬ್ಯಾಟರಿವರೆಗೂ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಇದರಿಂದ ಸಿಗ್ನಲ್ ಸಮಸ್ಯೆ ತಲೆದೂರಲಿದೆ.

ಬೆಂಕಿಯ ಬಳಿ:

ಬೆಂಕಿಯ ಬಳಿ:

ಸ್ಮಾರ್ಟ್‌ಫೋನ್ ಪ್ಲಾಸ್ಟಿಕ್ ನಿಂದ ಮಾಡಿರುವ ಕಾರಣ ಬೆಂಕಿಯ ಬಳಿ ನಿಮ್ಮ ಸ್ಮಾರ್ಟ್‌ಫೋನ್ ಇಟ್ಟರೆ ಸಮಸ್ಯೆ ಹೆಚ್ಚಾಗಿರಲಿದೆ. ಇರಿಂದಾಗಿ ಅಡುಗೆ ಮನೆಯಲ್ಲಿ ಒಲೆಯ ಬಳಿ ಸ್ಮಾರ್ಟ್‌ಫೋನ್ ಇಡಬೇಡಿ, ಮೈಕ್ರೋವೆವ್ ಬಳಿಯೂ ನಿಮ್ಮ ಸ್ಮಾರ್ಟ್‌ಫೋನ್ ನೆಟವರ್ಕ್ ದೊರೆಯುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Don't keep cell phones next to these things. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot