ಇನ್ಮುಂದೆ ಮೊಬೈಲ್ ಇಟ್ಟುಕೊಳ್ಳಲು ಒಂದು ಬ್ಯಾಗ್ ಮಾಡಿಕೊಂಡರೆ ಒಳ್ಳೆಯದು!

|

ನಿಮ್ಮ ಮೊಬೈಲ್ ಅನ್ನು ನಿಮ್ಮ ಪ್ಯಾಂಟ್ ಜೇಬಿನಲ್ಲಿ ಇಡಬೇಡಿ ಎಂದು ಹೇಳಲು ನನಗೂ ಸಾಧ್ಯವಾಗುತ್ತಿಲ್ಲ. ಏಕೆಂದರೆ, ನಿಮಗೆ ಹಾಗೆ ಹೇಳಿದರೆ ನಾನೂ ಕೂಡ ಅದನ್ನು ಪಾಲನೆ ಮಾಡುತ್ತೇನೆ ಎಂಬುದು ಸಹ ಅನುಮಾನವಿದೆ. ಆದರೆ, ಇದನ್ನು ಹೇಳದೆ ವಿಧಿಯಿಲ್ಲ. ದಯವಿಟ್ಟು ಮೊಬೈಲ್ ಅನ್ನು ನಿಮ್ಮ ಪ್ಯಾಂಟ್ ಜೇಬಿನನಲ್ಲಿಡುವ ಮುನ್ನ ಎರಡು ಬಾರಿ ಯೋಚಿಸಿ.

ಹೌದು, ನಾವು ಎಲ್ಲೇ ಹೋಗಲಿ ಏನು ಮರೆತರೂ ಮೊಬೈಲ್‌ ಮರೆಯುವುದಿಲ್ಲ, ಮೊಬೈಲ್‌ ಕೈಯಲ್ಲಿ ಇಲ್ಲದಿದ್ದರೆ ಏನೋ ತಳಮಳವಾಗುತ್ತದೆ, ಅಷ್ಟರಮಟ್ಟಿಗೆ ಅದಕ್ಕೆ ಅಡಿಕ್ಟ್ ಆಗಿ ಬಿಟ್ಟಿದ್ದೇವೆ. ಹೀಗೆ ಸದಾ ಕೈಯಲ್ಲಿ ಮೊಬೈಲ್‌ ಇರುವುದು ತಪ್ಪು ಎಂಬುದನ್ನು ನಾವು ತಿಳಿದಿದ್ದೇವೆ. ಆದರೆ, ಅದಕ್ಕಿಂತ ಹೆಚ್ಚಿನ ತಪ್ಪೆಂದರೆ, ಮೊಬೈಲ್ ಅನ್ನು ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುವುದು.

ಇನ್ಮುಂದೆ ಮೊಬೈಲ್ ಇಟ್ಟುಕೊಳ್ಳಲು ಒಂದು ಬ್ಯಾಗ್ ಮಾಡಿಕೊಂಡರೆ ಒಳ್ಳೆಯದು!

ನಿಮ್ಮ ಮೊಬೈಲ್‌ ಅನ್ನು ಬ್ಯಾಗ್‌ನಲ್ಲಿ ಇಡುವುದಕ್ಕಿಂತ ಜೇಬಿನಲ್ಲಿ ಇಡುವುದರಿಂದ ಆಗುವ ಸಮಸ್ಯೆಗಳು ಹೆಚ್ಚಿವೆ. ಜೇಬಿನಲ್ಲಿ ಮೊಬೈಲ್ ಇದ್ದಾಗ ಅದರ ರೇಡಿಯೇಷನ್ ದೇಹದಲ್ಲಿ ಮೇಲೆ 7 ಪಟ್ಟು ಅಧಿಕ ಬಿದ್ದು, ಡಿಎನ್‌ಎ ಸಂರಚನೆಯಲ್ಲಿ ವ್ಯತ್ಯಾಸ ಉಂಟಾಗಿ ಗಡ್ಡೆ ಬೆಳೆಯುವುದು, ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುವುದು ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ.

ಬ್ಯಾಗ್‌ನಲ್ಲಿ ಇಡುವುದಕ್ಕಿಂತ ಮೊಬೈಲ್ ಜೇಬಿನಲ್ಲಿಯೇ ಇಡುವುದು ಸುಲಭ ಅನಿಸುವುದು, ಆದರೆ ಅದರಿಂದ ದೇಹದ ಮೇಲಾಗುವ ಪರಿಣಾಮ ಮಾತ್ರ ಭೀಕರವಾದದ್ದು ಎಂದು ಸಂಶೋಧನೆ ಅಭಿಪ್ರಾಯಪಟ್ಟಿದೆ. ಮೊಬೈಲ್‌ ಅನ್ನು ಪ್ಯಾಂಟ್ ಹಿಂಭಾಗದ ಜೇಬಿನಲ್ಲಿ ಇಡುವುದರಿಂದರೂ ಸಮಸ್ಯೆ ಹೆಚ್ಚಿದ್ದು ಅದರ ರೇಡಿಯೇಷನ್ ಪ್ರಭಾವ ಅಲ್ಲಿಯೂ ಕಾಣಿಸುವುದು ಎಂದು ತಿಳಿದುಬಂದಿದೆ.

ಇನ್ಮುಂದೆ ಮೊಬೈಲ್ ಇಟ್ಟುಕೊಳ್ಳಲು ಒಂದು ಬ್ಯಾಗ್ ಮಾಡಿಕೊಂಡರೆ ಒಳ್ಳೆಯದು!

ಇನ್ನು ಇತ್ತೀಚಿಗೆ ನಿದ್ದೆ ಮಾಡುವಾಗ ಮೊಬೈಲ್ ಸಮೀಪ ಇಟ್ಟು ಮಲಗುವುದರಿಂದ ನಿಮ್ಮ ಸವಿನಿದ್ದೆಗೆ ಭಂಗ ಉಂಟು ಮಾಡಿ ನಿದ್ರಾಹೀನತೆ ಸಮಸ್ಯೆ, ದೃಷ್ಟಿ ಕಳೆದುಕೊಳ್ಳುವ ಸಮಸ್ಯೆಗಳು ಸೇರಿಂದರೆ, ಮೊಬೈಲ್‌ನ ಅತಿ ಬಳಕೆ ಸಾವಿಗೂ ಕಾರಣವಾಗಬಹುದು ಎಂದು ಎಚ್ಚರಿಸಿತ್ತು. ಹಾಗಾಗಿ, ನೀವಿನ್ನು ಮೊಬೈಲ್ ಅನ್ನು ಇಟ್ಟುಕೊಳ್ಳಲು ಒಂದು ಬ್ಯಾಗ್ ಮಾಡಿಕೊಂಡರೆ ಒಳ್ಳೆಯದು.

ಓದಿರಿ: 'ಮೊಬೈಲ್ ಬ್ಯಾಟರಿ' ಸುರಕ್ಷತೆ ಬಗ್ಗೆ ನೀವು ನಂಬಿರುವ ಹಸಿಬಿಸಿ ಸುಳ್ಳುಗಳಿವು!!

Best Mobiles in India

English summary
The number of sources of human-made EMF emissions continues to explode. It’s no longer just cell phones and WiFi. Now we also have wireless thermostats. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X