Home
ಸುದ್ದಿಜಾಲ

ಆಧಾರ್‌ನಿಂದ ಖರೀದಿಸಿದ ಸಿಮ್‌ ಡೆಡ್‌ ಆಗುತ್ತಾ ..? ಹೊಸ ನಿಯಮ ಏನೇಳುತ್ತೇ ನೋಡಿ..!

ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ್ದ ಆಧಾರ ತೀರ್ಪಿನಿಂದ ಭಾರತೀಯ ಟೆಲಿಕಾಂ ಜಗತ್ತಿನಲ್ಲಿ ಹಲವು ಗೊಂದಲಗಳು ಎದ್ದಿದ್ದವು. ಆಧಾರ್‌ ಕಾರ್ಡ್‌ನಿಂದ ತೆಗೆದುಕೊಂಡ ಸಿಮ್‌ಗಳೆಲ್ಲ ಸಂಪರ್ಕ ಕಳೆದುಕೊಳ್ಳುತ್ತವೆ ಎಂಬ ಸುದ್ದಿ ಇಡೀ ಭಾರತದಾದ್ಯಂತ ಹರಡಿತ್ತು. ಆ ಸಾಧ್ಯತೆಯೂ ಇತ್ತು ಕೂಡ. ಈಗ ಆಧಾರ್‌ ಮತ್ತು ಟೆಲಿಕಾಂ ಲೋಕದ ಗೊಂದಲಗಳಿಗೆ ತೆರೆ ಬಿದ್ದಿದ್ದು, ಆಧಾರ್‌ eKYC ಮಾಡಿಸಿದ ಟೆಲಿಕಾಂ ಗ್ರಾಹಕರಿಗೆ ಯಾವುದೇ ತೊಂದರೆಯಿಲ್ಲವಂತೆ.

ಆಧಾರ್‌ನಿಂದ ಖರೀದಿಸಿದ ಸಿಮ್‌ ಡೆಡ್‌ ಆಗುತ್ತಾ ..? ಹೊಸ ನಿಯಮ ಏನೇಳುತ್ತೇ ನೋಡಿ..!

ಹೌದು, ಇಂದು ದೂರಸಂಪರ್ಕ ಇಲಾಖೆ ಮತ್ತು UIDAI ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಆಧಾರ್‌ನಿಂದ eKYC ಮಾಡಿಸಿದ ಗ್ರಾಹಕರ ಮೊಬೈಲ್‌ ಸಂಪರ್ಕ ಕಡಿತವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿವೆ. ಅದಲ್ಲದೇ ಮೊಬೈಲ್‌ ಗ್ರಾಹಕರಿಗಾಗಿ ಹೊಸ eKYC ಪ್ರಕ್ರಿಯೆಯನ್ನು ಜಾರಿಗೆ ತರಲು ದೂರಸಂಪರ್ಕ ಇಲಾಖೆ ಮತ್ತು UIDAI ಮುಂದಾಗಿವೆ. ಆದ್ದರಿಂದ eKYC ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಸಂಪರ್ಕ ಕಡಿತವಾಗಲ್ಲ

ಸಂಪರ್ಕ ಕಡಿತವಾಗಲ್ಲ

ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಆಧಾರ್ ಕುರಿತು ನೀಡಿದ್ದ ತೀರ್ಪಿನಲ್ಲಿ ಆಧಾರ್‌ ಕಾರ್ಡ್‌ ಮೂಲಕ eKYC ಮಾಡಿದ ಮೊಬೈಲ್‌ ಸಂಪರ್ಕಗಳನ್ನು ಕಡಿತಗೊಳಿಸುವಂತೆ ನಿರ್ದೇಶನ ನೀಡಲಾಗಿತ್ತು. ಆದರೆ, ಆಧಾರ್ eKYC ಮಾಡಿಸಿದ ಗ್ರಾಹಕರೇ ಹೆಚ್ಚಿರುವುದರಿಂದ ಆಧಾರ್‌ನಿಂದ eKYC ಮಾಡಿಸಿದ ಮೊಬೈಲ್‌ ಸಂಪರ್ಕಗಳು ಕಡಿತವಾಗಲ್ಲ ಎಂದು ದೂರಸಂಪರ್ಕ ಇಲಾಖೆ ಮತ್ತು UIDAI ಹೇಳಿವೆ.

eKYC ಡಾಟಾ ಅಳಿಸುವ ಅಗತ್ಯವೂ ಇಲ್ಲ

eKYC ಡಾಟಾ ಅಳಿಸುವ ಅಗತ್ಯವೂ ಇಲ್ಲ

ಸುಪ್ರೀಂ ಕೋರ್ಟ್‌ ಟೆಲಿಕಾಂ ಕಂಪನಿಗಳಿಗೆ 6 ತಿಂಗಳ ನಂತರ eKYC ಡಾಟಾ ಅಳಿಸಿ ಎಂದು ಹೇಳಿಲ್ಲ. ಆದರೆ, ಅಪೆಕ್ಸ್‌ ಕೋರ್ಟ್‌ ಹೇಳಿರುವುದು 6 ತಿಂಗಳಿನ ಮೇಲೆ UIDAI ಅಥಂಟಿಕೇಷನ್‌ ಲಾಗ್‌ ಇಡಬಾರದು ಎಂದು ಹೇಳಿದೆ. ಇದು ಆಧಾರ್‌ ನಿಯಂತ್ರಣ ಪ್ರಾಧಿಕಾರಕ್ಕೆ ಸಂಬಂಧಿಸಿದ್ದಾಗಿದ್ದು, ಟೆಲಿಕಾಂ ಕಂಪನಿಗಳಿಗೆ ಯಾವುದೇ ಸೂಚನೆ ಬಂದಿಲ್ಲ.

ಡೀಲಿಂಕ್‌ ಆಯ್ಕೆ ಇದೆ

ಡೀಲಿಂಕ್‌ ಆಯ್ಕೆ ಇದೆ

ಯಾರಾದರೂ ಆಧಾರ್ eKYC ಬದಲಾಗಿ ಹೊಸ KYC ನೀಡುತ್ತೇವೆ ಎಂದರೆ ನಿಮ್ಮ ಟೆಲಿಕಾಂ ಆಪರೇಟರ್‌ನಲ್ಲಿ ಆಧಾರ್‌ ಡೀಲಿಂಕ್‌ ಮಾಡುವ ಆಯ್ಕೆಯಿದ್ದು, ಆಧಾರ್‌ ಡೀಲಿಂಕ್‌ ಮಾಡಿ ದೂರಸಂಪರ್ಕ ಇಲಾಖೆಯ ನಿಯಮದಂತೆ KYCಗೆ ಬೇಕಾಗುವ ಹೊಸ ದಾಖಲೆಗಳನ್ನು ನೀಡಿದರೆ ಸಾಕು.

ಆಧಾರ್ ಡೀಲಿಂಕ್‌ನಿಂದ ಸಂಪರ್ಕ ಕಡಿತವಾಗಲ್ಲ

ಆಧಾರ್ ಡೀಲಿಂಕ್‌ನಿಂದ ಸಂಪರ್ಕ ಕಡಿತವಾಗಲ್ಲ

ಆಧಾರ್‌ ಡೀಲಿಂಕ್‌ ಮಾಡಿ ಹೊಸ KYCಯನ್ನು ನಿಮ್ಮ ಮೊಬೈಲ್‌ ನಂಬರ್‌ಗೆ ಜೋಡಿಸಿದ್ದರೆ ಯಾವುದೇ ರೀತಿಯ ಸಂಪರ್ಕ ಕಡಿತದಂತಹ ತೊಂದರೆಯಾಗುವುದಿಲ್ಲ.

ಹೊಸ ಸಿಮ್‌ಗೆ ಆಧಾರ್‌ ಬೇಡ

ಹೊಸ ಸಿಮ್‌ಗೆ ಆಧಾರ್‌ ಬೇಡ

ಹಲವು ಕಾನೂನು ತೊಡಕುಗಳನ್ನು ಹೊಂದಿರುವುದರಿಂದ ಹೊಸ ಸಿಮ್‌ ಕಾರ್ಡ್‌ಗಳನ್ನು ಆಧಾರ್‌ eKYC ಮೂಲಕ ನೀಡುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಆದರೆ, ಆಧಾರ್‌ ಮೂಲಕ ತೆಗೆದುಕೊಂಡ ಹಳೇ ಮೊಬೈಲ್‌ ನಂಬರ್‌ಗಳನ್ನು ಡಿಆಕ್ಟಿವೇಟ್‌ ಮಾಡಿ ಎಂದು ನಿರ್ದೇಶಿಸಿಲ್ಲ.

ಇನ್ಮುಂದೆ ಆಪ್‌ ಮೂಲಕ ಸಿಮ್‌

ಇನ್ಮುಂದೆ ಆಪ್‌ ಮೂಲಕ ಸಿಮ್‌

ದೂರಸಂಪರ್ಕ ಇಲಾಖೆ ಮತ್ತು UIDAI ಎರಡು ಹೊಸ ಸಿಮ್‌ ನೀಡುವ ಪ್ರಕ್ರಿಯೆ ಕುರಿತು ಹೊಸ ಚಿಂತನೆಯೊಂದನ್ನು ಅಳವಡಿಸಲು ಮುಂದಾಗಿದ್ದು, ಡಿಜಿಟಲ್‌ ಪ್ರಕ್ರಿಯೆಯ ಮತ್ತು ಸುಲಭವಾದ ಆಪ್‌ ಮೂಲಕ ಹೊಸ ಸಿಮ್‌ ವಿತರಿಸಲು ಯೋಚಿಸುತ್ತಿವೆ.

ಆಪ್‌ನಿಂದ ನಿಮ್ಮ ಲೈವ್‌ ಫೋಟೋ ಕ್ಯಾಪ್ಚರ್

ಆಪ್‌ನಿಂದ ನಿಮ್ಮ ಲೈವ್‌ ಫೋಟೋ ಕ್ಯಾಪ್ಚರ್

ಸಿಮ್‌ ವಿತರಣೆಗೆ ಹೊಸ ಡಿಜಿಟಲ್‌ ಪ್ರಕ್ರಿಯೆ ಪ್ರಾರಂಭವಾದರೆ, ಅಲ್ಲಿ ವ್ಯಕ್ತಿಯ ಲೈವ್‌ ಭಾವಚಿತ್ರಗಳನ್ನು ಆಪ್‌ ತೆಗೆದುಕೊಳ್ಳುತ್ತದೆ. ಮತ್ತು ಆಧಾರ್‌ ಕಾರ್ಡ್‌, ವೋಟರ್‌ ಐಡಿಯಂತಹ ಮುಂತಾದ ದಾಖಲೆಗಳನ್ನು ಫೋಟೋ ತೆಗೆದುಕೊಳ್ಳುತ್ತದೆ. ನಂತರ ಸಿಮ್‌ ಕಾರ್ಡ್‌ ಏಜೆಂಟ್‌ OTP ಮೂಲಕ ಗುರುತಿಸಿ ಹೊಸ ಸಿಮ್‌ ಕಾರ್ಡ್‌ ನೀಡುತ್ತಾನೆ.

Best Mobiles in India

English summary
Don't panic about Aadhaar eKYC for mobile SIM cards: 7 things to know. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+