Just In
- 8 hrs ago
ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್ಟಿವಿ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
- 10 hrs ago
ಇದೇ ತಿಂಗಳು 5G ಸೇವೆ ಬರಲಿದೆ ಅಂತಾ ನಿರೀಕ್ಷಿಸುತ್ತಿದ್ದೀರಾ?..ಈ ಸುದ್ದಿಯನ್ನೊಮ್ಮೆ ಗಮನಿಸಿ!
- 11 hrs ago
ಅತೀ ಕಡಿಮೆ ಬೆಲೆಗೆ ಲಗ್ಗೆ ಇಟ್ಟ 'ಇನ್ಫಿನಿಕ್ಸ್ ಸ್ಮಾರ್ಟ್ 6 HD' ಫೋನ್!
- 12 hrs ago
ಸ್ಮಾರ್ಟ್ವಾಚ್ ಇಲ್ಲವೇ ಸ್ಮಾರ್ಟ್ಬ್ಯಾಂಡ್ ಖರೀದಿಸುವ ಪ್ಲ್ಯಾನ್ ಇದ್ರೆ, ಈ ಚಾನ್ಸ್ ಕಳ್ಕೋಬೇಡಿ!
Don't Miss
- News
ಸಿದ್ದರಾಮೋತ್ಸವದಿಂದ ಬಿಜೆಪಿಯಲ್ಲ ಕಾಂಗ್ರೆಸ್ನಲ್ಲೇ ನಡುಕ!
- Movies
Exclusive: ದರ್ಶನ್ ಬೆದರಿಕೆ ಹಾಕಿದ್ದು ಹೇಗೆ? ಏಕೆ? ವಿವರಿಸಿದ ನಿರ್ಮಾಪಕ ಭರತ್
- Sports
Asia Cup 2022: ಏಷ್ಯಾಕಪ್ಗೆ ಪ್ರಕಟವಾದ ತಂಡದಲ್ಲಿ ಬೌಲಿಂಗ್ ಅಸ್ತ್ರ ಬುಮ್ರಾ ಇಲ್ಲದಿರಲು ಇದೇ ಕಾರಣ
- Automobiles
ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್ಫೈಟರ್ ಬೈಕ್ ಬಿಡುಗಡೆ
- Lifestyle
Raksha Bandhan Horoscope 2022: ರಕ್ಷಾ ಬಂಧನದ ದಿನ ಯಾವ ರಾಶಿಗೆ ಅದೃಷ್ಟವಿದೆ, ಯಾರೆಲ್ಲಾ ಎಚ್ಚರಿಕೆಯಿಂದಿರಬೇಕು?
- Finance
ಕೇರಳ ಲಾಟರಿ: 'ವಿನ್ ವಿನ್ W-680' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೊರೊನಾ ಬಗ್ಗೆ ಆತಂಕ ಬೇಡ, ಆನ್‌ಲೈನ್‌ನಲ್ಲಿ ವೈರಸ್ ಬಗ್ಗೆ ಈ ಕೆಲಸ ಬೇಡ..!
ಇಡೀ ವಿಶ್ವವನ್ನೇ ಕೊರೊನಾ ವೈರಸ್ ನಡುಗಿಸುತ್ತಿದ್ದು, ಜಾಗತಿಕವಾಗಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಇದುವರೆಗೂ ಈ ವೈರಸ್‌ಗೆ ಯಾವುದೇ ಔಷಧಿಯನ್ನು ಕಂಡುಹಿಡಿಯಲು ಆಗಿಲ್ಲ. ಅದಲ್ಲದೇ, ಈ ವೈರಸ್ ಸುತ್ತ ಸಾಕಷ್ಟು ವದಂತಿಗಳು ಹಬ್ಬಿವೆ. ಈ ಮಾರಣಾಂತಿಕ ವೈರಸ್ ಜಾಗತಿಕವಾಗಿ 3,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಕೊರೊನಾ ವೈರಸ್ ಮೊದಲ ಬಾರಿಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಧ್ಯ ಚೀನಾದ ಹುಬೈನಲ್ಲಿ ಕಂಡುಬಂದಿತ್ತು.

ಬಳಿಕ 60ಕ್ಕೂ ಹೆಚ್ಚು ದೇಶಗಳಿಗೆ ಹರಡಿದ್ದು, ಈಗಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲೆ ಬಂದಿದೆ. ಆದರೆ, ಜನ ವೈರಸ್‌ನಿಂದ ರಕ್ಷಿಸಿಕೊಳ್ಳುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈ ಬಗ್ಗೆ ಆನ್‌ಲೈನ್‌ನಲ್ಲಿ ಸಾಕ್ಟು ತಪ್ಪು ಮಾಹಿತಿಗಳು ಸಿಗುತ್ತಿವೆ. ಆದ್ದರಿಂದ, ಆನ್‌ಲೈನ್‌ನಲ್ಲಿ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ವಿಷಯಗಳನ್ನು ಹುಡುಕಬೇಡಿ.

ವಿಶೇಷ ಮಾಸ್ಕ್‌ಗಳ ಮಾರಾಟದ ಆನ್‌ಲೈನ್ ಜಾಹೀರಾತುಗಳು
ಕೊರೊನಾ ವೈರಸ್‌ನಿಂದ ನಿಮ್ಮನ್ನು ರಕ್ಷಿಸಲು ಯಾವುದೇ ವಿಶೇಷ ಮಾಸ್ಕ್‌ಗಳು ಲಭ್ಯವಿಲ್ಲ. ಆದ್ದರಿಂದ, ಅಂತಹ ಯಾವುದೇ ಜಾಹೀರಾತು ಆನ್‌ಲೈನ್‌ನಲ್ಲಿ ಕಂಡುಬಂದರೆ ಅದನ್ನು ಕಡೆಗಣಿಸುವುದು ಉತ್ತಮ.

ಶಸ್ತ್ರಚಿಕಿತ್ಸೆಯ ಮಾಸ್ಕ್‌ಗಳಿಗಿಂತ N95 ಮಾಸ್ಕ್ ಉತ್ತಮವಾ?
ಮಾಸ್ಕ್‌ಗಳು ಮಾತ್ರ ಕೊರೊನಾ ವೈರಸ್ ವಿರುದ್ಧ ಪೂರ್ಣ ರಕ್ಷಣೆ ಖಾತರಿಪಡಿಸುವುದಿಲ್ಲ, ಕೊರೊನಾ ವೈರಸ್ ಗಾತ್ರದಲ್ಲಿ ಚಿಕ್ಕದಾಗಿದ್ದು, N95 ಮಾಸ್ಕ್‌ಗಳ ರಂಧ್ರಗಳ ಮೂಲಕ ಸುಲಭವಾಗಿ ಹೋಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ, N95 ಮತ್ತು ಶಸ್ತ್ರಚಿಕಿತ್ಸೆಯ ಮಾಸ್ಕ್‌ನ ಚರ್ಚೆ ಹೆಚ್ಚು ಅರ್ಥಪೂರ್ಣವಲ್ಲ.

ಆನ್‌ಲೈನ್‌ನಲ್ಲಿ ಔಷಧಿಗಾಗಿ ಹುಡುಕಬೇಡಿ ಮತ್ತು ಖರೀದಿಸಬೇಡಿ
ಕೊರೊನಾ ವೈರಸ್‌ಗೆ ಇನ್ನೂ ಅಧಿಕೃತ ಚಿಕಿತ್ಸೆ ಕಂಡುಹಿಡಿದಿಲ್ಲ. ನಿಮ್ಮನ್ನು ಈ ವೈರಸ್‌ನಿಂದ ಗುಣಪಡಿಸುತ್ತದೆ ಅಥವಾ ಅದರಿಂದ ತಡೆಯುತ್ತದೆ ಎಂದು ಹೇಳುವ ಉತ್ಪನ್ನಗಳನ್ನು ನಂಬಬೇಡಿ. ಹಣ ಸಂಪಾದಿಸಲು ಇದು ಕೇವಲ ಒಂದು ಟ್ರಿಕ್ ಎಂದು ನಿಮಗೆ ಗೊತ್ತಿರಬೇಕು.

ವೈರಸ್ ಬಗ್ಗೆ ವೆಬ್‌ಸೈಟ್‌ಗಳಲ್ಲಿ ಹುಡುಕಬೇಡಿ
ಎಲ್ಲಾ ವೆಬ್‌ಸೈಟ್‌ಗಳಲ್ಲಿ ಕೊರೊನಾ ವೈರಸ್ ಬಗ್ಗೆ ಮಾಹಿತಿಯನ್ನು ಹುಡುಕಬೇಡಿ. ಏಕೆಂದರೆ, ವೆಬ್‌ಸೈಟ್‌ಗಳು ತಪ್ಪು ಮಾಹಿತಿ ನೀಡಿರುವ ಸಾಧ್ಯತೆ ಇರುತ್ತದೆ. ಭಾರತ ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಅಧಿಕೃತವಾದದ್ದು.

ಟೆಸ್ಟ್ ಕಿಟ್ ಇಲ್ಲ, ಜಾಹೀರಾತಿಗೆ ಮೋಸ ಹೋಗಬೇಡಿ
ಕೊರೊನಾ ವೈರಸ್ ಕಂಡುಹಿಡಿಯಲು ಅಧಿಕೃತ ಟೆಸ್ಟ್ ಕಿಟ್ ಇಲ್ಲ. ಆನ್‌ಲೈನ್‌ನಲ್ಲಿ ನಕಲಿ ಕೊರೊನಾ ವೈರಸ್ ಟೆಸ್ಟ್ ಕಿಟ್‌ಗಳನ್ನು ಮಾರಾಟ ಮಾಡುವ ಜಾಹೀರಾತುಗಳಿಗೆ ಬಲಿಯಾಗಬೇಡಿ.

ಸೋಷಿಯಲ್ ಮೀಡಿಯಾ ನಂಬಬೇಡಿ
ಕೊರೊನಾ ವೈರಸ್ ಬಗ್ಗೆ ಬಂದಿರುವ ವಾಟ್ಸ್‌ಆಪ್ ಸಂದೇಶಗಳು ಹಾಗೂ ಟಿಕ್‌ಟಾಕ್ ವಿಡಿಯೋಗಳನ್ನು ನಂಬಬೇಡಿ.

ಆನ್‌ಲೈನ್‌ನಲ್ಲಿ ಸಲಹೆ ಬೇಡ
ಕೊರೊನಾ ವೈರಸ್ ಕಾಯಿಲೆಯ ಬಗ್ಗೆ ಆನ್‌ಲೈನ್‌ನಲ್ಲಿ ಸಲಹೆ ತೆಗೆದುಕೊಳ್ಳುವುದು ಉತ್ತಮವಲ್ಲ. ಅದರಲ್ಲೂ ಯೂಟ್ಯೂಬರ್‌ಗಳು ಅಥವಾ ಇತರ ಇನ್ಫ್ಲೂಯೆನ್ಸರ್‌ನಿಂದ ಸಲಹೆ ತೆಗೆದುಕೊಳ್ಳಬೇಡಿ.

ರೋಗಲಕ್ಷಣಗಳನ್ನು ಆನ್‌ಲೈನ್‌ನಲ್ಲಿ ಹುಡುಕಬೇಡಿ
ಕೊರೊನಾ ವೈರಸ್‌ಗೆ ಸಂಬಂಧಿಸಿದ ರೋಗ ಲಕ್ಷಣಗಳನ್ನು ಆನ್‌ಲೈನ್‌ನಲ್ಲಿ ಹುಡುಕಬೇಡಿ. ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ತಕ್ಷಣ ವೈದ್ಯರ ಬಳಿಗೆ ಹೋಗುವುದು ಉತ್ತಮ.

ಶೇರ್ ಮಾಡಬೇಡಿ
ಜನರನ್ನು ಆತಂಕಕ್ಕೆ ದೂಡುವ ಅನಗತ್ಯ ಪರಿಶೀಲಿಸದ ಲೇಖನಗಳನ್ನು, ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದನ್ನು ತಪ್ಪಿಸಿ.

ಫಿಶಿಂಗ್ ಇಮೇಲ್‌ಗಳ ಬಗ್ಗೆ ಎಚ್ಚರ
ಕೊರೊನಾ ವೈರಸ್ ಜಾಗತಿಕವಾಗಿ ಹರಡುತ್ತಿದ್ದು, ಸೈಬರ್ ಅಪರಾಧಿಗಳು ಇದನ್ನು ಮಾಲ್‌ವೇರ್ ಹರಡಲು ಬಳಸಿಕೊಳ್ಳುವ ಸಾಧ್ಯತೆಯಿದೆ. ವಿಶ್ವ ಆರೋಗ್ಯ ಸಂಸ್ಥೆ ಕಳುಹಿಸಿದೆ ಎನ್ನಲಾದ ನಕಲಿ ಇಮೇಲ್‌ಗಳ ಮೂಲಕ ಫಿಶಿಂಗ್ ದಾಳಿ ಮಾಡುವ ಸಾಧ್ಯತೆ ಇರುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086