ಲಾಲಿಪಪ್‌ಗೆ ಸಡ್ಡು ಹೊಡೆಯಲಿರುವ ಉಚಿತ ಅಪ್ಲಿಕೇಶನ್ ಎಲ್ ಲಾಂಚರ್

Written By:

ಗೂಗಲ್‌ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಾಗಿ ಅತಿದೊಡ್ಡ ಅಪ್‌ಗ್ರೇಡ್ ಆಗಿದೆ ಆಂಡ್ರಾಯ್ಡ್ 5.0 ಲಾಲಿಪಪ್. ಇದು ಕೇವಲ ನಿರ್ದಿಷ್ಟ ಫೋನ್‌ಗಳಿಗೆ ಮಾತ್ರ ಲಭ್ಯವಾಗುತ್ತಿದೆ ಎಂಬುದು ದುಃಖಕರ ವಿಷಯವಾಗಿದ್ದರೂ ಲಾಲಿಪಪ್‌ನಂತೆ ಕಾಣುವ ಅಪ್ಲಿಕೇಶನ್ ಅನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ.

ಲಾಲಿಪಪ್‌ಗೆ ಸಡ್ಡು ಹೊಡೆಯಲಿರುವ ಉಚಿತ ಅಪ್ಲಿಕೇಶನ್ ಎಲ್ ಲಾಂಚರ್

ಈ ಅಪ್ಲಿಕೇಶನ್ ನಿಮ್ಮ ಹಳೆಯ ಆಂಡ್ರಾಯ್ಡ್ ಆವೃತ್ತಿಯನ್ನು ಲಾಲಿಪಪ್‌ನಂತೆ ತೋರಿಸುತ್ತದೆ ಮತ್ತು ಇದು ಸಂಪೂರ್ಣ ಉಚಿತವಾಗಿದೆ. ಆಂಡ್ರಾಯ್ಡ್ ಡೆವಲಪರ್ಸ್ ಎಲ್‌ಎಲ್ ಅಪ್ಲಿಕೇಶನ್ ಗ್ರೂಪ್ ಇತ್ತೀಚೆಗೆ ತಮ್ಮ ಅಪ್ಲಿಕೇಶನ್ ಅನ್ನು ಅಪ್‌ಡೇಟ್ ಮಾಡಿದ್ದು, ಇದನ್ನು ಎಲ್ ಲಾಂಚರ್ ಎಂದು ಕರೆಯಲಾಗಿದೆ. ಇದು ಲಾಲಿಪಪ್‌ನಂತೆ ಕಾಣಿಸುತ್ತಿದ್ದು ಸಂಪೂರ್ಣ ಉಚಿತವಾಗಿದೆ.

ಲಾಲಿಪಪ್‌ಗೆ ಸಡ್ಡು ಹೊಡೆಯಲಿರುವ ಉಚಿತ ಅಪ್ಲಿಕೇಶನ್ ಎಲ್ ಲಾಂಚರ್

ಇಂದಿನ ಲೇಖನದಲ್ಲಿ ಎಲ್ ಲಾಂಚರ್ ವಿಶೇಷತೆಗಳನ್ನು ಅರಿಯೋಣ
ಆಂಡ್ರಾಯ್ಡ್ 4.0 + ಡಿವೈಸ್‌ಗಳಿಗಾಗಿ ಆಂಡ್ರಾಯ್ಡ್ 5.0 ಆಧಾರಿತ ಲಾಂಚರ್ ಇದಾಗಿದೆ.
ಗೂಗಲ್ ನೌಗೆ ಬೆಂಬಲವನ್ನು ಒದಗಿಸುತ್ತದೆ. ಎಲ್ಲಾ ಎಲ್ ಲಾಂಚರ್ ಸ್ಕ್ರೀನ್‌ಗಳಿಂದ ಓಕೆ ಗೂಗಲ್ ಸಕ್ರಿಯಗೊಳಿಸಿ
ಹೆಚ್ಚಿನ ಐಕಾನ್ ಪ್ಯಾಕ್‌ಗಳಿಗೆ ಇದು ಬೆಂಬಲವನ್ನು ಒದಗಿಸಲಿದೆ. ಅಂದರೆ ನೋವಾ ಲಾಂಚರ್, ಸೋಲೋ ಲಾಂಚರ್, ಗೋ ಲಾಂಚರ್, ಅಪೆಕ್ಸ್ ಲಾಂಚರ್ ಇತ್ಯಾದಿ.
ಆಂಡ್ರಾಯ್ಡ್ 4.0 - 4.3 ಗಾಗಿ ಟ್ರಾನ್ಸಪರೆಂಟ್ ಸ್ಟೇಟಸ್ ಬಾರ್ ಕ್ಲೋನ್
ಹ್ಯಾಂಡಿ ಸೈಡ್‌ಬಾರ್, ಹಾಗೂ ಸೈಡ್ ಬಾರ್ ಅನ್ನು ಹೊರತೆಗೆಯಬಹುದಾಗಿದೆ.
ಅಪ್ಲಿಕೇಶನ್ ಮರೆಮಾಡುವುದು, ಫೋಲ್ಡರ್ ರಚನೆ, ಅಪ್ಲಿಕೇಶನ್ ಸಾರ್ಟ್ ಮಾಡುವುದು, ಕ್ವಿಕ್ ಎ-ಜೆಡ್ ಬಾರ್
ಡ್ರಾವರ್ ಸ್ಟೈಲ್: ಹೋರಿಜಾಂಟಲ್, ವರ್ಟಿಕಲ್, ಕ್ಯಾಟಗರಿಯೊಂದಿಗೆ ವರ್ಟಿಕಲ್

English summary
This article tells about Don’t wait for Android 5.0, this app makes your phone look like Lollipop for free.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot