ಇನ್ಮುಂದೆ ಒಂದು 'ಸಿಮ್' ಖರೀದಿಗೆ ಏನೆಲ್ಲಾ ಮಾಡ್ಬೇಕು ಗೊತ್ತಾ?..ಕರ್ಮಕಾಂಡ!!

  |

  ಆಧಾರ್ ಮೂಲಕ ಸಿಮ್ ದೃಢೀಕರಣ ಮಾಡಿಕೊಂಡವರು ಮರು ದೃಢೀಕರಣ ಮಾಡಬೇಕಿಲ್ಲ ಮತ್ತು ಪರ್ಯಾಯ ವಿಳಾಸ ದಾಖಲೆಗಳನ್ನು ಸಹ ನೀಡುವ ಅಗತ್ಯತೆ ಕೂಡ ಇಲ್ಲ ಎಂದು ವಿಶಿಷ್ಟ ಗುರುತಿನ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಜೊತೆಗೆ ಸಿಮ್ ದೃಢೀಕರಣಕ್ಕಾಗಿ ಪರ್ಯಾಯ ವ್ಯವಸ್ಥೆ ಏನು ಮಾಡಬಹುದು ಎಂದು ಚರ್ಚೆ ನಡೆಸಿತ್ತು. ಇದಕ್ಕೀಗ ಬಹುತೇಕ ಉತ್ತರ ಸಿಕ್ಕಿದೆ.

  ಹೌದು, ಈ ಮೊದಲ ದೇಶದ ಎಲ್ಲಾ ಟೆಲಿಕಾಂ ಸಂಸ್ಥೆಗಳು ವಿಶಿಷ್ಟ ಗುರುತಿನ ಪ್ರಾಧಿಕಾರದ ಆದೇಶಗಳನ್ನು ಅನುಸರಿಸಿದ್ದರು. ಆದರೆ, ಈಗ ಆಧಾರ್ ಕಾರ್ಡ್ ಆಧಾರಿತ ಸಿಮ್ ದೃಢೀಕರಣವನ್ನು ನಿಲ್ಲಿಸುವ ನಿರ್ಧಾರವನ್ನು ಟೆಲಿಕಾಂ ಕಂಪೆನಿಗಳು ಕೈಗೊಂಡಿವೆ. ಹಾಗೆಂದು ಆಧಾರ್ ಮೂಲಕ ದೃಢೀಕರಿಸಿದ ಸಿಮ್‌ಗಳು ಸ್ಥಗಿತಗೊಳ್ಳುವ ಭಯ ಬೇಡ ಎಂದು ಯುಐಡಿಎಐ ತಿಳಿಸಿದೆ.

  ಇನ್ಮುಂದೆ ಒಂದು 'ಸಿಮ್' ಖರೀದಿಗೆ ಏನೆಲ್ಲಾ ಮಾಡ್ಬೇಕು ಗೊತ್ತಾ?..ಕರ್ಮಕಾಂಡ!!

  ಜೊತೆಗೆ ಈಗಾಗಲೇ ಚಾಲ್ತಿಯಲ್ಲಿರುವ ಸಿಮ್ ಕಾರ್ಡ್‌ಗಳಿಗೆ ನೀಡಲಾದ ಆಧಾರ್ ಇಕೆವೈಸಿಯನ್ನು ಡಿಲಿಂಕ್ ಮಾಡಬೇಕಿದ್ದರೆ ಅದಕ್ಕೆ ಅವಕಾಶವಿದೆ ಎಂದು ತಿಳಿಸಿದೆ. ಹಾಗಾದರೆ, ನಿಮ್ಮ ಸಿಮ್‌ಕಾರ್ಡ್‌ನಿಂದ ಆಧಾರ್ ಮಾಹಿತಿಯನ್ನು ಅಳಿಸುವುದು ಹೇಗೆ? ಹೊಸ ಸಿಮ್ ಪಡೆಯಲು ಇನ್ಮುಂದೆ ಇರಲಿರುವ ವ್ಯವಸ್ಥೆ ಏನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಗ್ರಾಹಕರಿಗೆ ಯಾವುದೇ ಅಪಾಯವಿಲ್ಲ.

  ಆಧಾರ್‌ ಇಕೆವೈಸಿ ಬಳಸಿಕೊಂಡು ಯಾರು ಸಿಮ್‌ ಕಾರ್ಡ್‌ ಪಡೆದಿದ್ದಾರೆ ಅವರಿಗೆ ಒದಗಿಸಲಾಗುವ ಮೊಬೈಲ್‌ ಸೇವೆಗೆ ಸಂಬಂಧಿಸಿದಂತೆ ಟೆಲಿಕಾಂ ಇಲಾಖೆ ಮತ್ತು ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು ಜಂಟಿಯಾನ್ನುಗಿ ಹೇಳಿಕೆಯ ನೀಡಿದ್ದು, ಯಾವುದೇ ಅಪಾಯವಿಲ್ಲ ಎಂದು ಹೇಳಿವೆ.ಗ್ರಾಹಕರು ಈಗಾಗಲೇ ಪಡೆದಿರುವ ಸಿಮ್ ಕಾರ್ಡ್‌ ಸ್ಥಗಿತವಾಗುತ್ತವೆ ಎಂದು ಭಾವಿಸಬೇಕಿಲ್ಲ ಮತ್ತು ಯಾವುದೇ ಮಾಹಿತಿಯನ್ನು ಕಂಪನಿಗಳು ಅಳಸಿ ಹಾಕಲಿವೆ ಎಂದೂ ಅಲ್ಲ ಎಂದು ಹೇಳಿವೆ.

  ಡಿಸ್‌ಕನೆಕ್ಟ್ ಆಗುವುದಿಲ್ಲ

  ಆಧಾರ್‌ ಸಿಂಧುತ್ವದ ಬಗ್ಗೆ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ ತನ್ನ ತೀರ್ಪು ನೀಡಿದೆ. ಇಕೆವೈಸಿ ಮೂಲಕ ನೀಡಲಾದ ಮೊಬೈಲ್‌ ನಂಬರ್‌ಗಳನ್ನು ಡಿಸ್‌ಕನೆಕ್ಟ್ ಮಾಡಬೇಕೆಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಎಲ್ಲೂ ಹೇಳಿಲ್ಲ. ಹಾಗಾಗಿ, ಗ್ರಾಹಕರು ಭಯಪಡಬೇಕಾಗಿಲ್ಲ. ಇಕೆವೈಸಿ ಮೂಲಕ ನೀಡಲಾದ ಎಲ್ಲ ನಂಬರ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಟೆಲಿಕಾಂ ಕಂಪೆನಿಗಳಿಂದ ಆಧಾರ್ ಮಾಹಿತಿ ಅಳಿಸುವುದು ಗ್ರಾಹಕರಿಗೆ ಬಿಟ್ಟಿದ್ದು ಎಂದು ಹೇಳಿವೆ.

  ಹೊಸ ದೃಢೀಕರಣ ಮಾಡಬೇಕಿಲ್ಲ.

  ಆಧಾರ್ ಮೂಲಕ ದೃಢೀಕರಣ ಮಾಡಿಕೊಂಡವರು ಮರು ದೃಢೀಕರಣ ಮಾಡಬೇಕಿಲ್ಲ ಮತ್ತು ಪರ್ಯಾಯ ವಿಳಾಸ ದಾಖಲೆಗಳನ್ನು ಸಹ ನೀಡುವ ಅಗತ್ಯತೆ ಕೂಡ ಇಲ್ಲ ಎಂದು ವಿಶಿಷ್ಟ ಗುರುತಿನ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಒಂದು ವೇಳೆ ನಮ್ಮ ಆಧಾರ್ ಮಾಹಿತಿ ಟೆಲಿಕಾಂ ಕಂಪೆನಿಗಳ ಬಳಿ ಇರುವುದು ಬೇಡ ಎಂದಾದಲ್ಲಿ ಮಾತ್ರ ಬೇರೆ ದೃಢೀಕರಣವನ್ನು ನೀಡಬಹುದು. ಹೀಗೆ ಬೇರೆ ದೃಢೀಕರಣ ನೀಡಿದಾಗ ಟೆಲಿಕಾಂ ಕಂಪೆನಿಗಳು ನಿಮ್ಮ ಆಧಾರ್ ಮಾಹಿತಿಯನ್ನು ಅಳಿಸಲಿವೆ.

  ಹೊಸ ನಂಬರ್‌ಗಳಿಗೆ ಆಧಾರ್ ಬೇಕಿಲ್ಲ

  ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿರುವುದರಿಂದ ಹೊಸ ಮೊಬೈಲ್‌ ನಂಬರ್‌(ಸಿಮ್ ಕಾರ್ಡ್‌)ಗಳನ್ನು ಪಡೆದುಕೊಳ್ಳುವಾಗ ಆಧಾರ್ ಇಕೆವೈಸಿ ಒದಗಿಸಬೇಕಾದ ಅಗತ್ಯವಿಲ್ಲ. ಆಧಾರ್ ಅನ್ನು ಸಿಮ್‌ಗೆ ಜೋಡಣೆ ಮಾಡಲೇಬೇಕು ಎಂಬುದಕ್ಕೆ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲದ್ದರಿಂದ ಕೋರ್ಟ್‌ ಆ ರೀತಿ ಹೇಳಿದೆ. ಆದರೆ, ಹಳೆಯ ಫೋನ್‌ ನಂಬರ್‌ಗಳನ್ನು ನಿಷ್ಕ್ರಿಯಗೊಳಸಬೇಕೆಂದು ಎಲ್ಲೂ ಹೇಳಿಲ್ಲ. ಈ ವಿಷಯದಲ್ಲಿ ತೀರ್ಪು ಬಹಳ ಸ್ಪಷ್ಟವಾಗಿದೆ. ಹಾಗಾಗಿ, ಇನ್ನು ಆಧಾರ್ ಕಾರ್ಡ್ ಸಿಮ್ ಪಡೆಯಲು ಅವಶ್ಯಕವಾಗಿಲ್ಲ.

  ರೆಗ್ಯುಲೇಟರಿ ಬಾಡಿ ಹೇಳಿದ್ದೇನು?

  ಬಯೋಮೆಟ್ರಿಕ್ ರೆಗ್ಯುಲೇಟರಿ ಬಾಡಿಯು ಹೇಳಿರುವಂತೆ ಎಲ್ಲಾ ಟೆಲಿಕಾಂ ಆಪರೇಟರ್‌ಗಳು ಸಹ ಮೊಬೈಲ್ ನಂಬರ್ ನಿಂದ ಆಧಾರ್ ಡಿಲೀಂಕ್ ಮಾಡುವ ಬಗೆಗಿನ ಎಲ್ಲಾ ವಿನಂತಿಗಳನ್ನು ಸ್ವೀಕರಿಸಬೇಕು ಮತ್ತು ಹೊಸ ಕೆವೈಸಿಯನ್ನು 6 ತಿಂಗಳ ಅವಧಿಯೊಳಗೆ ಮಾಡಬೇಕು ಎಂದಿದೆ. ಹಾಗಾಗಿ, ಶೀಘ್ರದಲ್ಲೇ ಪರ್ಯಾಯ ದೃಢೀಕರಣ ಜಾರಿಯಾಗುವ ನಿರೀಕ್ಷೆ ಇದೆ. ಇದಕ್ಕಾಗಿ ಟೆಲಿಕಾಂ ಇಲಾಖೆ ಗುರುತು ದೃಢೀಕರಣಕ್ಕಾಗಿ ಹೊಸದೊಂದು ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ ಎನ್ನಲಾಗಿದೆ.

  ಮೊಬೈಲ್‌ ಆಪ್‌ ಮೂಲಕ ಸಿಮ್ ಕಾರ್ಡ್‌

  ಟೆಲಿಕಾಂ ಇಲಾಖೆ ಕಾರ್ಡ್‌ ವಿತರಿಸುವ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸುವ ಪ್ರಕ್ರಿಯೆಯಲ್ಲಿದೆ ಎಂದು ಹೇಳಲಾಗಿದೆ. ಸಂಪೂರ್ಣವಾಗಿ ಡಿಜಿಟಲ್‌ ಪ್ರಕ್ರಿಯೆ ಆಗಿರುವ ಮೊಬೈಲ್‌ ಆಪ್‌ ಮೂಲಕವೇ ಸಿಮ್ ಕಾರ್ಡ್‌ ಪೂರೈಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಸುಪ್ರೀಂ ಕೋರ್ಟ್‌ ಕೂಡ ಡಿಜಿಟಲ್ ವ್ಯವಸ್ಥೆ ಪ್ರಸ್ತಾಪವನ್ನು ತನ್ನ ತೀರ್ಪಿನಲ್ಲಿ ತಿಳಿಸಿದ್ದರಿಂದ, ಈ ವ್ಯವಸ್ಥೆಯು ಸಂಪೂರ್ಣವಾಗಿ ಜಾರಿಯಾದರೆ ಹೊಸ ಸಿಮ್ ಕಾರ್ಡ್‌ ಪಡೆಯುವುದು ಮತ್ತಷ್ಟು ಕಷ್ಟವಾಗಬಹುದು.

  ಆಪ್‌ ಮೂಲಕ ಸಿಮ್ ಕಾರ್ಡ್‌ ಪಡೆಯವುದು ಹೇಗೆ?

  ಈ ಮೇಲೆ ಹೇಳಿದಂತೆ ಹೊಸ ಕಾರ್ಡ್‌ ವಿತರಿಸುವ ಹೊಸ ಡಿಜಿಟಲ್‌ ವ್ಯವಸ್ಥೆ ತಂಬಾ ವಿಶಿಷ್ಟವಾಗಿದೆ. ಗ್ರಾಹಕ ಯಾವುದೇ ಸಿಮ್ ಪಡೆಯಲು ಒಂದು ಟೆಲಿಕಾಂ ಕಂಪೆನಿ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಆಪ್ ಮೂಲಕ ಸಿಮ್‌ಗೆ ಮನವಿ ಸಲ್ಲಿಸಿದರೆ ಆ ಸಂಸ್ಥೆಯ ಉದ್ಯೋಗಿ ಮನವಿ ಸಲ್ಲಿಸಿದ ಗ್ರಾಹಕನನ್ನು ಸಂಪರ್ಕಿಸಿ, ಆಕೆ ಅಥವಾ ಆತನ ಆಧಾರ್‌ ಕಾರ್ಡ್‌, ವೋಟರ್ ಐಡಿ ಸೇರಿದಂತೆ ಇನ್ನಿತರ ಐಡಿಗಳ ಫೋಟೊ ದಾಖಲಿಸಿಕೊಂಡು ಒಟಿಪಿ ಮೂಲಕ ದೃಢೀಕರಣ ಮಾಡಿಕೊಂಡು ಆಕೆ ಅಥವಾ ಆತನಿಗೆ ಹೊಸ ಸಿಮ್‌ ಕಾರ್ಡ್‌ ನೀಡುತ್ತಾನೆ.

  ವಾಸ್ತವದಲ್ಲಿ ಕಾರ್ಯನಿರ್ವಹಣೆ ಆಗಲಿದೆಯೇ?

  ಯಾರು ಸಿಮ್‌ ಕಾರ್ಡ್‌ ಪಡೆಯುತ್ತಾರೋ ಅವರ ಲೈವ್‌ ಫೋಟೊಗಳನ್ನು ಸೆರೆ ಹಿಡಿಯಲಾಗುತ್ತದೆ. ಉದ್ದೇಶಿತ ಡಿಜಿಟಲ್‌ ಪ್ರಕ್ರಿಯೆಯಲ್ಲಿ ಬಳಕೆದಾರರ ಎಲ್ಲ ಕೋನದ ಫೋಟೊ ಮತ್ತು ಸಮಯ ಕೂಡ ನಮೂದಾಗಲಿದೆ. ಇಂತಹ ಈ ಡಿಜಿಟಲ್‌ ವ್ಯವಸ್ಥೆಯನ್ನು ನಿರ್ಮಾಣದ ಪ್ರಕ್ರಿಯೆಯಲ್ಲಿದೆ. ಆದರೆ, ಮೊಬೈಲ್ ಖರೀದಿಸಿ ಅದಕ್ಕೆ ಇಂಟರ್‌ನೆಟ್ ಸಂಪರ್ಕವನ್ನು ಪಡೆದುಕೊಂಡು ನಂತರ ಸಿಮ್ ಪಡೆಯುವುದು ಎಲ್ಲರಿಗೂ ಕಷ್ಟವಾಗಬಹುದು. ಹಳ್ಳಿಯ ಜನರಿಗಂತೂ ಇದು ಇನ್ನು ಕಷ್ಟವಾಗಲಿದೆ. ಹಾಗಾಗಿ, ಇದು ಯಾವ ರೀತಿಯಲ್ಲಿ ವಾಸ್ತವದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕಾದು ನೋಡಬೇಕಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  UIDAI and DoT have jointly issued statement confirming that 50 million numbers (sim) won'tbe deactivated. They will also set up a new eKYCto know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more