ಚೀನಾಗೆ ಎಡೆಮುರಿ ಕಟ್ಟುತ್ತಾ ಅಮೇರಿಕಾ..? ಟ್ರಂಪ್‌ ಹೇಳಿದ್ದೇನು..?

By Avinash
|

ವಿಶ್ವದ ದೊಡ್ಡಣ್ಣ ಅಮೇರಿಕಾ ಮತ್ತು ಡ್ರಾಗನ್‌ ರಾಷ್ಟ್ರ ಚೀನಾ ನಡುವೆ ವಿಶ್ವ ಮಟ್ಟದಲ್ಲಿ ಶೀತಲ ಸಮರ ಸಾಗುತ್ತಿದೆ. ಇದು ಡೋನಾಲ್ಟ್‌ ಟ್ರಂಪ್‌ ಅಮೇರಿಕಾ ಅಧ್ಯಕ್ಷರಾದ ಮೇಲೆ ಇನ್ನಷ್ಟು ಹೆಚ್ಚಿದ್ದು, ಚೀನಾವನ್ನು ಅಮೇರಿಕಾ ಮೊಬೈಲ್‌ ಮತ್ತು ಟೆಕ್‌ ಕ್ಷೇತ್ರದಲ್ಲಿ ಎಡೆಮುರಿ ಕಟ್ಟುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಹೀಗಾಗಲೇ ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ಭಾರೀ ತೆರಿಗೆಯನ್ನು ವಿಧಿಸುತ್ತಿರುವ ಅಮೇರಿಕಾ ಮತ್ತೊಂದು ಯೋಜನೆಗೆ ಮುಂದಾಗಿದೆ.

ಚೀನಾಗೆ ಎಡೆಮುರಿ ಕಟ್ಟುತ್ತಾ ಅಮೇರಿಕಾ..? ಟ್ರಂಪ್‌ ಹೇಳಿದ್ದೇನು..?

ಹೌದು, ಅಮೇರಿಕಾದ ಅಧ್ಯಕ್ಷ ಡೋನಾಲ್ಟ್‌ ಟ್ರಂಪ್‌ ಶನಿವಾರ ಟ್ವೀಟ್‌ ಮಾಡಿದ್ದು, ಆ ಟ್ವೀಟ್‌ನಲ್ಲಿ ಚೀನಾ ಉತ್ಪನ್ನಗಳಿಗೆ ಅಮೇರಿಕಾದಿಂದ ಗೇಟ್‌ಪಾಸ್‌ ನೀಡುವ ಇರಾದೆಯನ್ನು ಟ್ರಂಪ್‌ ಬಹಿರಂಗಪಡಿಸಿದ್ದಾರೆ. ಟ್ವೀಟ್‌ನಲ್ಲಿ ಆಪಲ್‌ ಕಂಪನಿಗೆ ಅಮೇರಿಕಾದಲ್ಲಿಯೇ ಉತ್ಪನ್ನಗಳನ್ನು ಉತ್ಪಾದಿಸುವಂತೆ ಹೇಳಿದ್ದು, ಇದರಿಂದ ಚೀನಾದ ಆಮದು ಮೇಲಿನ ಸುಂಕವನ್ನು ತಪ್ಪಿಸಿ ಚೀನಾಕ್ಕೆ ದೊಡ್ಡ ಹೊಡೆತ ಕೊಡಲು ಟ್ರಂಪ್ ಮುಂದಾಗಿದ್ದಾರೆ.

ದುಬಾರಿ ಆಮದು ಸುಂಕ

ದುಬಾರಿ ಆಮದು ಸುಂಕ

ಆಪಲ್‌ ಕಂಪೆನಿಯು ತನ್ನ ವ್ಯಾಪಾರ ಅಧಿಕಾರಿಗಳಿಗೆ ಶುಕ್ರವಾರ ಪತ್ರವೊಂದನ್ನು ಬರೆದಿದ್ದು, ಉದ್ದೇಶಿತ ಆಮದು ತೆರಿಗೆಯು ವಾಚ್ ಸೇರಿ ಆಪಲ್ ಉತ್ಪನ್ನಗಳ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ ಎಂದಿದೆ. ಆದರೆ, ಈ ಪತ್ರದಲ್ಲಿ ಐಫೋನ್‌ ಬಗ್ಗೆ ಆಪಲ್ ಉಲ್ಲೇಖಿಸಿಲ್ಲ.

267 ಬಿಲಿಯನ್‌ ಡಾಲರ್ ಹೆಚ್ಚುವರಿ ತೆರಿಗೆ

267 ಬಿಲಿಯನ್‌ ಡಾಲರ್ ಹೆಚ್ಚುವರಿ ತೆರಿಗೆ

ಶುಕ್ರವಾರ ಏರ್‌ಫೋರ್ಸ್‌ ಒನ್‌ ವಿಮಾನದಲ್ಲಿ ಮಾತನಾಡಿದ ಟ್ರಂಪ್‌ ಆಪಲ್ ಹೆಚ್ಚುವರಿಯಾಗಿ ಚೀನಾದ ಸರಕುಗಳಿಗೆ 267 ಬಿಲಿಯನ್ ಡಾಲರ್‌ ಯೋಜಿತ ತೆರಿಗೆಯನ್ನು ನೀಡಬೇಕಾಗಿತ್ತು ಎಂದು ಹೇಳಿದ್ದಾರೆ.

ಟ್ರಂಪ್‌ ಟ್ವೀಟ್‌ನಲ್ಲಿ ಏನಿತ್ತು..?

ಟ್ರಂಪ್‌ ಟ್ವೀಟ್‌ನಲ್ಲಿ ಏನಿತ್ತು..?

ನಾವು ಚೀನಾ ಮೇಲೆ ವಿಧಿಸುವ ಭಾರೀ ತೆರಿಗೆಯ ಕಾರಣದಿಂದ ಆಪಲ್ ಬೆಲೆಗಳು ಹೆಚ್ಚಾಗಬಹುದು. ಆದರೆ, ZERO ತೆರಿಗೆ ಮತ್ತು ತೆರಿಗೆ ವಿನಾಯಿತಿಯಂತಹ ಸರಳ ಪರಿಹಾರಗಳಿವೆ. ಅದಕ್ಕಾಗಿ, ಚೀನಾದ ಚೀನಾದ ಬದಲಿಗೆ ಅಮೇರಿಕದಲ್ಲಿಯೇ ನಿಮ್ಮ ಉತ್ಪನ್ನಗಳನ್ನು ತಯಾರಿಸಿ. ಹೊಸ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಿ ಎಂದು ಟ್ರಂಪ್‌ ಶನಿವಾರ ಮಾಡಿದ ಟ್ವೀಟ್‌ನಲ್ಲಿ ಹೇಳಿದ್ದಾರೆ. ಆದರೆ, ಆಪಲ್‌ ಇನ್ನು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಕಂಪನಿಗಳಿಗೆ ಮುಳುವಾದ ಅಮೇರಿಕ ನೀತಿ

ಕಂಪನಿಗಳಿಗೆ ಮುಳುವಾದ ಅಮೇರಿಕ ನೀತಿ

ಆಮದು ಮಾಡಿಕೊಳ್ಳುವ ಕಂಪ್ಯೂಟರ್ ಭಾಗಗಳು ದುಬಾರಿಯಾಗುವಂತೆ ಸುಂಕ ಹೆಚ್ಚಾಗಿದ್ದು, ಇದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ನಷ್ಟವುಂಟಾಗುತ್ತಿದೆ. ಆಪಲ್‌ ಏರ್‌ಫೋಡ್‌ನ ಹೆಡ್‌ಫೋನ್‌ಗಳು, ಕೇಲವು ಬೀಟ್ಸ್‌ ಹೆಡ್‌ಫೋನ್‌ಗಳು ಮತ್ತು ಅದರ ಹೊಸ ಹೋಮ್‌ಪೋಡ್‌ ಸ್ಮಾರ್ಟ್ ಸ್ಪೀಕರ್‌ಗಳು ಸಹ ತೆರಿಗೆ ಸಮಸ್ಯೆಯನ್ನು ಎದುರಿಸುತ್ತಿವೆ. ಆಪಲ್ ಅಷ್ಟೇ ಅಲ್ಲದೇ ಇತರ ಕಂಪನಿಗಳು ಸಹ ನಷ್ಟ ಅನುಭವಿಸುತ್ತಿವೆ.

ಆಪಲ್‌ಗೆ ಅಮೇರಿಕವೇ ಹೊರೆ

ಆಪಲ್‌ಗೆ ಅಮೇರಿಕವೇ ಹೊರೆ

ಉದ್ದೇಶಿತ ತೆರಿಗೆಗಳ ಹೊರೆ ಚೀನಾಕ್ಕಿಂತಲೂ ಅಮೇರಿಕಾದಲ್ಲಿ ಹೆಚ್ಚು ಬಿದ್ದಿದೆ ಎಂದು ಆಪಲ್ ತನ್ನ ಪತ್ರದಲ್ಲಿ ತಿಳಿಸಿದೆ. ಆದರೆ, ಟ್ರಂಪ್‌ ಟ್ವೀಟ್ ಮಾಡಿರುವ ರೀತಿ ನೋಡಿದರೆ ಸದ್ಯಕ್ಕೆ ತೆರಿಗೆ ನೀತಿಯನ್ನು ಸಡಿಲಗೊಳಿಸುವ ಯಾವುದೇ ಲಕ್ಷಣಗಳಿಲ್ಲ. ತೆರಿಗೆ ವಿನಾಯಿತಿ ಬೇಕೆಂದರೆ ಆಪಲ್‌ ಅಮೇರಿಕಾದಲ್ಲಿ ಹೊಸ ಉತ್ಪಾದನಾ ಘಟಕ ಪ್ರಾರಂಭಿಸುವ ಅನಿವಾರ್ಯತೆಯಲ್ಲಿ ಸಿಲುಕಿಗೊಂಡಿದೆ.

Best Mobiles in India

English summary
Donald Trump tells Apple to make products in US to avoid China tariffs. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X