ಈ ಪುಟ್ಟ ಊರಿಗೆ ಮಾರಕವಾಗಿರುವ ಚೀನಾದ ಇ ವೇಸ್ಟ್

By Shwetha
|

ವಿಶ್ವದಾದ್ಯಂತ ಚೀನಾ ಇಲೆಕ್ಟ್ರಾನಿಕ್ ಗಾರ್ಬೇಜ್ ಅಥವಾ ಇ ವೇಸ್ಟ್‌ನಲ್ಲಿ ಎರಡನೆಯ ಸ್ಥಾನವನ್ನು ಅಲಂಕರಿಕೊಂಡಿದೆ. ಪ್ರತೀ ವರ್ಷ ಕಂಪೆನಿಯು 100 ಮಿಲಿಯನ್ ಕಂಪ್ಯೂಟರ್‌ಗಳನ್ನು, 40 ಮಿಲಿಯನ್ ದೂರದರ್ಶನಗಳನ್ನು 20 ಮಿಲಿಯನ್ ಏರ್ ಕಂಡೀಶನ್ ಮತ್ತು 10 ಮಿಲಿಯನ್ ಫ್ರಿಡ್ಜ್‌ಗಳನ್ನು ಗಾರ್ಬೆಜ್ ರೂಪದಲ್ಲಿ ರವಾನಿಸುತ್ತಿದೆ.

ಈ ಉತ್ಪನ್ನ ಹಳತಾದಂತೆ ಚೀನಾ ಇವುಗಳನ್ನು ಎಸೆದು ಹೊಸ ಉತ್ಪನ್ನಕ್ಕೆ ಕೈ ಹಾಕುತ್ತದೆ. ಆದ್ದರಿಂದಲೇ ಚೀನಾ ಇ ವೇಸ್ಟ್‌ನಲ್ಲಿ ಎರಡನೆಯ ಸ್ಥಾನದಲ್ಲಿದೆ. ಚೀನಾದ ರಾಜಧಾನಿ ಬೀಜಿಂಗ್ ಈ ಇ ವೇಸ್ಟ್ ಅನ್ನು ಡೋಂಗ್ಸಿಯಾಕೋ ಎಂಬ ಪುಟ್ಟ ಹಳ್ಳಿಗೆ ರವಾನಿಸುತ್ತಿದ್ದು, ಅಲ್ಲಿ ವಾಸಿಸುತ್ತಿರುವ ನೂರಕ್ಕೂ ಹೆಚ್ಚಿನ ಕುಟುಂಬಗಳು ಇ ವೇಸ್ಟ್‌ನ ತುಣುಕನ್ನು ಆರಿಸಿ ಜೀವನವನ್ನು ಸಾಗಿಸುತ್ತಿವೆ.

ಈ ಪುಟ್ಟ ಊರು ಇ ವೇಸ್ಟ್‌ನಿಂದ ತುಂಬಿ ಹೋಗಿದ್ದು ಬರಿಯ ಇಲೆಕ್ಟ್ರಾನಿಕ್ ಉಪಕರಣಗಳಿಂದ ತುಂಬಿ ಹೋಗಿ ಕಸದ ತೊಟ್ಟಿಯಾಗಿದೆ. ಈ ಊರನ್ನು ಅಭಿವೃದ್ಧಿಪಡಿಸುವ ತುರ್ತು ಕ್ರಮವನ್ನು ಚೀನಾ ಸರಕಾರ ತೆಗೆದುಕೊಂಡಿದ್ದು ನಗರೀಕರಣದತ್ತ ಈ ಊರನ್ನು ಕೊಂಡೊಯ್ಯುವ ಯೋಜನೆಯಲ್ಲಿದೆ. ಈ ಲೇಖನದಲ್ಲಿ ನಾವು ನೀಡಿರುವ ಚಿತ್ರಗಳು ಇ ವೇಸ್ಟ್‌ನಿಂದ ಉಂಟಾಗಿರುವ ಈ ಊರಿನ ಪರಿಣಾಮವನ್ನು ತೋರಿಸಿದ್ದು ಈ ಕೊಳಚೆ ಎಷ್ಟೊಂದು ಹಾನಿಕರ ಎಂಬುದನ್ನು ನೋಡಿ.

#1

#1

ಬೀಜಿಂಗ್‌ನ ಉತ್ತರ ಉಪನಗರಗಳಲ್ಲಿ ಕಂಡುಬರುವ ಡೋಂಗ್ಸಿಯಾಕೋ ಒಂದು ಪುಟ್ಟ ಹಳ್ಳಿಯಾಗಿದ್ದು ಇಲ್ಲಿ ವ್ಯವಸಾಯ ಮುಖ್ಯವಾಗಿದೆ. ಆದರೂ ಹದಿನೈದು ವರ್ಷಗಳಿಂದ ಈ ಹಳ್ಳಿ ಇ ವೇಸ್ಟ್ ಅನ್ನು ಆರಿಸಿ ಅದರಿಂದ ಬರುವ ಆದಾಯವನ್ನೇ ಮೂಲ ಉತ್ಪನ್ನವಾಗಿಸಿಕೊಂಡಿದೆ.

#2

#2

ಇಲ್ಲಿ ಗ್ರಾಹಕರು ತಮ್ಮ ಹಳೆಯ ಮತ್ತು ಮುರಿದ ಇಲೆಕ್ಟ್ರಾನಿಕ್ ಉಪಕರಣಗಳನ್ನು ಸ್ವತಂತ್ರ ಗಾರ್ಬೆಜ್ ಆಯುವವರಿಗೆ ಮಾರುತ್ತಿದ್ದು ಅವರು ಈ ಗ್ರಾಹಕರಿಗೆ ಹಣವನ್ನು ನೀಡುತ್ತಿದ್ದಾರೆ.

#3

#3

ಇಲ್ಲಿನ ನಿವಾಸಿಗಳು ಇಲೆಕ್ಟ್ರಾನಿಕ್ ಉತ್ಪನ್ನಗಳನ್ನು ಗಾಡಿಗಳಲ್ಲಿ ಮಾರಿಕೊಂಡು ನಗರಗಳತ್ತ ಪ್ರಯಾಣ ಬೆಳೆಸುತ್ತಾರೆ. ಅಲ್ಲಿ ಇವರ ಉತ್ಪನ್ನವನ್ನು ಕೊಂಡುಕೊಳ್ಳುವ ಶ್ರೀಮಂತ ಮನೆಯವರೂ ಕೂಡ ಇರುತ್ತಾರೆ.

#4

#4

ಈ ಹಳ್ಳಿಯವರಿಗೆ ಇ ವೇಸ್ಟ್ ಉತ್ತಮ ಆದಾಯ ತರುವಂತಹ ವ್ಯಾಪಾರವಾಗಿದ್ದು ಹಳೆಯ ವಸ್ತುಗಳನ್ನು ನವೀಕರಿಸಿ ಪುನಃ ತಯಾರಿಸಿಕೊಡುವ ಸಾಮರ್ಥ್ಯವನ್ನು ಇಲ್ಲಿನವರದ್ದಾಗಿದೆ.

#5

#5

ಇ ವೇಸ್ಟ್ ಮಾಡಿರುವ ಪರಿಸರ ಮಾಲಿನ್ಯ ವಿಪರೀತವಾಗಿದ್ದು ಈ ಊರಿನ ಜನರು ಉಪಕರಣಗಳೊಂದಿಗೆ ತಮ್ಮ ಜೀವನವನ್ನು ವ್ಯಯಿಸುತ್ತಿದ್ದಾರೆ.

#6

#6

ಈ ಪರಿಸರದ ಮೇಲೆ ಇ - ವೇಸ್ಟ್ ಮಾಡಿರುವ ಹಾನಿಯನ್ನು ನಿಮಗೆ ಗಮನಿಸಬಹುದು

#7

#7

ಹಳ್ಳಿಯು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು, ಕುಡಿಯುವ ನೀರಿನ ಅಭಾವ ಹೀಗೆ ಸಮಸ್ಯೆಗಳ ಪಟ್ಟಿಯನ್ನೇ ಹಳ್ಳಿ ಅನುಭವಿಸುತ್ತಿದೆ.

#8

#8

ಡೋಂಗ್ಸಿಯಾಕೋದ ನಿವಾಸಿಗಳು ನಿರಂತರವಾಗಿ ಇ ವೇಸ್ಟ್‌ನ ಹಾನಿಯಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಲೆಕ್ಟ್ರಾನಿಕ್ ಉತ್ಪನ್ನಗಳ ಬಗೆಗೆ ಹೆಚ್ಚಿನ ಜ್ಞಾನ ಇಲ್ಲದಿರುವುದು ಅನಾರೋಗ್ಯವನ್ನು ಇಲ್ಲಿನ ನಿವಾಸಿಗಳಿಗೆ ದಯಪಾಲಿಸಿದೆ.

#9

#9

ಆದರೂ ಇಲ್ಲಿ ಸೇರುವ ಇ ವೇಸ್ಟ್ ಮೂವತ್ತೂ ಸಾವಿರಕ್ಕೂ ಹೆಚ್ಚಿನ ಜನರಿಗೆ ಜೀವನಾಧಾರವಾಗಿದೆ.

#10

#10

ಈ ಹಳ್ಳಿಯ ಬವಣೆಯನ್ನು ಅರಿತುಕೊಂಡಿರುವ ಚೀನಾ ಸರಕಾರ ಕೆಲವೊಂದು ಪ್ರಗತಿಪರ ಬದಲಾವಣೆಗಳನ್ನು ಇಲ್ಲಿ ಮಾಡಹೊರಟಿದೆ.

#11

#11

ಇಲ್ಲಿನ ನೀರು ಕೂಡ ಇ ವೇಸ್ಟ್‌ನಿಂದ ಕಲುಷಿತಗೊಂಡಿದ್ದು ಇಲ್ಲಿನ ನಿವಾಸಿಗಳು ಇದನ್ನೇ ಸೇವಿಸುವಂತಹ ಪರಿಸ್ಥಿತಿ ಎದುರಾಗಿದೆ.

#12

#12

ಇಲ್ಲಿನ ಮಕ್ಕಳು, ಹಿರಿಯರು ಒಂದಿಲ್ಲೊಂದು ಕಾಯಿಲೆಗಳಿಂದ ಬಳಲುತ್ತಿದ್ದು ನಿವಾಸಿಗಳ ಯಾತನೆಗೆ ಕೊನೆ ಇಲ್ಲದಂತಾಗಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X