ಭಾರತದ ನಂ.1 ಟೆಲಿಕಾಂ ಪಟ್ಟದಿಂದ ಇದೇ ಮೊದಲ ಬಾರಿ ಇಳಿಯಿತು 'ಏರ್‌ಟೆಲ್'!!

|

ಭಾರತದ ಟೆಲಿಕಾಂ ಪ್ರಪಂಚದ ಮಹತ್ತರ ಬದಲಾವಣೆಗಳಲ್ಲಿ ಒಂದಾಗಿರುವ ವೊಡಾಫೋನ್ ಮತ್ತು ಐಡಿಯಾ ಸೆಲ್ಯೂಲರ್ ದುರಸಂಪರ್ಕ ಸೇವಾ ಕಂಪೆನಿಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಅಂತಿಮ ಅನುಮೋದನೆ ನೀಡಿದೆ. ಹಾಗಾಗಿ, ಅಧಿಕೃತವಾಗಿ ಭಾರತದ ನಂಬರ್ ಒನ್ ಟೆಲಿಕಾಂ ಕಂಪೆನಿ ಎಂಬ ಪಟ್ಟವನ್ನು ಇದೇ ಮೊದಲ ಬಾರಿಗೆ 'ಏರ್‌ಟೆಲ್' ಕಳೆದುಕೊಂಡಿದೆ.

ಒಟ್ಟಾರೆ 34 ಕೋಟಿಯಷ್ಟು ಚಂದಾದಾರರನ್ನು ಹೊಂದಿದ ಏರ್‌ಟೆಲ್ ಇದೀಗ ಎರಡನೇ ಸ್ಥಾನಕ್ಕೆ ಕುಸಿದಿದ್ದು, ವೊಡಾಫೋನ್ ಮತ್ತು ಐಡಿಯಾ ವಿಲೀನ ಕಂಪೆನಿಯು ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಮೊದಲಸ್ಥಾನಕ್ಕೇರಿದೆ. ಇನ್ನು ಈ ವಿಲೀನದಿಂದ ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಕಂಪೆನಿಗೂ ಸವಾಲು ಎದುರಾಗಲಿದೆ ಎಂದು ಹೇಳಲಾಗಿದೆ.

ಭಾರತದ ನಂ.1 ಟೆಲಿಕಾಂ ಪಟ್ಟದಿಂದ ಇದೇ ಮೊದಲ ಬಾರಿ ಇಳಿಯಿತು 'ಏರ್‌ಟೆಲ್'!!

ಈ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ಶೇ. 74 ರಷ್ಟು ನಿವ್ವಳ ಲಾಭ ಕಳೆದುಕೊಂಡು ಕೇವಲ 97 ಕೋಟಿ ರೂ.ಆದಾಯವನ್ನು ಘೋಷಿಸಿಕೊಂಡಿದ್ದ ಏರ್‌ಟೆಲ್ ಈಗ ನಂಬರ್ ಒನ್ ಟೆಲಿಕಾಂ ಕಂಪೆನಿ ಪಟ್ಟವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಹಾಗಾದರೆ, ಈ ವಿಲೀನದಿಂದ ಟೆಲಿಕಾಂನಲ್ಲಿ ಆದಂತಹ ಮಹತ್ತರ ಬದಲಾವಣೆಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಭಾರತದ ಅತಿ ದೊಡ್ಡ ಟೆಲಿಕಾಂ!

ಭಾರತದ ಅತಿ ದೊಡ್ಡ ಟೆಲಿಕಾಂ!

ಈ ವರೆಗೂ ಭಾರತದ ಟೆಲಿಕಾಂನಲ್ಲಿ ಎರಡು ಮತ್ತು ಮೂರನೆ ಸ್ಥಾನದಲ್ಲಿದ್ದ ವೊಡಾಫೋನ್ ಮತ್ತು ಐಡಿಯಾ ಕಂಪೆನಿಗಳ ವಿಲೀನದಿಂದ 'ವೊಡಾಫೋನ್ಐಡಿಯಾ' ಭಾರತದ ಅತಿದೊಡ್ಡ ನೆಟ್‌ವರ್ಕ್ ಆಗಿದೆ. ವೊಡಾಫೋನ್-ಐಡಿಯಾ ಕಂಪೆನಿಗಳ ಒಟ್ಟು 43 ಕೋಟಿ ಗ್ರಾಹಕರ ಮೂಲಕ ಶೇ.35ರಷ್ಟು ಮಾರು ಕಟ್ಟೆ ಮೇಲೆ ಹಿಡಿತ ಸಾಧಿಸಿ, ಏರ್‌ಟೆಲ್‌ ಅನ್ನು ಹಿಂದಿಕ್ಕಿದೆ.

ಷೇರು ಹಂಚಿಕೆ ಹೇಗಿರುತ್ತದೆ?

ಷೇರು ಹಂಚಿಕೆ ಹೇಗಿರುತ್ತದೆ?

ಈ ವಿಲೀನದಿಂದಾಗಿ ವೊಡಾಫೋನ್‌ಗೆ 82,800 ಕೋಟಿ ಮತ್ತು ಐಡಿಯಾಗೆ 72,200 ಕೋಟಿ ಮೌಲ್ಯ ಸಿಗಲಿದ್ದು,ವಿಲೀನವಾದ ಕಂಪನಿಯಲ್ಲಿ ವೊಡಾಫೋನ್‌ ಶೇ.45.1, ಆದಿತ್ಯ ಬಿರ್ಲಾ ಶೇ.26 ಮತ್ತು ಐಡಿಯಾ ಷೇರುದಾರರು ಶೇ.28.1 ಷೇರುಗಳನ್ನು ಹೊಂದಲಿದ್ದಾರೆ ಎಂದು ವೊಡಾಫೋನ್ ಕಂಪೆನಿಯ ಮೂಲಗಳಿಂದ ಮಾಧ್ಯಮಗಳಿಗೆ ತಿಳಿದುಬಂದಿದೆ.

ನೂತನ ಸಿಇಒ ಯಾರು?

ನೂತನ ಸಿಇಒ ಯಾರು?

23,000 ಕೋಟಿ ಡಾಲರ್‌ ಮೌಲ್ಯದ, ಭಾರತದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿ 'ವೊಡಾಫೋನ್ ಐಡಿಯಾ' ಶೇ.35ರಷ್ಟು ಷೇರು ಮಾರುಕಟ್ಟೆಯನ್ನು ಹೊಂದಲಿದೆ. ಈ ನೂತನ ಟೆಲಿಕಾಂ ಕಂಪೆನಿಗೆ ನೂತನ ಸಿಇಒ ಆಗಿ ಬಾಲೇಶ್ ಶರ್ಮಾ ನೇಮಕವಾಗಿದ್ದಾರೆ. ಕುಮಾರ ಮಂಗಲಂ ಬಿರ್ಲಾ ಅವರು ಕಾರ್ಯಕಾರಿಯೇತರ ಅಧ್ಯಕ್ಷರಾಗಿದ್ದಾರೆ.

ಟೆಲಿಕಾಂನಲ್ಲಿ ಭಾರೀ ಪೈಪೋಟಿ!

ಟೆಲಿಕಾಂನಲ್ಲಿ ಭಾರೀ ಪೈಪೋಟಿ!

ವೊಡಾಫೋನ್ ಐಡಿಯಾ' ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಲಿರುವುದರಿಂದ, ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್ ಐಡಿಯಾ ನಡುವೆ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ಉಂಟಾಗಲಿದೆ. ದೇಶದಲ್ಲಿ ಏರ್‌ಟೆಲ್‌ಗಿಂತಲೂ ಹೆಚ್ಚು ನೆಟ್‌ವರ್ಕ್ ಪಡೆಯುವ ಈ ಕಂಪೆನಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಬಹುದು ಎಂಬ ನಿರೀಕ್ಷೆನ್ನು ಹೊಂದಲಾಗಿದೆ.

ಕಡಿಮೆ ಬೆಲೆಗೆ ಆಫರ್ಸ್!

ಕಡಿಮೆ ಬೆಲೆಗೆ ಆಫರ್ಸ್!

ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿ 'ವೊಡಾಫೋನ್ ಐಡಿಯಾ' ಹುಟ್ಟುವುದರಿಂದ ಟೆಲಿಕಾಂ ಸೇವೆಯ ದರವೂ ಕಡಿಮೆಯಾಗಲಿದೆ ಎನ್ನಲಾಗಿದೆ. ಜಿಯೋ ನೀಡುತ್ತಿರುವ ಆಫರ್‌ಗಳಿಗಿಂತ ಕಡಿಮೆ ಬೆಲೆಗೆ ಸೇವೆಯನ್ನು ನೀಡುವ ಗುರಿಯನ್ನು 'ವೊಡಾಫೋನ್ ಐಡಿಯಾ' ಕಂಪೆನಿ ಸಿಇಒ ಬಾಲೇಶ್ ಶರ್ಮಾ ಹೊಂದಿದ್ದಾರಂತೆ

ಭಾರತದ ಟೆಲಿಕಾಂ ಇಷ್ಟು ಬದಲಾಗಲು ಜಿಯೋ ಕಾರಣವಲ್ಲ..'ಟ್ರಾಯ್'!!

ಭಾರತದ ಟೆಲಿಕಾಂ ಇಷ್ಟು ಬದಲಾಗಲು ಜಿಯೋ ಕಾರಣವಲ್ಲ..'ಟ್ರಾಯ್'!!

ಇಂದಿನ ಟೆಲಿಕಾಂ ಪ್ರಪಂಚ ಇಷ್ಟು ಬದಲಾವಣೆಯಾಗಲು ಕಾರಣ ಜಿಯೋ ಎಂದು ನಾವೆಂದುಕೊಂಡಿದ್ದೇವೆ. ಆದರೆ, ಮನುಷ್ಯನ ಮೂಲಭೂತ ಅವಶ್ಯಕತೆಯಾಗಿ ಬದಲಾಗಿದ್ದ ದೂರ ಸಂಪರ್ಕ ಸೇವೆಯನ್ನು ಪ್ರತಿಯೋರ್ವನಿಗೂ ನ್ಯಾಯಸಮ್ಮತ ಬೆಲೆಯಲ್ಲಿ ತಲುಪಿಸಿದ ಕೀರ್ತಿ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರಕ್ಕೆ 'ಟ್ರಾಯ್‌' ಸಲ್ಲಬೇಕು ಎಂದರೆ ಆಶ್ಚರ್ಯವೇನಿಲ್ಲ.!
ಹೌದು, ನೀರು, ವಿದ್ಯುತ್‌ನಂತೆ ದೂರವಾಣಿ ಕೂಡ ಇಂದು ಮನುಷ್ಯನ ಮೂಲಭೂತ ಅವಶ್ಯಕತೆಯಾಗಿ ಮಾರ್ಪಾಟಾಗಿದೆ. ಸಂಪರ್ಕ ಕ್ರಾಂತಿಯ ನಡುವೆ, ಇಡೀ ವ್ಯವಸ್ಥೆಯ ನಿಯಂತ್ರಣ ಹೇರುವ ವ್ಯವಸ್ಥೆಯಾಗಿ 'ಟ್ರಾಯ್‌' ಸಮಯೊಚಿತವಾಗಿ ತನ್ನ ಜವಾಬ್ದಾರಿ ಪೂರ್ಣಗೊಳಿಸಿದೆ. 20 ವರ್ಷಗಳ ದೀರ್ಘ ಅವಧಿಯಲ್ಲಿ ಭಾರತೀಯರ ಹಿತ ಕಾಪಾಡುವಲ್ಲಿ ಟ್ರಾಯ್ ಸಫಲವಾಗಿದೆ.

ದೂರವಾಣಿ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆದಿಟ್ಟ ಸಂದರ್ಭದಲ್ಲಿ ಹುಟ್ಟಿದ 'ಟ್ರಾಯ್', ಟೆಲಿಕಾಂ ನೀತಿ ನಿರೂಪಕ ಸಂಸ್ಥೆಯಾಗಿ ಹುಟ್ಟಿಕೊಂಡು ಇಂದು ಭಾರತೀಯರ ಹಿತವನ್ನು ಕಾಪಾಡಿಕೊಂಡು ಬಂದಿದೆ. ವಿಶ್ವದ ಟೆಲಿಕಾಂ ಪ್ರಪಂಚದಲ್ಲಿ ಭಾರತದ ಟೆಲಿಕಾಂ ಕ್ಷೇತ್ರ ಅಬ್ಬಾ ಎನ್ನುವಂತೆ ಬದಲಾವಣೆ ಮಾಡಿದ ಕೀರ್ತಿ ಟ್ರಾಯ್‌ಗೆ ದಕ್ಕಿದೆ ಎಂದರೆ ಅತಿಶಯೊಕ್ತಿಯಲ್ಲ.

1997ರಲ್ಲಿ ಟ್ರಾಯ್‌ ಉಗಮ!

1997ರಲ್ಲಿ ಟ್ರಾಯ್‌ ಉಗಮ!

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಆಕ್ಟ್ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು 1997ರಲ್ಲಿ. ಅದೇ ವರ್ಷ ಟೆಲಿಕಾಂ ನೀತಿ ನಿರೂಪಕ ಸಂಸ್ಥೆಯಾಗಿ ಟ್ರಾಯ್‌ ಅನ್ನು ಸ್ಥಾಪಿಸಲಾಯಿತು. ಇಲ್ಲಿಗೆ 20 ವರ್ಷಗಳ ದೀರ್ಘ‌ ಅವಧಿಯನ್ನು ಪೂರೈಸಿರುವ ಟ್ರಾಯ್‌ ಇಲ್ಲಿಯವರೆಗೂ ಟೆಲಿಕಾಂನಲ್ಲಿ ತಂದಿರುವ ಸುಧಾರಣೆಗಳು ಹಲವು.

ಟೆಲಿಕಾಂ ಲಾಬಿ ದೊಡ್ಡ ಮಟ್ಟದ್ದು!

ಟೆಲಿಕಾಂ ಲಾಬಿ ದೊಡ್ಡ ಮಟ್ಟದ್ದು!

ಟೆಲಿಕಾಂ 2G ಹಗರಣ ಭಾರತದಲ್ಲಿ ನಡೆದ ಒಂದು ದೊಡ್ಡ ಹಗರಣ ಎಂಬುದು ನಿಮಗೆಲ್ಲಾ ತಿಳಿದಿದೆ. ಇಂತಹ ಒಂದೊಂದು ನಿರ್ಧಾರ ಕೂಡ ಸಾವಿರಾರು ಕೋಟಿಗಳ ವ್ಯವಹಾರವಾಗಿರುತ್ತದೆ. ಹಾಗಾಗಿ, ಸರ್ಕಾರದ ಮೇಲೆ ಖಾಸಗಿ ಲಾಬಿ ಚಾಲೂ ಇದ್ದುದ್ದರಿಂದ ಸರ್ಕಾರ ಜಾಣ್ಮೆಯಿಂದ ಜವಾಬ್ದಾರಿಗಳನ್ನು ಟ್ರಾಯ್‌ಗೆ ವಹಿಸಿ ಟೆಲಿಕಾಂ ಪ್ರಪಂಚಕ್ಕೆ ಕಡಿವಾಣ ಹಾಕಿತು.

ಎಂದೂ ಗ್ರಾಹಕನ ಪರ

ಎಂದೂ ಗ್ರಾಹಕನ ಪರ

ದೇಶದಲ್ಲಿ ಹೆಚ್ಚು ಜನ ಮೊಬೈಲ್‌ ಗ್ರಾಹಕರು ಅನಕ್ಷರಸ್ಥರಾಗಿರುವುರಿಂದ ಟ್ರಾಯ್‌ ಅವರ ಪರ ನಿಲ್ಲದಿದ್ದರೆ ಇಲ್ಲಿಗೆ ಮೊಬೈಲ್ ಬಳಕೆದಾರರು ಕಷ್ಟಕ್ಕೆ ಸಿಲುಕುತ್ತಿದ್ದರು. ಖಾಸಗಿ ಮೊಬೈಲ್‌ ಕಂಪೆನಿಗಳು ಕೇವಲ ಲಾಭಕ್ಕಾಗಿಯೇ ಕೆಲಸ ಮಾಡುತ್ತಿದ್ದರಿಂದಾಗಿ, ಟ್ರಾಯ್ ಕಾಲಕಾಲಕ್ಕೆ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಇದು ಈಗಲೂ ಗ್ರಾಹಕನ ಹಿತ ಕಾಪಾಡುತ್ತಿದೆ.

ಟೆಲಿ ಮಾರ್ಕೆಟಿಂಗ್ ಕರೆ!

ಟೆಲಿ ಮಾರ್ಕೆಟಿಂಗ್ ಕರೆ!

ಮೊಬೈಲ್ ಬಳಕೆದಾರರಿಗೆ ಕಿರಿಕಿರಿಯೆನ್ನಿಸುವ ಟೆಲಿ ಮಾರ್ಕೆಟಿಂಗ್ ಕರೆಗಳಿಂದ ರಕ್ಷಿಸಲು ಟ್ರಾಯ್‌ "ನ್ಯಾಷನಲ್‌ ಡು ನಾಟ್ ಕಾಲ್‌' ಜಾರಿಗೆ ತಂದಿರುವುದು ಈಗ ಎಲ್ಲರಿಗೂ ತಿಳಿದಿದೆ. ಯಾವುದೇ ಟೆಲಿಕಾಂ ಕಂಪೆನಿಯಿಂದಲು ಕೂಡ ಅಪ್ಪಿತಪ್ಪಿಯೂ ಮಾರ್ಕೆಟಿಂಗ್ ಕರೆ, ಸಂದೇಶ ಬರುವಂತಿಲ್ಲ. ಇದು ಗ್ರಾಹಕ ಕಿರಿಕಿರಿಯನ್ನು ಪಟ್ಟಿಸಿದೆ.

ಮೊಬೈಲ್‌ ನಂಬರ್‌ ಪೋರ್ಟಬಿಲಿಟಿ!

ಮೊಬೈಲ್‌ ನಂಬರ್‌ ಪೋರ್ಟಬಿಲಿಟಿ!

ಮೊಬೈಲ್ ಕಂಪೆನಿಗಳಿಗೆ ಈಗಲೂ ಮೂಗುದಾರ ಹಾಕಿರುವಂತಹ ಒಂದು ಜನಪ್ರಿಯ ಬದಲಾವಣೆ ಎಂದರೆ ಟ್ರಾಯ್‌ ರೂಪಿಸಿದ ಮೊಬೈಲ್‌ ನಂಬರ್‌ ಪೋರ್ಟಬಿಲಿಟಿ ಅರ್ಥಾತ್‌ 'ಎಂಎನ್‌ಪಿ' ಇಂದು ಮೊಬೈಲ್‌ ನಂಬರ್‌ ಪೋರ್ಟಬಿಲಿಟಿ ಭಯ ಇಲ್ಲದಿದ್ದರೆ ಮೊಬೈಲ್ ಕಂಪೆನಿಗಳ ಸೇವೆ ಎಷ್ಟು ಕೆಟ್ಟದಾಗಿರುತಿತ್ತು ಎಂಬುದನ್ನು ಊಹಿಸಲು ಸಾಧ್ಯವಿಲ್ಲ.!

ಎಲ್ಲವನ್ನು ನೆನಪಿಸುವುದಾದರೆ!

ಎಲ್ಲವನ್ನು ನೆನಪಿಸುವುದಾದರೆ!

ಟೆಲಿಕಾಂ ಕಂಪೆನಿಗಳು ಗುಪ್ತ ಶುಲ್ಕ ಹೇರುವಂತಿಲ್ಲ, 20 ರೂ.ಗಿಂತ ಹೆಚ್ಚು ಟಾಕ್ ಟೈಮ್‌ ಹೊಂದಿರುವ ಸಿಮ್ ಅನ್ನು ನಿಷ್ಕ್ರಿಯಗೊಳಿಸುವಂತಿಲ್ಲ. ಆರು ತಿಂಗಳವರೆಗೆ ಟ್ಯಾರಿಫ್ ದರ ಎರಿಸುವಂತಿಲ್ಲ. ಮೌಲ್ಯವರ್ಧಿತ ಸೇವೆಗೆ ಗ್ರಾಹಕ ಒಪ್ಪಿಗೆ ಅಗತ್ಯ, ಪ್ಲಾನ್ ಬದಲಾವಣೆಗೆ ಶುಲ್ಕ ವಿಧಿಸುವಂತಿಲ್ಲ ಎಂಬ ನಿಯಮಗಳು ಇಂದು ಗ್ರಾಹಕರ ಹಿತ ಕಾಪಾಡಿವೆ.

ಗ್ರಾಹಕರ ದೂರಿಗೆ ನಿಯಮಗಳು!

ಗ್ರಾಹಕರ ದೂರಿಗೆ ನಿಯಮಗಳು!

ಟೆಲಿಕಾಂ ಕಂಪೆನಿಗಳ ಸೆವೆಗಳ ಬಗ್ಗೆ ಗ್ರಾಹಕರ ದೂರು ನಿರ್ವಹಣೆಗೆ ಸ್ಪಷ್ಟ ನಿಯಮಗಳನ್ನು ಟ್ರಾಯ್‌ ಈಗ ರೂಪಿಸಿದೆ. ಉಚಿತ ಕಾಲ್‌ಸೆಂಟರ್‌, ನೋಡಲ್ ಆಫೀಸರ್, ಅಪಲೇಟ್ ಅಥಾರಿಟಿಗಳ ಈ ನಿರೂಪಣೆ ಜನಪರವಾಗಿದೆ. ಈ ಹಂತದಲ್ಲಿಯೂ ಟ್ರಾಯ್‌, ಹಲವು ಗ್ರಾಹಕ ಪರ ಹೆಜ್ಜೆಗಳನ್ನು ಇಟ್ಟಿದೆ.

ಜಿಯೋಗೆ ಟ್ರಾಯ್ ಸಪೋರ್ಟ್?

ಜಿಯೋಗೆ ಟ್ರಾಯ್ ಸಪೋರ್ಟ್?

ಜಿಯೋ ಈಗ ಇಷ್ಟು ಬೆಳೆದಿರಲು ಟ್ರಾಯ್ ನೀಡಿರುವ ಸಪೋರ್ಟ್ ಕಾರಣ ಎಂದು ಎಲ್ಲರೂ ಅಭಿಪ್ರಾಯವಾಗಿದೆ. ಆದರೆ, ಜಿಯೋ ಭಾರತದ ಟೆಲಿಕಾಂನಲ್ಲಿ ಕಾಲಿಡಲು ಟ್ರಾಯ್ ಸರಿಯಾದ ನಿಯಮಗಳನ್ನಷ್ಟೆ ಇಟ್ಟಿರುವ ಬಗ್ಗೆ ದಾಖಲೆಗಳಿವೆ. ಒಂದು ವೇಳೆ ಟ್ರಾಯ್ ಜಿಯೋ ಪರವಾಗಿದ್ದರೂ ಸಹ ಅದರ ಲಾಭ ಬಡ ಮೊಬೈಲ್ ಬಳಕೆದಾರರಿಗೆ ಎಂಬುದು ಸುಳ್ಳಲ್ಲ.

Best Mobiles in India

English summary
India's largest telecom firm is here: DoT gives final nod to Vodafone-Idea merger. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X