ಕರ್ನಾಟಕ ಸೇರಿದ್ದಂತೆ 6 ರಾಜ್ಯಗಳಿಗೆ ಐಡಿಯಾ ಸೇವೆ ರದ್ದು

Posted By:
ಕರ್ನಾಟಕ ಸೇರಿದ್ದಂತೆ 6 ರಾಜ್ಯಗಳಿಗೆ ಐಡಿಯಾ ಸೇವೆ ರದ್ದು

ದೂರ ಸಂಪರ್ಕ ಸಚಿವಾಲಯ ಐಡಿಯಾ ಕಂಪನಿಯ ಲೈಸನ್ಸ್ ಅನ್ನು ಪಂಜಾಬ್, ದೆಹಲಿ ಮತ್ತು ಕರ್ನಾಟಕ ಸೇರಿದಂತೆ 6 ರಾಜ್ಯಗಳಿಂದ ತೆಗೆಯಲಿದೆ ಎಂದು ಹೇಳಿದೆ. ಐಡಿಯಾ ದೂರ ಸಂಪರ್ಕದ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದೆ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಅಲ್ಲದೆ ಐಡಿಯಾ ಕಂಪನಿ ಮೇಲೆ ರು. 300 ಕೋಟಿ ದಂಡ ವಿಧಿಸಿದೆ.

ಇದೀಗ ದೊರೆತ ಸುದ್ದಿಯ ಪ್ರಕಾರ ದೂರ ಸಂಪರ್ಕ ಸಚಿವಾಲಯ ದೆಹಲಿ, ಆಂದ್ರಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಪಂಜಾಬ್ ಮತ್ತು ಕರ್ನಾಟಕದಲ್ಲಿ ಇದರ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಹೇಳಿದೆ.

ಇರುವ 6 ಲೈಸನ್ಸ್ (ಪರವಾನಿಗೆ)ಯಲ್ಲಿ 4 ಕರ್ನಾಟಕ ಮತ್ತು ಪಂಜಾಬ್ ನಲ್ಲಿದ್ದು ಉಳಿದ ರಾಜ್ಯಗಳಲ್ಲಿ ಐಡಿಯಾ ಸೇವೆಯನ್ನು ಸ್ಪೈಸ್ ಸಂವಹನದ ಮುಖಾಂತರ ಪಡೆಯಲಾಗುತ್ತಿದೆ. ಸ್ಪೈಸ್ 2008ರಲ್ಲಿ ಬಂದಿದ್ದು, ಐಡಿಯಾಕ್ಕೆ ಬೇರೆ ಕಂಪನಿ ಜೊತೆ ಐಕ್ಯಗೊಳ್ಳಲು ದೂರ ಸಂವಹನಾ ಸಂಸ್ಥೆಯಿಂದ(DOT) ಪರವಾನಿಗೆ ದೊರೆತಿಲ್ಲ. ಆದರೂ ಇದು ಸ್ಪೈಸ್ ಜೊತೆ ಸೇರಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದು ಇದರ ಮೇಲೆ ಇರುವ ಆರೋಪವಾಗಿದೆ.

Read In English

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot