ಹಳ್ಳ ಹಿಡಿಯುತ್ತಿರುವ ಟಾಪ್ 5 ಮೊಬೈಲ್

Posted By: Varun
ಹಳ್ಳ ಹಿಡಿಯುತ್ತಿರುವ ಟಾಪ್ 5 ಮೊಬೈಲ್

ಬದಲಾವಣೆ ಪ್ರಕೃತಿಯ ನಿಯಮ ಅನ್ನುವ ಮಾತು ಹಳೆಯದಾದರೂ ಕೂಡ ಎಲ್ಲ ಕಾಲಕ್ಕೂ ಸಲ್ಲುತ್ತದೆ. ಅದು ಕೇವಲ ಪ್ರಕೃತಿಯಷ್ಟೇ ಅಲ್ಲದೆ ಮನುಷ್ಯ ನಿರ್ಮಿಸಿರುವ ಪ್ರತಿಯೊಂದಕ್ಕೂ ಅನ್ವಯಿಸುತ್ತದೆ.

ಅದು ವ್ಯವಸ್ಥೆಯೇ ಇರಬಹುದು, ಬದುಕುವ ಗುಣಮಟ್ಟ ಇರಬಹುದು, ನಮ್ಮನ್ನು ಆಳುವ ಸರ್ಕಾರಗಳು ಅಥವಾ ಕಂಪನಿಗಳೇ ಇರಬಹುದು.ಹೊಸ ರೀತಿಯ ಬದಲಾವಣೆಗೆ ಸ್ಪಂದಿಸದಿದ್ದರೆ ಕಾಲಾನುಕ್ರಮದಲ್ಲಿ ನಾಶವಾಗುವುದು ಖಂಡಿತ.

ಈ ರೀತಿ ಬದಲಾವಣೆಯಾಗದೆ ಉಳಿದ ಎಷ್ಟೋ ನಾಗರೀಕತೆಗಳು, ಸಾಮ್ರಾಜ್ಯಗಳು ಹೇಳ ಹೆಸರಿಲ್ಲದಂತೆ ನಾಶವಾಗಿವೆ. ಹಾಗೆಯೇ ಕಾರ್ಪೋರೆಟ್ ಕಂಪನಿಗಳೂ ಕೂಡ ಹೊಸ ಬದಲಾವಣೆ ತಂದುಕೊಳ್ಳದೆ 'ಕಾಲಾಯ ತಸ್ಮೈ ನಮಃ' ಅಂತ ಬದಲಾಗದೆ ಬಾಗಿಲು ಹಾಕಿಕೊಂಡಿವೆ.

ಒಂದು ಕಾಲದಲ್ಲಿ ಮೆರೆಯುತ್ತಿದ್ದ, ಆದರೆ ಈಗ ಮುಚ್ಚಿರುವ, ಹೆಂಗೋ ಉಸಿರಾಡಿಕೊಂಡು ಬದುಕುತ್ತಿರುವ ಇಲ್ಲವೆ ಹಳ್ಳ ಹಿಡಿಯುವ ಪರಿಸ್ಥಿತಿ ಬಂದೊದಗಿದ ಹಲವಾರು ಮೊಬೈಲ್ ಹಾಗು ಸಂಬಂಧಿತ ತಂತ್ರಾಜ್ಞಾನ ಕಂಪನಿಗಳ ಪಟ್ಟಿಯನ್ನು ಮಾಡಲಾಗಿದ್ದು, ಇಲ್ಲಿವೆ, ಈ ರೀತಿ ಇರುವ ಟಾಪ್ 5 ಕಂಪನಿಗಳು, ಅವುಗಳು ಆ ರೀತಿ ಆಗಲು ಕಾರಣವೇನು ಎಂಬ ಪಟ್ಟಿ:

 

1) ನೋಕಿಯಾ

ಈಗಿನ ಮಾರುಕಟ್ಟೆ ಮೌಲ್ಯ- 8.8 ಬಿಲಿಯನ್ ಡಾಲರ್

ಸಾರ್ವಕಾಲಿಕ ಹೆಚ್ಚಿನ ಮೌಲ್ಯ - 289 ಬಿಲಿಯನ್ ಡಾಲರ್ ( 2000 ಇಸವಿಯಲ್ಲಿ)

ಮೌಲ್ಯ ಕುಸಿತಕ್ಕೆ ಕಾರಣ: ಆಂಡ್ರಾಯ್ಡ್ ತಂತ್ರಾಂಶದ ಆಗಮನ, ಐಫೋನ್

 

2) ರಿಸರ್ಚ್ ಇನ್ ಮೋಷನ್ (ಬ್ಲಾಕ್ ಬೆರಿ ಉತ್ಪಾದಕ)

ಈಗಿನ ಮಾರುಕಟ್ಟೆ ಮೌಲ್ಯ- 3.6 ಬಿಲಿಯನ್ ಡಾಲರ್

ಸಾರ್ವಕಾಲಿಕ ಹೆಚ್ಚಿನ ಮೌಲ್ಯ - 83.4 ಬಿಲಿಯನ್ ಡಾಲರ್ ( 2007 ಇಸವಿಯಲ್ಲಿ)

ಮೌಲ್ಯ ಕುಸಿತಕ್ಕೆ ಕಾರಣ: ಆಂಡ್ರಾಯ್ಡ್ ತಂತ್ರಾಂಶದ ಆಗಮನ, ಐಫೋನ್

 

3) ಈಸ್ಟ್ ಮ್ಯಾನ್ ಕೊಡಕ್

ಈಗಿನ ಮಾರುಕಟ್ಟೆ ಮೌಲ್ಯ- 162 ಮಿಲಿಯನ್ ಡಾಲರ್

ಸಾರ್ವಕಾಲಿಕ ಹೆಚ್ಚಿನ ಮೌಲ್ಯ - 31 ಬಿಲಿಯನ್ ಡಾಲರ್ ( 1997 ಇಸವಿಯಲ್ಲಿ)

ಮೌಲ್ಯ ಕುಸಿತಕ್ಕೆ ಕಾರಣ: ಡಿಜಿಟಲ್ ಕ್ಯಾಮರಾದ ಆಗಮನ

 

4) ಯಾಹೂ

ಈಗಿನ ಮಾರುಕಟ್ಟೆ ಮೌಲ್ಯ- 19.5 ಬಿಲಿಯನ್ ಡಾಲರ್

ಸಾರ್ವಕಾಲಿಕ ಹೆಚ್ಚಿನ ಮೌಲ್ಯ - 125 ಬಿಲಿಯನ್ ಡಾಲರ್ ( 2000 ಇಸವಿಯಲ್ಲಿ)

ಮೌಲ್ಯ ಕುಸಿತಕ್ಕೆ ಕಾರಣ: ಗೂಗಲ್ ಸರ್ಚ್

 

5) ಸೋನಿ

ಈಗಿನ ಮಾರುಕಟ್ಟೆ ಮೌಲ್ಯ- 11.8 ಬಿಲಿಯನ್ ಡಾಲರ್

ಸಾರ್ವಕಾಲಿಕ ಹೆಚ್ಚಿನ ಮೌಲ್ಯ - 125.6 ಬಿಲಿಯನ್ ಡಾಲರ್ ( 2000 ಇಸವಿಯಲ್ಲಿ)

ಮೌಲ್ಯ ಕುಸಿತಕ್ಕೆ ಕಾರಣ: ಐಪಾಡ್,ಐಫೋನ್

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot