ಕುಸಿದ ಕಟ್ಟಡದೊಳಗೆ ನುಸುಳಲು ಬಂದಿದೆ ಸ್ನೇಕ್‌ ರೋಬೋಟ್‌

Written By:

ಬಹುತೇಕ ಕಟ್ಟಡ ಕುಸಿತ ಪ್ರಕರಣಗಳಲ್ಲಿ, ಕುಸಿದ ಕಟ್ಟಡದೊಳಗೆ ಎಷ್ಟು ಜನ ಸಿಕ್ಕಿಹಾಕಿಕೊಂಡಿದ್ದಾರೆ ? ಎಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂಬುದು ಸುಲಭವಾಗಿ ಪತ್ತೆಯಾಗುವುದಿಲ್ಲ. ಈ ರೀತಿ ಆಗುವುದರಿಂದ ಬಹಳಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ಈ ರೀತಿ ಸಮಸ್ಯೆ ಎದುರುದಾಗ ರಕ್ಷಣಾ ಪಡೆಗಳಿಗೆ ನೆರವಾಗಬಲ್ಲ ' ಹಾವೊಂದನ್ನು' ಬೆಂಗಳೂರಿನ ವಿಜ್ಞಾನಿಗಳ ತಂಡ ಸೃಷ್ಟಿಸಿದೆ.

ಈ ಹಾವು ನಿಜವಾದ ಹಾವು ಹೇಗೆ ಸಂದು ಗೊಂದಿಯಲ್ಲಿ ನುಸುಳಿಕೊಂಡು ಹೋಗುತ್ತದೋ ಅದೇ ರೀತಿಯಲ್ಲಿ ಇದು ಕುಸಿದ ಕಟ್ಟಡದಲ್ಲಿ ನುಸುಳಿಕೊಂಡು ಹೋಗಿ ಜನ ಎಲ್ಲಿ ಸಿಕ್ಕಿಬಿದ್ದಿದ್ದಾರೆ ? ಅವರ ಸ್ಥಿತಿ ಹೇಗಿದೆ ? ಜೊತೆಗೆ ಅವರ ಚಿತ್ರವನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ.

 ಕುಸಿದ ಕಟ್ಟಡದೊಳಗೆ ನುಸುಳಲು ಬಂದಿದೆ ಸ್ನೇಕ್‌ ರೋಬೋಟ್‌

ಬೆಂಗಳೂರಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (Defence Research and Development Organisation) ಅಧೀನದಲ್ಲಿರುವ 'ಕೃತಕ ಗುಪ್ತಚರ ಮತ್ತು ರೋಬೋಟಿಕ್ಸ್‌' ಉಪಕರಣಗಳ ಸಂಸ್ಥೆ ಈ ರೋಬೋಟಿಕ್‌ ಹಾವನ್ನು ಅಭಿವೃದ್ಧಿಪಡಿಸಿದೆ. ನೋಡಲು ಹಾವಿನಂತೆ ಇರುವುದರಿಂದ ವಿಜ್ಞಾನಿಗಳು ಇದಕ್ಕೆ 'ಸ್ನೇಕ್‌ ರೋಬೋಟ್ಸ್‌' ಎಂದು ಇದಕ್ಕೆ ಹೆಸರಿಟ್ಟಿದ್ದಾರೆ.

ಈ ಸ್ನೇಕ್‌ ರೋಬೋಟ್‌ 1.5 ಮೀಟರ್‌ ಉದ್ದವಿದ್ದು, ಅಲ್ಯುಮಿನಿಯಂನಿಂದ ತಯಾರಿಸಲಾಗಿದೆ. ಈ ಹಾವಿನ ಮುಂಭಾಗದಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಇದನ್ನು ಜಾಯ್‌ಸ್ಟಿಕ್‌ನ ಮೂಲಕ ನಿರ್ವಹಿಸಬಹುದಾಗಿದೆ.

ಈಗಾಗಲೇ ಸೇನೆಯಲ್ಲಿ ಪ್ರಾಯೋಗಿಕವಾಗಿ ಈ' ಹಾವನ್ನು' ಬಳಕೆ ಮಾಡಲಾಗುತ್ತಿದ್ದು, ಅಲ್ಲಿ ಸಿಗುವ ಪ್ರತಿಕ್ರಿಯೆ ಆಧರಿಸಿ, ಈ ಸ್ನೇಕ್‌ ರೋಬೋಟ್ಸ್‌ನ್ನು ಉಳಿದ ರಕ್ಷಣಾ ಸಂಘಟನೆಗಳಿಗೂ ನೀಡಲು ನಿರ್ಧರಿಸಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot