ಇನ್ಮುಂದೆ 'ಡ್ರೋಣ್' ಹಾರಿಸುವ ಮುಂಚೆ ಈ ವಿಷಯಗಳನ್ನು ತಿಳಿದಿರಿ!..ಇಲ್ಲದಿದ್ರೆ ಜೈಲು!!
'ಡ್ರೋನ್' ಬಳಕೆಯ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರವು ರೂಪಿಸಿದ್ದ ನಿಯಮಾವಳಿ ಗಳು ಇದೇ ಡಿಸೆಂಬರ್‌ನಿಂದ ಜಾರಿಗೆ ಬಂದಿವೆ. ಹೊಸ ಡ್ರೋಣ್ ನಿಮಯದ ಪ್ರಕಾರ ದೇಶದಲ್ಲಿ ಡ್ರೋನ್ ಹಾರಾಟ ಇನ್ಮುಂದೆ ವಾಣಿಜ್ಯ ಚಟುವಟಿಕೆಯಾಗಿದೆ. ಆದರೆ, ಸಾರ್ವಜನಿಕರು ಡ್ರೋಣ್ ವಿಷಯದಲ್ಲಿ ಎಚ್ಚರ ತಪ್ಪಿದರೆ ಜೈಲು ಸೇರುವ ಸಂಭವ ಕೂಡ ಎದುರಾಗಿದೆ.
ಹೌದು, ಮಾನವ ರಹಿತ ವೈಮಾನಿಕ ವ್ಯವಸ್ಥೆ ಡ್ರೋನ್ ಹಾರಿಸುವ ಮುನ್ನ ಅವನ್ನು ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಈಗಾಗಲೇ ಇರುವ ಡ್ರೋನ್‌ಗಳ ನೋಂದಣಿಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ. ನೋಂದಣಿಯಾದ ಡ್ರೋನ್‌ಗಳು ಜನವರಿ 1ರ ನಂತರ ಕಾರ್ಯಾಚರಣೆ ಆರಂಭಿಸಬಹುದು ಎಂದು ಕೇಂದ್ರ ವಿಮಾನಯಾನ ಸಚಿವಾಲಯ ತಿಳಿಸಿದೆ.

ಶೀಘ್ರವೇ ಡ್ರೋನ್ ನಿಯಮಾವಳಿಗೆ ಪೂರಕವಾಗಿ ಮತ್ತೊಂದು ನಿಯಮಾವಳಿಯನ್ನು ರೂಪಿಸಲು ಡ್ರೋನ್ 2.0' ಎಂಬ ಹೆಸರಿನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಹಾಗಿದ್ದರೂ ಸಹ, ದೇಶೀಯವಾಗಿ ಡ್ರೋನ್ ಹಾರಾಟಕ್ಕೆ ಡಿಸೆಂಬರ್ ತಿಂಗಳಿನಿಂದ ಜಾರಿಯಲ್ಲಿರುವ ನಿಯಮಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಡ್ರೋಣ್‌ಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ!
ದೇಶದಲ್ಲಿ ವಿದೇಶಿ ಕಂಪೆನಿಗಳು ಇಲ್ಲವೇ ಪ್ರಜೆಗಳು ನಾಗರಿಕ ಡ್ರೋನ್ ಬಳಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ನಾಗರಿಕ ವಿಮಾನಯಾನ ನಿರ್ದೇಶನಾಲಯ ನೀಡಿದ್ದು ಡ್ರೋಣ್‌ಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುತ್ತಿದ್ದು, ಈ ಯುಐಎನ್ ಅನ್ನು ಕೇವಲ ಭಾರತೀಯ ಪ್ರಜೆಗೆ ನೀಡಲಾಗುವುದು ಎಂದು ತಿಳಿಸಿದೆ.

ಐದು ರೀತಿಯಲ್ಲಿ ಡ್ರೋಣ್ ವಿಂಗಡನೆ.
ಡ್ರೋಣ್ ಹಾರಾಟದ ಬಗ್ಗೆ ಸ್ಪಷ್ಟತೆ ಹೊಂದಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ, ಇನ್ಮುಂದೆ ಡ್ರೋಣ್‌ಗಳಲ್ಲಿ ಹಲವು ವಿಧಗಳನ್ನು ಕಾಣಬಹುದು 1.) 250 ಗ್ರಾಂ ತೂಕ- ನ್ಯಾನೊ , 2.) 250 ಗ್ರಾಂನಿಂದ 2 ಕೆ.ಜಿ-ಮೈಕ್ರೊ, 3.) 2 ಕೆ.ಜಿಗಿಂತ ಹೆಚ್ಚು-ಮಿನಿ., 4.) 150 ಕೆ.ಜಿ.-ಸಣ್ಣ 5.) 150 ಕೆ.ಜಿಗಿಂತ ಹೆಚ್ಚು- ದೊಡ್ಡ ಡ್ರೋಣ್‌ಗಳೆಂದು ಐದು ವರ್ಗಗಳಲ್ಲಿ ಅವುಗಳನ್ನು ವಿಂಗಡಿಸಲಾಗಿದೆ.

ಒಳಾವರಣ ಹಾರಾಟಕ್ಕೂ ನಿರ್ಬಂಧ
ಮನರಂಜನೆಗಾಗಿ ಡ್ರೋಣ್ ಹಾರಾಟ ನಡೆಸುವವರಿಗೆ ಅವುಗಳ ಜವಾಬ್ದಾರಿ ಕೂಡ ಸೇರಿದೆ. ಹಾಗಾಗಿ, ಅವುಗಳ ಭದ್ರತೆ ಮತ್ತು ಸುರಕ್ಷತೆಯತ್ತ ಗಮನ ನೀಡಬೇಕು ಎಂದು ಸಚಿವಾಲಯ ಹೇಳಿದೆ. ಡ್ರೋಣ್ ಹಾರಾಟದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಂದ ಅನುಮತಿ ಪಡೆದಿರಬೇಕು. ಇದು ಒಳಾವರಣದಲ್ಲಿ ಹಾರಾಟ ಮಾಡಿದ್ದರೂ ಅನ್ವಯವಾಗುತ್ತದೆ ಎಂದು ತಿಳಿಸಿದೆ.

ಲೈಸನ್ಸ್ ಪಡೆಯಬೇಕು!
ಇನ್ಮುಂದೆ ಡ್ರೋಣ್ ಹಾರಿಸುವವರು ಅದಕ್ಕಾಗಿ ಲೈಸನ್ಸ್ ಪಡೆಯಬೇಕು. ರಿಜಿಸ್ಟರ್ ಆದ ಪ್ರತಿ ಡ್ರೋನ್‌ಗಳಿಗೆ ಯೂನಿಕ್ ಐಡೆಂಟಿಫಿಕೇಷನ್ ನಂಬರ್ (ಯುಐಎನ್) ಅನ್ನು ನೀಡಲಾಗುತ್ತದೆ. ಡ್ರೋನ್‌ಗೆ ಪರವಾನಗಿ ಪಡೆದುಕೊಳ್ಳಲು ಹದಿನೆಂಟು ವರ್ಷ ತುಂಬಿರ ಬೇಕು ಮತ್ತು ಆ ಬಗ್ಗೆ ತಿಳುವಳಿಕೆ ಇದ್ದು, ಕನಿಷ್ಟ ಹತ್ತನೇ ತರಗತಿ ಪಾಸಾಗಿರಬೇಕು ಎಂದು ಹೇಳಲಾಗಿದೆ.

ಈ ಡ್ರೋಣ್‌ಗೆ ಯುಐಎನ್ ಅವಶ್ಯವಿಲ್ಲ
250 ಗ್ರಾಂಗಿಂತ ಕಡಿಮೆ ತೂಕದ ಅಥವಾ ಕೇವಲ 50 ಅಡಿಗಿಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವ ಹಾಗೂ ಸರ್ಕಾರಿ ಭದ್ರತಾ ಏಜೆನ್ಸಿಗಳ ಡ್ರೋನ್‌ಗಳಿಗೆ ಯಾವುದೇ ಯುಐಎನ್ ಅವಶ್ಯವಿಲ್ಲ ಎಂದು ಪ್ರಸ್ತುತ ನಿಯಮದಲ್ಲಿ ಹೇಳಲಾಗಿದೆ. ಆದರೆ, ಖಾಸಾಗಿಯಾಗಿ ಯಾವುದೇ ಡ್ರೋಣ್ ಅನ್ನು ಹಾರಿಸುವ ಮುನ್ನ ಲೈಸೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ.

ಕಳಪೆ ಡ್ರೋನ್‌ಗಳಿಗೆ ತಡೆ!
ಹೊಸ ಕರಡು ನಿಯಮದಲ್ಲಿ ಕಳಪೆ ಗುಣಮಟ್ಟದ ಡ್ರೋನ್‌ಗಳ ಹಾರಾಟಕ್ಕೆ ತಡೆ ಹಾಕಾಲು ಸರ್ಕಾರ ಮುಂದಾಗಿದೆ. ಅನುಮತಿ ನೀಡಿದ ಪ್ರದೇಶದಿಂದ ಹೊರಗೆ ಹಾರಾಟ ನಡೆಸುವ ಇವು ಭದ್ರತೆ ಮತ್ತು ಸುರಕ್ಷತೆಗೆ ತೊಂದರೆ ನೀಡುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಚೀನಾದ ಬಹುತೇಕ ಕಳಪೆ ಗುಣಮಟ್ಟದ ಡ್ರೋಣ್‌ಗಳಿಗೆ ಬ್ರೇಕ್ ಬೀಳಲಿದೆ.

ಹೊಸ ನಿಯಾಮಾವಳಿಗಳು!
ಪ್ರಸ್ತುತ ದೃಷ್ಟಿ ವ್ಯಾಪ್ತಿಯಿಂದ ಆಚೆಗೂ ಡ್ರೋನ್ ಹಾರಾಟ ನಡೆಸಲು ಈಗ ಅನುಮತಿ ನೀಡಲಾಗಿದೆ. ಸರಕುಗಳನ್ನು ಹೊತ್ತೊಯ್ಯಲು, ಸ್ವಯಂಚಾಲಿತ ಡ್ರೋನ್‌ಗಳ ಹಾರಾಟಕ್ಕೆ ಹಾಗೂ ತುರ್ತು ಸಂದರ್ಭಗಳಲ್ಲಿ ಮಾನವನ ಅಂಗ ಸಾಗಾಟಕ್ಕೆ ಡ್ರೋಣ್ ಹಾರಾಟಕ್ಕೆ ಅವಕಾಶ ನೀಡಲಾಗಿದೆ. ಇನ್ನು ಕೆಲವು ನಿರ್ಬಂಧಗಳನ್ನು ‘ಡ್ರೋನ್ 2.0' ಸಡಿಲಗೊಳಿಸುತ್ತದೆ ಎಂದು ಹೇಳಲಾಗಿದೆ.

ಜನವರಿ 15ರಂದು ಪೂರಕ ನಿಯಮಾವಳಿಗಳು!
ಈ ನಿಯಮಾವಳಿಗೆ ಪೂರಕ ನಿಯಮಾವಳಿಗಳನ್ನು ಜನವರಿ 15ರಂದು ಘೋಷಿಸುತ್ತೇವೆ ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಮಾಹಿತಿ ನೀಡಿದ್ದಾರೆ.ಈ ಹೊಸ ನಿಯಮಾವಳಿಗೆ ‘ಡ್ರೋನ್ 2.0' ಎಂದು ಹೆಸರಿಡಲಾಗಿದ್ದದು, ಮೊದಲ ಡ್ರೋನ್ ನಿಯಮಾವಳಿಯಲ್ಲಿ ಇರುವ ಕೆಲವು ನಿರ್ಬಂಧಗಳನ್ನು ‘ಡ್ರೋನ್ 2.0' ಸಡಿಲಗೊಳಿಸಲಾಗುತ್ತದೆಯಂತೆ.


Click it and Unblock the Notifications