2018 ರಲ್ಲಿ 45% ರಷ್ಟು ಬೆಳೆಯಲಿರುವ ಡ್ರೋನ್ ಮಾರುಕಟ್ಟೆ : ಕೌಂಟರ್ಪಾಯಿಂಟ್ ವರದಿ

By Tejaswini P G
|

ಸಂಶೋಧನಾ ಸಂಸ್ಥೆಯಾದ ಕೌಂಟರ್ಪಾಯಿಂಟ್ ನ ಹೊಸ ವರದಿಯೊಂದರ ಅನುಸಾರ, ವಾಣಿಜ್ಯ ವಲಯದಲ್ಲಿ ಉಂಟಾಗಿರುವ ಶೀಘ್ರ ಬೆಳವಣಿಗೆಯ ಫಲವಾಗಿ 2018ರಲ್ಲಿ ಡ್ರೋನ್ ಮಾರುಕಟ್ಟೆ 45% ರ ಬೆಳವಣಿಗೆ ಕಾಣಲಿದೆ.

2018 ರಲ್ಲಿ 45% ರಷ್ಟು ಬೆಳೆಯಲಿರುವ ಡ್ರೋನ್ ಮಾರುಕಟ್ಟೆ : ಕೌಂಟರ್ಪಾಯಿಂಟ್ ವರದಿ


ಕುಸಿಯುತ್ತಿರುವ ಬೆಲೆಯಿಂದಾಗಿ ಡ್ರೋನ್ಗಳ ಬಳಕೆ ಹೆಚ್ಚುತ್ತಿದ್ದು, ಡ್ರೋನ್ ಘರ್ಷಣೆ ತಪ್ಪಿಸುವಿಕೆ, ಆಟೋನೋಮಸ್ ಫ್ಲೈಟ್ ಮೋಡ್, ಹೋಮ್ ರಿಟರ್ನ್, ಫರ್ಸ್ಟ್-ಪರ್ಸನ್-ವ್ಯೂ(FPV) ಮೊದಲಾದ ತಾಂತ್ರಿಕ ಆವಿಷ್ಕಾರಗಳ ಫಲವಾಗಿ ಡ್ರೋನ್ಗಳ ಬಳಕೆ ಸರಳಗೊಂಡಿದ್ದು, ವಿವಿಧ ರೀತಿಯ ಸಂದರ್ಭಗಳಲ್ಲಿ ಡ್ರೋನ್ ಬಳಕೆ ಹೆಚ್ಚುತ್ತಿದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.

ಹವ್ಯಾಸಿ ಫೊಟೋಗ್ರಾಫಿ ಮತ್ತು ವೀಡಿಯೋಗ್ರಾಫಿಯಲ್ಲಿ ಹೆಚ್ಚು ಬಳಕೆಯಾಗುತ್ತಿದ್ದ ಡ್ರೋನ್ಗಳ ವಾಣಿಜ್ಯ ಬಳಕೆಯೂ ಈಗ ವೇಗವಾಗಿ ಬೆಳೆಯುತ್ತಿದೆ ಎಂದು ಕೌಂಟರ್ಪಾಯಿಂಟ್ ಸಂಸ್ಥೆ ತಿಳಿಸಿದೆ. ವಿವಿಧ ಕೈಗಾರಿಕೋದ್ಯಮಗಳಲ್ಲಿ ಡ್ರೋನ್ ನೀಡಬಲ್ಲ ಲಾಭಗಳು ಬೆಳೆಯುತ್ತಿದ್ದು, ಫೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿ ವಲಯದಲ್ಲಿ ಡ್ರೋನ್ ಗಳ ಬಳಕೆ ಹೆಚ್ಚು ಗಮನ ಸೆಳೆಯುತ್ತಿದೆ. ಹೆಚ್ಚಿನ ವೀಡಿಯೋ ಪ್ರೊಡಕ್ಶನ್ ಕಂಪೆನಿಗಳು, ವೈಮಾನಿಕ ಅಥವಾ ಏರಿಯಲ್ ಫೂಟೇಜ್ ಸೆರೆಹಿಡಿಯಲು ಡ್ರೋನ್ಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಅಲ್ಲದೆ, ಕೃಷಿ, ಎನರ್ಜಿ, ವಿಮೆ, ಗಣಿಗಾರಿಕೆ ಮೊದಲಾದ ಕ್ಷೇತ್ರಗಳಲ್ಲೂ ಡ್ರೋನ್ ಬಳಕೆಯಿಂದ ಹೆಚ್ಚಿನ ಲಾಭಗಳು ಕಾಣಸಿಗುತ್ತಿವೆ.

ಇಷ್ಟೇ ಅಲ್ಲದೆ, ಡ್ರೋನ್ ಡಿಪ್ಲಾಯ್ಮೆಂಟ್ ನಲ್ಲಿ ಡ್ರೋನ್ ಡೆಲಿವರಿಯೂ ಬಹು ಭರವಸೆಯ ಬಳಕೆಯಾಗಿ ಗಮನಸೆಳೆಯುತ್ತಿದೆ. ಹಲವಾರು ಕಂಪೆನಿಗಳು ಪ್ಯಾಕೇಜ್ ಡೆಲಿವರಿ(ಅಮೇಜಾನ್ ಪ್ರೈಮ್ ಏರ್) ಯಿಂದ ಹಿಡಿದು ತುರ್ತು ಸಪೋರ್ಟ್ ಸೇವೆ(ಉದಾ : ಫ್ಲರ್ಟೆ, ಝಿಪ್ಲೈನ್) ನೀಡುವಲ್ಲಿ ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದ್ದು, ತಲುಪಲು ಕಷ್ಟಕರವಾದ ದೂರದ ಸ್ಥಳಗಳಿಗೆ ಸಾಮಾಗ್ರಿಗಳನ್ನು ತಲುಪಿಸಲು ಡ್ರೋನ್ಗಳನ್ನು ಬಳಸುತ್ತಿದೆ.

ಇಷ್ಟು ಕಡಿಮೆ ಬೆಲೆಗೆ 4 ಕ್ಯಾಮೆರಾ, ಗ್ಲಾಸ್ ಡಿಸೈನ್ ಇರುವ ಸ್ಮಾರ್ಟ್‌ಫೋನ್..!ಇಷ್ಟು ಕಡಿಮೆ ಬೆಲೆಗೆ 4 ಕ್ಯಾಮೆರಾ, ಗ್ಲಾಸ್ ಡಿಸೈನ್ ಇರುವ ಸ್ಮಾರ್ಟ್‌ಫೋನ್..!

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?

ಸಂಪನ್ಮೂಲಗಳ ಕೊರತೆ ಅಥವಾ ದುರ್ಗಮ ಪ್ರದೇಶಗಳಿಂದಾಗಿ ಸಾಂಪ್ರದಾಯಿಕ ರಸ್ತೆ ಮತ್ತು ವಾಯುಮಾರ್ಗದ ಮೂಲಕ ಸಾಮಗ್ರಿಗಳನ್ನು ತಲುಪಿಸಲು ಕಷ್ಟವಾಗಿರುವ ಸಂದರ್ಭಗಳಲ್ಲಿ ಡ್ರೋನ್ಗಳು ಬಹಳ ಉಪಯೋಗಿಯೆನಿಸುತ್ತವೆ. ವಿಭಿನ್ನ ಕ್ಷೇತ್ರಗಳಲ್ಲಿ ಡ್ರೋನ್ ನ ಉಪಯೋಗವನ್ನುಈ ಕೆಳಗೆ ಸಂಕ್ಷಿಪ್ತವಾಗಿ ತಿಳಿಸಲಾಗಿದೆ.

ವಾಣಿಜ್ಯ ವಲಯದಲ್ಲಿ ಸಧ್ಯದ ಸಂದರ್ಭದಲ್ಲಿ, ಸಂಸ್ಥೆಗಳು ಮೀಡಿಯಾ ಮತ್ತು ಮನರಂಜನೆ, ಕೃಷಿ, ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರಗಳಲ್ಲಿ ಡ್ರೋನ್ ಗಳ ಬಳಕೆ ಮೂಲಕ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಭವಿಷ್ಯದಲ್ಲಿ ಡ್ರೋನ್ಗಳ ವಾಣಿಜ್ಯ ಬಳಕೆ ವಿಮೆ, ಟೆಲಿಕಾಮ್, ಡೆಲಿವರಿ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಲಿದೆ ಎಂದು ಕೌಂಟರ್ಪಾಯಿಂಟ್ ವರದಿ ಮಾಡಿದೆ.

ಅಷ್ಟೇ ಅಲ್ಲದೆ, ಕೌಂಟರ್ಪಾಯಿಂಟ್ ವರದಿಯ ಅನುಸಾರ, ಕಮರ್ಶಿಯಲ್ ಡ್ರೋನ್ ಹಾರ್ಡ್ವೇರ್ ಮಾರುಕಟ್ಟೆ 2020 ರ ವೇಳೆಗೆ ಅಂದಾಜು $0.7 ಬಿಲಿಯನ್ ತಲುಪಲಿದ್ದು, 33 % ಪ್ರತಿ ವರ್ಷದ CAGR ನಲ್ಲಿ ಬೆಳವಣಿಗೆಯನ್ನು ಕಾಣಲಿದೆ. ಅಲ್ಲದೆ ಇದರ ಆವರೇಜ್ ಸೆಲ್ಲಿಂಗ್ ಪ್ರೈಸ್(ASP) ಕನ್ಸ್ಯೂಮರ್ ಡ್ರೋನ್ ವಲಯಕ್ಕೆ ಹೋಲಿಸಿದರೆ ಎರಡರಷ್ಟು ಇರಲಿದೆ ಎಂದು ಕೌಂಟರ್ಪಾಯಿಂಟ್ ವರದಿಯಲ್ಲಿ ತಿಳಿಸಿದೆ.

Best Mobiles in India

Read more about:
English summary
Drone delivery is often positioned as a promising area of drone deployment. Several companies are testing their potential ranging from package delivery (Amazon Prime Air) to providing emergency support services.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X