ಕೇಂದ್ರ ಸರ್ಕಾರದಿಂದ ಡ್ರೋನ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌!

|

ಡ್ರೋನ್‌ ಬಳಕೆದಾರರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಇಷ್ಟು ದಿನ ಡ್ರೂನ್‌ ಬಳಸುವುದಕ್ಕೆ ಇದ್ದ ಕೆಲವು ನಿಯಮಗಳಲ್ಲಿ ಸಡಿಲಿಕೆಯನ್ನು ತಂದಿದೆ. ಅಲ್ಲದೆ ಎಲ್ಲರೂ ಮುಕ್ತವಾಗಿ ಬಳಸುವುದಕ್ಕೆ ಕೆಲವು ನಿಯಮಗಳನ್ನು ಜಾರಿಗೊಳಿಸಿದೆ. ಈ ಹೊಸ ನಿಯಮದಲ್ಲಿ ಹಲವು ಬದಲವಣೆಗಳು ಸೇರಿವೆಯದರೂ ನಿಯಮ ಉಲ್ಲಂಘನೆ ಮಾಡಿದರೆ ಒಂದು ಲಕ್ಷ ರೂ, ವರೆಗೂ ದಂಡ ವಿಧಿಸುವ ಅವಕಾಶವನ್ನು ಸಹ ನೀಡಲಾಗಿದೆ. ಅಷ್ಟೇ ಅಲ್ಲ ಹೊಸ ನಿಯಮದ ಅನ್ವಯ ಡ್ರೋನ್‌ಗಳ ವ್ಯಾಪ್ತಿಯು 300 ಕೆಜಿಯಿಂದ 500 ಕೆಜಿಗೆ ಹೆಚ್ಚಿಸಲಾಗಿದೆ.

ಡ್ರೋನ್‌

ಹೌದು, ಡ್ರೋನ್‌ ಬಳಕೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದೆ. ಡ್ರೋನ್‌ ಬಳಕೆಯ ನಿಯಮಗಳಲ್ಲಿ ಕೆಲವು ಸಡಿಲಿಕೆ ವಿಧಿಸಲಾಗಿದೆ. ಇದರಲ್ಲಿ ಬಹುಮುಖ್ಯವಾಗಿ ಡ್ರೋನ್‌ಗಳ ಕಾರ್ಯಾಚರಣೆಗೆ ಪರವಾನಗಿ ನೀಡುವ ಮೊದಲು ಯಾವುದೇ ಭದ್ರತಾ ಅನುಮತಿ ಅಗತ್ಯವಿಲ್ಲ ಎನ್ನಲಾಗಿದೆ. ಡ್ರೋನ್‌ಗಳನ್ನು ನಿರ್ವಹಿಸಲು ಅನುಮತಿಗಳ ಶುಲ್ಕವನ್ನು ನಾಮಿನಲ್‌ ಲೆವೆಲ್‌ ಮಟ್ಟಕ್ಕೆ ಇಳಿಸಲಾಗಿದೆ. ಹಾಗಾದ್ರೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಡ್ರೋನ್‌ ನಿಯಮಗಳು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡ್ರೋನ್‌

ಡ್ರೋನ್‌ ಹಾರಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದೆ. ಡ್ರೋನ್‌ ಬಳಸುವುದಕ್ಕೆ ಯಾವುದೇ ಭದ್ರತಾ ಅನುಮತಿ ಅವಶ್ಯಕತೆಯಿಲ್ಲ ಎಂದು ಹೇಳಿದೆ. ಡ್ರೋನ್‌ಗಳ ಮೂಲಕ ಸರಕು ವಿತರಣೆಗಾಗಿ ಡ್ರೋನ್ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಡ್ರೋನ್ ರೂಲ್ಸ್ 2021 ರ ಅಡಿಯಲ್ಲಿ ಡ್ರೋನ್‌ಗಳ ವ್ಯಾಪ್ತಿಯು 300 ಕೆಜಿಯಿಂದ 500 ಕೆಜಿಗೆ ಹೆಚ್ಚಿಸಲಾಗಿದೆ. ಭಾರವಾದ ಪೇಲೋಡ್ ಸಾಗಿಸುವ ಡ್ರೋನ್‌ಗಳು ಮತ್ತು ಡ್ರೋನ್ ಟ್ಯಾಕ್ಸಿಗಳನ್ನು ಸೇರಿಸಲಾಗಿದೆ ಎಂದು ನಿರ್ದಿಷ್ಟಪಡಿಸಲಾಗಿದೆ.

ಪ್ರಮಾಣಪತ್ರ

ಕೇಂದ್ರ ಸರ್ಕಾರದ ಹೊಸ ನಿಯಮಗಳ ಅಡಿಯಲ್ಲಿ ರದ್ದುಗೊಳಿಸಲಾಗಿರುವ ಕೆಲವು ಅನುಮೋದನೆಗಳಲ್ಲಿ ಅನನ್ಯ ದೃಡೀಕರಣ ಸಂಖ್ಯೆ, ಅನನ್ಯ ಮೂಲಮಾದರಿಯ ಗುರುತಿನ ಸಂಖ್ಯೆ, ಅನುಸರಣೆಯ ಪ್ರಮಾಣಪತ್ರ, ನಿರ್ವಹಣಾ ಪ್ರಮಾಣಪತ್ರ, ಆಪರೇಟರ್ ಅನುಮತಿಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಅಧಿಕಾರ ಮತ್ತು ರಿಮೋಟ್ ಪೈಲಟ್ ಬೋಧಕ ಅಧಿಕಾರ, ನಿಯಮಗಳನ್ನು ಸೇರಿಸಲಾಗಿದೆ. ಹಾಗೆಯೇ ಡ್ರೋನ್ ನಿಯಮಗಳು, 2021 ರ ಅಡಿಯಲ್ಲಿ ಗರಿಷ್ಠ ದಂಡವನ್ನು 1 ಲಕ್ಷ ರೂ ವರೆಗೆ ವಿಧಿಸುವ ಅವಕಾಶವನ್ನು ಸಹ ಸೇರಿಸಲಾಗಿದೆ. ಆದಾಗ್ಯೂ, ಇತರ ಕಾನೂನುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಇದು ದಂಡಗಳಿಗೆ ಅನ್ವಯಿಸುವುದಿಲ್ಲ.

ಡಿಜಿಟಲ್

ಇನ್ನು ಹಸಿರು, ಹಳದಿ ಮತ್ತು ಕೆಂಪು ವಲಯಗಳೊಂದಿಗೆ ಸಂವಾದಾತ್ಮಕ ವಾಯುಪ್ರದೇಶದ ನಕ್ಷೆಯನ್ನು ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ವಿಮಾನ ನಿಲ್ದಾಣದ ಪರಿಧಿಯಿಂದ ಹಳದಿ ವಲಯವನ್ನು 45 ಕಿಮೀ ನಿಂದ 12 ಕಿಮೀಗೆ ಇಳಿಸಲಾಗಿದೆ. ವಿಮಾನ ನಿಲ್ದಾಣದ ಪರಿಧಿಯಿಂದ 8 ಕಿಮೀ ಮತ್ತು 12 ಕಿಮೀ ನಡುವಿನ ಪ್ರದೇಶದಲ್ಲಿ ಹಸಿರು ವಲಯಗಳಲ್ಲಿ ಮತ್ತು 200 ಅಡಿಗಳವರೆಗೆ ಡ್ರೋನ್ ಚಲಾಯಿಸಲು ಯಾವುದೇ ಅನುಮತಿ ಅಗತ್ಯವಿಲ್ಲ.

ಡ್ರೋನ್‌

ಇನ್ಮುಂದೆ ಎಲ್ಲಾ ಡ್ರೋನ್‌ಗಳ ಆನ್‌ಲೈನ್ ನೋಂದಣಿ ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್ ಮೂಲಕ ನಡೆಯುತ್ತದೆ. ಡ್ರೋನ್‌ಗಳ ವರ್ಗಾವಣೆ ಮತ್ತು ಡಿ-ನೋಂದಣಿಗೆ ಸುಲಭವಾದ ಪ್ರಕ್ರಿಯೆಯನ್ನು ಸೂಚಿಸಲಾಗಿದೆ. ದೇಶದಲ್ಲಿ ಈಗಿರುವ ಡ್ರೋನ್‌ಗಳ ಕ್ರಮಬದ್ಧಗೊಳಿಸುವಿಕೆಗಾಗಿ ಸುಲಭವಾದ ಅವಕಾಶವನ್ನು ಒದಗಿಸಲಾಗಿದೆ. ನ್ಯಾನೋ ಡ್ರೋನ್‌ಗಳು ಮತ್ತು ಮೈಕ್ರೋ ಡ್ರೋನ್‌ಗಳನ್ನು ವಾಣಿಜ್ಯೇತರ ಬಳಕೆಗಾಗಿ ಚಲಾಯಿಸಲು ಈಗ ಯಾವುದೇ ಪೈಲಟ್ ಪರವಾನಗಿ ಅಗತ್ಯವಿಲ್ಲ, ನಿಯಮಗಳು ಹೇಳುತ್ತವೆ.

ಡ್ರೋನ್

ಎಲ್ಲಾ ಡ್ರೋನ್ ತರಬೇತಿ ಮತ್ತು ಪರೀಕ್ಷೆಗಳನ್ನು ಅಧಿಕೃತ ಡ್ರೋನ್ ಶಾಲೆಯಿಂದ ನಡೆಸಲಾಗುವುದು. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ತರಬೇತಿ ಅವಶ್ಯಕತೆಗಳನ್ನು ಸೂಚಿಸಬೇಕು, ಡ್ರೋನ್ ಶಾಲೆಗಳನ್ನು ನೋಡಿಕೊಳ್ಳಬೇಕು ಮತ್ತು ಆನ್‌ಲೈನ್‌ನಲ್ಲಿ ಪೈಲಟ್ ಪರವಾನಗಿಗಳನ್ನು ಒದಗಿಸಬೇಕು ಎಂದು ಹೊಸ ನಿಯಮ ಹೇಳಿದೆ. ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾಗೆ ನಿಯೋಜಿಸಲಾದ ಡ್ರೋನ್‌ಗಳ ಟೈಪ್ ಸರ್ಟಿಫಿಕೇಶನ್ ಮತ್ತು ಅದರಿಂದ ದೃಡೀಕರಿಸಿದ ಪ್ರಮಾಣೀಕರಣ ಸಂಸ್ಥೆಗಳು. ಟೈಪ್ ಸರ್ಟಿಫಿಕೇಟ್, ಅನನ್ಯ ಗುರುತಿನ ಸಂಖ್ಯೆ, ಪೂರ್ವಾನುಮತಿ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳಿಗೆ ರಿಮೋಟ್ ಪೈಲಟ್ ಪರವಾನಗಿ ಅಗತ್ಯವಿಲ್ಲ.

Best Mobiles in India

English summary
In a set of progressive rules which will significantly transform the Indian landscape for drones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X