Home
ಸುದ್ದಿಜಾಲ

ಟ್ರಾಫಿಕ್ ನಲ್ಲಿ ಇನ್ನು ಮುಂದೆ ಪೋಲೀಸರು ಇರೋದಿಲ್ಲ! ಯಾರಿರ್ತಾರೆ ಗೊತ್ತಾ?

ಹೈದ್ರಾಬಾದಿನ ಬೀದಿಗಳಲ್ಲಿ ಇನ್ನು ಕೆಲವೇ ದಿನದಲ್ಲಿ ಡ್ರೋಣ್ ಗಳು ಹಾರಾಡುತ್ತಿರುತ್ತವೆ. ಟ್ರಾಫಿಕ್ ನಿಯಂತ್ರಣ ಮತ್ತು ಬೀದಿಗಳಲ್ಲಿರುವ ನಿರೀಕ್ಷಣಾ ಅಪರಾಧಿಗಳನ್ನು ಎಚ್ಚರಿಸುವ ಕೆಲಸವನ್ನು ಇದು ಮಾಡುತ್ತದೆ.

ಟ್ರಾಫಿಕ್ ನಿಯಂತ್ರಣಕ್ಕೆ ಡ್ರೋಣ್:

ಟ್ರಾಫಿಕ್ ನಿಯಂತ್ರಣಕ್ಕೆ ಡ್ರೋಣ್:

ಅಪಘಾತ ನಡೆದ ಸ್ಥಳಕ್ಕೆ ಡ್ರೋಣ್ ಗಳು ಬಹುಬೇಗನೆ ತಲುಪುತ್ತವೆ.ಯಾವುದೇ ಬೀದಿಯಲ್ಲಿ ನಡೆದ ಕೃತ್ಯದ ತನಿಖೆಗಾಗಿ ದೃಶ್ಯವನ್ನು ಪುನರ್ ರಚನೆ ಮಾಡಲು ನೆರವಾಗುತ್ತದೆ. ಕಾನೂನುಬಾಹಿರವಾಗಿರುವ ಕಟ್ಟಡಗಳು, ಅತಿಕ್ರಮಣ ಮಾಡಲಾಗಿರುವ ಜಾಗದ ಸುತ್ತಲಿನ ಮ್ಯಾಪ್ ಮಾಡುವಿಕೆ ಸೇರಿದಂತೆ ಹಲವು ಕೆಲಸಗಳಿಗೆ ಈ ಡ್ರೋಣ್ ಗಳನ್ನು ಬಳಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಸೈಬರಾಬಾದ್ ನಲ್ಲಿ ಕೆಲಸ ಆರಂಭ:

ಸೈಬರಾಬಾದ್ ನಲ್ಲಿ ಕೆಲಸ ಆರಂಭ:

ನಿಜ ಹೇಳಬೇಕು ಎಂದರೆ ಹೈದ್ರಾಬಾದ್ ಮೂಲದ ತಂತ್ರಜ್ಞಾನ ಸಂಸ್ಥೆಯೊಂದು ನಿರ್ಮಿಸಿದ ಈ ಮಾನವರಹಿತ ವಾಯು ವಾಹನ(ಯುಎವಿ)ಯಿಂದ ಈಗಾಗಲೇ ಹಲವು ಕೆಲಸಗಳನ್ನು ಮಾಡಲಾಗುತ್ತಿದೆ. ಅದರಲ್ಲೂ ಈಗಾಗಲೇ ಒಂದು ಸೈಬರಾಬಾದ್ ನಲ್ಲಿ ಸ್ಥಳೀಯ ಪೋಲೀಸರ ಜೊತೆಗೂಡಿ ಕೆಲಸ ಪ್ರಾರಂಭಿಸಿದೆ.

ಜನರ ಚಲನೆ ತಿಳಿಸುವ ಡ್ರೋಣ್:

ಜನರ ಚಲನೆ ತಿಳಿಸುವ ಡ್ರೋಣ್:

"ಹೈಗ್ರೌಂಡ್ಸ್ ಗಳಿಗಾಗಿ ಕಾರ್ಯಚರಣೆ ನಡೆಸುವ ಪೈಲಟ್ ಗಳು ಸೇರಿದಂತೆ ಹಲವಾರು ಪ್ರೊಜೆಕ್ಟ್ ಗಳಲ್ಲಿ ನಾವು ಸಂಬಂಧ ಹೊಂದಿದ್ದೇವೆ. ಈ ಡ್ರೋಣ್ ಗಳಿಗೆ ಥರ್ಮಲ್ ಕ್ಯಾಮರಾವನ್ನು ಅಳವಡಿಸಲಾಗಿದ್ದು ಇದು ಜನರ ಚಲನೆಯನ್ನು ತಿಳಿಸುತ್ತದೆ. ಒಂದು ವೇಳೆ ಪೋಲೀಸರು ಯಾವುದೇ ಪ್ರದೇಶದಲ್ಲಿ ಜನರ ಓಡಾಟದ ಬಗ್ಗೆ ಮಾಹಿತಿ ಪಡೆಯಬೇಕು ಎಂದಾದರೆ ಅವರಿಗೆ ಇದು ಪತ್ತೆಗಾರಿಕೆ ಕೆಲಸಕ್ಕೆ ನೆರವು ನೀಡುತ್ತದೆ" ಎಂದು ಹೇಳುತ್ತಾರೆ ಕಂಪೆನಿಯ ಮುಖ್ಯಸ್ಥರಾಗಿರುವ ದಿನಕರ ರೆಡ್ಡಿ.

ಸಂಶಯಾಸ್ಪದ ತೊಂದರೆಗಳ ನಿಯಂತ್ರಣಕ್ಕೆ ಡ್ರೋಣ್:

ಸಂಶಯಾಸ್ಪದ ತೊಂದರೆಗಳ ನಿಯಂತ್ರಣಕ್ಕೆ ಡ್ರೋಣ್:

ಅತಿಯಾಗಿ ಟ್ರಾಫಿಕ್ ಇರುವ ಪ್ರದೇಶದಲ್ಲಿ ಕೆಟ್ಟ ಚಟುವಟಿಕೆ ನಡೆಸುವವರ ಮೇಲೆ ಕಣ್ಣಿಡುವುದಕ್ಕೆ ಈ ಫೈಲಟ್ ರಹಿತ ಏರ್ ಕ್ರಾಫ್ಟ್ ಅರ್ಥಾತ್ ಡ್ರೋಣ್ ಪೋಲೀಸರಿಗೆ ಸಹಾಯ ಮಾಡುತ್ತದೆ. ಹಾಗಾಗಿ ಸಂಶಯಾಸ್ಪದ ತೊಂದರೆಗಳನ್ನು ಇದರ ಸಹಾಯದಿಂದ ತಡೆಯುವುದಕ್ಕೆ ಸಾಧ್ಯವಾಗುತ್ತದೆ.

ಮಹಿಳಾ ಸುರಕ್ಷತೆಗಾಗಿ ಡ್ರೋಣ್:

ಮಹಿಳಾ ಸುರಕ್ಷತೆಗಾಗಿ ಡ್ರೋಣ್:

ಇನ್ನೊಂದು ಕುತೂಹಲಕಾರಿ ವಿಷಯವೇನೆಂದರೆ ಕೇಶವ್ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಕೆಎಂಐಟಿ)ಯ ವಿದ್ಯಾರ್ಥಿಗಳ ತಂಡವೊಂದು ಈ ವರ್ಷದ ಆರಂಭದಲ್ಲಿ ವಿಶೇಷ ಡ್ರೋಣ್ ವೊಂದನ್ನು ಡಿಸೈನ್ ಮಾಡಿತ್ತು. ಅದು ಮಹಿಳೆಯರ ಸುರಕ್ಷತೆಗೆ ನೆರವು ನೀಡುವ ಡ್ರೋಣ್ ಆಗಿತ್ತು. ಅದು ಹೇಗೆ ಕೆಲಸ ಮಾಡುತ್ತಿತ್ತು ಗೊತ್ತಾ? ಮೊಬೈಲ್ ಆಪ್ ವೊಂದನ್ನು ಮಹಿಳೆಯರು ಡೌನ್ ಲೋಡ್ ಮಾಡಿಕೊಳ್ಳಬೇಕಿತ್ತು ಮತ್ತು ಅವರಿಗೆ ಸಮಸ್ಯೆಯಾದಾಗ ಅದರಲ್ಲಿರುವ ಬಟನ್ ನ್ನು ಒತ್ತಬೇಕು. ಹೀಗೆ ಮಾಡಿದಾಗ ಅದು ಹತ್ತಿರದ ಡ್ರೋಣ್ ಮತ್ತು ಪೋಲೀಸ್ ಠಾಣೆಗೆ ಮಾಹಿತಿಯನ್ನು ರವಾನಿಸುತ್ತದೆ.

ಟೆಸ್ಟಿಂಗ್ ಕಾರ್ಯ ಪೂರ್ಣ:

ಟೆಸ್ಟಿಂಗ್ ಕಾರ್ಯ ಪೂರ್ಣ:

ಇದರಲ್ಲಿ ಎರಡು ರೀತಿಯ ಬಳಕೆ ಇದೆ. ಮಹಿಳೆಯರು ತುರ್ತುಪರಿಸ್ಥಿತಿಯನ್ನು ಸೂಚಿಸಿದರೆ ಆಗ ಡ್ರೋಣ್ ಅವರನ್ನು ಫಾಲೋ ಮಾಡುತ್ತದೆ ಮತ್ತು ಸಹಾಯ ನೀಡುತ್ತದೆ ಅಂದರೆ ಅಂಬುಲೆನ್ಸ್ ನಲ್ಲಿ ಬರುವ ಸೈರನ್ ಶಬ್ಧದಂತೆ ಶಬ್ದ ಮಾಡುತ್ತಾ ಅವರನ್ನು ಫಾಲೋ ಮಾಡುತ್ತದೆ. ಇದು ಆಕೆಯನ್ನು ತಲುಪುವುದಕ್ಕೆ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ ಇದನ್ನು ಅಭಿವೃದ್ಧಿ ಪಡಿಸಿದ ತಂಡದ ನಾಲ್ಕು ಜನ ಸದಸ್ಯರ ಪೈಕಿ ಒಬ್ಬರಾಗಿರುವ ಪ್ರಜ್ಞಾ ಕೊಂಡ್ರಕುಂಟ. ಈಗಾಗಲೇ ಇದರ ಟೆಸ್ಟಿಂಗ್ ಕೆಲಸವನ್ನು ಮುಗಿಸಲಾಗಿದ್ದು ರಾಜ್ಯ ಸರ್ಕಾರವು ಇದನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಳಿಸುವುದಕ್ಕೆ ಚಿಂತನೆ ನಡೆಸಿದೆ.

ಕಟ್ಟಡ ನಿರ್ಮಾಣದ ಸರ್ವೆಗಾಗಿ ಡ್ರೋಣ್:

ಕಟ್ಟಡ ನಿರ್ಮಾಣದ ಸರ್ವೆಗಾಗಿ ಡ್ರೋಣ್:

ಇದಿಷ್ಟೇ ಅಲ್ಲದೆ ಆಯವ್ಯಯ ತೆರಿಗೆಗೆ ಸಂಬಂಧಿಸಿದಂತೆ ಸರ್ವೇ ನಡೆಸುವುದಕ್ಕೆ ಅನುಕೂಲವಾಗುವಂತಹ ಡ್ರೋಣ್ ತಯಾರಿಸುವ ಹೊಸ ಪ್ರೊಜೆಕ್ಟ್ ಕೂಡ ಇದೆ. ಇದು ಜಾಗದ ಸುತ್ತಳತೆ, ಎಷ್ಟು ಫ್ಲೋರ್ ಗಳಿವೆ, ಯಾವುದಾದರೂ ಕಟ್ಟಡ ನಿರ್ಮಾಣದ ನಿಯಮಗಳನ್ನು ಉಲ್ಲಿಘಿಸಲಾಗಿದೆಯೇ ಇತ್ಯಾದಿ ಹಲವು ಅಂಶಗಳನ್ನು ಕಂಡುಹಿಡಿಯಲು ನೆರವಾಗುವ ಡ್ರೋಣ್ ಆಗಿರುತ್ತದೆ.

ರಸ್ತೆಯ ಗುಣಮಟ್ಟ, ಕಸದ ನಿರ್ವಹಣೆ ಪರೀಕ್ಷೆಗೆ ಡ್ರೋಣ್:

ರಸ್ತೆಯ ಗುಣಮಟ್ಟ, ಕಸದ ನಿರ್ವಹಣೆ ಪರೀಕ್ಷೆಗೆ ಡ್ರೋಣ್:

ರಸ್ತೆಯ ಗುಣಮಟ್ಟ, ಕಸದ ನಿರ್ವಹಣೆಯ ಪರೀಕ್ಷೆ ಇತ್ಯಾದಿ ವಿಚಾರಗಳನ್ನು ಪ್ರತಿದಿನ ಪರೀಕ್ಷೆ ಮಾಡುವುದಕ್ಕೆ ಅನುಕೂಲವಾಗುವಂತಹ ಡ್ರೋಣ್ ತಯಾರಿಕೆಯೂ ಕೂಡ ನಡೆಯುತ್ತಿದೆ. ಅಷ್ಟೇ ಅಲ್ಲ ಕಾನೂನುಬಾಹಿರ ಗಣಿಗಾರಿಕೆಯ ಪತ್ತೆಗೂ ಡ್ರೋಣ್ ಬಳಸುವ ಯೋಜನೆಯನ್ನು ತೆಲಂಗಾಣ ಸರ್ಕಾರ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಮುಂದಿನ ದಿನಗಳಲ್ಲಿ ಇದೆಲ್ಲವೂ ಜಾರಿಗೆ ಬರುವ ಸಾಧ್ಯತೆ ಇದೆ.

Best Mobiles in India

English summary
Drones could soon manage traffic in Hyderabad, deter potential offenders
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+