ಕ್ಯಾಬಿನಲ್ಲಿ ಪ್ರಯಾಣಿಸಬೇಕಾದರೆ ಈ ತಪ್ಪು ಮಾಡಬೇಡಿ: ತಪ್ಪಿನ ಪ್ರಯಾಣಕ್ಕೆ ರೂ.1.06 ಲಕ್ಷ ಬಿಲ್ ನೀಡಿದ ಉಬರ್..!

|

ಇಷ್ಟು ದಿನ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಪೊಲೀಸರಿಗೆ ದಂಡ ಪಾವತಿಸಿದವರನ್ನು ನೀವು ಕಂಡಿರಬಹುದು. ಆದರೆ ಇಲ್ಲೊಬ್ಬ ಎಣ್ಣೆ ಏಟಿನಲ್ಲಿ ಕ್ಯಾಬ್ ಬುಕ್ ಮಾಡಿ ಬರೊಬ್ಬರಿ ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾನೆ. ಕುಡಿದು ವಾಹನ ಚಲಾಯಿಸಿದರೆ ಪೊಲೀಸರು ಹಿಡಿಯುತ್ತಾರೆ ಎಂದು ಅಂಜಿ ಕ್ಯಾಬ್ ಮೊರೆ ಹೋಗಿದ್ದಕ್ಕೆ ಲಕ್ಷ ರೂ. ಪಾವತಿಸಿದ್ದಾನೆ.

ಕ್ಯಾಬಿನಲ್ಲಿ ಪ್ರಯಾಣಿಸಬೇಕಾದರೆ ಈ ತಪ್ಪು ಮಾಡಬೇಡಿ

ಮದ್ಯಪಾನ ಮಾಡಿ ಮಾಡಿಕೊಳ್ಳುವ ಅನಾಹುತಗಳ ಸಾಲಿಗೆ ಇದೊಂದು ಹೊಸ ಸೇರ್ಪಡೆಯಾಗಿದ್ದು, ಅಮೆರಿಕಾದಲ್ಲೊಬ್ಬ ಮಹಾಶಯ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಮನಗೆ ಹೋಗಲು ಉಬರ್ ಬುಕ್ ಮಾಡಿದ್ದಾನೆ. ಮನೆಗಿಂತಲೂ ಮುನ್ನೂರು ಮೈಲಿ ದೂರದ ಸ್ಥಳಕ್ಕೆ ಕ್ಯಾಬ್ ಬುಕ್ ಮಾಡಿ ಲಕ್ಷ ರೂ ಗಳನ್ನು ಕಳೆದುಕೊಂಡಿದ್ದಾನೆ.

ತನ್ನ ಮನೆಗೆ ಬದಲಾಗಿ

ತನ್ನ ಮನೆಗೆ ಬದಲಾಗಿ

ಪಶ್ಚಿಮ ವರ್ಜಿನಿಯಾದ ನಿವಾಸಿಯಾಗಿರುವ ಕೆನೆ ಬ್ಯಾಚ್ಮೆನ್ ಎಂಬತ ತನ್ನ ಸ್ನೇಹಿತನ ಪಾರ್ಟಿಯಲ್ಲಿ ಕಂಠ ಪೂರ್ತಿ ಕುಡಿದಿದ್ದಾನೆ. ಅದೇ ನಿಶೆಯಲ್ಲಿ ಪಾರ್ಟಿ ಮುಗಿಸಿ ಮನೆಗೆ ಹೋಗವ ಸಲುವಾಗಿ ಉಬರ್ ಬುಕ್ ಮಾಡಿದ್ದಾನೆ. ಅಮಲಿನಲ್ಲಿ ತನ್ನ ಮನೆಗೆ ಬದಲಾಗಿ ಮುನ್ನುರು ಮೈಲಿ ದೂರದ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಅಲ್ಲಿಗೆ ಹೋಗುವಂತೆ ಮಾರ್ಗದರ್ಶನ ಮಾಡಿದ್ದಾನೆ.

ಬಿಲ್ ನೋಡಿ ಶಾಕ್‌

ಬಿಲ್ ನೋಡಿ ಶಾಕ್‌

ಕ್ಯಾಬ್ ಹತ್ತಿ ಅಮಲಿನಲ್ಲಿ ಗಾಢವಾಗಿ ನಿದ್ರಿಸಿದ ಕೆನೆ ಬ್ಯಾಚ್ಮೆನ್, ಎರಡು ಮೂರು ಗಂಟೆಗಳ ನಂತರ ಎಚ್ಚೆತ್ತು ನೋಡಿದಾಗ ತಾನು ಬೇರೆಲ್ಲೂ ಹೋಗುತ್ತಿರುವುದನ್ನು ಅರಿತಿದ್ದಾನೆ, ನಂತರ ನಶೆ ಇಳಿದ ಮೇಲೆ, ಮತ್ತೆ ಮಾರ್ಗ ಮಧ್ಯಯೇ ವಾಪಸ್ಸು ಕ್ಯಾಬ್ ತಿರುಗಿಸಿ ಮನೆಗೆ ತಲುಪಿದ್ದಾನೆ. ಕ್ಯಾಬ್ ಇಳಿದಾಗ ನಂತರ ಉಬರ್ ಬಿಲ್ ನೋಡಿ ಶಾಕ್‌ಗೆ ಒಳಗಾಗಿದ್ದಾನೆ.

Bike-Car ಜಾತಕ ಹೇಳುವ ಆಪ್..!
ಉಬರ್ ಸ್ಪಷ್ಟೀಕರಣ

ಉಬರ್ ಸ್ಪಷ್ಟೀಕರಣ

ಮದ್ಯದ ನಶೆಯಲ್ಲಿ ಪ್ರಯಾಣಿಸಿದ್ದಕ್ಕೆ ಉಬರ್ ರೂ.1.06 ಲಕ್ಷ ಬಿಲ್ ನೀಡಿದೆ. ತಾನು ಮಾಡಿದ ತಪ್ಪಿಗೆ ಬೇರೆ ದಾರಿಯಿಲ್ಲದೆ ಅಷ್ಟೂ ಹಣವನ್ನು ಪಾವತಿ ಮಾಡಿದ್ದಾನೆ. ಅಲ್ಲದೇ ಉಬರ್ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಆತ ಪ್ರಯಾಣಕ್ಕೆ ತಗುಲಿದ ಮೊತ್ತವನ್ನು ಮಾತ್ರ ಸ್ವೀಕರಿಸಿರುವುದಾಗಿ ತಿಳಿಸಿದೆ.

Most Read Articles
Best Mobiles in India

English summary
Drunk man selects wrong Uber drop location. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X