ಡ್ಯುಯಲ್ ಕ್ಯಾಮೆರಾ ಫೋನ್ ಎಂದು ಖರೀದಿಸಿ ಮೋಸ ಹೋಗಬೇಡಿ: ಎಲ್ಲಾ ಒಂದೆ ಅಲ್ಲ..!

|

ಇಂದಿನ ದಿನದಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ನಾವು ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಡ್ಯುಯಲ್ ಕ್ಯಾಮೆರಾ ಇದೆ ಏನ್ನುವ ಕಾರಣಕ್ಕೆ ಸ್ಮಾರ್ಟ್‌ಫೋನ್ ಖರೀದಿಸುವವರರು ಇದ್ದಾರೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಎಷ್ಟು ಮಾದರಿಯ ಡ್ಯುಯಲ್ ಕ್ಯಾಮೆರಾಗಳು ಇದು, ಅದರ ವಿಧಗಳೇನು, ಯಾವ ಮಾದರಿ ಡ್ಯುಯಲ್ ಕ್ಯಾಮೆರಾ ಉತ್ತಮ ಚಿತ್ರಗಳನ್ನು ಸೆರೆಹಿಡುತ್ತವೆ ಹಾಗೂ ಯಾವ ಕ್ಯಾಮೆರಾಗಳು ನಿಮ್ಮನ್ನು ಯಾಮಾರಿಸುತ್ತವೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಡ್ಯುಯಲ್ ಕ್ಯಾಮೆರಾ ಫೋನ್ ಎಂದು ಖರೀದಿಸಿ ಮೋಸ ಹೋಗಬೇಡಿ: ಎಲ್ಲಾ ಒಂದೆ ಅಲ್ಲ..!

ಮುಂದಿನ ಬಾರಿ ಮಾರುಕಟ್ಟೆಯಲ್ಲಿ ಡ್ಯುಯಲ್ ಕ್ಯಾಮೆರಾ ಎಂದರೆ ತಕ್ಷಣ, ಅದು ಯಾವ ಮಾದರಿಯದ್ದು ಎಂದು ನೀವು ಪ್ರಶ್ನೇ ಮಾಡಬೇಕು ಎನ್ನುವ ಉದ್ದೇಶದಿಂದ ಮಾಹಿತಿಗಳನ್ನು ನೀಡಲಾಗುತ್ತಿದೆ. ಇದರಿಂದಾಗಿ ನಿಮಗೆ ಡ್ಯುಯಲ್ ಅವಶ್ಯವಿದೆಯೇ ಮತ್ತು ಇದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದು ನಿಮಗೆ ಅರ್ಥವಾಗಲಿದೆ. ಅಲ್ಲದೇ ನಿಮಗೆ ಯಾವ ಮಾದರಿಯ ಡ್ಯುಯಲ್ ಕ್ಯಾಮೆರಾ ಬೇಕು ಎಂಬುದನ್ನು ನೀವು ನಿರ್ಧರಿಸಬಹುದಾಗಿದೆ. ಅಲ್ಲದೇ ಯಾವ ಸ್ಮಾರ್ಟ್‌ಫೋನ್ ಯಾವ ಮಾದರಿಯ ಡ್ಯುಯಲ್ ಕ್ಯಾಮೆರಾ ಹೊಂದಿದೆ ಎಂಬುದನ್ನು ತಿಳಿಯಬಹುದಾಗಿದೆ.

ಟೆಲಿಫೋಟೋ ಲೆನ್ಸ್:

ಟೆಲಿಫೋಟೋ ಲೆನ್ಸ್:

ಡ್ಯುಯಲ್ ಕ್ಯಾಮೆರಾ ಸೆಟ್ಟಪ್‌ ನಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿರುವುದು ಟೆಲಿಫೋಟೋ ಲೈನ್ಸ್‌ಗಳು, ಈ ಮಾದರಿಯ ಲೈನ್ಸ್ ಗಳನ್ನು ಐಫೋನ್ ‍Xನಲ್ಲಿ ನೀವು ಕಾಣಬಹುದಾಗಿದೆ. ಇದರಲ್ಲಿ ಒಂದು ಲೈನ್ಸ್ ಅನ್ನು ಜೂಮ್ ಮಾಡಿ ಫೋಟೋಗಳನ್ನು ತೆಗೆಯಲು ಬಳಕೆಯಾದರೆ, ಮತ್ತೊಂದು ಜೂಮ್ ಮಾಡದೆ, ಕಡಿಮೆ ದೂರದಲ್ಲಿರುವ ಫೊಟ್ರೆಟ್‌ಗಳನ್ನು ಸೆರೆಹಿಡಿಯಲು ಬಳಕೆ ಮಾಡಿಕೊಳ್ಳುವ ಮಾದರಿಯಲ್ಲಿ ವಿನ್ಯಾಸ ಮಾಡಲಾಗಿರುತ್ತದೆ. ಜೂಮ್ ಮಾಡಿದರೂ ಫೋಟೋ ಕ್ವಾಲಿಟಿ ಕಮ್ಮಿ ಆಗುವುದಿಲ್ಲ. ಇದಲ್ಲದೇ ಇದರಲ್ಲಿ ಡೆಪ್ತ್ ಆಫ್ ಫಿಲ್ಡ್ ಉತ್ತಮವಾಗಿ ಮೂಡಿಬರಲಿದೆ. ಎರಡು ಲೆನ್ಸ್‌ಗಳು ಹಿಡಿದ ಚಿತ್ರವೂ ಮರ್ಜ್ ಆಗಿ ಒಂದಾಗಲಿದೆ.

ವೈಡ್ ಆಂಗಲ್ ಲೈನ್ಸ್:

ವೈಡ್ ಆಂಗಲ್ ಲೈನ್ಸ್:

ಈ ಮಾದರಿಯ ಕ್ಯಾಮೆರಾವನ್ನು ನೀವು ಅಸುಸ್ ಜೆನ್‌ಫೋನ್ 5z ನಲ್ಲಿ ಕಾಣಬಹುದಾಗಿದೆ. ಇದರಲ್ಲಿ ಇರುವ ಪ್ರೈಮರಿ ಕ್ಯಾಮೆರಾ ನಾರ್ಮಲ್ ಫೋಟೋಗಳನ್ನು ಕ್ಲಿಕ್ ಮಾಡಲು ಬಳಕೆಯಾದರೆ ಮತ್ತೊಂದು ಸೆಕೆಂಡರಿ ಕ್ಯಾಮೆರಾ ವೈಡ್ ಆಂಗಲ್ ಫೋಟೋಗಳನ್ನು ಕ್ಲಿಕ್ ಮಾಡಲು ಇದು ಸಹಾಯವನ್ನು ಮಾಡಲಿದೆ. ಇದರಲ್ಲಿ ಜೂಮ್ ಆಯ್ಕೆಯೂ ಇರುವುದಿಲ್ಲ.

ಮೊನೊ ಕ್ರೋಮ್ ಸೆನ್ಸಾರ್:

ಮೊನೊ ಕ್ರೋಮ್ ಸೆನ್ಸಾರ್:

ಹಾನರ್ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಮಾದರಿಯ ಸೆಟಪ್ ಅನ್ನು ಕಾಣಬಹುದಾಗಿದೆ. ಇದರಲ್ಲಿ ಪ್ರೈಮರಿ ಕ್ಯಾಮೆರಾ RGB ಯಲ್ಲಿ ಫೋಟೋಗಳನ್ನು ಕ್ಲಿಕ್ ಮಾಡಿದರೆ, ಸೆಕೆಂಡರಿ ಕ್ಯಾಮೆರಾ ಮೊನೊ ಕಲರ್‌ನಲ್ಲಿ ಫೋಟೋಗಳನ್ನು ಸೆರೆಹಿಡಿಯಲಿದೆ. ಇದು ಬೋಕೆ ಎಫೆಕ್ಟ್ ಅನ್ನು ನೀಡಲು ಸಹಾಯಕಾರಿಯಾಗಿದೆ.

ಡೆಪ್ತ್ ಸೆನ್ಸಾರ್‌:

ಡೆಪ್ತ್ ಸೆನ್ಸಾರ್‌:

ಇದು ಮಧ್ಯಮ ಸರಣಿಯ ಸ್ಮಾರ್ಟ್ಫೋನ್‌ಗಳು ಉದಾ: ರೆಡ್‌ಮಿ ನೋಟ್ 5 ನಂತಹ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣುವ ಕ್ಯಾಮೆರಾ ಸೆಟಪ್ ಆಗಿದ್ದು, ಇದರಲ್ಲಿ ಸೆಕೆಂಡರಿ ಸೆನ್ಸರ್ ಡೆಪ್ತ್ ಸೆಸ್ಸಾರ್ ಆಗಲಿದೆ. ಇದು ಬ್ಯಾಕ್‌ಗ್ರಾಂಡ್ ಅನ್ನು ಬ್ಲರ್ ಮಾಡಲಿದ್ದು, ಫೋಟ್ರೆಟ್‌ಗಳನ್ನು ಸೆರೆಹಿಡಿಯಲು ಸಹಾಯವನ್ನು ಮಾಡಲಿದೆ.

ಲೋಲೈಟ್ ಸೆಸ್ಸಾರ್:

ಲೋಲೈಟ್ ಸೆಸ್ಸಾರ್:

ಒನ್‌ಪ್ಲಸ್ 5T ಸ್ಮಾರ್ಟ್‌ಫೋನಿನಲ್ಲಿ ಈ ಮಾದರಿಯ ಸೆನ್ಸಾರ್ ಗಳನ್ನು ಕಾಣಬಹುದಾಗಿದೆ. ಇದರಲ್ಲಿ ಒಂದು ಕ್ಯಾಮೆರಾ ಲೋಲೈಟ್ ಕಂಡಿಷನ್‌ಗಳಲ್ಲಿ ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯಲು ನಿಮಗೆ ಸಹಾಯವನ್ನು ಮಾಡಲಿದೆ. ಇದರಿಂದಾಗಿ ನಿಮ್ಮ ಫೋಟೊ ಉತ್ತಮವಾಗಿರಲಿದೆ.

Best Mobiles in India

English summary
Dual camera setup on smartphones explained: Telephoto, Wide angle and more. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X