Home
ಸುದ್ದಿಜಾಲ

ಭಾರತದಲ್ಲಿ ಹೊಸ ಹೆಡ್‌ಫೋನ್‌ ಪರಿಚಯಿಸಿದ ಡೈಸನ್‌! ಮ್ಯೂಸಿಕ್‌ ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿ!

ವಾಕ್ಯೂಮ್‌ ಕ್ಲೀನರ್‌ಗಳಿಗೆ ಹೆಸರುವಾಸಿಯಾಗಿದ್ದ ಬ್ರಿಟಿಷ್‌ ಕಂಪೆನಿ ಡೈಸನ್‌ ಹೊಸ ಹೆಜ್ಜೆಯನ್ನು ಇಟ್ಟಿದೆ. ಭಾರತದ ಮ್ಯೂಸಿಕ್‌ ಮಾರುಕಟ್ಟೆಯಲ್ಲಿ ಹೊಸ ಹೆಡ್‌ಫೋನ್‌ಗಳನ್ನು ಪರಿಚಯಿಸುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ. ಡೈಸನ್‌ ಜೋನ್‌ ನಾಯ್ಸ್‌ ಕ್ಯಾನ್ಸಲಿಂಗ್‌ ಹೆಡ್‌ಫೋನ್‌ಗಳ ಮೂಲಕ ಭಾರತದ ಆಡಿಯೋ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಹೌದು, ಡೈಸನ್‌ ಕಂಪೆನಿ ವ್ಯಾಕ್ಯೂಮ್ ಕ್ಲೀನರ್‌ಗಳು, ಏರ್ ಪ್ಯೂರಿಫೈಯರ್‌ಗಳು ಮತ್ತು ಹೇರ್ ಡ್ರೈಯರ್‌ಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದೀಗ ಹೆಡ್‌ಫೋನ್‌ಗಳನ್ನು ಸಹ ಪರಿಚಯಿಸುವ ಮೂಲಕ ಭಾರತದಲ್ಲಿ ಹೊಸ ಕ್ರಾಂತಿ ನಿಲುವನ್ನು ತೆಗೆದುಕೊಂಡಿದೆ. ಇನ್ನು ಈ ಹೆಡ್‌ಫೋನ್‌ಗಳು ಐದು ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಫಲಿತಾಂಶವಾಗಿದೆ ಎಂದು ಡೈಸನ್‌ ಹೇಳಿದೆ. ಅಲ್ಲದೆ ಸಂಪೂರ್ಣ ಸೌಂಡ್‌ ಸ್ಪೆಕ್ಟ್ರಮ್‌ನಾದ್ಯಂತ ಅಲ್ಟ್ರಾ-ಲೋ ಲೆಟೆನ್ಸಿ ನೀಡಲಿದೆ. ಹಾಗಾದ್ರೆ ಈ ಹೆಡ್‌ಫೋನ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಹೊಸ ಹೆಡ್‌ಫೋನ್‌ ಪರಿಚಯಿಸಿದ ಡೈಸನ್‌! ಆರೋಗ್ಯಕ್ಕೂ ಸಹಕಾರಿ!

ಡೈಸನ್‌ ಜೋನ್ ಹೆಡ್‌ಫೋನ್‌ ಫೀಚರ್ಸ್‌ ಹೇಗಿದೆ?

ಡೈಸನ್‌ ಜೋನ್‌ ಹೆಡ್‌ಫೋನ್‌ ಕುದುರೆಯ ಸ್ಯಾಡಲ್‌ನ ಆಕಾರದ ವಿನ್ಯಾಸವನ್ನು ಹೊಂದಿದೆ. ಆದರಿಂದ ಈ ಹೆಡ್‌ಫೋನ್‌ಗಳು ಮೇಲ್ಭಾಗಕ್ಕಿಂತ ಹೆಚ್ಚಾಗಿ ತಲೆಯ ಎರಡೂ ಬದಿಗಳಲ್ಲಿ ಸಮವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಇನ್ನು ನಾಯ್ಸ್‌ ಕ್ಯಾನ್ಸಲಿಂಗ್ ಸೌಲಭ್ಯಕ್ಕಾಗಿ ಸಾಂಪ್ರದಾಯಿಕ ಹೆಡ್‌ಫೋನ್‌ಗಳಿಗಿಂತ ಚಪ್ಪಟೆಯಾದ ಆಕಾರವನ್ನು ಹೊಂದಿವೆ. ಇನ್ನು ಈ ಹೆಡ್‌ಫೋನ್‌ಗಳು 'ಪಾರದರ್ಶಕ' ಮೋಡ್ ಅನ್ನು ಹೊಂದಿದ್ದು, ಬಳಕೆದಾರರಿಗೆ ಸುತ್ತಮುತ್ತಲಿನ ಶಬ್ದವನ್ನು ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡಲಿದೆ.

ಇದಲ್ಲದೆ ಹೆಡ್‌ಫೋನ್‌ಗಳನ್ನು ತೆಗೆದುಹಾಕದೆ ಇತರರೊಂದಿಗೆ ಸಂವಹನ ನಡೆಸಲು ಅವಕಾಶ ಸಿಗಲಿದೆ. ಈ ಹೆಡ್‌ಫೋನ್‌ಗಳು ಟೆಲಿಫೋನಿ, ಕರೆ, ರೆಕಾರ್ಡಿಂಗ್ ಕಂಟ್ರೋಲಿಂಗ್‌ಗಾಗಿ ಮೈಕ್ರೊಫೋನ್ ಹೊಂದಿವೆ. ಇನ್ನು ಹೆಡ್‌ಫೋನ್‌ಗಳು 50 ಗಂಟೆಗಳ ನಿರಂತರ ಪ್ಲೇಬ್ಯಾಕ್‌ ಟೈಂ ನೀಡಲಿದ್ದು, ಲಾಂಗ್‌ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಸಹ ನೀಡಲಿವೆ. ಆದರಿಂದ ಇದನ್ನು ನೀವು ಕೇವಲ ಮೂರು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

ಇನ್ನು ಡೈಸನ್‌ ಜೋನ್‌ ಹೆಡ್‌ಫೋನ್‌ 11 ಮೈಕ್ರೊಫೋನ್‌ಗಳನ್ನು ಹೊಂದಿದೆ. ಇವುಗಳಲ್ಲಿ ಎಂಟು ಮೈಕ್ರೋಫೋನ್‌ಗಳು ಶಬ್ದ ಮಾಲಿನ್ಯವನ್ನು 38dB ವರೆಗೆ ಕಡಿಮೆ ಮಾಡಲು ಬಳಸಲಾಗುತ್ತದೆ. ಹೆಡ್‌ಫೋನ್‌ನ ಪ್ರತಿ ಇಯರ್‌ಕಪ್‌ನಲ್ಲಿರುವ ಕಂಪ್ರೆಸರ್‌ಗಳು ಡಬಲ್-ಲೇಯರ್ ಫಿಲ್ಟರ್‌ಗಳ ಮೂಲಕ ಗಾಳಿಯನ್ನು ಸೆಳೆಯುತ್ತವೆ. ಇದು ಶುದ್ಧೀಕರಿಸಿದ ಗಾಳಿಯ ಎರಡು ಸ್ಟ್ರೀಮ್‌ಗಳನ್ನು ಬಳಕೆದಾರರ ಮೂಗು ಮತ್ತು ಬಾಯಿಗೆ ಪ್ರಕ್ಷೇಪಿಸುತ್ತದೆ ಎಂದು ಹೇಳಲಾಗಿದೆ. ಇದರಿಂದ ಕಲುಷಿತ ನಗರಗಳಲ್ಲಿ ಶುದ್ಧಗಾಳಿ ಬಯಸುವವರಿಗೆ ಇದು ಬೆಸ್ಟ್‌ ಆಯ್ಕೆಯಾಗಿದೆ.

ಇದರಲ್ಲಿರುವ ಸ್ಥಾಯೀವಿದ್ಯುತ್ತಿನ ಸೆನ್ಸಾರ್‌ಗಳು 0.1 ಮೈಕ್ರಾನ್‌ಗಳಷ್ಟು ಸಣ್ಣ ಕಣಗಳನ್ನು ತೆಗೆದುಹಾಕುತ್ತವೆ. ಆದರೆ ಸಕ್ರಿಯ ಇಂಗಾಲದ ಫಿಲ್ಟರ್‌ಗಳು ನಗರ ಮಾಲಿನ್ಯದಿಂದ ಸಾರಜನಕ ಡೈಆಕ್ಸೈಡ್‌ನಂತಹ ಅನಿಲಗಳನ್ನು ಹೀರಿಕೊಳ್ಳುತ್ತವೆ. ಇದರಿಂದ ಸ್ಥಾಯೀವಿದ್ಯುತ್ತಿನ ಕಾರ್ಬನ್ ಫಿಲ್ಟರ್‌ಗಳು, ವೈಸರ್ ಕ್ಲೀನಿಂಗ್ ಬ್ರಷ್ ಅನ್ನು ಒಳಗೊಂಡಿವೆ. ಇನ್ನು ಈ ಹೆಡ್‌ಫೋನ್‌ಗಳು ಯುಎಸ್‌ಬಿ-ಸಿ ಚಾರ್ಜಿಂಗ್ ಕೇಬಲ್ ಮತ್ತು ವೈಸರ್ ಸ್ಲೀವ್ ಅನ್ನು ಒಳಗೊಂಡಿವೆ.

ಡೈಸನ್ ಜೋನ್‌ ಹೆಡ್‌ಫೋನ್‌ ಸ್ಟ್ಯಾಂಡರ್ಡ್‌ ಎಡಿಷನ್‌ ಮತ್ತು ಕಂಪ್ಲೀಟ್‌ + ಎಡಿಷನ್‌ ರೂಪಾಂತರಗಳಲ್ಲಿ ಬರಲಿದೆ. ಇದರಲ್ಲಿ ಸ್ಟ್ಯಾಂಡರ್ಡ್ ಆವೃತ್ತಿಯ ಬೆಲೆ 59,900 ರೂ ಆಗಿದೆ. ಆದರೆ ಸಂಪೂರ್ಣ+ ಆವೃತ್ತಿಯ ಬೆಲೆ 64,900 ರೂ. ಆಗಿದೆ. ಇವುಗಳಲ್ಲಿ ಸ್ಟ್ಯಾಂಡರ್ಡ್‌ ಆವೃತ್ತಿಯು ಅಲ್ಟ್ರಾ ಬ್ಲೂ ಮತ್ತು ಪ್ರಶ್ಯನ್ ಬ್ಲೂ ಕಲರ್‌ ಆಯ್ಕೆಗಳಲ್ಲಿ ಬರಲಿದೆ. ಸಂಪೂರ್ಣ + ಆವೃತ್ತಿಗಾಗಿ ಪ್ರಶ್ಯನ್ ಬ್ಲೂ ಮತ್ತು ಬ್ರೈಟ್ ಕಾಪರ್ ಕಲರ್‌ ಆಯ್ಕೆಗಳಲ್ಲಿ ದೊರೆಯಲಿದೆ. ಇವುಗಳನ್ನು ಆನ್‌ಲೈನ್‌ನಲ್ಲಿ Dyson.in ನಲ್ಲಿ ಅಥವಾ ಡೈಸನ್ ಡೆಮೊ ಸ್ಟೋರ್‌ನಲ್ಲಿ ಖರೀದಿಸಬಹುದು.

Best Mobiles in India

English summary
Dyson says it’s inspired by the shape and design of a horse’s saddle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+