ಕರ್ನಾಟಕ ಧ್ವಜಕ್ಕೆ ಅವಮಾನ ಮಾಡಿದ ಅಮೆಜಾನ್‌!

|

ಗೂಗಲ್‌ ಆಯ್ತು ಇದೀಗ ಅಮೆಜಾನ್‌ ಕೂಡ ಕನ್ನಡಗಿರನ್ನು ಕೆಣಕುವ ಕೆಲಸ ಮಾಡಿದೆ. ಕನ್ನಡ ಕೊಳಕು ಭಾಷೆ ಎಂದು ಅವಮಾನಿಸಿದ್ದ ಘಟನೆ ಮಾಸುವ ಮುನ್ನವೇ ಇ-ಕಾಮರ್ಸ್‌ ದೈತ್ಯ ಎನಿಸಿಕೊಂಡಿರುವ ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕರ್ನಾಟಕ ಧ್ವಜಕ್ಕೆ ಅವಮಾನ ಮಾಡಿದೆ. ಕರ್ನಾಟಕ ದ್ವಜವನ್ನು ಮಹಿಳೆಯರ ಒಳ ಉಡುಪಿನ ಮಾದರಿಯಲ್ಲಿ ತೋರಿಸಿ ಅವಮಾನ ಮಾಡಿದೆ.

ಕರ್ನಾಟಕ ಧ್ವಜಕ್ಕೆ ಅವಮಾನ ಮಾಡಿದ ಅಮೆಜಾನ್‌!

ಹೌದು, ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕರ್ನಾಟಕ ಧ್ವಜಕ್ಕೆ ಅವಮಾನ ಮಾಡಿದೆ. ಇದು ಕನ್ನಡಿಗರು ಆಕ್ರೋಶಗೊಳ್ಳುವಂತೆ ಮಾಡಿದೆ. ರಾಜ್ಯ ಧ್ವಜ ಮತ್ತು ಲಾಂಛನ ಇರುವ ಒಳುಡುಪುಗಳನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಕಟಿಸಿದೆ. ಈ ಲಾಂಛನಕ್ಕಿರುವ ಇತಿಹಾಸವನ್ನು ಅರಿಯದ ಅಮೆಜಾನ್‌ ವಿರುದ್ದ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗೇ ನೋಡಿದ್ರೆ ರಾಜ್ಯ ಲಾಂಛನವನ್ನು ಕರ್ನಾಟಕ ಸರ್ಕಾರವು ಮಾಡಿದ ಎಲ್ಲಾ ಅಧಿಕೃತ ಪತ್ರವ್ಯವಹಾರಗಳನ್ನು ನಡೆಸಲಾಗುತ್ತದೆ. ಇಂತಹ ಲಾಂಛನಕ್ಕೆ ಅಮೆಜಾನ್‌ ಅಪಮಾನವೆಸಗಿದೆ.

ಕನ್ನಡಿಗರನ್ನು ಪದೇ ಪದೇ ಕೆಣಕುವ ಕೆಲಸಗಳು ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ನಡೆಯುತ್ತಲೇ ಬಂದಿದೆ. ತರಾಜ್ಯದ ಜನರ ಭಾವನೆಯನ್ನು ಪರಿಗಣಿಸುವಲ್ಲಿ ಅಮೆಜಾನ್‌ ವಿಫಲವಾಗಿದೆ. ಯುಎಸ್ ಅಥವಾ ಬ್ರಿಟನ್ ಮತ್ತು ಇತರ ಕೆಲವು ದೇಶಗಳ ಧ್ವಜಗಳನ್ನು ಹೇಗೆ ಬಿಕಿನಿಗಳಲ್ಲಿ ಚಿತ್ರಿಸಿರುತ್ತಾರೆ. ಆದರೆ ಭಾರತದ ಸಂಸ್ಕೃತಿಯಲ್ಲಿ ಯಾವ ರಾಜ್ಯ ಧ್ವಜವನ್ನು ಈ ಮಾದರಿಯಲ್ಲಿ ನೋಡಲು ಯಾರೊಬ್ಬರು ಬಯಸುವುದಿಲ್ಲ.

ಕರ್ನಾಟಕ ಧ್ವಜಕ್ಕೆ ಅವಮಾನ ಮಾಡಿದ ಅಮೆಜಾನ್‌!

ಸದ್ಯ ವಾಟ್ಸಾಪ್ ಫಾರ್ವರ್ಡ್‌ ಸಂದೇಶಗಳನ್ನು ಅನುಸರಿಸಿ, ಕನ್ನಡ ಪರ ಸಂಘಟನೆಯೊಂದು ಅಮೆಜಾನ್ ಇಂಡಿಯಾ ವಿರುದ್ಧ ಪೊಲೀಸ್ ದೂರು ದಾಖಲಿಸಲು ಚಿಂತಿಸುತ್ತಿದೆ, ಎಲ್ಲರೂ ಬಹಿಷ್ಕರಿಸಬೇಕೆಂದು ಮತ್ತು ಇ-ಕಾಮರ್ಸ್ ಸಂಸ್ಥೆಗೆ ಕೆಟ್ಟ ವಿಮರ್ಶೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಸಂದೇಶವು ಕಂಪನಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಇ-ಕಾಮರ್ಸ್ ವಿರುದ್ಧ ಹ್ಯಾಶ್‌ಟ್ಯಾಗ್ ಹಂಚಿಕೊಳ್ಳಲಾಗುತ್ತಿದೆ. ಅಲ್ಲದೆ ಕರ್ನಾಟಕ ಮತ್ತು ಅದರ ಜನರ ಭಾವನೆಗಳನ್ನು ನೋಯಿಸುವಂತಹ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳ ವಿರುದ್ದ ಕಠಿಣ ಕ್ರಮಕ್ಕೆ ಕನ್ನಡಿಗರು ಒತ್ತಾಯಿಸುತ್ತಿದ್ದಾರೆ.

https://publish.twitter.com/?query=https%3A%2F%2Ftwitter.com%2FPRADEEP_GOWDA__%2Fstatus%2F1401123077207986180&widget=Tweet

Best Mobiles in India

Read more about:
English summary
e-commerce giant Amazon has landed into controversy as it has insulted Karnataka flag.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X