Just In
- 1 hr ago
ಸ್ಮಾರ್ಟ್ವಾಚ್ ಇಲ್ಲವೇ ಸ್ಮಾರ್ಟ್ಬ್ಯಾಂಡ್ ಖರೀದಿಸುವ ಪ್ಲ್ಯಾನ್ ಇದ್ರೆ, ಈ ಚಾನ್ಸ್ ಕಳ್ಕೋಬೇಡಿ!
- 2 hrs ago
ಇಯರ್ಫೋನ್ ಖರೀದಿಸುವವರಿಗೆ ಅಮೆಜಾನ್ನಲ್ಲಿ ಸಿಗಲಿದೆ ಬಿಗ್ ಡಿಸ್ಕೌಂಟ್!
- 4 hrs ago
ವಾಟ್ಸಾಪ್, ಟೆಲಿಗ್ರಾಮ್ನಂತಹ ಆಪ್ಗಳ ನಿಯಂತ್ರಣಕ್ಕೆ ಸರ್ಕಾರದಿಂದ ಹೊಸ ಪ್ಲಾನ್!
- 4 hrs ago
ಇಂದು ಇನ್ಫಿನಿಕ್ಸ್ ಹಾಟ್ 12 ಪ್ರೊ ಫಸ್ಟ್ ಸೇಲ್; ಡಿಸ್ಕೌಂಟ್ ಎಷ್ಟು ಗೊತ್ತಾ?
Don't Miss
- Movies
ಉತ್ತರದಲ್ಲಿ ವಿಜಯ್ ದೇವರಕೊಂಡ ಸುನಾಮಿ: ಬಾಲಿವುಡ್ಡಿಗರಿಗೆ ಹೊಟ್ಟೆ ಉರಿ!
- News
KIAL: 2025ಕ್ಕೆ 'ಏರ್ಪೋರ್ಟ್ ಸ್ಮಾರ್ಟ್ಸಿಟಿ 1ನೇ ಹಂತ ಪೂರ್ಣ
- Sports
ಕಾಮನ್ವೆಲ್ತ್ ಗೇಮ್ಸ್ 2022: ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಚಿನ್ನದ ಪದಕ ಗೆದ್ದ ಪಿ.ವಿ ಸಿಂಧು
- Lifestyle
ಬೆಚ್ಚಗಾಗಲು ಬಳಸುವ ರೂಮ್ ಹೀಟರ್ ಎಷ್ಟು ಅಪಾಯಕಾರಿ ಗೊತ್ತಾ?
- Finance
ಮುಕೇಶ್ ಅಂಬಾನಿ ಮಾಸಿಕ ವೇತನ ಕೇಳಿದ್ರೆ ಅಚ್ಚರಿ ಮೂಡುತ್ತೆ!
- Automobiles
ಫೋರ್ಡ್ ಇಂಡಿಯಾದ ಸನಂದ್ ಕಾರ್ಖಾನೆ ಟಾಟಾ ಮೋಟಾರ್ಸ್ ತೆಕ್ಕೆಗೆ: 726 ಕೋಟಿ ರೂ.ಗೆ ಖರೀದಿ
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕದಲ್ಲಿ ಇ-ಆಡಳಿತ: ಲಭ್ಯವಾಗುವ ಸೇವೆಗಳು!
ಒಂದು ಸಮಯದಲ್ಲಿ ಸರ್ಕಾರದ ಯಾವುದೇ ಪ್ರಯೋಜನಗಳನ್ನ ಪಡೆದುಕೊಳ್ಳಬೆಕಾದರೂ ಸರ್ಕಾರಿ ಕಚೇರಿಗಳ ಮುಂದೆ ಕ್ಯೂ ನಿಲ್ಲಬೇಕಾಗಿತ್ತು. ಕೆಲಸ ಕಾರ್ಯ ಮುಗಿಯುವ ತನಕ ದಿನನಿತ್ಯ ಅಲೆದಾಡಬೇಕಾದ ಪರಿಸ್ಥಿತಿ ಇತ್ತು. ಆದರೆ ಇದನ್ನು ತಪ್ಪಿಸಿ ನಾಗರಿಕರಿಗೆ ಸುಲಭವಾಗಿ ಸರ್ಕಾರಿ ಪ್ರಯೋಜನಗಳು ಲಭ್ಯವಾಗುವಂತೆ ಮಾಡಲು ತಂದ ಸುದಾರಣೆಯೆ ಇ-ಆಡಳಿತದ ಕಲ್ಪನೆ. ಇ-ಆಡಳಿತ ವಿಭಾಗವು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಭಾಗವಾಗಿದ್ದು 2003 ರಲ್ಲಿ ರಚನೆ ಮಾಡಲಾಗಿದೆ.

ಹೌದು, ನಾಗರಿಕರು ಸರ್ಕಾರಿ ಇಲಾಖೆಗಳಿಗೆ ಅಲೆಯುವುದನ್ನು ತಪ್ಪಿಸಲು ಮತ್ತು ತ್ವರಿತವಾಗಿ ಕೆಲಸ ಕಾರ್ಯ ನಿರ್ವಹಿಸಲು ಇ-ಆಡಳಿತವನ್ನು ಪರಿಚಯಿಸಲಾಗಿದೆ. ಸರ್ಕಾರದ ಪ್ರಕ್ರಿಯೆಗಳಲ್ಲಿ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವುದು ಇದರ ಉದ್ಧೇಶವಾಗಿರುತ್ತದೆ. ಇನ್ನುಳಿದಂತೆ ಕರ್ನಾಟಕದಲ್ಲಿ ಇ-ಆಡಳಿತದಿಂದಾಗಿ ಆಗಿರುವ ಉಪಯೋಗಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ನು ಜಗತ್ತಿನ ಎಲ್ಲೆಡೆ ಲಭ್ಯವಿರುವ ಇ-ಆಡಳಿತದ ವಿಷಯಗಳನ್ನು ಅಭ್ಯಾಸ ಮಾಡಿ ಈ ಮಾದರಿಯ ಆಡಳಿತವನ್ನು ನಮ್ಮಲ್ಲಿಯೂ ಪರಿಚಯಿಸಲಾಗಿದೆ. ಈ ಇ-ಆಡಳಿತದಲ್ಲಿ ದತ್ತಾಂಶ ಸಂಗ್ರಹಣೆ , ಭದ್ರತೆ , ಪಾವತಿ, ಸ್ಥಳೀಯ ಭಾಷಾ ಅಳವಡಿಕೆ (ಕನ್ನಡ ಭಾಷೆ), ಆನ್ ಲೈನ್ ಸಂಗ್ರಹಣೆ, ಭೌಗೋಳಿಕ ಮಾಹಿತಿ ಸೇವೆ ಇತ್ಯಾದಿಗಳು ಸೇರಿದಂತೆ ಮಾನದಂಡಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದಲ್ಲದೆ ವಿವಿಧ ಇಲಾಖೆಗಳಲ್ಲಿ ಇ-ಆಡಳಿತ ಚಟುವಟಿಕೆಗಳ ಅಭಿವೃದ್ಧಿಯನ್ನು ಅನುವು ಮಾಡಿಕೊಡಲಾಗಿದೆ.

ಮೊಬೈಲ್ ಆಡಳಿತ
ಇನ್ನು ಇ-ಆಡಳಿತದ ಪ್ರಮುಖ ಉದ್ದೇಶಗಳಲ್ಲಿ ಈ ಯೋಜನೆಯ ಉದ್ಧೇಶ ಯಾವುದೇ ಸಮಯದಲ್ಲಿ ಯಾವುದೇ ಸ್ಥಳದಲ್ಲಿ ನಾಗರಿಕರಿಗೆ ಸರ್ಕಾರದ ಅಗತ್ಯ ಸೇವೆಗಳನ್ನು ದೊರಿಕಿಸಿಕೊಡುವುದಕ್ಕೆ ಅವಕಾಶ ಕಲ್ಪಿಸಲಿದೆ. ಈ ಸೇವೆಯಲ್ಲಿ 3,000 ಕ್ಕೂ ಹೆಚ್ಚಿನ ಸೇವೆಗಳು ಲಭ್ಯವಿದೆ.

ಬೆಂಗಳೂರು-ಒನ್
ಬೆಂಗಳೂರಿನ ನಾಗರಿಕರಿಗೆ ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ನೀಡಬೇಕೆಂಬ ಉದ್ಧೇಶದಿಂದ ಈ ಯೋಜನೆಯನ್ನು 2005 ರಲ್ಲಿ ಪ್ರಾರಂಭಿಸಲಾಗಿದೆ. ವಿದ್ಯುತ್ ಬಿಲ್, ವಾಟರ್ ಬಿಲ್ ಸೇರಿದಂತೆ ವಿವಿದ ಬಿಲ್ಲುಗಳ ಪಾವತಿ, ಮಹಾನಗರ ಪಾಲಿಕೆಗಳ ತೆರಿಗೆ ಪಾವತಿ, ಇದಲ್ಲದೆ ಇತರೆ ಅಗತ್ಯ ಸೇವೆಗಳನ್ನು ಈ ಯೋಜನೆಯಲ್ಲಿ ಪಡೆದುಕೊಳ್ಳಬಹುದಾಗಿದೆ.

ಕರ್ನಾಟಕ-ಒನ್
ರಾಜ್ಯದ ಜನತೆಗೆ ಬೆಂಗಳೂರು-ಒನ್ ಕೇಂದ್ರಗಳ ಮಾದರಿಯಲ್ಲಿಯೇ ಕರ್ನಾಟಕ-ಒನ್ ಕೇಂದ್ರಗಳನ್ನು ರಾಜ್ಯ ಸರ್ಕಾರ ರಾಜ್ಯದ 9 ಮಹಾನಗರಗಳಲ್ಲಿ ಪರಿಚಯಿಸಿದೆ. ಈ ಸೇವೆಯ ಮೂಲಕ ಆಯಾ ಜಿಲ್ಲೆಗಳ ಮಾಹಿತಿ, ಆಯಾ ಜಿಲ್ಲೆಳಲ್ಲಿ ಲಭ್ಯವಾಗುವ ಸೇವೆಗಳನ್ನ ಈ ಸೇವೆ ಒದಗಿಸಿದೆ. ಈ ಸೇವೆಯನ್ನು ಮಹಾನಗರಗಳಾದ ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಬೆಳಗಾಂ, ಬಳ್ಳಾರಿ, ಮೈಸೂರು, ಮಂಗಳೂರು, ದಾವಣಗೆರೆ, ಗುಲ್ಬರ್ಗಾ ಮತ್ತು ತುಮಕೂರು ನಗರಗಳಲ್ಲಿ ಪರಿಚಯಿಸಲಾಗಿದೆ.

ಕರ್ನಾಟಕ ರೆಸಿಡೆಂಟ್ ಡೆಟಾ ಹಬ್ (KRDH)
ಕರ್ನಾಟಕ ರೆಸಿಡೆಂಟ್ ಡೆಟಾ ಹಬ್ (KRDH) ಸೇವೆಯು ಸರ್ಕಾರದ ಸೇವೆಗಳನ್ನು ಪಡೆಯುತ್ತಿರುವ ರಾಜ್ಯದ ಪ್ರತಿಯೊಬ್ಬ ನಾಗರೀಕನ ಮಾಹಿತಿಯನ್ನು ಒಳಗೊಂಡ ಸೇವೆಯಾಗಿದೆ. ಇ-ಆಡಳಿತದಲ್ಲಿ ಇದು ಪ್ರಮುಖ ಸೇವೆಯಾಇದ್ದು, ಇದರಲ್ಲಿ ರಾಜ್ಯದ ಪ್ರತಿಯೊಬ್ಬ ಪಲಾನುಭವಿಯ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ. ಇಲಾಖೆಗಳ ಡೆಟಾ ಬೇಸ್ ನಲ್ಲಿ ಫಲಾನುಭವಿಗಳನ್ನು ಅವರ ಯುಐಡಿ ಸಂಖ್ಯೆಯೊಡನೆ ಕೆ.ಆರ್.ಡಿ.ಹೆಚ್ ನ ಡೆಟಾಬೇಸ್ ನಲ್ಲಿ ಸಂಗ್ರಹಿಸಲಾಗಿರುತ್ತೆ.

ಕರ್ನಾಟಕ ರಾಜ್ಯ ವಿಸ್ತೃತ ಜಾಲ ಯೋಜನೆ (ಕೆಸ್ವಾನ್) (KSWAN)
ಈ ಸೇವೆಯು ಸೇವೆಗಳನ್ನು ಪಡೆಯಲು ಅನುಕೂಲವಾಗಿವಂತೆ ಒಂದು ನಿಖರವಾದ ವ್ಯವಸ್ಥೆಯನ್ನು ಕಲ್ಪಿಸಿದೆ. ಇದು ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕುಮಟ್ಟದ 3 ಹಂತದಲ್ಲಿ ಜೋಡಣೆಯಾಗಿದೆ. ಇದರ ಪ್ರಮುಖ ಉದ್ಧೇಶ "ದತ್ತಾಂಶ" "ಧ್ವನಿ" ಮತ್ತು "ದೃಷ್ಯ" ಸೇವೆಗಳಿಗೆ ಆಧಾರ ಸ್ತಂಭವಾಗಿರುವುದಾಗಿದೆ.

ಇ ಜಿಲ್ಲೆ
ಈ ಯೋಜನೆಯು ರಾಷ್ಟ್ರೀಯ ಇ-ಆಡಳಿತ ಯೋಜನೆಯಡಿ ಮಿಷನ್ ಮೋಡ್ ಪ್ಲ್ಯಾನ್‌ನ ಅಂಗವಾಗಿದೆ. ಇದು ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯು ಇದರ ಸಮನ್ವಯ ಇಲಾಖೆಯಾಗಿದ್ದು, ರಾಜ್ಯ ಸರ್ಕಾರ ಅಥವಾ ಅದರಿಂದ ನಾಮನಿರ್ದೇಶಿತವಾದ ಸಂಸ್ಥೆಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸಬಹುದಾಗಿದೆ.

ಸಾಮಾನ್ಯ ಸೇವಾ ಕೇಂದ್ರಗಳು
ಈ ಸೇವೆಯು ಉತ್ತಮ ಗುಣಮಟ್ಟದ ಮತ್ತು ದುಬಾರಿಯಲ್ಲದ ಇ-ಆಡಳಿತ ವ್ಯಾಪ್ತಿಯನ್ನು ಹೊಂದಿವೆ. ಈ ಸಾಮಾನ್ಯ ಸೇವಾ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಮಟ್ಟದಲ್ಲಿವೆ. ಗ್ರಾಮೀಣ ಮಟ್ಟದಲ್ಲಿ ವೆಬ್ ಆಧಾರಿತ ಇ-ಆಡಳಿತ ಸೇವೆಗಳನ್ನು ನೀಡಲಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086