ಅಸಂಘಟಿತ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರದಿಂದ ಇ-ಶ್ರಮ ಪೋರ್ಟಲ್ ಪ್ರಾರಂಭ!

|

ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರ ಪಾಲಿಗೆ ಶುಭ ಸುದ್ದಿಯನ್ನು ನೀಡಿದೆ. ಅಸಂಘಟಿತವಾಗಿರುವ ಕಾರ್ಮಿಕರ ಡೇಟಾಬೇಸ್‌ ಅನ್ನು ನಿರ್ವಹಿಸುವುದು ಇತ್ತಿಚಿನ ದಿನಗಳಲ್ಲಿ ಅವಶ್ಯಕವಾಗಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರ ಡೇಟಾಬೇಸ್ ಅನ್ನು ನಿರ್ವಹಿಸುವ ಉದ್ದೇಶದಿಂದ ಇ-ಶ್ರಮ ಪೋರ್ಟಲ್ ಅನ್ನು ಪರಿಚಯಿಸಿದೆ. ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ (ಇ-ಶ್ರಮ) ಪೋರ್ಟಲ್ ಅನ್ನು ಇಂದು ಲಾಂಚ್‌ ಮಾಡಿದೆ.

ಅಸಂಘಟಿತ

ಹೌದು, ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಒಂದು ಫೋರ್ಟಲ್‌ ಅನ್ನು ತೆರೆದಿದೆ. ಇಂದು ಮಧ್ಯಾಹ್ನದಿಂದಲೇ ಈ ಪೋರ್ಟಲ್‌ ಶುರುವಾಗಿದ್ದು, ಅಸಂಘಟಿತ ವಲಯದ ಕಾರ್ಮಿಕರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಈಗಾಗಲೇ ಇ-ಶ್ರಮ ಪೋರ್ಟಲ್‌ಗಾಗಿ ಲೋಗೋವನ್ನು ಈ ವಾರದ ಆರಂಭದಲ್ಲಿಯೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು. ಸದ್ಯ ಪ್ರಾರಂಭವಾಗಿರುವ ಇ-ಶ್ರಮ ಪೋರ್ಟಲ್‌ ನಲ್ಲಿ ಕಾರ್ಮಿಕರು ತಮ್ಮ ಹೆಸರನ್ನು ನೋದಾಯಿಸಿಕೊಳ್ಳುವುದು ಹೇಗೆ? ಇದರ ಉಪಯೋಗ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇ-ಶ್ರಮ ಪೋರ್ಟಲ್ ವಿಶೇಷತೆ ಏನು? ಇದರ ಉದ್ದೇಶ ಏನು?

ಇ-ಶ್ರಮ ಪೋರ್ಟಲ್ ವಿಶೇಷತೆ ಏನು? ಇದರ ಉದ್ದೇಶ ಏನು?

* ಇ-ಶ್ರಮ ಪೋರ್ಟಲ್ ದೇಶದ ಅಸಂಘಟಿತ ವಲಯದ ಕಾರ್ಮಿಕರ ಡೇಟಾಬೇಸ್ ಅನ್ನು ನಿರ್ವಹಿಸುತ್ತದೆ.

* ಕೇಂದ್ರ ಸರ್ಕಾರದ ಪ್ರಕಾರ, ಕಾರ್ಮಿಕರು ತಮ್ಮ ಆಧಾರ್ ಕಾರ್ಡ್ ಸಂಖ್ಯೆಗಳು ಮತ್ತು ಬ್ಯಾಂಕ್ ಖಾತೆ ವಿವರಗಳ ಸಹಾಯದಿಂದ ಪೋರ್ಟಲ್ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು.

* ಕೆಲಸಗಾರರು ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ಊರು ಮತ್ತು ಸಾಮಾಜಿಕ ವರ್ಗದಂತಹ ಇತರ ಪ್ರಮುಖ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.

* ಅಸಂಘಟಿತ ವಲಯದ ಕಾರ್ಮಿಕರನ್ನು ಹೊಸ ಇ-ಶ್ರಮ ಪೋರ್ಟಲ್ ಕಲ್ಯಾಣ ಯೋಜನೆಗಳನ್ನು ನೇರವಾಗಿ ಅವರ ಮನೆಬಾಗಿಲಿಗೆ ತರಲು ಸಹಾಯ ಮಾಡುತ್ತದೆ.

ರಾಷ್ಟ್ರೀಯ

* ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ (ಇ-ಶ್ರಾಮ್ ಪೋರ್ಟಲ್) ಈ "ಉದ್ದೇಶಿತ ವಿತರಣೆ" ಮಿಷನ್ ಸಾಧಿಸುವ ಇನ್ನೊಂದು ಪ್ರಮುಖ ಹೆಜ್ಜೆಯಾಗಿದೆ, ಇದು ಲಕ್ಷಾಂತರ ಜನರ ಸಾಮಾಜಿಕ ಭದ್ರತೆಗೆ "ಗೇಮ್-ಚೇಂಜರ್" ಆಗಿರುತ್ತದೆ.

* ಇ-ಶ್ರಮ ಪೋರ್ಟಲ್ ಸಹಾಯದಿಂದ, ಕೇಂದ್ರ ಸರ್ಕಾರವು 38 ಕೋಟಿ ಅಸಂಘಟಿತ ಕಾರ್ಮಿಕರನ್ನು ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಮತ್ತು ಗೃಹ ಕಾರ್ಮಿಕರು ಸೇರಿದಂತೆ ನೋಂದಾಯಿಸುವ ಗುರಿಯನ್ನು ಹೊಂದಿದೆ.

* ರಾಷ್ಟ್ರೀಯ ಟೋಲ್ -ಫ್ರೀ ಸಂಖ್ಯೆ - 14434 - ತಮ್ಮನ್ನು ನೋಂದಾಯಿಸಿಕೊಳ್ಳಲು ಬಯಸುವ ಕಾರ್ಮಿಕರ ಪ್ರಶ್ನೆಗಳಿಗೆ ಸಹಾಯ ಮಾಡಲು ಮತ್ತು ಪರಿಹರಿಸಲು ಸಹ ಪ್ರಾರಂಭಿಸಲಾಗುವುದು.

* ಈ ಪೋರ್ಟಲ್ ಆರಂಭದ ವಿಳಂಬದ ಕುರಿತು ಸರ್ಕಾರವನ್ನು ಸುಪ್ರೀಂ ಕೋರ್ಟ್ ಹಿಂದೆಯೇ ಎಚ್ಚರಿಸಿತ್ತು. ಜೂನ್ 10 ರಂದು, ಸರ್ವೋಚ್ಚ ನ್ಯಾಯಾಲಯದ ಪೀಠವು ಸರ್ಕಾರಕ್ಕೆ ಒತ್ತಡ ಹೇರಿದ್ದು, ನೋಂದಣಿ "ಮಾಡ್ಯೂಲ್" ಅನ್ನು ಮಾತ್ರ ರಚಿಸಬೇಕಾಗಿರುವುದರಿಂದ, ಸರ್ಕಾರ ಅದಕ್ಕಾಗಿ ಏಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದೆ ಎಂದು ಹೇಳಿತ್ತು.

Best Mobiles in India

English summary
E-Shram portal will maintain a database of workers in the country’s unorganised sector.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X