ಕಳೆದ 1.2 ಲಕ್ಷ ವರ್ಷಗಳಲ್ಲೇ ಭೂಮಿ ಈ ಪರಿ ಬಿಸಿಯಾಗಿರಲಿಲ್ಲ!!

|

ದಿನೇ ದಿನೇ ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನ ಹಿನ್ನಲೆಯಲ್ಲಿ ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ತಾಪಮಾನ ಏರಿಕೆ ಸಂಬಂಧ ಅಧ್ಯಯನ ನಡೆಸಿ ಶಾಕಿಂಗ್ ಮಾಹಿತಿಯನ್ನು ಹೊರಹಾಕಿದೆ. ಕಳೆದ 1.2 ಲಕ್ಷ ವರ್ಷಗಳಲ್ಲೇ ಭೂಮಿ ಈ ಪರಿ ಬಿಸಿಯಾಗಿರಲಿಲ್ಲ ಎಂಬ ಮಾಹಿತಿಯನ್ನು ನಾಸಾ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.

ತಾಪಮಾನ ಏರಿಕೆಯ ದಾಖಲೆ 1880ರಿಂದಲೇ ಆರಂಭಗೊಂಡಿದ್ದು, ಹವಮಾನ ತಜ್ಞರ ಪ್ರಕಾರ ,ಹಿಂದೆಂದೂ ಕಂಡರಿಯದ ಉಷ್ಣತೆಯನ್ನು ಭೂಮಿ ಅನುಭವಿಸುತ್ತಿದೆ. ನಾಸಾ ವರದಿಯನ್ವಯ ಈ ವರ್ಷದ ಜುಲೈ ತಿಂಗಳು ಅತ್ಯಂತ ಗರಿಷ್ಠ ತಾಪಮಾನ ಹೊಂದಿದೆ. ಜಾಗತಿಕ ತಾಪಮಾನ 1,20,000 ವರ್ಷಗಳ ಅವಧಿಯಲ್ಲಿ ಈ ಪ್ರಮಾಣದ ಉಷ್ಣತೆ ಏರಿಕೆಯಾಗಿಲ್ಲ ಎನ್ನಲಾಗಿದೆ.

ಕಳೆದ 1.2 ಲಕ್ಷ ವರ್ಷಗಳಲ್ಲೇ ಭೂಮಿ ಈ ಪರಿ ಬಿಸಿಯಾಗಿರಲಿಲ್ಲ!!

ಕಳೆದ ಒಂದು ಲಕ್ಷದ 20 ಸಾವಿರ ವರ್ಷಗಳಲ್ಲೇ ಭೂಮಿ ಇಷ್ಟರ ಮಟ್ಟಿಗೆ ಬಿಸಿಯಾಗಿರಲಿಲ್ಲ. ಭೂಮಿಯ ಮೇಲಿನ ಉಷ್ಣತೆ ಏರಿಕೆಗೆ ಪ್ರಮುಖ ಕಾರಣ ಎಲ್ಲರಿಗೂ ಗೊತ್ತಿರುವಂತೆ ನಿಯಂತ್ರಣವಿಲ್ಲದ ಹಸಿರುಮನೆ ಅನಿಲ ಬಿಡುಗಡೆ. ಹಾಗಾಗಿ, ತಾಪಮಾನ ಏರಿಕೆ ತಡೆಯುವ ನಿಟ್ಟಿನಲ್ಲಿ ಏನಾದರೂ ಮಾಡಲೇಬೇಕಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಮಿತಿ ಮೀರುತ್ತಿರುವ ವಾಹನಗಳ ಬಳಕೆ, ಹೊಗೆ ಉಗುಳುವ ಕಾರ್ಖಾನೆಗಳ ನಿಯಂತ್ರಣ, ಕೈಗಾರಿಕೆಗಳು ಹಾಗೂ ಅರಣ್ಯನಾಶ ಸೇರಿದಂತೆ ಹಲವು ವಿಚಾರಗಳು ಜಾಗತಿಕ ತಾಪಮಾನ ಏರಿಕೆಗೆ ಕಾರಣ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇವುಗಳನ್ನು ಮಟ್ಟಹಾಕದಿದ್ದರೆ, ಭವಿಷ್ಯದಲ್ಲಿ ಭೂಮಿ ತಾಪಮಾನ ಹೆಚ್ಚಿದಂತೆ ಜೀವ ಸಂಕುಲವೇ ಅಪಾಯಕ್ಕೆ ಸಿಲುಕಲಿದೆ ಎಂದಿದ್ದಾರೆ.

ಕಳೆದ 1.2 ಲಕ್ಷ ವರ್ಷಗಳಲ್ಲೇ ಭೂಮಿ ಈ ಪರಿ ಬಿಸಿಯಾಗಿರಲಿಲ್ಲ!!

ಇನ್ನು ಜಾಗತಿಕ ತಾಪಮಾನ ಏರಿಕೆ ಸಂಬಂಧ ಯೋಜನೆ ಕೈಗೊಂಡಿರುವ ನಾಸಾ ಇದಕ್ಕಾಗಿ 1 ಬಿಲಿಯನ್ ಡಾಲರ್ ಹಣವನ್ನು ವಿನಿಯೋಗಿಸುತ್ತಿದೆ. ಉತ್ತರ ದ್ರುವದಲ್ಲಿರುವ ಮಂಜಿನ ನೀರ್ಗಲ್ಲುಗಳು ಕರಗುವ ಪ್ರಕ್ರಿಯೆ ಹೆಚ್ಚಾಗಿದ್ದು, ಹಿಂದೆಂಗಿತಲೂ ಅಲ್ಲಿನ ನೀರ್ಗಲ್ಲುಗಳು ವೇಗವಾಗಿ ಕರಗುತ್ತಿವೆ.ಇದು ಭೂಮಿಗೆ ನಿಜಕ್ಕೂ ಅಪಾಯಕಾರಿ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Best Mobiles in India

English summary
Most climate scientists agree the main cause of the current global warming trend is. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X