ಮಕ್ಕಳು ಸ್ಮಾರ್ಟ್‌ಫೋನ್ ಮುಟ್ಟಿದರೆ ಸಾಕು ಅದರ ಕಾರ್ಯಗಳು ನಿಷ್ಕ್ರಿಯವಾಗುತ್ತವೆ!!

ಮಕ್ಕಳು ಮೊಬೈಲ್ ಫೋನ್ ಬಳಸಿ ಹಾಳಾಗುತ್ತಿದ್ದಾರೆ ಎಂಬ ಭಯ ನಿಮಗಿದೆಯೇ? ಹಾಗಾದರೆ, ನಿಮಗೊಂದು ಸಿಹಿ ಸುದ್ದಿ ಇದೆ.!

|

ಮಕ್ಕಳು ಮೊಬೈಲ್ ಫೋನ್ ಬಳಸಿ ಹಾಳಾಗುತ್ತಿದ್ದಾರೆ ಎಂಬ ಭಯ ನಿಮಗಿದೆಯೇ? ಹಾಗಾದರೆ, ನಿಮಗೊಂದು ಸಿಹಿ ಸುದ್ದಿ ಇದೆ.! ನಿಮ್ಮ ಮಕ್ಕಳ ಕೈಗೆ ಮೊಬೈಲ್ ಫೋನ್ ಸಿಕ್ಕರೂ ಕೂಡ ಅದನ್ನು ಕೆಟ್ಟದ್ದಕ್ಕೆ ಬಳಸಲು ಸಾಧ್ಯವಾಗದಂತಹ ತಂತ್ರಜ್ಞಾನವನ್ನು ಸಂಶೋಧಕರು ಅಭಿವೃದ್ದಿಪಡಿಸಿದ್ದಾರೆ.!!

ಮಕ್ಕಳು ಸ್ಮಾರ್ಟ್‌ಫೋನ್ ಮುಟ್ಟಿದರೆ ಸಾಕು ಅದರ ಕಾರ್ಯಗಳು ನಿಷ್ಕ್ರಿಯವಾಗುತ್ತವೆ!!

ಮಕ್ಕಳ ಕೈಗೆ ಮೊಬೈಲ್ ಫೋನ್‌ ಸಿಗದಂತೆ ನೋಡಿಕೊಳ್ಳಲು ಪರದಾಡುವ ಪೋಷಕರಿಗಿದು ವರದಾನವಾಗಿದ್ದು, ಮಕ್ಕಳು ಸ್ಮಾರ್ಟ್‌ಪೋನ್‌ ಬಳಸಲು ಪರದೆಯ ಮೇಲೆ ಬೆರಳು ಆಡಿಸುತ್ತಿದ್ದಂತೆಯೇ ಸ್ಮಾರ್ಟ್‌ಫೋನಿನ ಕೆಲವು ಕಾರ್ಯಗಳು ನಿಷ್ಕ್ರಿಯವಾಗಿ ಬಿಡುತ್ತವೆ.!! ಹಾಗಾದರೆ ಏನಿದು ತಂತ್ರಜ್ಞಾನ ಎಂಬುದನ್ನು ಮುಂದೆ ಓದಿ ತಿಳಿಯಿರಿ.!!

ಏನಿದು ನೂತನ ತಂತ್ರಜ್ಞಾನ?

ಏನಿದು ನೂತನ ತಂತ್ರಜ್ಞಾನ?

ಮಕ್ಕಳು ಸ್ಮಾರ್ಟ್‌ಪೋನ್‌ ಬಳಸಲು ಪರದೆಯ ಮೇಲೆ ಬೆರಳು ಆಡಿಸುತ್ತಿದ್ದಂತೆಯೇ ಅದರಲ್ಲಿರುವ ಮಕ್ಕಳಿಗೆ ನಿಷಿದ್ಧವಾದ ಕೆಲವು ಆಪ್‌, ಅಶ್ಲೀಲ ಅಂತರ್ಜಾಲ ತಾಣ, ಇ-ಮೇಲ್‌ ಸ್ವಯಂ ನಿಷ್ಕ್ರಿಯವಾಗಿ ಬಿಡುವ ತಂತ್ರಜ್ಞಾನ ಇದಾಗಿದೆ. ಇದರಿಂದ ಪೋಷಕರು ಇನ್ನ ನಿರಾಳರಾಗಬಹುದು.!!

ತಂತ್ರಜ್ಞಾನ ಕಂಡುಹಿಡಿದವರು ಯಾರು?

ತಂತ್ರಜ್ಞಾನ ಕಂಡುಹಿಡಿದವರು ಯಾರು?

ಸ್ಮಾರ್ಟ್‌ಫೋನ್‌ಗಳಿಂದ ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರುವುದನ್ನು ತಡೆಯುವ ಸಲುವಾಗಿ ಇಂಥದೊಂದು ಹೊಸ ತಂತ್ರಜ್ಞಾನವನ್ನು ಅಮೆರಿಕದ ದಕ್ಷಿಣ ಕೆರೋಲಿನಾ ಮತ್ತು ಚೀನಾದ ಝೆಜಿಯಾಂಗ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ತಂತ್ರಜ್ಞಾನ  ಹೇಗೆ ಕೆಲಸ ಮಾಡುತ್ತದೆ?

ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?

ಸ್ಮಾರ್ಟ್‌ಫೋನ್‌ ಬಳಸುವ ವ್ಯಕ್ತಿಯ ವಯಸ್ಸನ್ನು ನಿಖರವಾಗಿ ಗುರುತಿಸುವ ಸಾಮರ್ಥ್ಯ ಈ ತಂತ್ರಜ್ಞಾನ ಹೊಂದಿದೆ.ಸ್ಮಾರ್ಟ್‌ಫೋನ್‌ ಪರದೆಯ ಮೇಲೆ ಮಕ್ಕಳು ಮತ್ತು ದೊಡ್ಡವರು ಬೆರಳಾಡಿಸುವ ವಿಧಾನದಲ್ಲಿ ಭಾರಿ ವ್ಯತ್ಯಾಸವಿರುವುದರಿಂದ ಮಕ್ಕಳನ್ನು ಗುರುತಿಸಿ ತಂತ್ರಜ್ಞಾನ ಕೆಲಸ ನಿಲ್ಲಿಸುತ್ತದೆ.!!

ತಂತ್ರಜ್ಞಾನ ಬರುವುದು ಯಾವಾಗ?

ತಂತ್ರಜ್ಞಾನ ಬರುವುದು ಯಾವಾಗ?

ಮಕ್ಕಳಿಗೆ ನಿಷಿದ್ಧವಾದ ಕೆಲವು ಆಪ್‌, ಅಶ್ಲೀಲ ಅಂತರ್ಜಾಲ ತಾಣ, ಇ-ಮೇಲ್‌ ಸ್ವಯಂ ನಿಷ್ಕ್ರಿಯವಾಗಿ ಬಿಡುವ ತಂತ್ರಜ್ಞಾನ ಈಗಷ್ಟೆ ಅಭಿವೃದ್ದಿಯಾಗಿದೆ. ಆಪ್ ಮೂಲಕ ಕೆಲಸ ಮಾಡಲಿದೆ ಎಂದು ಹೇಳಲಾಗಿರುವ ಈ ತಂತ್ರಜ್ಞಾನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವ ವಿಶ್ವಾಸವನ್ನು ಸಂಶೋಧಕರು ಹೊಂದಿದ್ದಾರೆ.!!

How to view all photos, pages, comments and posts you liked on Facebook (KANNADA)
ತಂತ್ರಜ್ಞಾನದ ಮಿತಿ ಏನು?

ತಂತ್ರಜ್ಞಾನದ ಮಿತಿ ಏನು?

ಸ್ಮಾರ್ಟ್‌ಫೋನ್‌ಗಳು ಮಕ್ಕಳನ್ನು ನಿಯಂತ್ರಿಸುತ್ತವೆಯಾದರೂ ಕೆಲವು ವಯಸ್ಕ ಮಕ್ಕಳಿಗೆ ಈ ತಂತ್ರಜ್ಞಾನ ಕಾರ್ಯನಿರ್ವಹಣೆ ನೀಡುವಲ್ಲಿ ಎಡವಿದೆ ಎನ್ನಲಾಗಿದೆ.! ಈ ತಂತ್ರಜ್ಞಾನದಲ್ಲಿ ದೊಡ್ಡ ವಯಸ್ಕ ಮಕ್ಕಳನ್ನು ಬಿಯಂತ್ರಿಸಲು ಸಾಧ್ಯವಾಗಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.!!

2020 ಕ್ಕೆ ನಾವು ಬಳಕೆ ಮಾಡಬಹುದಾದ ಭವಿಷ್ಯದ ತಂತ್ರಜ್ಞಾನಗಳು ಇವು!!2020 ಕ್ಕೆ ನಾವು ಬಳಕೆ ಮಾಡಬಹುದಾದ ಭವಿಷ್ಯದ ತಂತ್ರಜ್ಞಾನಗಳು ಇವು!!

Best Mobiles in India

English summary
Once you master these kid-conscious Android and iPhone features, you'll be able to hand your precious phone to your little one with confidence. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X