Home
ಸುದ್ದಿಜಾಲ

ಬೆಂಗಳೂರಿನಲ್ಲಿ 45 ನಿಮಿಷಗಳ ಫ್ಲಿಪ್‌ಕಾರ್ಟ್ ಕ್ವಿಕ್ ಡೆಲಿವರಿ ಸರ್ವಿಸ್ ಪ್ರಾರಂಭ !

ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಫ್ಲಿಪ್‌ಕಾರ್ಟ್‌ ತನ್ನ ಆನ್‌ಲೈನ್‌ ಗ್ರಾಹಕರಿಗಾಗಿ ವಿಶೇಷ ಸೇವೆಗಳನ್ನು ನೀಡುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಗ್ರಾಹಕರಿಗೆ ಹೊಸ 'ಫ್ಲಿಪ್‌ಕಾರ್ಟ್ ಕ್ವಿಕ್ ಡೆಲಿವರಿ ಸೇವೆ'ಯನ್ನು ಪರಿಯಚಯಿಸಿದೆ. ಈ ಸೇವೆಯ ಮೂಲಕ ಗ್ರಾಹಕರು ಆರ್ಡರ್‌ ಮಾಡಿದ ದಿನಸಿ ಐಟಂಗಳನ್ನು ಕೇವಲ 45 ನಿಮಿಷಗಳಲ್ಲಿ ಡೋರ್ ಡೆಲಿವರಿ ಮಾಡಲಿದೆ. ಈ ಕ್ವಿಕ್ ಡೆಲಿವರಿ ಸೇವೆಯ ಮೂಲಕ ಡೋರ್‌ ಡೆಲಿವರಿ ಸಮಯವನ್ನು 90 ನಿಮಿಷಗಳಿಂದ 45 ನಿಮಿಷಗಳಿಗೆ ಕಡಿಮೆ ಮಾಡಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ತನ್ನ ಕ್ವಿಕ್‌ ಡೆಲಿವರಿ ಸೇವೆಯಲ್ಲಿ ಹೊಸ ಬದಲಾವಣೆಯನ್ನು ಪರಿಚಯಿಸಿದೆ. ಇದರ ಮೂಲಕ ಕೇವಲ 45 ನಿಮಿಷಗಳಲ್ಲಿ ಡೋರ್‌ ಡೆಲಿವರಿ ನೀಡಲಿದೆ. ಪ್ರಸ್ತುತ ಈ ಸೇವೆ ಬೆಂಗಳೂರಿನಲ್ಲಿ ಲಭ್ಯವಿದ್ದು, ಮುಂದಿನ ತಿಂಗಳ ವೇಳೆಗೆ ಹೆಚ್ಚಿನ ನಗರಗಳಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ಬ್ಲಿಂಕಿಟ್‌, ಜೆಪ್ಟೋ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಮತ್ತು ಡುಂಜೋನಂತಹ ಇ-ಕಾಮರ್ಸ್ ಕಂಪನಿಗಳು ಗ್ರಾಹಕರಿಗೆ ಕೇವಲ 15-20 ನಿಮಿಷಗಳಲ್ಲಿ ದಿನಸಿ ಪ್ರಾಡಕ್ಟ್‌ಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿರೊದ್ರಿಂದ ಫ್ಲಿಪ್‌ಕಾರ್ಟ್‌ ಈ ಹೊಸ ನಿರ್ಧಾರಕ್ಕೆ ಬಂದಿದೆ. ಇನ್ನುಳಿದಂತೆ ಫ್ಲಿಪ್‌ಕಾರ್ಟ್‌ನ ಹೊಸ ಸೇವೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್ ಕ್ವಿಕ್‌ ಡೆಲಿವರಿ ಸಮಯವನ್ನು 45 ನಿಮಿಷಗಳಿಗೆ ಇಳಿಸಿದೆ ಈ ಮೂಲಕ ಗ್ರಾಹಕರಿಗೆ ಅದಷ್ಟು ವೇಗವಾಗಿ ಡೋರ್‌ ಡೆಲಿವರಿ ಸೇವೆ ನೀಡಲು ಮುಂದಾಗಿದೆ. ಫ್ಲಿಪ್‌ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಹೇಳಿರುವಂತೆ ತಮ್ಮ ಗ್ರಾಹಕರಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಸುಸ್ಥಿರ ವ್ಯವಹಾರಕ್ಕೆ ಅವಕಾಶವಿದೆ ಎಂದಿದ್ದಾರೆ. ಇದಕ್ಕಾಗಿ ಕಂಪನಿಯು 45 ನಿಮಿಷಗಳು ಮತ್ತು 90 ನಿಮಿಷಗಳ ತ್ವರಿತ ವಿತರಣಾ ಸೇವೆಯನ್ನು ನೀಡಲಿದೆ. 90 ನಿಮಿಷಗಳ ಡೆಲಿವರಿ ಸೇವೆಯು ಪ್ರಸ್ತುತ 14 ನಗರಗಳಲ್ಲಿ ಲಭ್ಯವಿದೆ. ಆದರೆ 2022ರ ಅಂತ್ಯದ ವೇಳೆಗೆ, ಇದು ದೇಶದ 200ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಲು ಯೋಜಿಸಿದೆ.

ಉತ್ತಮ

ಉತ್ತಮ ಮೌಲ್ಯ ಮತ್ತು ಆಯ್ಕೆಯೊಂದಿಗೆ ಡೋರ್‌ಡೆಲಿವರಿ ನೀಡುವುದಕ್ಕೆ 45 ನಿಮಿಷಗಳ ಅಗತ್ಯವಿದೆ ಎಂದಯ ಫ್ಲಿಪ್‌ಕಾರ್ಟ್‌ ಹೇಳಿದೆ. ಮಾರುಕಟ್ಟೆಯಲ್ಲಿ ಇಲ್ಲದಿರುವ ಗ್ರಾಹಕರ ಅಗತ್ಯವನ್ನು ಪೂರೈಸುವ ಅನುಕೂಲಕರ ವ್ಯವಹಾರವನ್ನು ಮಾಡುವುದಕ್ಕೆ ನಾವು ಬಯಸುತ್ತೇವೆ ಎಂದು ಹೇಳಿದೆ. ಇದಲ್ಲದೆ ಪ್ರಸ್ತುತ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಮಾತ್ರ ಲಭ್ಯವಿರುವ ಫ್ರೆಶ್ ವೆಜಿಟೇಬಲ್ ಸೇವೆ, ಶೀಘ್ರದಲ್ಲೇ ಹೆಚ್ಚಿನ ನಗರಗಳಿಗೆ ತನ್ನ ಫ್ರೂಟ್‌ ಡೋರ್ ಡೆಲಿವರಿ ಸೇವೆಯನ್ನು ವಿಸ್ತರಿಸಲು ಪ್ಲಾನ್‌ ಮಾಡಿಕೊಂಡಿದೆ.

ಫ್ಲಿಪ್‌ಕಾರ್ಟ್

ಹಾಗೇ ನೋಡಿದ್ರೆ ಫ್ಲಿಪ್‌ಕಾರ್ಟ್ ಕ್ವಿಕ್ ಡೆಲಿವರಿ ಸೇವೆಯನ್ನು ಕಳೆದ ವರ್ಷ ಪ್ರಾರಂಭ ಮಾಡಿತ್ತು. ಈ ಸೇವೆಯಲ್ಲಿ ದಿನಸಿ, ತಾಜಾ ಉತ್ಪನ್ನಗಳು, ಡೈರಿ, ಮಾಂಸ, ಮೊಬೈಲ್ ಫೋನ್‌ಗಳು, ಎಲೆಕ್ಟ್ರಾನಿಕ್ಸ್ ಪರಿಕರಗಳು, ಸ್ಟೇಷನರಿ ವಸ್ತುಗಳು ಮತ್ತು ಮನೆಯ ಪರಿಕರಗಳಂತಹ ವರ್ಗಗಳಲ್ಲಿ 2000 ಕ್ಕೂ ಹೆಚ್ಚು ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಇದರಲ್ಲಿ ಗ್ರಾಹಕರು ತಮ್ಮ ಉತ್ಪನ್ನಗಳನ್ನು ಆಯ್ಕೆ ಮಾಡಬಹುದು ಮತ್ತು ಮುಂದಿನ 90 ನಿಮಿಷಗಳು ಅಥವಾ ವಿತರಣೆಗಾಗಿ 2 ಗಂಟೆಗಳ ಕಾಲ ಸ್ಲಾಟ್ ಅನ್ನು ಬುಕ್ ಮಾಡಬಹುದು. ಇದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯವರೆಗೆ ಲಭ್ಯವಿರಲಿದೆ.

ಫ್ಲಿಪ್‌ಕಾರ್ಟ್‌

ಇದಲ್ಲದೆ ಫ್ಲಿಪ್‌ಕಾರ್ಟ್‌ ಇತ್ತೀಚಿಗೆ ತನ್ನ ಗ್ರಾಹಕರಿಗೆ ಹಳೆಯ ಫೋನ್‌ ಸೇಲ್‌ ಮಾಡಲು ಹೊಸ ಪ್ರೋಗ್ರಾಂ ಪರಿಚಯಿಸಿದೆ. ಫ್ಲಿಪ್‌ಕಾರ್ಟ್‌ನ ಸೆಲ್‌ ಬ್ಯಾಕ್‌ ಪ್ರೋಗ್ರಾಂ ನಲ್ಲಿ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಸೇಲ್‌ ಮಾಡುವುದಕ್ಕೆ ಉತ್ತಮ ಅವಕಾಶ ನೀಡಲಿದೆ. ಸದ್ಯ ಈ ಪ್ರೋಗ್ರಾಂ ಇದೀಗ ದೆಹಲಿ, ಕೋಲ್ಕತ್ತಾ ಮತ್ತು ಪಾಟ್ನಾದಂತಹ ನಗರಗಳಲ್ಲಿ 1,700 ಪಿನ್ ಕೋಡ್‌ಗಳಲ್ಲಿ ಲೈವ್ ಆಗಿದೆ. ಈ ಪ್ರೋಗ್ರಾಂ ಎಲ್ಲಾ ಮೊಬೈಲ್ ಫೋನ್‌ಗಳಿಗೆ ಅನ್ವಯಿಸುತ್ತದೆ ಎಂದು ಹೇಳಲಾಗಿದೆ.

Best Mobiles in India

English summary
Ecommerce giant Flipkart will now have door delivery of groceries in just 45 minutes through the ‘Flipkart Quick Delivery Service.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+