ಜಿಯೋ ಎಫೆಕ್ಟ್..2018ಕ್ಕೆ ಮೊಬೈಲ್ ಬಿಲ್ ಬೆಲೆ ಭಾರಿ ಇಳಿಕೆ!..1GBಗೆ 1 ರೂ.!?
ಲ್ಯೂಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ವರದಿ ಪ್ರಕಾರ, ಮುಂದಿನ ಒಂದು ವರ್ಷದ ವರೆಗೂ ಟೆಲಿಕಾಂ ಉದ್ಯಮದಲ್ಲಿ ವ್ಯಾಪಕ ಪೈಪೋಟಿ ಮುಂದುವರಿಯಲಿದ್ದು, ನಿಮ್ಮ ಮೊಬೈಲ್ ಬಿಲ್ ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗಲಿದೆ.!
ಜಿಯೋ ಟೆಲಿಕಾಂ ಮಾರುಕಟ್ಟೆಗೆ ಜಿಯೋ ಎಂಟ್ರಿ ನೀಡಿದ ನಂತರ ಭಾರತದಲ್ಲಿ ಮೊಬೈಲ್ ಬಿಲ್ ಭಾರಿ ಇಳಿಕೆಗಾಗಿರುವುದು ಎಲ್ಲರಿಗೂ ಗೊತ್ತು. ಆದರೆ, ಟೆಲಿಕಾಂ ವಿಶ್ಲೇಷಕರ ಪ್ರಕಾರ ಮುಂದಿನ ಒಂದು ವರ್ಷದ ಅವಧಿಯಲ್ಲಿ ಮೊಬೈಲ್ ಬಿಲ್‌ಗಳು ಸರಾಸರಿ ಶೇಕಡಾ 25ರಿಂದ 30ರಷ್ಟು ಮತ್ತು 1GB ಡೇಟಾ ಬೆಲೆ 1ರೂ.ಗೆ ಇಳಿಯಲಿದೆಯಂತೆ!!
ಹೌದು, ಸೆಲ್ಯೂಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ವರದಿ ಪ್ರಕಾರ, ಮುಂದಿನ ಒಂದು ವರ್ಷದ ವರೆಗೂ ಟೆಲಿಕಾಂ ಉದ್ಯಮದಲ್ಲಿ ವ್ಯಾಪಕ ಪೈಪೋಟಿ ಮುಂದುವರಿಯಲಿದ್ದು, ನಿಮ್ಮ ಮೊಬೈಲ್ ಬಿಲ್ ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗಲಿದೆ.!
ಎಲ್ಲಾ ಟೆಲಿಕಾಂಗಳ ನಡುವ ಈಗ ನಡೆಯುತ್ತಿರುವ ಪೈಪೋಟಿ ನೋಡಿದರೆ ಕೆಲವೇ ದಿವಸಗಳಲ್ಲಿ ಗ್ರಾಹಕರಿಗೆ ಮತ್ತಷ್ಟು ಕಡಿಮೆ ಬೆಲೆಯಲ್ಲಿ ಟೆಲಿಕಾಂ ಸೇವೆ ದೊರೆಯಲಿದೆ ಎಂದು ಸೆಲ್ಯೂಲರ್ ಆಪರೇಟರ್ಸ್ ಹೇಳಿದೆ.!! ಹಾಗಾದರೆ, ಮೊಬೈಲ್ ಬೆಲೆ ಭಾರಿ ಇಳಿಕೆಯಾಗಿ ಕಾರಣಗಳೇನು ಡೇಟಾ ಬೆಲೆ ಎಷ್ಟು ಇಳಿಕೆಯಾಗಬಹುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಎಲ್ಲಾ ಜಿಯೋ ಎಫೆಕ್ಟ್!!
ಭಾರತೀಯ ಟೆಲಿಕಾಂನಲ್ಲಿ ಇದೀಗ ಆಗಿರುವ ಅಲ್ಲಾ ಬದಲಾವಣೆಗಳಿಗೂ ಮೂಲಕ ಕಾರಣವೇ ಜಿಯೋ !! ಇನ್ನು ಮುಂದೆಯೋ ಭಾರತದ ಟೆಲಿಕಾಂನಲ್ಲಿ ಆಗಬಹುದಾದ ಬದಲಾವಣೆಗೂ ಜಿಯೋ ಕಾರಣವಾಗುತ್ತದೆ ಎಂದು ಟೆಲಿಕಾಂ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.!!


ಉಚಿತ ಫೋನ್ ಕಾರಣ!!
ಟೆಲಿಕಾಂ ಕ್ಷೇತ್ರದಲ್ಲಿ ಕಂಡುಬಂದಿರುವ ವ್ಯಾಪಕ ಪೈಪೋಟಿಯೇ ಮೊಬೈಲ್ ಬಿಲ್ ಇಳಿಕೆಯತ್ತ ಪ್ರೇರೇಪಿಸಿದೆ. ಇನ್ನು ಜಿಯೋ ಉಚಿತ ಫೋನ್ ಬಿಡುಗಡೆಯಾದ ನಂತರ ಮಾರುಕಟ್ಟೆಯಲ್ಲಿ ಮತ್ತೊಂದು ದರಸಮರ ಪ್ರಾರಂಭವಾಗುವ ಲಕ್ಷಣಗಳು ಕಾಣುತ್ತಿವೆ.!!

ತಿಂಗಳಿಗೆ 200 ಬಿಲ್ ಬಂದರೂ ಹೆಚ್ಚು!!
ಜಿಯೋ ಉಚಿತ ಫೋನ್ ಮೂಲಕ ಕೇವಲ 153 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಡೇಟಾ ನೀಡುವುದಾಗಿ ಅಂಬಾನಿ ಹೇಳಿದ್ದು, ಇಂದು ಜಿಯೋ ಫೋನ್ ಬಿಡುಗಡೆಯಾಗುತ್ತದೆ. ಹಾಗಾಗಿ, ಜಿಯೋ ಫೋನ್ ಬಳಕೆಗೆ ಬಂದನಂತರ ಜನರಿಗೆ ತಿಂಗಳಿಗೆ 200 ರೂ ಫೋನ್ ಬಿಲ್ ಬಂದರೂ ಹೆಚ್ಚು.!!

ಡೇಟಾ ಬೆಲೆ 1GBಗೆ 1 ರೂ.!!
ರಿಲಯನ್ಸ್ ಜಿಯೋ ಬರುವುದಕ್ಕೂ ಮೊದಲು ಒಂದು ಜಿಬಿ ಡೇಟಾದ ಬೆಲೆ 250 ರಿಂದ 300 ರೂ. ಗಳಿತ್ತು. ಆದರೆ, ಇಂದು 10 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಡೇಟಾ ಸಿಗುತ್ತಿದ್ದು, ಇನ್ನೊಂದು ವರ್ಷದಲ್ಲಿ ಡೇಟಾ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ. ಹಾಗಾಗಿ, ಡೇಟಾ ಬೆಲೆ 1GBಗೆ 1 ರೂ. ಆದರೂ ಆಶ್ಚರ್ಯವೇನಿಲ್ಲ.!!


Click it and Unblock the Notifications