Home
ಸುದ್ದಿಜಾಲ

ಪೆಟ್ರೋಲ್, ಡೀಸೆಲ್ ಬೇಡ!..ಬರೀ ಗಾಳಿಯಿಂದಲೇ ಓಡುತ್ತದೆ ಈ ಕಾರು!!

By Bhaskar N J

ಇಂದಿನ ಆಧುನಿಕ ತಂತ್ರಜ್ಞಾನದ ವೇಗಕ್ಕೆ ಸಾಟಿಯಾದ ಇಂತಹದೊಂದು ಸುದ್ದಿಯನ್ನು ನಂಬಲು ಸಾಧ್ಯವಿಲ್ಲ ಎಂದು ನಿಮಗನಿಸುತ್ತದೆ. ಆದರೆ, ಈಜಿಪ್ಟ್‌ ವಿದ್ಯಾರ್ಥಿಗಳ ಗುಂಪೊಂದು ಗಾಳಿಯಿಂದಲೇ ಓಡಿಸಬಹುದಾದ ನಾಲ್ಕು ಚಕ್ರಗಳ ಗೋ ಕಾರ್ಟ್ ಕಾರನ್ನು ನಿರ್ಮಿಸಿರುವ ಒಂದು ಸುದ್ದಿಯನ್ನು ನೀವು ನಂಬಲೇಬೇಕು. ಏಕೆಂದರೆ, ಇದು ಈಗ ಸಾಧ್ಯವಾಗಿದೆ ಕೂಡ.!

ಹೌದು, ಇನ್ಮುಂದೆ ಗಾಳಿಯಿಂದಲೇ ವಾಹನ ಓಡಲು ಸಾಧ್ಯವೇ ಇಲ್ಲ ಎಂದು ಖಡಾ ಖಂಡಿತವಾಗಿ ಯಾರಿಗೂ ಹೇಳಲಾಗದಂತೆ, ಕೈರೋ ನಗರದ ಹೊರವಲಯದಲ್ಲಿರುವ ಹೆಲ್ವಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗಾಳಿಯಿಂದಲೇ ಓಡುವ ಈ ವಾಹನವನ್ನು ಸಿದ್ಧಪಡಿಸಿದ್ದಾರೆ. ತಮ್ಮ ತರಗತಿ ಪ್ರಾಜೆಕ್ಟ್ ಅಂಗವಾಗಿ ಈ ಕಾರನ್ನು ತಯಾರಿಸಿರುವುದಾಗಿ ತಿಳಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೇಡ!..ಬರೀ ಗಾಳಿಯಿಂದಲೇ ಓಡುತ್ತದೆ ಈ ಕಾರು!!

ವಿದ್ಯಾರ್ಥಿಗಳು ನೀಡಿರುವ ಮಾಹಿತಿ ಪ್ರಕಾರ, ಗಾಳಿಯಿಂದಲೇ ಓಡುವ ಈ ಗೋ ಕಾರ್ಟ್ ಕಾರು ಪ್ರತಿ ಗಂಟೆಗೆ 40 ಕಿ.ಮೀ.ವೇಗದಲ್ಲಿ ಚಲಿಸಲಿದೆ ಮತ್ತು 30 ಕಿಲೋಮೀಟರ್ ನಂತರ ಕಂಪ್ರೆಸ್ ಗಾಳಿಯ ಇಂಧನವನ್ನು ಕೇಳುತ್ತದೆ ಎಂದು ತಿಳಿಸಿದ್ದಾರೆ.ಕಂಪ್ರೆಸ್ ಆಮ್ಲಜನದ ಸಿಲಿಂಡರ್‌ ಅನ್ನು ಬಳಸಿಕೊಂಡು ಇಂಧನವನ್ನು ಪೂರೈಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ.

ಒಂದು ಕಂಪ್ರೆಸ್ ಸಿಲಿಂಡರ್‌ ಸೇರಿದಂತೆ ಗೋ ಕಾರ್ಟ್ ಮಾದರಿಯಲ್ಲಿ ಹಗುರವಾಗಿ ತಯಾರಾಗಿರುವ ಈ ಕಾರನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ನಿರ್ಮಿಸಲಾಗಿದೆ. ಎಲ್ಲಾ ಬಿಡಿಭಾಗಗಳನ್ನು ಕಲೆಹಾಕಿ ತಯಾರಿಸಿರುವ ಈ ವಾಹನ ತಯಾರಿಕೆಗೆ ತಗಲಿರುವ ಒಟ್ಟು ವೆಚ್ಚ ನಿಖರವಾಗಿ 1,008$ ಡಾಲರ್‌ಗಳಾಗಿವೆ ಎಂದು ಪ್ರಾಜೆಕ್ಟ್ ಗ್ರೂಪ್ ವಿಧ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.

ಪೆಟ್ರೋಲ್, ಡೀಸೆಲ್ ಬೇಡ!..ಬರೀ ಗಾಳಿಯಿಂದಲೇ ಓಡುತ್ತದೆ ಈ ಕಾರು!!

ಓರ್ವ ವ್ಯಕ್ತಿ ಕುಳಿತುಕೊಂಡು ಚಾಲಾಯಿಸಬಹುದಾದ ಈ ಗೋ ಕಾರ್ಟ್ ಕಾರು ಭವಿಷ್ಯದಲ್ಲಿ ನವೀಕರಿಸಲು ಸಾಧ್ಯವಿರುವ ಇಂಧನದ ಬಳಕೆಯನ್ನು ಪ್ರೋತ್ಸಾಹಿಸಲು ನಿರ್ಮಿಸಲಾಗಿದೆ. ಪ್ರಕೃತಿ ಸಹಜವಾಗಿ ಲಭ್ಯವಿರುವ ಇಂಧನವನ್ನೇ ಮಾರ್ಪಾಡಿಸಿಕೊಂಡು ಶಕ್ತಿ ಪಡೆಯುವ ಈ ಕಾರು ಮಾನವನ ಸಾಮಾನ್ಯ ಅಗತ್ಯತೆಯನ್ನು ಕಡಿಮೆ ಖರ್ಚಿನಲ್ಲಿ ನೀಗಿಸುವ ಶಕ್ತಿಯನ್ನು ಹೊಂದಿದೆ.

Best Mobiles in India

English summary
A group of Egyptian students has designed a vehicle they say will battle rising energy prices and promote clean . tom know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+