ಅಯ್ಯೋ ದುರ್ವಿಧಿಯೇ! ಮೊಬೈಲ್ ಸ್ಪೋಟಗೊಂಡು ಎಂಟು ವರ್ಷದ ಬಾಲಕಿ ದುರ್ಮರಣ!
ಮಕ್ಕಳ ಕೈಗೆ ಮೊಬೈಲ್ ಕೊಡುವ ತಂದೆ ತಾಯಿಯರು ಈ ಸುದ್ದಿಯನ್ನು ಗಮನಿಸಲೇಬೇಕು. ನನ್ನ ಮಗ/ಮಗಳ ಕೈಗೆ ಮೊಬೈಲ್ ಕೊಟ್ಟರೆ ಸಾಕು ಗೇಮ್ ಆಡ್ತಾ ಇರ್ತಾರೆ, ನಾವು ಅರಾಮಾಗಿ ಮನೆ ಕೆಲಸ ಮಾಡ್ಕೋಬೋದು ಅನೋರೆ ಹೆಚ್ಚು. ಆದರೆ ಕೇರಳದಲ್ಲಿ ನಡೆದಿರುವ ಈ ಘಟನೆ ನಿಮ್ಮನ್ನು ಬೆಚ್ಚಿ ಬೀಳುವಂತೆ ಮಾಡಲಿದೆ.
ಹೌದು, ಕೇರಳದ ತ್ರಿಶೂರ್‌ನಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳು ಮೊಬೈಲ್ ಸ್ಪೋಟಗೊಂಡು ಸಾವನ್ನಪ್ಪಿದ್ದಾಳೆ. ಬಾಲಕಿ ಮೊಬೈಲ್ ಅನ್ನು ಕೈನಲ್ಲಿ ಹಿಡಿದಿದ್ದಾಗ ಸ್ಪೋಟಗೊಂಡಿದ್ದು ವೈದ್ಯಕೀಯ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಆಕೆಯನ್ನು ಉಳಿಸಿಕೊಳ್ಳಲು ಸಾದ್ಯವಾಗಲಿಲ್ಲ ಎನ್ನಲಾಗಿದೆ. ಹಾಗಾದ್ರೆ ಬಾಲಕಿಯ ಕೈನಲ್ಲಿದ್ದ ಫೋನ್ ಸ್ಪೋಟವಾಗಲು ಕಾರಣವೇನು? ಇದೆಲ್ಲದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಬೈಲ್ ಸ್ಪೋಟವಾಗಿದ್ದು ಎಲ್ಲಿ?
ಮೊಬೈಲ್ ಸ್ಪೋಟಗೊಂಡು ಗಾಯಗೊಂಡಿರುವ ಪ್ರಕರಣಗಳು ಸಾಕಷ್ಟು ನಡೆದಿವೆ. ಆದರೆ ಕೇರಳದ ತ್ರಿಶೂರ್‌ನಲ್ಲಿ ನಡೆದಿರುವ ಈ ಘಟನೆ ನಿಮ್ಮ ಮನಕುಲುಕುವುದು ಖಂಡಿತ. ಈ ಬಾಲಕಿಯನ್ನು ಪಟ್ಟಿಪರಂಬು ಮೂಲದ ಆದಿತ್ಯ ಶ್ರೀ ಎಂದು ಗುರುತಿಸಲಾಗಿದೆ. ಎಂದಿನಂತೆ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿ ಏಪ್ರಿಲ್ 24 ರಂದು ಮೊಬೈಲ್‌ನಲ್ಲಿ ಗೇಮ್ ಆಡುವಾಗ ಮೊಬೈಲ್ ಫೋನ್ ಕೈಯಲ್ಲಿ ಸ್ಫೋಟಗೊಂಡಿದೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಉಳಿಸಿಕೊಳ್ಳುವುದಕ್ಕೆ ಸಾದ್ಯವಾಗಿಲ್ಲ.
ಮೊಬೈಲ್ ಸ್ಪೋಟವಾಗಲು ಕಾರಣವೇನು?
ಮೊಬೈಲ್ ಚಾರ್ಜ್ ಆಗುತ್ತಿರುವಾಗ ಗೇಮ್ ಆಡುತ್ತಿದ್ದದ್ದು ಈ ಸ್ಪೋಟಕ್ಕೆ ಕಾರಣ ಎಂದು ಹೇಳಲಾಗಿದೆ. ಬಾಲಕಿ ಮನೆಯಲ್ಲಿ ಮೊಬೈಲ್ ಅನ್ನು ಚಾರ್ಜ್‌ಗೆ ಹಾಕಿರುವಾಗಲೇ ಗೇಮ್ ಆಡಲು ಶುರುಮಾಡಿದ್ದಾಳೆ. ಗೇಮ್‌ನ ತೀವ್ರತೆ ಹೆಚ್ಚಾದಂತೆ ಮೊಬೈಲ್ ಬಿಸಿಯಾಗಿದ್ದು, ಚಾರ್ಜಿಂಗ್‌ನಲ್ಲಿದ್ದ ಕಾರಣಕ್ಕೆ ಸ್ಪೋಟವಾಗಿದೆ ಎಂದು ವರದಿಯಾಗಿದೆ. ಸದ್ಯ ಪಜಯನ್ನೂರು ಪೊಲೀಸ್ ಠಾಣೆಯ ಸ್ಥಳೀಯ ಪೊಲೀಸ್ ಅಧಿಕಾರಿಗಳ ತಂಡವು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇನ್ನು ಈ ಫೋನ್ ಅನ್ನು ಮೂರು ವರ್ಷಗಳ ಹಿಂದೆ ಖರೀದಿಸಲಾಗಿದೆ. ಅಲ್ಲದೆ ಈ ಫೋನ್‌ನ ಬ್ಯಾಟರಿಯನ್ನು ಕಳೆದ ವರ್ಷ ಬದಲಾಯಿಸಲಾಗಿತ್ತು ಎಂದು ವರದಿಯಾಗಿದೆ. ಇನ್ನು ಫೋನ್ ಸ್ಪೋಟಗೊಂಡಾಗ ಬಾಲಕಿಯ ಮಗುವಿನ ಮುಖ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿವೆ. ತೀವ್ರತರದ ಗಾಯಗಳಾಗಿದ್ದ ಕಾರಣಕ್ಕೆ ಆಕೆಯನ್ನು ಉಳಿಸಿಕೊಳ್ಳುವುದಕ್ಕೆ ಸಾದ್ಯವಾಗಿಲ್ಲ ಎಂದು ವರದಿಯಾಗಿದೆ.
ಮೊಬೈಲ್ ಫೋನ್ ಸ್ಪೋಟವಾಗದಂತೆ ತಡೆಯಲು ನೀವು ಅನುಸರಿಸಬೇಕಾದ ಅಂಶಗಳು!
* ಯಾವುದೇ ಕಾರಣಕ್ಕೂ ಫೋನ್ ಚಾರ್ಜ್ ಆಗುತ್ತಿರುವಾಗ ಬಳಸುವುದಕ್ಕೆ ಮುಂದಾಗಬೇಡಿ
* ಮುಖ್ಯವಾಗಿ ಮೊಬೈಲ್ ಚಾರ್ಜಿಂಗ್‌ನಲ್ಲಿರುವಾಗ ಗೇಮ್ ಆಡಲು ಹೋಗಬೇಡಿ
* ನಿಮ್ಮ ಫೋನ್ ಫಿಸಿಕಲ್ ಡ್ಯಾಮೇಜ್ ಆಗದೇ ಸುರಕ್ಷಿತವಾಗಿದೆಯಾ ಅಂತಾ ತಿಳಿಯಿರಿ
* ಹೆಚ್ಚಿನ ಸಮುಯ ಔಟ್‌ಸೈಡ್ ಟೆಂಪ್‌ರೇಚರ್ ನಿಮ್ಮ ಫೋನ್ ಮೇಲೆ ಬೀಳದಂತೆ ತಪ್ಪಿಸಿ
* ಚಾರ್ಜಿಂಗ್‌ಗಾಗಿ ನಿಮ್ಮ ಫೋನ್ ಬ್ರ್ಯಾಂಡ್ ಒದಗಿಸಿದ ಕೇಬಲ್‌ಗಳು ಮತ್ತು ಚಾರ್ಜರ್ ಬಳಸಿ

ಮೊಬೈಲ್ ಸ್ಪೋಟವಾಗುವುದಕ್ಕೆ ಕಾರಣಗಳೇನು?
ಪದೇ ಪದೇ ಮೊಬೈಲ್ ಚಾರ್ಜ್ ಮಾಡುವ ಅಭ್ಯಾಸ ಬಿಟ್ಟುಬಿಡಿ ಇದರಿಂದ ಕೂಡ ಮೊಬೈಲ್ ಸ್ಪೋಟಗೊಳ್ಳುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ತಿಳಿಸಿದ್ದಾರೆ. ಮೊಬೈಲ್ ಬ್ಯಾಟರಿಯನ್ನು ಒಮ್ಮೆ (80%)ಪೂರ್ತಿಯಾಗುವವರೆಗೂ ಚಾರ್ಜ್ ಮಾಡಿದ ನಂತರ ಬಳಕೆ ಮಾಡಿ. ಪದೇ ಪದೇ ಚಾರ್ಜ್ ಮಾಡುವುದರಿಂದ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸ್ಮಾರ್ಟ್‌ಫೋನಿನ ಬ್ಯಾಟರಿ ಸ್ಪೋಟವಾಗಬಹುದು ಎಂದಿದ್ದಾರೆ.
ಇನ್ನು ರಾತ್ರಿಯಿಡೀ ಫೋನನ್ನು ಚಾರ್ಜ್‌ಗೆ ಇಡುವುದು ಕೂಡ ಒಳ್ಳೆಯ ಅಭ್ಯಾಸವೇನಲ್ಲ. ಮೊಬೈಲ್ ಚಾರ್ಜ್ ಮಾಡುವಾಗ ಹೆಚ್ಚೆಂದರೆ ಶೇ.80ರಷ್ಟು ಬ್ಯಾಟರಿ ಚಾರ್ಜ್ ಮಾಡಿ ಮತ್ತು ಕಡಿಮೆ ಎಂದರೂ 20 ಪರ್ಸೆಂಟ್ ಬ್ಯಾಟರಿ ಚಾರ್ಜ್ ಇರುವಂತೆ ನೋಡಿಕೊಳ್ಳಿ. ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್ ನಿಮ್ಮ ಫೋನ್ ಬ್ಯಾಟರಿಯ ಬಾಳಿಕೆಯನ್ನು ಕುಂಠಿತಗೊಳಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.


Click it and Unblock the Notifications








