2030ಕ್ಕೆ ರಸ್ತೆಗಳಲ್ಲಿ ಸ್ಮಾರ್ಟ್ ಇ–ವಾಹನ ಮಾತ್ರವೇ: ಪೆಟ್ರೋಲ್-ಡಿಸೇಲ್ ಕಾರು ಕಥೆಗಷ್ಟೆ ಸೀಮಿತ!

ಹೆಚ್ಚು ಮಾಲಿನ್ಯವನ್ನು ಉಂಟು ಮಾಡುತ್ತಿರುವ ಬಸ್ಸು-ಕಾರು ಸೇರಿದಂತೆ ಎಲ್ಲಾ ವಾಹನಗಳು ಶೀಘ್ರವೇ ಕಣ್ಮರೆಯಾಗಲಿದೆ. ನಮ್ಮ ಮುಂದಿನ ತಲೆಮಾರಿನವರಿಗೆ ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳ ಬಗ್ಗೆ ನಾವು ಕಥೆಗಳನ್ನು ಮಾತ್ರವೇ ಹೇಳಲು ಸಾಧ್ಯ.

|

ಭಾರತದ ರಸ್ತೆಯ ಮೇಲೆ ಹೆಚ್ಚಾಗಿ ಕಾಣುತ್ತಿರುವ, ಹೆಚ್ಚು ಮಾಲಿನ್ಯವನ್ನು ಉಂಟು ಮಾಡುತ್ತಿರುವ ಬಸ್ಸು-ಕಾರು ಸೇರಿದಂತೆ ಎಲ್ಲಾ ವಾಹನಗಳು ಶೀಘ್ರವೇ ಕಣ್ಮರೆಯಾಗಲಿದೆ. ನಮ್ಮ ಮುಂದಿನ ತಲೆಮಾರಿನವರಿಗೆ ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳ ಬಗ್ಗೆ ನಾವು ಕಥೆಗಳನ್ನು ಮಾತ್ರವೇ ಹೇಳಲು ಸಾಧ್ಯ. ಏಕೆಂದರೆ 2030ರ ವೇಳೆಗೆ ರಸ್ತೆಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಬಳಸಿಕೊಂಡು ಸಾಗುವ ಎಲ್ಲಾ ವಾಹನಗಳನ್ನು ಕೇಂದ್ರ ಸರಕಾರ ನಿಷೇಧಿಸುವ ಚಿಂತನೆಯನ್ನು ಮಾಡಿದೆ.

2030ಕ್ಕೆ ರಸ್ತೆಗಳಲ್ಲಿ ಸ್ಮಾರ್ಟ್ ಇ–ವಾಹನ ಮಾತ್ರವೇ: ಪೆಟ್ರೋಲ್-ಡಿಸೇಲ್ ಕಾರು ಕಥೆ

2030ರ ವೇಳೆಗೆ ವಾಯು ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳು (ಇ-ವಾಹನ) ಮಾತ್ರವೇ ಅನುಮತಿಯನ್ನು ಪಡೆಯಲಿದ್ದು, BS 3 ವಾಹನಗಳ ನೋಂದಣಿಯನ್ನು ನಿಲ್ಲಿಸಿದ ಮಾದರಿಯಲ್ಲೇ ಗ್ಯಾಸ್, ಪೆಟ್ರೋಲ್ ಮತ್ತು ಡಿಸೇಲ್ ಬಳಕೆಯ ವಾಹನಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಕಾರು-ಬಸ್ಸು-ಲಾರಿಯಂತಹ ಎಲ್ಲಾ ವಾಹನಗಳು ಬ್ಯಾಟರಿ ಮೂಲಕವೇ ಕಾರ್ಯ ನಿರ್ವಹಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಇ-ವಾಹನ ಬಗ್ಗೆ ಮಾಹಿತಿ ಇಲ್ಲಿದೆ.

ಲಿಥೀಯಂ ಅಯಾನ್ ಬ್ಯಾಟರಿಗಳ ಅಳವಡಿಕೆ:

ಲಿಥೀಯಂ ಅಯಾನ್ ಬ್ಯಾಟರಿಗಳ ಅಳವಡಿಕೆ:

ಈಗಾಗಲೇ ಪರ್ಯಯ ಇಂದನಗಳ ಹುಡುಕಾಟವು ನಡೆದಿದ್ದು, ಇದರಲ್ಲಿ ಲಿಥೀಯಂ ಅಯಾನ್ ಬ್ಯಾಟರಿಗಳು ಮುಂದಿನ ತಲೆಮಾರಿನ ವಾಹನಗಳ ವೇಗ ಮತ್ತು ಕ್ಷಮತೆಯನ್ನು ಹೆಚ್ಚಿಸಲಿದೆ. ಸದ್ಯ ಈ ಬ್ಯಾಟರಿಗಳ ಬೆಲೆಯೂ ತೀರಾ ಹೆಚ್ಚಾಗಿದ್ದು, ದಿನ ಕಳೆದಂತೆ ಇವುಗಳ ಬೆಲೆಯೂ ಇಳಿಕೆಯಾಗಲಿದ್ದು, ಅಲ್ಲದೇ ಇನಷ್ಟು ಅಭಿವೃದ್ಧಿ ಹೊಂದಲಿವೆ. ಜನ ಸಾಮಾನ್ಯರ ಕೈಗೆಟುಕವ ಬೆಲೆಯಲ್ಲಿ ಇ ವಾಹನಗಳು ದೊರೆಯಲಿದೆ.

ಮಗಳಿಗೆ ಐಫೋನ್ 8 ಕೊಡಿಸಲು ಭಾರತೀಯ ಮಾಡಿದ ಸಾಹಸ ಅಂತಿಂತದಲ್ಲ!ಮಗಳಿಗೆ ಐಫೋನ್ 8 ಕೊಡಿಸಲು ಭಾರತೀಯ ಮಾಡಿದ ಸಾಹಸ ಅಂತಿಂತದಲ್ಲ!

ಒಂದು ಕಾರಿಗೆ 6,500 ಲ್ಯಾಪ್‌ಟಾಪ್ ಬ್ಯಾಟರಿ ಬೇಕಂತೆ:

ಒಂದು ಕಾರಿಗೆ 6,500 ಲ್ಯಾಪ್‌ಟಾಪ್ ಬ್ಯಾಟರಿ ಬೇಕಂತೆ:

ಈಗಾಗಲೇ ಇ-ವಾಹನಗಳನ್ನು ಅಭಿವೃದ್ಧಿಯೂ ವಿದೇಶಗಳಲ್ಲಿ ನಡೆಯುತ್ತಿದ್ದು, ಒಂದು ಕಾರು ಚಾಲುವಾಗಬೇಕಾದರೆ ನಿಮ್ಮ ಲ್ಯಾಪ್‌ಟಾಪಿನಲ್ಲಿರುವ ಮಾದರಿಯ 6,500 ಲಿಥೀಯಂ ಅಯಾನ್ ಬ್ಯಾಟರಿಗಳನ್ನು ಒಟ್ಟುಗೂಡಿಸಬೇಕಾಗಿದೆ. ಹಾಗಾಗೀ ಇವುಗಳ ಬೆಲೆಯೂ ಹೆಚ್ಚಾಗಿರಲಿದೆ.

ಶಿಯೋಮಿಯಿಂದ ವೈರ್‌ಲೈಸ್ ಚಾರ್ಜರ್: ಅದುವೇ ಸಾಮಾನ್ಯ ಬೆಲೆಗೆಶಿಯೋಮಿಯಿಂದ ವೈರ್‌ಲೈಸ್ ಚಾರ್ಜರ್: ಅದುವೇ ಸಾಮಾನ್ಯ ಬೆಲೆಗೆ

ಹೆಚ್ಚು ಸ್ಮಾರ್ಟ್‌ ವಾಹನಗಳು:

ಹೆಚ್ಚು ಸ್ಮಾರ್ಟ್‌ ವಾಹನಗಳು:

ಬ್ಯಾಟರಿ ಚಾಲಿತ ವಾಹನಗಳು ಹೆಚ್ಚು ಸ್ಮಾರ್ಟ್‌ ಆಗಲಿದ್ದು, ನೀವು ನಿಮ್ಮ ಸ್ಮಾರ್ಟ್‌ಫೋನಿಂದಲೇ ವಾಹನಗಳನ್ನು ನಿಯಂತ್ರಿಸಬಹುದಾಗಿದೆ. ಈ ವಾಹನಗಳು ಮೆಕಾನಿಕಲ್ ಮತ್ತು ಸಾಫ್ಟ್‌ವೇರ್ ಎರಡರಲ್ಲೂ ಸಮಪಾಲು ಪಡೆಯಲಿವೆ ಎನ್ನಲಾಗಿದೆ.

ಜಿಯೋ ಫೋನ್ ಡಿಲಿವರಿ ಶುರು: ನಿಮ್ಮ ಮನೆಗೆ ಯಾವತ್ತು.!ಜಿಯೋ ಫೋನ್ ಡಿಲಿವರಿ ಶುರು: ನಿಮ್ಮ ಮನೆಗೆ ಯಾವತ್ತು.!

ಪೆಟ್ರೋಲ್ ಬಂಕ್ ಮಾದರಿಯಲ್ಲಿ ಚಾರ್ಜಿಂಗ್ ಪಾಯಿಂಟ್:

ಪೆಟ್ರೋಲ್ ಬಂಕ್ ಮಾದರಿಯಲ್ಲಿ ಚಾರ್ಜಿಂಗ್ ಪಾಯಿಂಟ್:

ಲಿಥೀಯಂ ಅಯಾನ್ ಬ್ಯಾಟರಿ ಹೆಚ್ಚಿನ ಕ್ಷಮತೆಯನ್ನು ಹೊಂದಿದೆ. ಇದಲ್ಲದೇ ರಸ್ತೆಗಳಲ್ಲಿ ಸದ್ಯ ಕಾಣುತ್ತಿರುವ ಪೆಟ್ರೋಲ್ ಬಂಕ್ ಗಳ ಮಾದರಿಯಲ್ಲಿ ಬ್ಯಾಟರಿ ಚಾರ್ಜಿಂಗ್ ಸ್ಟೆಷನ್ ಗಳು ಕಾಣಿಸಿಕೊಳ್ಳಲಿದೆ. ಹೀಗಾಗಿ ಎಲ್ಲಿ ಬೇಕಾದರು ವಾಹನಗಳ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಂಡು ಸಾಗಬಹುದಾಗಿದೆ.

ಬ್ಯಾಟರಿ ಚಾಲಿತ ವಾಹನಗಳಿಗೆ ಸಹಾಯಧನ:

ಬ್ಯಾಟರಿ ಚಾಲಿತ ವಾಹನಗಳಿಗೆ ಸಹಾಯಧನ:

ಸದ್ಯ ಹೈಬ್ರಿಡ್ ಬ್ಯಾಟರಿಯ ವಾಹನಗಳ ಅಭಿವೃದ್ಧಿ ಮತ್ತು ಮಾರಾಟಕ್ಕೆ ಸರ್ಕಾರ ಉತ್ತೇಜನ ನೀಡಲು ಸರಕಾರವೂ ಮುಂದಾಗಲಿದೆ. ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಲಿದೆ. ಅಲ್ಲದೇ ಆರಂಭದಲ್ಲಿ ಇ-ವಾಹನಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಇ-ವಾಹನಗಳ ತಯಾರಿಸುವ ಕಂಪನಿಗಳಿಗೆ ಆದ್ಯತೆ ನೀಡಲಿದೆ. ಎನ್ನಲಾಗಿದೆ.

ದೇಶದಲ್ಲಿ ತಯಾರಿಸುವ ಕನಸು:

ದೇಶದಲ್ಲಿ ತಯಾರಿಸುವ ಕನಸು:

ಈಗಾಗಲೇ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಲೀಥೀಯಂ ಬ್ಯಾಟರಿಗಳನ್ನು ದೇಶಿಯವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಆದರೆ ದೊಡ್ಡ ಬ್ಯಾಟರಿಗಳನ್ನು ಉತ್ಪಾದಿಸುತ್ತಿಲ್ಲ ಮತ್ತು ಅಂತಹ ತಂತ್ರಜ್ಞಾನವು ನಮ್ಮ ಬಳಿ ಇಲ್ಲ. ಹೀಗಾಗಿ ಸದ್ಯ ಆಮದು ಮಾಡಿಕೊಳ್ಳುವುದೇ ಹೆಚ್ಚು ಲಾಭಕರ. ಆದರೆ ಇದನ್ನು ದೇಶಿಯವಾಗಿಯೇ ಉತ್ಪಾದನೆ ಮಾಡುವ ಪ್ರಯತ್ನವು ನಡೆಯುತ್ತಿದ್ದು, ಒಮ್ಮೆ ಯಶಸ್ವಿಯಾದರೆ ಇ-ವಾಹನಗಳ ಬೆಲೆಯೂ ಭಾರೀ ಕಡಿಮೆಯಾಗಲಿದೆ.

Best Mobiles in India

English summary
The government should be technology-agnostic as far as promotion of EVs (electric vehicles) are concerned. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X