Home
ಸುದ್ದಿಜಾಲ

ಜಿಮೇಲ್ ಸ್ಥಗಿತ? ಎಲಾನ್ ಮಸ್ಕ್‌ರಿಂದ ಎಕ್ಸ್‌ಮೇಲ್‌ ಘೋಷಣೆ

ಎಲಾನ್ ಮಸ್ಕ್ (Elon Musk)ಯಾವ ವಿಭಾಗವನ್ನೂ ಬಿಡದೆ ಎಲ್ಲಾ ಕಡೆ ತನ್ನ ಸಾಮರ್ಥ್ಯ ತೋರಿಸಲು ಮುಂದಾಗುತ್ತಿದ್ದಾರೆ. ಈ ನಡುವೆ ಎಕ್ಸ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದು, ಸಾಕಷ್ಟು ಚರ್ಚೆಯಲ್ಲಿದ್ದರು, ಈ ನಡುವೆ ಇದೇ ಪ್ಲಾಟ್‌ಫಾರ್ಮ್‌ನಲ್ಲಿ ಮತ್ತಷ್ಟು ಹೊಸ ಫೀಚರ್ಸ್‌ ಅನ್ನು ಸಹ ಘೋಷಣೆ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ಈಗ ಎಕ್ಸ್‌ಮೇಲ್‌ (Xmail) ಬಗ್ಗೆ ಮಾಹಿತಿ ನೀಡಿದ್ದಾರೆ.

ಹೌದು, ಎಲಾನ್ ಮಸ್ಕ್ ಇದೀಗ ಹೊಸ ಎಕ್ಸ್‌ಮೇಲ್‌ ಬಗ್ಗೆ ಖಚಿತಪಡಿಸಿದ್ದಾರೆ. ಇದು ಗೂಗಲ್‌ನ ಜಿಮೇಲ್‌ ಸೇವೆಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಪಡೆಯಲಿದೆ ಎಂದು ಹೇಳಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಜಿಮೇಲ್ ಸ್ಥಗಿತಗೊಳ್ಳುವ ವದಂತಿಗಳು ಹರಿದಾಡುತ್ತಿದ್ದು, ಇದರ ಬೆನ್ನಲ್ಲೇ ಮಸ್ಕ್‌ ಈ ಘೋಷಣೆ ಮಾಡಿದ್ದಾರೆ. ಹಾಗಿದ್ರೆ, ಏನಿದು ಮತ್ತೊಂದು ಹೊಸ ಪ್ಲಾಟ್‌ಫಾರ್ಮ್‌, ಇದು ಹೇಗೆ ಕೆಲಸ ಮಾಡಲಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಜಿಮೇಲ್ ಸ್ಥಗಿತ? ಎಲಾನ್ ಮಸ್ಕ್‌ರಿಂದ ಎಕ್ಸ್‌ಮೇಲ್‌ ಘೋಷಣೆ

ಎಲಾನ್ ಮಸ್ಕ್ ಅವರ ಎಕ್ಸ್‌ಮೇಲ್‌: ಎಕ್ಸ್‌ ನ ಪ್ರಮುಖ ಭದ್ರತಾ ಇಂಜಿನಿಯರಿಂಗ್ ತಂಡದ ಹಿರಿಯ ಸದಸ್ಯರಾದ ನಾಥನ್ ಮೆಕ್‌ಗ್ರಾಡಿ ಅವರು ಎಕ್ಸ್‌ಮೇಲ್‌ನ ಉಡಾವಣಾ ದಿನಾಂಕದ ಕುರಿತು ವಿಚಾರಿಸಿ ಟ್ವೀಟ್ ಮಾಡಿದ ಬಳಿಕ ಈ ವಿಷಯ ಮುನ್ನೆಲೆಗೆ ಬಂದಿದೆ. ಇದಕ್ಕೆ ಮಸ್ಕ್ ತ್ವರಿತವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಎಕ್ಸ್‌ಮೇಲ್‌ ಸೇವೆಗಳು ಹಾರಿಜಾನ್‌ನಲ್ಲಿವೆ ಎಂದು ದೃಢಪಡಿಸಿದ್ದಾರೆ.

ಇನ್ನು ಜಿಮೇಲ್‌ ಸಂಬಂಧ ನಕಲಿ ಮಾಹಿತಿ ಎಕ್ಸ್‌ನಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಇಮೇಲ್‌ನ ಸ್ಕ್ರೀನ್‌ಶಾಟ್ ಹೊಂದಿರುವ ಪೋಸ್ಟ್ 'ಗೂಗಲ್ ಈಸ್ ಸನ್‌ಸೆಟಿಂಗ್ ಜಿಮೇಲ್' ಎಂಬ ಶೀರ್ಷಿಕೆಯಲ್ಲಿ ಈ ಫೋಸ್ಟ್‌ ವೈರಲ್ ಆಗಿದೆ. ಇದು ಜಿಮೇಲ್‌ನ ಭವಿಷ್ಯದ ಬಗ್ಗೆ ವ್ಯಾಪಕವಾದ ಊಹಾಪೋಹಗಳಿಗೆ ಕಾರಣವಾಗಿದೆ. ಆ ಪೋಸ್ಟ್‌ನಲ್ಲಿ ಇರುವಂತೆ ಆಗಸ್ಟ್ 1, 2024 ರೊಳಗೆ ಎಲ್ಲಾ ಕಾರ್ಯಾಚರಣೆಗಳನ್ನು ನಿಲ್ಲಿಸುತ್ತದೆ ಎಂದು ಉಲ್ಲೇಖ ಮಾಡಲಾಗಿದೆ.

ಜಿಮೇಲ್ ಸ್ಥಗಿತ? ಎಲಾನ್ ಮಸ್ಕ್‌ರಿಂದ ಎಕ್ಸ್‌ಮೇಲ್‌ ಘೋಷಣೆ

ಗೂಗಲ್ ಈ ನಕಲಿ ಪೋಸ್ಟ್‌ಗೆ ತಕ್ಷಣವೇ ಎಕ್ಸ್‌ನಲ್ಲೇ ಪ್ರತಿಕ್ರಿಯೆ ನೀಡಿದೆ. ಜಿಮೇಲ್‌ ಇನ್ನೂ ಇರಲಿದೆ ಎಂದು ತಿಳಿಸಿದೆ. ಇದು ಸಂಪೂರ್ಣವಾಗಿ ಆಧಾರರಹಿತವಾಗಿದೆ ಮತ್ತು ಅದನ್ನು ವಂಚನೆ ಎಂದು ಪರಿಗಣಿಸಬೇಕು ಎಂದು ಉಲ್ಲೇಖಿಸಿದೆ. ಗಮನಿಸಬೇಕಾದ ವಿಷಯ ಏನೆಂದರೆ ಗೂಗಲ್‌ ಜಿಮೇಲ್‌ನ ಡೀಫಾಲ್ಟ್ ವೀಕ್ಷಣೆಗೆ ಇತ್ತೀಚಿನ ಬದಲಾವಣೆಗಳನ್ನು ಮಾಡಲಿದೆ. ಜನವರಿ 2024 ರಲ್ಲಿ ಬೇಸಿಕ್ ಹೆಚ್‌ಟಿಎಮ್‌ಎಲ್‌ ನಿಂದ ಹೆಚ್ಚು ಶಕ್ತಿಯುತ ಇಂಟರ್ಫೇಸ್‌ಗೆ ಬದಲಾಯಿಸುವ ಕೆಲಸ ಮಾಡಲು ಮುಂದಾಗಿದೆ. ಇದನ್ನೇ ತಪ್ಪಾಗಿ ಅರ್ಥ ಮಾಡಿಕೊಂಡು ಕೆಲವರು ಜಿಮೇಲ್‌ ಸ್ಥಗಿತವಾಗುತ್ತಿದೆ ಅನ್ನೋ ಸದ್ದು ಹಬ್ಬಿಸುತ್ತಿದ್ದಾರೆ.

ಇನ್ನು ಗೂಗಲ್ ಪ್ರಸ್ತುತ ಜಿಮೇಲ್ ಸೇರಿದಂತೆ ತನ್ನ ಉತ್ಪನ್ನಗಳಲ್ಲಿ ಎಐ ಬೆಂಬಲಿತ ಫೀಚರ್ಸ್‌ ಅನ್ನು ನೀಡುವತ್ತ ಗಮನಹರಿಸುತ್ತಿದೆ. ಕಳೆದ ತಿಂಗಳು, ಕಂಪನಿಯು ಇಮೇಲ್‌ಗಳನ್ನು ಬರೆಯಲು ಬಳಕೆದಾರರಿಗೆ ಸಹಾಯ ಮಾಡಲು ಡ್ಯುಯೆಟ್ ಎಐ ವೈಶಿಷ್ಟ್ಯವನ್ನು ಆರಂಭ ಮಾಡಿದೆ. ಜೊತೆಗೆ ಇದು ಬಾರ್ಡ್ ಚಾಟ್‌ಬಾಟ್ ಅನ್ನು ಗೂಗಲ್‌ ಖಾತೆಗಳೊಂದಿಗೆ ಸಂಯೋಜಿಸಲು ಅವಕಾಶ ಮಾಡಿಕೊಟ್ಟಿದೆ.

ಜಿಮೇಲ್ ಸ್ಥಗಿತ? ಎಲಾನ್ ಮಸ್ಕ್‌ರಿಂದ ಎಕ್ಸ್‌ಮೇಲ್‌ ಘೋಷಣೆ

ಇನ್ನು ಜಿಮೇಲ್ ಅನ್ನು ಸ್ಥಗಿತಗೊಳಿಸಲು ಗೂಗಲ್ ಯೋಜಿಸುತ್ತಿದೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿದ್ದಂತೆ ಟೆಕ್ ವಲಯದಲ್ಲಿ ಸರಣಿ ಪ್ರತಿಕ್ರಿಯೆ ಬರುತ್ತಿವೆ. ಇದರಲ್ಲಿ ಕೆಲವರು ಜಿಮೇಲ್‌ ನಮ್ಮ ನಂಬಿಕೆಯನ್ನು ಕಳೆದುಕೊಂಡಿದೆ. ಈಗಿನಿಂದಲೇ ಎಕ್ಸ್‌ಮೇಲ್‌ ಗೆ ಚಲಿಸುವ ಸಮಯವಾಗಿದೆ! ನಾನು ಈಗ ನನ್ನ ಹಾಟ್‌ಮೇಲ್ ಅನ್ನು ಬಳಸುವಂತೆ ನನ್ನ ಜಿಮೇಲ್‌ ಅನ್ನು ಜಂಕ್‌ಗಳಿಗಾಗಿ ಬಳಕೆ ಮಾಡುತ್ತೇನೆ ಎಂದೆಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ.

ಈ ನಡುವೆ ಮಸ್ಕ್‌ ವಿಚಾರಕ್ಕೆ ಬಂದರೆ ಕೆಲವು ದಿನಗಳಿಂದ ನ್ಯೂರಾಲಿಂಕ್ ಮೆದುಳಿನ ಚಿಪ್‌ ವಿಷಯಕ್ಕೆ ಸುದ್ದಿಯಲ್ಲಿದ್ದರು. ಈ ಚಿಪ್‌ ಅನ್ನು ಮೊದಲ ಬಾರಿಗೆ ವ್ಯಕ್ತಿಯ ಮೆದುಳಿಗೆ ಅಳವಡಿಸಲಾಗಿತ್ತು. ಮೊದಲ ರೋಗಿಯು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾನೆ ಮತ್ತು ಈಗ ಅವರ ಆಲೋಚನೆಗಳನ್ನು ಬಳಸಿಕೊಂಡು ಕಂಪ್ಯೂಟರ್ ಮೌಸ್ ಅನ್ನು ನಿಯಂತ್ರಿಸಬಹುದು ಎಂದು ಮಸ್ಕ್ ಕಳೆದ ತಿಂಗಳು ಮಾಹಿತಿ ನೀಡಿದ್ದರು. ಇದೀಗ ಎಕ್ಸ್‌ ಮೇಲ್‌ ಸಂಬಂಧ ಸಂಚಲನ ಉಂಟು ಮಾಡಲಿದ್ದಾರೆ.

Best Mobiles in India

English summary
Elon Musk has now given information about Xmail. It is known that it will work as a competitor to Google Gmail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+