Home
ಸುದ್ದಿಜಾಲ

ಭಾರತದಲ್ಲಿ ಸ್ಟಾರ್‌ಲಿಂಕ್ ಇಂಟರ್‌ನೆಟ್ ಡೆಮೋ ಆರಂಭ!..ಇಲ್ಲಿದೆ ಪೂರ್ಣ ಮಾಹಿತಿ!

ಭಾರತದಲ್ಲಿ ಎಲೋನ್ ಮಸ್ಕ್ ಅವರ ಒಡೆತನದ ಸ್ಟಾರ್‌ಲಿಂಕ್ (Starlink) ಉಪಗ್ರಹ ಇಂಟರ್‌ನೆಟ್ ಸೇವೆ ಆರಂಭವಾಗುವ ಕುರಿತಂತೆ ಹಲವಾರು ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು. ಇದೀಗ ದೇಶದಲ್ಲಿ ಸ್ಟಾರ್‌ಲಿಂಕ್ ಪ್ರವೇಶದ ಪ್ರಮುಖ ಹಂತ ತಲುಪಿದ್ದು, ಕಂಪೆನಿಯು ಅಕ್ಟೋಬರ್ 30 ಮತ್ತು 31ರಂದು ಮುಂಬೈಯಲ್ಲಿ ಅಧಿಕೃತ ಡೆಮೋ ಪ್ರದರ್ಶನಗಳನ್ನು ಆಯೋಜಿಸಿದೆ. ಈ ಪ್ರದರ್ಶನಗಳಲ್ಲಿ ಸ್ಟಾರ್‌ಲಿಂಕ್‌ನ ತಾಂತ್ರಿಕ ಸಾಮರ್ಥ್ಯ ಮತ್ತು ಭದ್ರತಾ ಮಾನದಂಡಗಳನ್ನು ಪರಿಶೀಲಿಸಲು ಕಾನೂನು ಮತ್ತು ತಾಂತ್ರಿಕ ಸಂಸ್ಥೆಗಳ ಪ್ರತಿನಿಧಿಗಳು ಹಾಜರಾಗಲಿದ್ದಾರೆ ಎಂದು ತಿಳಿದುಬಮದಿದೆ.

ಭಾರತ ಸರ್ಕಾರದ Global Mobile Personal Communication by Satellite (GMPCS) ಪರವಾನಗಿ ಅಡಿಯಲ್ಲಿ ಸ್ಟಾರ್‌ಲಿಂಕ್ ತನ್ನ ಡೆಮೋ ಪ್ರದರ್ಶನಗಳನ್ನು ಆಯೋಜಿಸಿದೆ. ಈ ಪರೀಕ್ಷೆಗಳು ತಾತ್ಕಾಲಿಕವಾಗಿ ನೀಡಲಾದ ಸ್ಪೆಕ್ಟ್ರಮ್‌ನಲ್ಲಿ ನಡೆಯುತ್ತಿದ್ದು, ಇದರ ಮೂಲಕ ಸ್ಟಾರ್‌ಲಿಂಕ್ ಭಾರತದಲ್ಲಿ ತನ್ನ ಸೇವೆ ಆರಂಭಿಸಲು ಅಗತ್ಯವಿರುವ ತಾಂತ್ರಿಕ ಮತ್ತು ನಿಯಮಾನುಸರಣಾ ಪ್ರಮಾಣೀಕರಣ ಪಡೆಯಲು ಪ್ರಯತ್ನಿಸುತ್ತಿದೆ. ಈ ಹಂತ ಯಶಸ್ವಿಯಾಗಿ ಮುಗಿದರೆ, ಸ್ಟಾರ್‌ಲಿಂಕ್ ಭಾರತದದಲ್ಲಿ ಇಂಟರ್‌ನೆಟ್ ಆಧಾರಿತ ವೇಗದ ಬ್ರಾಡ್‌ಬ್ಯಾಂಡ್ ಸೇವೆ ನೀಡಲು ಸಜ್ಜಾಗಲಿದೆ.

ಭಾರತದಲ್ಲಿ ಸ್ಟಾರ್‌ಲಿಂಕ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಇತ್ತೀಚಿನ ಮಾಹಿತಿಯ ಪ್ರಕಾರ, ಸ್ಟಾರ್‌ಲಿಂಕ್ ಕಂಪನಿಯು ಭಾರತದಲ್ಲಿ ಒಟ್ಟು ಒಂಬತ್ತು ಗೇಟ್‌ವೇ ಅರ್ಥ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಯೋಜಿಸಿದೆ. ಈ ಸ್ಟೇಷನ್‌ಗಳು ಮುಂಬೈ, ನೊಯ್ಡಾ, ಹೈದರಾಬಾದ್, ಕೊಲ್ಕತ್ತಾ, ಚಂಡೀಗಢ ಮತ್ತು ಲಖ್ನೌ ಸೇರಿದಂತೆ ಪ್ರಮುಖ ನಗರಗಳಲ್ಲಿ ನಿರ್ಮಾಣಗೊಳ್ಳಲಿವೆ. ಕಂಪನಿ ಪ್ರಥಮ ಹಂತದಲ್ಲಿ (Gen 1 ಉಪಗ್ರಹ ಜಾಲ) 600 Gbps ಸಾಮರ್ಥ್ಯವನ್ನು ಅನುಮೋದನೆಗೆ ಕೋರಿದೆ. ಇತ್ತೀಚಿಗಷ್ಟೇ, "ನಾವು ಭಾರತದಲ್ಲಿ ಸುರಕ್ಷಿತ, ಕಾನೂನುಬದ್ಧ ಮತ್ತು ಅತ್ಯುತ್ತಮ ಗುಣಮಟ್ಟದ ಬ್ರಾಡ್‌ಬ್ಯಾಂಡ್ ಸೇವೆ ನೀಡುವತ್ತ ಸಂಪೂರ್ಣವಾಗಿ ಕೇಂದ್ರೀಕೃತರಾಗಿದ್ದೇವೆ" ಎಂದು ಸ್ಟಾರ್‌ಲಿಂಕ್ ಇಂಡಿಯಾದ ಮಾರ್ಕೆಟ್ ಆಕ್ಸೆಸ್ ಡೈರೆಕ್ಟರ್ ಪಾರ್ನಿಲ್ (Parnil Urdhwareshe) ಅವರು ಹೇಳಿದ್ದಾರೆ.

ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆ ಆರಂಭ ಯಾವಾಗ?
ದೇಶದಲ್ಲಿ ಸ್ಟಾರ್‌ಲಿಂಕ್ ಸೇವೆ ಪ್ರಾರಂಭಿಸಲು ಇನ್ನೂ ದೂರಸಂಪರ್ಕ ಇಲಾಖೆ (DoT) ಮತ್ತು IN-SPACe ನಿಂದ ಅಂತಿಮ ಅನುಮೋದನೆಗಳು ಬಾಕಿಯಿವೆ. ವರದಿಗಳ ಪ್ರಕಾರ, ಈ ಅನುಮತಿ 2025ರ ಅಂತ್ಯದ ವೇಳೆಗೆ ಲಭ್ಯವಾಗುವ ಸಾಧ್ಯತೆ ಇದೆ, ಇದರಿಂದ 2026ರ ಆರಂಭದಲ್ಲಿ ಸ್ಟಾರ್‌ಲಿಂಕ್ ಭಾರತದಲ್ಲಿ ವಾಣಿಜ್ಯ ಸೇವೆ ಪ್ರಾರಂಭಿಸಬಹುದು ಸರ್ಕಾರವು ನ್ಯಾಯಸಮ್ಮತ ಸ್ಪರ್ಧೆ ಕಾಪಾಡಲು ಸ್ಟಾರ್‌ಲಿಂಕ್ ಗ್ರಾಹಕರ ಸಂಖ್ಯೆಗೆ ಮಿತಿಯನ್ನು ವಿಧಿಸಿದೆ. ಅಂದರೆ, ಸ್ಟಾರ್‌ಲಿಂಕ್ ಪ್ರಾರಂಭಿಕ ಹಂತದಲ್ಲಿ ಗರಿಷ್ಠ 20 ಲಕ್ಷ ಬಳಕೆದಾರರಿಗೆ ಮಾತ್ರ ಸೇವೆ ಲಭ್ಯವಿರಲಿದೆ.

ಭಾರತದಲ್ಲಿ ಸ್ಟಾರ್‌ಲಿಂಕ್ ಇಂಟರ್‌ನೆಟ್ ಡೆಮೋ ಆರಂಭ!..ಇಲ್ಲಿದೆ ಪೂರ್ಣ ಮಾಹಿತಿ!

ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆಯ ಬೆಲೆ ಮತ್ತು ಸ್ಪೀಡ್ ಎಷ್ಟು?
ದೇಶದಲ್ಲಿ ಸ್ಟಾರ್‌ಲಿಂಕ್ ಸಂಸ್ಥೆಯು ತನ್ನ ಬೆಲೆಗಳ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಒದಗಿಸಿಲ್ಲ. ಆದರೆ, ಕೆಲವು ವರದಿಗಳ ಪ್ರಕಾರ, ಸ್ಟಾರ್‌ಲಿಂಕ್ ಇಂಟರ್‌ನೆಟ್ ಪಡೆಯಲು ಹಾರ್ಡ್‌ವೇರ್ ಕಿಟ್‌ನ ಸ್ಥಾಪನಾ ವೆಚ್ಚ ಸುಮಾರು ₹30,000 ಆಗಿದ್ದು, ಪ್ರತಿ ತಿಂಗಳ ಚಂದಾದಾರಿಕೆ ₹3,300ರಿಂದ ಪ್ರಾರಂಭವಾಗಬಹುದು. ನಂತರ ಹೆಚ್ಚಿನ ವೇಗದ ಪ್ಲ್ಯಾನ್‌ಗಳು ಮತ್ತು ಪ್ರೀಮಿಯಂ ಆಯ್ಕೆಗಳು ಹಂತ ಹಂತವಾಗಿ ಪರಿಚಯವಾಗುವ ಸಾಧ್ಯತೆ ಇದೆ. ಸೇವೆ ಪ್ರಾರಂಭವಾದ ಬಳಿಕ, ಸ್ಟಾರ್‌ಲಿಂಕ್ 25 Mbps ರಿಂದ 225 Mbps ವರೆಗೆ ಡೌನ್‌ಲೋಡ್ ವೇಗ ಒದಗಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ದೇಶದ ಎಲ್ಲೆಡೆ ಇಂಟರ್‌ನೆಟ್ ಸಂಪರ್ಕ ಸಾಧ್ಯವೇ?
ಕಳೆದ ಕೆಲವು ವರ್ಷಗಳಲ್ಲಿ ಭಾರತವು ಇಂಟರ್‌ನೆಟ್ ಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಸಾಕ್ಷಿಯಾಗಿದೆ. ಇದೀಗ ಸ್ಟಾರ್‌ಲಿಂಕ್‌ನ ಆಗಮನದಿಂದ ಭಾರತದ ಡಿಜಿಟಲ್ ಸಂಪರ್ಕದ ದಿಕ್ಕಿನಲ್ಲಿ ದೊಡ್ಡ ಬದಲಾವಣೆ ಸಾಧ್ಯ ಎನ್ನುತ್ತಿವೆ ವರದಿಗಳು. ಸ್ಟಾರ್‌ಲಿಂಕ್‌ನಿಂದ ದೇಶದಲ್ಲಿನ ಪರ್ವತ ಪ್ರದೇಶಗಳು, ಹಳ್ಳಿಗಳು ಮತ್ತು ಇಂಟರ್‌ನೆಟ್‌ ಲಭ್ಯವಿಲ್ಲದ ಪ್ರದೇಶಗಳಿಗೂ ಬ್ರಾಡ್‌ಬ್ಯಾಂಡ್ ಸಂಪರ್ಕ ಸಿಗುವ ಸಾಧ್ಯತೆ ಇದೆ. ಇದರಿಂದ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಹೊಸ ಸಾಧ್ಯತೆಗಳು ತೆರೆಯಬಹುದೆಂಬ ನಿರೀಕ್ಷೆ ಇದೆ. ಈ ಕುರಿತಂತೆ ನಿಮ್ಮ ಅನಿಸಿಕೆಗಳೇನು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Starlink is set to conduct demonstrations under the GMPCS license provided by the Government of India. These evaluations are occurring within a spectrum that has been temporarily allocated, as Starlink seeks to obtain the essential technical and regulatory approvals required to commence its services in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+