Home
ಸುದ್ದಿಜಾಲ

ಆ್ಯಪಲ್‌ನ ಎಲ್ಲ ಸಾಧನಗಳನ್ನು ಬ್ಯಾನ್ ಮಾಡುತ್ತೇನೆ: ಎಲಾನ್‌ ಮಸ್ಕ್ ಎಚ್ಚರಿಕೆ

ಟೆಕ್​ ದೈತ್ಯ ಆ್ಯಪಲ್​ (Apple) ನಿನ್ನೆ ಐಫೋನ್ (iPhone), ಐಪ್ಯಾಡ್ ಮತ್ತು ಮ್ಯಾಕ್‌ಗಾಗಿ ವೈಯಕ್ತಿಕ ಗುಪ್ತಚರ ವ್ಯವಸ್ಥೆಯಾದ ಆ್ಯಪಲ್ ಇಂಟೆಲಿಜೆನ್ಸ್ ಅನ್ನು ಪರಿಚಯಿಸಿದೆ. ಜೊತೆಗೆ, ಐಫೋನ್​ ತಯಾರಕರು OpenAI ಜೊತೆ ಪಾಲುದಾರಿಕೆಯನ್ನು ಘೋಷಿಸಿದ್ದಾರೆ. ಈ ಬೆನ್ನಲ್ಲೇ ಟೆಸ್ಲಾ ಸಿಇಒ ಮತ್ತು ಎಕ್ಸ್​ ಮಾಲೀಕ ಎಲಾನ್‌ ಮಸ್ಕ್ (Elon Musk) ಅವರು ಆ್ಯಪಲ್ ಕಂಪನಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.​ 'ನನ್ನ ಕಂಪನಿಗಳಿಂದ ಆ್ಯಪಲ್‌ನ ಎಲ್ಲ ಸಾಧನಗಳನ್ನು ನಿಷೇಧಿಸಲಾಗುವುದು' ಎಂದು ಎಲಾನ್‌ ಮಸ್ಕ್​ ಎಚ್ಚರಿಕೆ ನೀಡಿದ್ದಾರೆ.

ಆಪಲ್‌ ಸಂಸ್ಥೆಯು ಕ್ಯಾಲಿಫೋರ್ನಿಯಾದಲ್ಲಿ ನಡೆದ ತನ್ನ ವಾರ್ಷಿಕ ವರ್ಲ್ಡ್‌ವೈಡ್ ಡೆವಲಪರ್‌ಗಳ (WWDC) ಸಮ್ಮೇಳನದಲ್ಲಿ ಸಾಕಷ್ಟು ಅಪ್ಡೇಟ್‌ಗಳನ್ನು ಘೋಷಿಸಿದೆ. ಆಪಲ್‌ ಪ್ರಿಯರಿಗೆ ಕಾರ್ಯಕ್ರಮದಲ್ಲಿ ಕೆಲವು ಸಿಹಿ ಸುದ್ದಿಗಳನ್ನು ನೀಡಿದೆ. ಮುಖ್ಯವಾಗಿ ಈ ಸಮಾರಂಭದಲ್ಲಿ ಆಪಲ್‌ ಸಂಸ್ಥೆಯು, OpenAI ಜೊತೆ ಪಾಲುದಾರಿಕೆಯನ್ನು ಘೋಷಿಸಿತು. ಇದು ಎಲಾನ್‌ ಮಸ್ಕ್ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ, ಆ್ಯಪಲ್​ ಸಿಇಒ ಟಿಮ್​ ಕುಕ್ ವಿರುದ್ಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಆ್ಯಪಲ್‌ನ ಎಲ್ಲ ಸಾಧನಗಳನ್ನು ಬ್ಯಾನ್ ಮಾಡುತ್ತೇನೆ: ಎಲಾನ್‌ ಮಸ್ಕ್ ಎಚ್ಚರಿಕೆ

ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಎಲಾನ್‌ ಮಸ್ಕ್, ಐಫೋನ್​ ತಯಾರಕರು ಆಪರೇಟಿಂಗ್​ ಸಿಸ್ಟಮ್ ಮಟ್ಟದಲ್ಲಿ OpenAI ಅನ್ನು ಸಂಯೋಜಿಸಿದರೆ ತನ್ನ ಕಂಪನಿಗಳಿಂದ ಎಲ್ಲ ಆ್ಯಪಲ್​ ಸಾಧನಗಳನ್ನು ನಿಷೇಧಿಸುವುದಾಗಿ ತಿಳಿಸಿದ್ದಾರೆ. ಎರಡು ಕಂಪನಿಗಳ ನಡುವಿನ ಒಪ್ಪಂದವು, ಇದು ಸ್ವೀಕರಿಸಲು ಸಾಧ್ಯವಿಲ್ಲದ ಭದ್ರತಾ ಉಲ್ಲಂಘನೆಯಾಗಿದೆ. ಇದನ್ನು ನಾನು ಬಯಸುವುದಿಲ್ಲ ಎಂದು ಬಳಕೆದಾರರ ಮಾಹಿತಿಯ ರಕ್ಷಣೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಆ್ಯಪಲ್​ ಸಿಇಒ ಟಿಮ್​ ಕುಕ್ ಅವರು​, iPhone, iPad, ಮತ್ತು Macಗೆ ಆ್ಯಪಲ್​ ಇಂಟೆಲಿಜೆನ್ಸ್​ ಅನ್ನು ಪರಿಚಯಿಸುತ್ತಿದ್ದೇವೆ. AIನಲ್ಲಿ ನಮ್ಮ ಮುಂದಿನ ಅಧ್ಯಾಯ ಪ್ರಾರಂಭವಾಗಲಿದೆ. ಇದು ವೈಯಕ್ತಿಕ, ಶಕ್ತಿಯುತ ಮತ್ತು ಖಾಸಗಿ. ಇದನ್ನು ನೀವು ಪ್ರತಿದಿನ ಬಳಸುವಂತಹ ಅಪ್ಲಿಕೇಶನ್‌ಗಳಲ್ಲಿ ಸಂಯೋಜಿಸಲಾಗಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಲಾನ್‌ ಮಸ್ಕ್​ ಅವರು, ತಮ್ಮ ಕಂಪನಿಗಳಲ್ಲಿ ಎಲ್ಲಾ ಆ್ಯಪಲ್​ ಸಾಧನಗಳನ್ನು ನಿಷೇಧಿಸಲಾಗುವುದು ಎಂದು ಖಡಕ್‌ ಆಗಿ ಸೂಚನೆ ನೀಡಿದ್ದಾರೆ.

ವೈಯಕ್ತಿಕ ಲಾಭಕ್ಕಾಗಿ ಮೋಸ ಮಾಡುತ್ತಿದ್ದಾರೆ

ಆ್ಯಪಲ್ ತನ್ನದೇ ಆದ AI ಅನ್ನು ತಯಾರಿಸಲು ಸಾಕಷ್ಟು ಸ್ಮಾರ್ಟ್ ಆಗಿಲ್ಲ. ಆದರೆ, OpenAI ನಿಮ್ಮ ಸುರಕ್ಷತೆ ಮತ್ತು ಗೌಪ್ಯತೆಯನ್ನು ರಕ್ಷಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಸಮರ್ಥವಾಗಿದೆ ಎಂಬುದು ಅಸಂಬದ್ಧವಾಗಿದೆ. ನಿಮ್ಮ ಡೇಟಾವನ್ನು ಓಪನ್‌ ಎಐಗೆ ಹಸ್ತಾಂತರಿಸಿದ ಬಳಿಕ ನಿಜವಾಗಿ ಏನಾಗುತ್ತದೆ ಎಂಬುದರ ಬಗ್ಗೆ ಆಪಲ್‌ಗೆ ಯಾವುದೇ ಸುಳಿವು ಇಲ್ಲ. ಅವರ ವೈಯಕ್ತಿಕ ಲಾಭಕ್ಕಾಗಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ಎಲಾನ್‌ ಮಸ್ಕ್ ಆರೋಪ ಮಾಡಿದ್ದಾರೆ.

ಈ ತೆವಳುವ ಸ್ಪೈವೇರ್​ ಅನ್ನು ನಿಲ್ಲಿಸಿ

ಒಂದೋ ಈ ತೆವಳುವ ಸ್ಪೈವೇರ್​ ಅನ್ನು ನಿಲ್ಲಿಸಿ. ಅಥವಾ ನನ್ನ ಕಂಪನಿಗಳ ಆವರಣದಿಂದ ಎಲ್ಲ ಆ್ಯಪಲ್​ ಸಾಧನಗಳನ್ನು ನಿಷೇಧಿಸಲಾಗುವುದು ಎಂದು ಆ್ಯಪಲ್​ ಸಿಇಒ ಟಿಮ್​ ಕುಕ್​ ಅವರ ಎಕ್ಸ್​ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಐಫೋನ್, ಐಪ್ಯಾಡ್ ಮತ್ತು ಮ್ಯಾಕ್‌ಗಾಗಿ ವೈಯಕ್ತಿಕ ಗುಪ್ತಚರ ವ್ಯವಸ್ಥೆಯಾದ 'ಆ್ಯಪಲ್ ಇಂಟೆಲಿಜೆನ್ಸ್' ಅನ್ನು ಪರಿಚಯಿಸಿತು. iOS 18, iPadOS 18, ಮತ್ತು macOS Sequoiaಗೆ Apple Intelligence ಅನ್ನು ಆಳವಾಗಿ ಸಂಯೋಜಿಸಲಾಗಿದೆ. ಇತ್ತ, ಎಲಾನ್‌ ಮಸ್ಕ್ ಅಪಸ್ವರ ಎತ್ತಿದ್ದಾರೆ.

ಓಪನ್‌ಎಐ ಬಗ್ಗೆ ಎಲಾನ್ ಮಸ್ಕ್‌ಗೆ ಪ್ರೀತಿಯಿಲ್ಲ!

ಒಟ್ನಲ್ಲಿ, ಎಲಾನ್‌ ಮಸ್ಕ್ ಅವರಿಗೆ ಓಪನ್‌ಎಐ ಬಗ್ಗೆ ಯಾವುದೇ ಒಲವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮಾರ್ಚ್ 2024ರಲ್ಲಿ, ಚಾಟ್‌ಜಿಪಿಟಿ-ತಯಾರಕರು ಮತ್ತು ಅದರ ಸಂಸ್ಥಾಪಕ ಸ್ಯಾಮ್ ಆಲ್ಟ್‌ಮ್ಯಾನ್ ವಿರುದ್ಧ ಮೊಕದ್ದಮೆ ಹೂಡಿದ್ದರು. ಕಂಪನಿಯು ಮಾನವೀಯತೆಯ ಒಳಿತಿಗಾಗಿ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸುವ ತನ್ನ ಮೂಲ ಉದ್ದೇಶವನ್ನು ತ್ಯಜಿಸಿದೆ ಮತ್ತು ಅದನ್ನು ಲಾಭಕ್ಕಾಗಿ ಮಾಡುತ್ತಿದೆ ಎಂದು ಆರೋಪ ಮಾಡಿದ್ದರು. ಅಲ್ಲದೆ, X ಮತ್ತು ಟೆಸ್ಲಾ ಮಾಲೀಕರು, 2023ರಲ್ಲಿ ChatGPTಗೆ ನೇರ ಪ್ರತಿಸ್ಪರ್ಧಿಯಾದ XAI ಅನ್ನು ಸ್ಥಾಪಿಸಿದರು.

Best Mobiles in India

English summary
Elon Musk threatens iPhone ban over OpenAI integration. If Apple integrates OpenAI at the OS level, then Apple devices will be banned at my companies. That is an unacceptable security violation says.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+