ಈ- ಮೇಲ್ ಮಾಡಿದರೂ ತಪ್ಪಿಸಿಕೊಳ್ಳಬಹುದು

Posted By: Staff
ಈ- ಮೇಲ್ ಮಾಡಿದರೂ ತಪ್ಪಿಸಿಕೊಳ್ಳಬಹುದು

 

ನೀವು ಹಳೇ ಗೆಳತಿಗೆಂದು ಬರೆದ ಈ-ಮೇಲ್ ಇರಬಹುದು, ಇಲ್ಲವೆ ಅಶ್ಲ್ಲೀಲ ಈ -ಮೇಲ್ ಫಾರ್ವರ್ಡ್ ಮಾಡಿರಬಹುದು, ಅಥವಾ ನಿಮ್ಮ ಖಾಸಗಿ ಚಿತ್ರಗಳನ್ನ ಗೆಳೆಯನಿಗೆ ಮೇಲ್ ಕಳುಹಿಸಿದ್ದು ಅವನು ಎಂದಾದರೊಂದು ದಿನ ಬ್ಲಾಕ್ ಮೇಲ್ ಮಾಡಬಹುದು ಎನ್ನುವ ಚಿಂತೆ ಇದ್ದರೆ ಮರೆತುಬಿಡಿ.

ನಮ್ಮಂಥವರ ಮನಸ್ಸು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಜಾಕೋಬ್ ರೋಬ್ಬಿನ್ಸ್ ಎಂಬಾತ ಕಂಡುಹಿಡಿದಿರುವ ವೆಬ್ಸೈಟ್ ನಿಂದ ನೀವು ಈ-ಮೇಲ್  ಕಳುಹಿಸಿದರೆ ಅದು ಇಂಟರ್ನೆಟ್ ನಲ್ಲಿ ಸೇವ್  ಆಗುವುದೇ ಇಲ್ಲ. ಎಷ್ಟು ಸಮಯದ ನಂತರ ನೀವು ಆ ಈ - ಮೇಲ್ ಡಿಲೀಟ್ ಆಗಬೇಕು ಅಂತ ಸೆಟ್ ಮಾಡಿಬಿಟ್ಟರೆ ಸಾಕು, ಅಷ್ಟು ಸಮಯದ ನಂತರ ಅವರು ಓದಿದ ತಕ್ಷಣ ಡಿಲೀಟ್ ಆಗಿಬಿಡುತ್ತದೆ. ಅದೂ ಅಲ್ಲದೆ ನೀವು ಕಳಿಸಿದ ವ್ಯಕ್ತಿಯೂ ನಿಮ್ಮ ಮೇಲ್ ಅನ್ನು ಸೇವ್ ಮಾಡಲಾಗುವುದಿಲ್ಲ. ಕಾಪಿ ಮಾಡುವುದು, ಪೇಸ್ಟ್ ಮಾಡುವುದು,ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದೂ ಸಾಧ್ಯವಾಗುವುದಿಲ್ಲ.

ಇನ್ನು ಮುಂದೆ ನೀವು ಅರ್ಜೆಂಟ್ ಆಗಿ ಪಾಸ್ವರ್ಡ್ ಅನ್ನೋ, ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನೋ ಮೇಲ್ ಮಾಡಿದರೂ ನಿಶ್ಚಿಂತೆಯಾಗಿರಬಹುದು.

ನೀವು ಕ್ಲಿಕ್ ಮಾಡಬೇಕಾದ ಲಿಂಕ್ - https://burnnote.com/#/

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot