ಆಪಲ್ ಸಂಸ್ಥೆಯಲ್ಲಿ ಇನ್ಮುಂದೆ ನಿಂತೆ ಕೆಲಸ ಮಾಡಬೇಕಂತೆ..!

By GizBot Bureau
|

ಆಪಲ್ ಸಂಸ್ಥೆಯಲ್ಲಿ ಕೆಲಸ ಮಾಡುವುದು ಎಂದರೆ ಏನೋ ಒಂದು ರೀತಿಯ ಹೆಮ್ಮೆ ಮತ್ತು ವಿಶ್ವಾಸ. ಲೈಫ್ ಸೆಟಲ್ ಅನ್ನೋ ಭಾವನೆ ಹೆಚ್ಚಿನವರಿಗೆ ಇದ್ದೇ ಇರುತ್ತೆ. ಯಾಕೆಂದರೆ ಅಷ್ಟು ದೊಡ್ಡ ಸಂಸ್ಥೆ, ಕೈ ತುಂಬಾ ಸಂಬಳ, ಹೆಸರುವಾಸಿ ಸಂಸ್ಥೆ, ಒಳ್ಳೆ ಸವಲತ್ತುಗಳು, ದೊಡ್ಡ ದೊಡ್ಡ ಕ್ಯಾಂಪಸ್ ಗಳು ಎಂದು ಪ್ರತಿಯೊಬ್ಬರೂ ಆಸೆ ಪಡುತ್ತಾರೆ.

ಶಿಯೋಮಿ ನೀಡಿದೆ ರೆಡ್ ಮಿ ನೋಟ್ 5 ಪ್ರೋ ಗೆಲ್ಲುವ ಅವಕಾಶ... ಫುಟ್ಬಾಲ್ ಪ್ರಿಯರಿಗೆ ಬಂಪರ್..!ಶಿಯೋಮಿ ನೀಡಿದೆ ರೆಡ್ ಮಿ ನೋಟ್ 5 ಪ್ರೋ ಗೆಲ್ಲುವ ಅವಕಾಶ... ಫುಟ್ಬಾಲ್ ಪ್ರಿಯರಿಗೆ ಬಂಪರ್..!

ಕ್ಯಾಲಿಫೋರ್ನಿಯಾದ ಸಂತ ಕ್ಲಾರಾ ವ್ಯಾಲಿಯಲ್ಲಿರುವ ಆಪಲ್ ಕ್ಯಾಂಪಸ್ 175 ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲಿ ನೀವು ಕೆಲಸ ಮಾಡಬೇಕು ಎಂದರೆ, ಸ್ವಲ್ಪ ಗಟ್ಟಿ ಮನಸ್ಸು ಮಾಡಿಕೊಂಡಿರಬೇಕಾಗುತ್ತದೆ. ಯಾಕೆಂದರೆ ಆಪಲ್ ಸಂಸ್ಥಾಪಕ ಆರೋಗ್ಯದ ವಿಷಯದಲ್ಲಿ ಭಾರೀ ಕಟ್ಟು ನಿಟ್ಟು. ಖುರ್ಚಿ ಭರ್ತಿಗೆ ಕೆಲಸಕ್ಕೆ ಯಾರನ್ನೂ ಸೇರಿಸಿಕೊಳ್ಳುವುದಿಲ್ಲ.

ಆಪಲ್ ಸಂಸ್ಥೆಯಲ್ಲಿ ಇನ್ಮುಂದೆ ನಿಂತೆ ಕೆಲಸ ಮಾಡಬೇಕಂತೆ..!

ನೀವಿಲ್ಲಿ ಕೆಲಸಕ್ಕೆ ಸೇರಿದ್ದೀರಿ ಅಂದ ಮೇಲೆ ನಿಮ್ಮ 100 ಪರ್ಸೆಂಟ್ ನೀವು ನೀಡಲೇಬೇಕು. ಇಲ್ಲ ಅಂದರೆ ನೀವಲ್ಲಿ ಕೆಲಸಕ್ಕೆ ನಾಲಾಯಕ್ ಆಗಿ ಬಿಡುತ್ತೀರಿ. ಎಸ್, ಕುಳಿತುಕೊಂಡೇ ಕೆಲಸ ಮಾಡಿದರೆ ಕ್ಯಾನ್ಸರ್ ಬರುತ್ತೆ ಎಂಬ ನಿರ್ಧಾರಕ್ಕೆ ಬಂದ ಆಪಲ್ ಸಂಸ್ಥೆ ತನ್ನೆಲ್ಲ ನೌಕರರಿಗೆ ನಿಂತು ಕೊಂಡು ಕೆಲಸ ಮಾಡಲು ಪ್ರೊತ್ಸಾಹಿಸಿದೆ., ಅದಕ್ಕಾಗಿ ಹೊಸ ಖುರ್ಚಿ ಮೇಜುಗಳು ಆಫೀಸಿಗೆ ಎಂಟ್ರಿ ಕೊಟ್ಟಿವೆ.

ಆಪಲ್ ಸಂಸ್ಥೆ ತನ್ನ ಆಫೀಸಿನ ಒಳಗೆ ನಡೆಯುವ ವಿಷಯಗಳ ಬಗ್ಗೆ ಗುಪ್ತವಾಗಿರುತ್ತದೆ. ಆದರೆ ಇತ್ತೀಚೆಗೆ ಆಪಲ್ ನ ಚೀಫ್ ಎಕ್ಸಿಕ್ಯೂಟೀವ್ ಆಫೀಸರ್ ಟಿಮ್ ಕುಕ್ ತಮ್ಮ ಬ್ಲೂಮ್ ಬರ್ಗ್ ಇಂಟರ್ ವ್ಯೂ ನಲ್ಲಿ ಚಾರ್ಲೇ ಗ್ರೂಪ್ ನ ಡೇವಿಡ್ ರೂಬೆನ್ಸ್ಟೈನ್ ಜೊತೆಗೆ ಒಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದೇನು ಅಂದರೆ, ಆಪಲ್ ಸಂಸ್ಥೆಯು ತನ್ನೆಲ್ಲ ನೌಕರರಿಗೆ ಶೇಕಡಾ 100 ರಷ್ಟು ನಿಂತುಕೊಂಡು ಕೆಲಸ ಮಾಡುವಂತ ಮೇಜುಗಳನ್ನು ನೀಡಿದೆಯಂತೆ, ಯಾವಾಗಲೂ ಕುಳಿತೇ ಕೆಲಸ ಮಾಡಿದರೆ ಜೀವನಶೈಲಿಗೆ ಹಿತವಾದುದ್ದಲ್ಲ ಹಾಗಾಗಿ ಆಪಲ್ ಸಂಸ್ಥೆ ಈ ನಿರ್ಧಾರ ಮಾಡಿದೆ ಎಂಬುದನ್ನೂ ಕೂಡ ಅವರು ಇಂಟರ್ ವ್ಯೂ ನಲ್ಲಿ ತಿಳಿಸಿದ್ದಾರೆ.

ಆಪಲ್ ಸಂಸ್ಥೆಯಲ್ಲಿ ಇನ್ಮುಂದೆ ನಿಂತೆ ಕೆಲಸ ಮಾಡಬೇಕಂತೆ..!

ಕುತೂಹಲಕಾರಿ ವಿಷಯ ಏನೆಂದರೆ ಇಂಟರ್ ವ್ಯೂ ನ ಸಂದರ್ಬದಲ್ಲೂ ಕೂಡ ಕುಕ್ ನಿಂತುಕೊಳ್ಳುವುದಕ್ಕೆ ಹೆಚ್ಚು ಪ್ರೊತ್ಸಾಹಿಸಿದ್ದರು. ಅಷ್ಟೇ ಅಲ್ಲ, ಕುಕ್ ತಾವು ನಿಂತು ಕೊಂಡು ಕೆಲಸ ಮಾಡುವುದರಲ್ಲಿ ಹೆಚ್ಚು ಆಸಕ್ತಿ ತೋರುತ್ತಾರೆ. ಮತ್ತು ಕುಳಿತುಕೊಂಡೇ ಇರುವುದರಿಂದಾಗುವ ಆರೋಗ್ಯ ಅಪಾಯಗಳ ಬಗ್ಗೆ ಎಚ್ಚರವಾಗಿರುವಂತೆ ಸಲಹೆ ನೀಡುತ್ತಾರೆ.

ಹಿಂದೊಮ್ಮೆ ವೈದ್ಯರಿಗೂ ಕೂಡ ಕುಕ್ “ ಕುಳಿತುಕೊಂಡೇ ಇರುವುದೊಂದು ರೀತಿಯ ಕ್ಯಾನ್ಸರ್ “ ಎಂದು ವಿವರಿಸಿದ್ದರು, 2015 ರ ಗೋಲ್ಡ್ ಮ್ಯಾನ್ ಸ್ಯಾಚ್ಸ್ ಟೆಕ್ನಾಲಜಿಯ ಇಂಟರ್ ವ್ಯೂ ಮತ್ತು ಇಂಟರ್ ನೆಟ್ ಕಾನ್ಫರೆನ್ಸ್ ನಲ್ಲಿ ಅವರು “ ನಾನು ಅತೀ ಹೆಚ್ಚು ಸಮಯ ಕುಳಿತುಕೊಂಡೇ ಇದ್ದರೆ, ಅದು ನನಗೆ ಎದ್ದು ನಿಲ್ಲುವಂತೆ ಮತ್ತು ಓಡಾಡುವಂತೆ ಪ್ರೇರೇಪಿಸುತ್ತದೆ. ಯಾಕೆಂದರೆ ಹೆಚ್ಚಿನ ವೈದ್ಯರು ಕುಳಿತುಕೊಂಡೇ ಇರುವುದನ್ನು ಹೊಸ ರೀತಿಯ ಕ್ಯಾನ್ಸರ್ ಎಂದು ಪರಿಗಣಿಸುತ್ತಾರೆ “ ಎಂದು ಹೇಳಿಕೆ ನೀಡಿದ್ದರು.

ಆದರೆ, ಆಪಲ್ ನೌಕರರು ನಿಂತುಕೊಂಡು ಕೆಲಸ ಮಾಡುವ ಮೇಜುಗಳನ್ನು ನಿರ್ಮಿಸಿ, ನೌಕರರಿಗೆ ಅನೇಕ ಲಾಭಗಳನ್ನು ತಂದುಕೊಂಡು ನಿಟ್ಟಿನಲ್ಲಿ ಕ್ಯಾಂಪಸ್ ನಲ್ಲಿ ಬರೋಬ್ಬರಿ 5 ಬಿಲಿಯನ್ ಡಾಲರ್ ಹಣವನ್ನು ಆಪಲ್ ಸಂಸ್ಥೆ ವ್ಯಯಿಸಿದೆ. ಆಪಲ್ ಪಾರ್ಕ್ ನಲ್ಲಿ ಆಪಲ್ ನ ನೌಕರರಿಗಾಗಿ ದೊಡ್ಡದಾದ ಅಂದರೆ ಸುಮಾರು 100,000 ಸ್ಕ್ಯಾರ್ ಫೀಟ್ ನ ಫಿಟ್ ನೆಸ್ ಸೆಂಟರ್ ಇದೆ. ಇದರಲ್ಲಿ ಎರಡು ಮೈಲಿಗಳ ವರೆಗೆ ನಡೆಯಬಹುದಾದ ಮತ್ತು ಓಡಬಹುದಾದ ಜಾಗವೂ ಇದೆ. ಕ್ಯಾಂಪಸ್ ನ ಸೌಂದರ್ಯದ ರಾಶಿಗೆ ಇನ್ನೊಂದು ಸೇರ್ಪಡೆ ಎಂಬಂತೆ ಹುಲ್ಲುಗಾವಲಿನಂತಹ ಪ್ರದೇಶ ಮತ್ತು ಕೊಳಗಳಂತ ಪ್ರದೇಶವನ್ನೂ ಇದರೊಳಗೆ ನಿರ್ಮಿಸಲಾಗಿದೆ.

ಆಪಲ್ ಸಂಸ್ಥೆಯಲ್ಲಿ ಇನ್ಮುಂದೆ ನಿಂತೆ ಕೆಲಸ ಮಾಡಬೇಕಂತೆ..!

ಆಪಲ್ ನೌಕರರಿಗೆ ವಿಶೇಷವಾಗಿ ತಯಾರಿಸುವ ಪೀಠೋಪಕರಣಗಳೂ ಇವು ಕ್ಯಾಂಪಸ್ ನ ಒಳಗಿದ್ದು, ಕ್ಯಾಂಪಸ್ ಸೌಂದರ್ಯಕ್ಕೆ ಕೈಗನ್ನಡಿ ಹಿಡಿದಂತಿದೆ. ಇದರ ಒಳಗಿರುವ ಸೊಗಸಾದ ಕೆಲವು ಮೇಜು ಖುರ್ಚಿಗಳಂತ ಪೀಠೋಪಕರಣಗಳನ್ನು ವಿತಾರ ಡಿಸೈನ್ ಮಾಡಿದ್ದು ಅದರೊಂದರ ಬೆಲೆ 1,200 ಡಾಲರ್ ( ಅಂದಾಜು 81,000 ರೂಪಾಯಿಗಳು) ಆಗಿದೆ. ಕೆಫೆ ಮತ್ತು ಸಾಮಾನ್ಯ ಪ್ರದೇಶದಲ್ಲಿರುವ ಟೇಬಲ್ ಗಳು , ಖುರ್ಚಿಗಳನ್ನು ನಾವೊಟೊ ಫುಕಾಸಾವಾ, ಡಿಸೈನ್ ಮಾಡಿದ್ದು ಅದರ ಒಂದರ ಬೆಲೆ 2,500 ಡಾಲರ್ ( ಅಂದಾಜು 1.69 ಲಕ್ಷ ರುಪಾಯಿಗಳು) ಆಗಿದೆ.
Best Mobiles in India

Read more about:
English summary
Employees in Apple office are getting standing desks because sitting is the new cancer. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X