ಡೆಬಿಟ್/ಕ್ರೆಡಿಟ್ ಕಾರ್ಡ್ಗಳು ಸ್ಥಗಿತ!..ಇನ್ಮುಂದೆ ಎಲ್ಲರಿಗೂ ಹೊಸ 'ಇಎಂವಿ' ಕಾರ್ಡ್!!

|

ಹಲವು ಬ್ಯಾಂಕ್‌ಗಳು ಮ್ಯಾಗ್ನೆಟಿಕ್ ಕಾರ್ಡ್‌ಗಳನ್ನು ಹತ್ತು ವರ್ಷದ ಅವಧಿವರೆಗೆ ಬಳಕೆಗೆ ತಂದವು. ಈ ಅವಧಿ ಮುಗಿದ ನಂತರ ಅವುಗಳ ಆಯಸ್ಸನ್ನು ಮತ್ತೆ ಹತ್ತು ವರ್ಷ ಹೆಚ್ಚಿಸಿದವು. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಇತ್ತೀಚಿನ ಆದೇಶಗಳ ‍ಪ್ರಕಾರ, ಈ ಮ್ಯಾಗ್ನೆಟಿಕ್ ಕಾರ್ಡ್‌ಗಳು ಡಿಸೆಂಬರ್ 31ರ ನಂತರ ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳಲಿವೆ.

ಎಲ್ಲ ಬ್ಯಾಂಕ್‌ಗಳೂ ಮ್ಯಾಗ್ನೆಟಿಕ್ ಡೆಬಿಟ್ ಕಾರ್ಡ್‌ಗಳನ್ನು ಹೊಸ ಯುರೊಪೇ ಮಾಸ್ಟರ್ ವೀಸಾ ಚಿಪ್ ಕಾರ್ಡ್‌ಗಳಾಗಿ ಬದಲಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಕಾರ್ಡ್ ಬದಲಿಸಿಕೊಳ್ಳುವಂತೆ ಗ್ರಾಹಕರ ಮೊಬೈಲ್‌ಗಳಿಗೆ ಸಂದೇಶಗಳನ್ನು ಕಳುಹಿಸುತ್ತಿವೆ. ನೀವು ಹಳೆಯ ಡೆಬಿಟ್ ಕಾರ್ಡ್‌ಗಳನ್ನೇ ಬಳಸುತ್ತಿದ್ದರೆ ಕೂಡಲೇ ಇವುಗಳಿಗೆ ಬದಲಾಗಬೇಕಾಗುತ್ತದೆ.

ಡೆಬಿಟ್/ಕ್ರೆಡಿಟ್ ಕಾರ್ಡ್ಗಳು ಸ್ಥಗಿತ!..ಇನ್ಮುಂದೆ ಎಲ್ಲರಿಗೂ ಹೊಸ 'ಇಎಂವಿ' ಕಾರ್ಡ

ನೀವು ನಿಮ್ಮ ಬ್ಯಾಂಕ್‌ ಶಾಖೆಗೆ ಹೋಗಿ ಹಳೆಯ ಡೆಬಿಟ್ ಕಾರ್ಡ್ ಅನ್ನು ವಾಪಸ್ ಮಾಡಿದ ನಂತರ ಹೊಸ ಯುರೊಪೇ ಮಾಸ್ಟರ್ ವೀಸಾ (ಇಎಂವಿ) ಕಾರ್ಡ್ ಅನ್ನು ಪಡೆದುಕೊಳ್ಳುತ್ತೀರಾ. ಹಾಗಾದರೆ, ಏನಿದು ಯುರೊಪೇ ಮಾಸ್ಟರ್ ವೀಸಾ (ಇಎಂವಿ) ಕಾರ್ಡ್? ಈ ನೂತನ ಕಾರ್ಡ್‌ಗಳನ್ನು ಬ್ಯಾಂಕ್‌ಗಳು ನೀಡುತ್ತಿರುವ ಉದ್ದೇಶವೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಇಎಂವಿ ಕಾರ್ಡ್‌ನ ವಿಶೇಷಗಳೇನು?

ಇಎಂವಿ ಕಾರ್ಡ್‌ನ ವಿಶೇಷಗಳೇನು?

ಈ ಕಾರ್ಡ್‌ ಅನ್ನು ಸ್ವೈಪ್ ಮಾಡಿದ ಪ್ರತಿ ಬಾರಿ, ಆ ವಹಿವಾಟಿಗೆ ಮಾತ್ರ ಸೀಮಿತವಾಗುವಂತೆ ಒಂದು ಪ್ರತ್ಯೇಕ ಕೋಡ್‌ ರಚನೆಯಾಗುತ್ತದೆ. ಈ ಕೋಡ್ ಮತ್ತೊಂದು ವಹಿವಾಟಿಗೆ ಉಪಯೋಗವಾಗುವುದಿಲ್ಲ. ಹೀಗಾಗಿ ಖಾತೆಯಲ್ಲಿನ ಹಣ ಸೋರಿಕೆಯಾಗುವುದಿಲ್ಲ. ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಹಿವಾಟು ನಡೆಸಲು ಸಹ ಸಾಧ್ಯವಾಗುತ್ತದೆ.

ನಕಲಿ ಕಾರ್ಡ್‌ ಸೃಷ್ಟಿ ಅಸಾಧ್ಯ

ನಕಲಿ ಕಾರ್ಡ್‌ ಸೃಷ್ಟಿ ಅಸಾಧ್ಯ

ಮ್ಯಾಗ್ನೆಟಿಕ್ ಕಾರ್ಡ್‌ನಲ್ಲಿನ ಮಾಹಿತಿಯನ್ನು ಕದ್ದು, ಅದನ್ನು ಕ್ಲೋನ್ ಮಾಡಿ, ನಕಲಿ ವಹಿವಾಟು ನಡೆಸುವ ಹಾಗೆ ಯುರೊಪೇ ಮಾಸ್ಟರ್ ವೀಸಾ ಚಿಪ್‌ ಕಾರ್ಡ್‌ನಲ್ಲಿ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಮಾಹಿತಿಯನ್ನು ಕದ್ದರೂ ಆ ಮಾಹಿತಿ ಮೂಲಕ ಮತ್ತೊಂದು ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಅಂತಹ ಸುರಕ್ಷಿತ ತಂತ್ರಜ್ಞಾನವನ್ನು ಈ ಕಾರ್ಡ್ ಹೊಂದಿದೆ.

ಅತ್ಯಂತ ಸುರಕ್ಷಿತವೇಕೆ?

ಅತ್ಯಂತ ಸುರಕ್ಷಿತವೇಕೆ?

ಯುರೊಪೇ ಮಾಸ್ಟರ್ ವೀಸಾ ಚಿಪ್‌ ಕಾರ್ಡ್‌ನಲ್ಲಿ ಅಳವಡಿಸಿರುವ ತಂತ್ರಜ್ಞಾನದಿಂದಾಗಿ ಖಾತೆದಾರನ ಮಾಹಿತಿ ಸದಾ ಸುರಕ್ಷಿತವಾಗಿವೆ. ಈ ಕಾರ್ಡ್‌ನವ ಚಿಪ್‌ನಲ್ಲಿ ಖಾತೆದಾರನ ಬ್ಯಾಂಕ್ ವಿವರ ಎನ್‌ಕ್ರಿಪ್ಟ್ ರೂಪದಲ್ಲಿ ಅಡಗಿರುತ್ತದೆ. ಇದರಿಂದ ಒಮ್ಮೆ ನಡೆಸಿದ ಬ್ಯಾಂಕ್ ವ್ಯವಹಾರದ ಮಾಹಿತಿ ಅಳಿಸಿಹೋಗುತ್ತದೆ. ಇದರಿಂದ ನಿಮ್ಮ ಹಣವನ್ನು ಕಳ್ಳರು ದೋಚಲು ಸಾಧ್ಯವಿಲ್ಲ.

ಯಾವುದೇ ಶುಲ್ಕವಿಲ್ಲ.

ಯಾವುದೇ ಶುಲ್ಕವಿಲ್ಲ.

ಮ್ಯಾಗ್ನೆಟಿಕ್ ಡೆಬಿಟ್ ಕಾರ್ಡ್‌ಗಳನ್ನು ಹೊಸ ಇಎಂವಿ (ಯುರೊಪೇ ಮಾಸ್ಟರ್ ವೀಸಾ) ಚಿಪ್ ಕಾರ್ಡ್‌ಗೆ ಬದಲಾಯಿಸಿಕೊಳ್ಳಲು ಯಾವುದೇ ಶುಲ್ಕ ವಸೂಲಿ ಮಾಡುತ್ತಿಲ್ಲ. ನಿಮ್ಮ ಬ್ಯಾಂಕ್‌ ಶಾಖೆಗೆ ಹೋಗಿ ಹಳೆ ಕಾರ್ಡ್ ಕೊಟ್ಟು ಹೊಸ ಕಾರ್ಡ್ ಪಡೆದುಕೊಳ್ಳುವುದು ಮಾತ್ರ. ಈ ಬಗ್ಗೆ ಇತರರಿಗೆ ಯಾವುದೇ ಮಾಹಿತಿಯನ್ನು ನೀಡುವ ಅಗತ್ಯತೆ ಸಹ ಇಲ್ಲಿಲ್ಲ.

How to recharge your Bangalore Metro card online - KANNADA
ಗ್ರಾಹಕರಿಗೆ ಎಚ್ಚರ ಅಗತ್ಯ.

ಗ್ರಾಹಕರಿಗೆ ಎಚ್ಚರ ಅಗತ್ಯ.

ಯಾವುದೇ ಬ್ಯಾಂಕ್‌ನವರು ಸಹ ಮೊಬೈಲ್ ಮೂಲಕ ಅಥವಾ ಇಮೇಲ್ ಮೂಲಕ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ. ಫೋನ್ ಮೂಲಕವಾಗಲೀ, ಇ-ಮೇಲ್ ಮೂಲಕವಾಗಲೀ ಖಾತೆ ಮತ್ತು ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ನೇರವಾಗಿ ಬ್ಯಾಂಕ್‌ಗೆ ತೆರಳಿ ನಿಮ್ಮ ಕೆಲಸ ಮುಗಿಸಿಕೊಳ್ಳಿ.

Best Mobiles in India

English summary
EMV chip technology is becoming the global standard for credit card and debit card payments.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X