ಭಾರತದಲ್ಲಿ ಲಾಂಚ್ ಆಯ್ತು ಹೊಸ ಮಾದರಿಯ ಪಾರ್ಟಿ ಸ್ಪೀಕರ್‌ಗಳು! ಇದರ ಫೀಚರ್ಸ್‌ಗಳೇ ವಿಭಿನ್ನ!
ಪಾರ್ಟಿ ಸ್ಪೀಕರ್‌ಗಳ ವಲಯದಲ್ಲಿ ಸದ್ದು ಮಾಡುತ್ತಿರುವ ಎಂಡೆಫೊ ಹೊಸ ಸ್ಪೀಕರ್‌ಗಳನ್ನು ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ನಡೆದ ಮೊಬೈಲ್ ಇಂಡಿಯಾ ಎಕ್ಸ್‌ಪೋದಲ್ಲಿ ಎಂಡೆಫೊ ಎಂಟುನ್ಜ್ ಮೆಗಾ ಪ್ರೊ ಮತ್ತು ಡಬಲ್ ಬ್ಯಾರೆಲ್ ಪಾರ್ಟಿ ಸ್ಪೀಕರ್‌ಗಳನ್ನು ಪರಿಚಯಿಸಲಾಗಿದೆ. ಈ ಪಾರ್ಟಿ ಸ್ಪೀಕರ್‌ಗಳು 100W ವರೆಗೆ ಸರೌಂಡ್ ಸೌಂಡ್ ಅನುಭವವನ್ನು ನೀಡಲಿದೆ.
ಹೌದು, ಎಂಡೆಫೊ ಕಂಪೆನಿ ಎಂಡೆಫೊ ಎಂಟುನ್ಜ್ ಮೆಗಾ ಪ್ರೊ ಮತ್ತು ಡಬಲ್ ಬ್ಯಾರೆಲ್ ಪಾರ್ಟಿ ಸ್ಪೀಕರ್ ಬಿಡುಗಡೆ ಮಾಡಿದೆ. ಈ ಸ್ಪೀಕರ್‌ಗಳು LED ಡಿಸ್‌ಪ್ಲೇ ಮತ್ತು AUX, USB ಡ್ರೈವ್ ಮತ್ತು ಮೈಕ್ರೋ SD ಕಾರ್ಡ್ ಸ್ಲಾಟ್ ಸೇರಿದಂತೆ ವಿವಿಧ ಸಂಪರ್ಕ ಆಯ್ಕೆಗಳನ್ನು ಹೊಂದಿದೆ. ಹಾಗಾದ್ರೆ ಎಂಡೆಫೊ ಪರಿಚಯಿಸಿರುವ ಹೊಸ ಪಾರ್ಟಿ ಸ್ಪೀಕರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಂಡೆಫೊ ಎಂಟುನ್ಜ್ ಮೆಗಾ ಪ್ರೊ ಪಾರ್ಟಿ ಸ್ಪೀಕರ್
Endefo Entun'z ಮೆಗಾ ಪ್ರೊ ಪಾರ್ಟಿ ಸ್ಪೀಕರ್ ಹೊಸ ಮಾದರಿಯ ವಿನ್ಯಾಸದ ಮೂಲಕ ಗಮನಸೆಳೆದಿದೆ. ಈ ಪಾರ್ಟಿ ಸ್ಪೀಕರ್ ಸರೌಂಡ್ ಸೌಂಡ್ ಎಫೆಕ್ಟ್‌ಗಳೊಂದಿಗೆ 70W ಅಲ್ಟ್ರಾ ಬಾಸ್ ಸೌಂಡ್ ಔಟ್‌ಪುಟ್ ನೀಡಲಿದೆ. ಇದು ಕ್ಯಾರಿಯೋಕೆ ಮೈಕ್, ಎಲ್ಇಡಿ ಡಿಸ್‌ಪ್ಲೇ, ರಿಮೋಟ್ ಕಂಟ್ರೋಲ್, ಮೊಬೈಲ್ ಹೋಲ್ಡರ್, AUX, USB ಡ್ರೈವ್, ಮೈಕ್ರೋ SD ಕಾರ್ಡ್ ಮತ್ತು FM ರೇಡಿಯೊವನ್ನು ಪಡೆದುಕೊಂಡಿದೆ. ಜೊತೆಗೆ ಈ ಪಾರ್ಟಿ ಸ್ಪೀಕರ್ ಕಪ್ಪು ಬಣ್ಣದ ಆಯ್ಕೆಯಲ್ಲಿ ಬರಲಿದ್ದು, ಲಾಂಗ್ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ.

ಎಂಡೆಫೊ ಡಬಲ್ ಬ್ಯಾರೆಲ್ ಪಾರ್ಟಿ ಸ್ಪೀಕರ್
ಎಂಡೆಫೊ ಡಬಲ್ ಬ್ಯಾರೆಲ್ ಪಾರ್ಟಿ ಸ್ಪೀಕರ್ 100W ಅಲ್ಟ್ರಾ ಬಾಸ್ ಸೌಂಡ್ ಔಟ್‌ಪುಟ್‌ನೊಂದಿಗೆ ಬರಲಿದೆ. ವರ್ಧಿತ ಸರೌಂಡ್ ಸೌಂಡ್ ಅನುಭವಕ್ಕಾಗಿ ಡ್ಯುಯಲ್ ಸ್ಪೀಕರ್ ಕಾನ್ಫಿಗರೇಶನ್ ಅನ್ನು ನೀಡಲಿದೆ. ಜೊತೆಗೆ ಈಕ್ವಲೈಜರ್ ಕಂಟ್ರೋಲ್ ಬೋರ್ಡ್, LED ಡಿಸ್‌ಪ್ಲೇ, ಟೋನ್ ಕಂಟ್ರೋಲ್, ರಿಮೋಟ್ ಕಂಟ್ರೋಲ್, AUX, USB ಡ್ರೈವ್, ಮೈಕ್ರೋ SD ಕಾರ್ಡ್ ಮತ್ತು FM ರೇಡಿಯೋವನ್ನು ಹೊಂದಿದೆ. ಇದು ಕಪ್ಪು ಬಣ್ಣದ ಆಯ್ಕೆಯಲ್ಲಿ ದೊರೆಯಲಿದ್ದು, ದೀರ್ಘ ಬ್ಯಾಟರಿ ಅವಧಿಯನ್ನು ನೀಡುತ್ತದೆ.

ಬೆಲೆ ಮತ್ತು ಲಭ್ಯತೆ
ಎಂಡೆಫೊ ಎಂಟುನ್ಜ್ ಮೆಗಾ ಪ್ರೊ ಪಾರ್ಟಿ ಸ್ಪೀಕರ್ (Endefo Entun'z Mega Pro) ಭಾರತದಲ್ಲಿ 6,999ರೂ ಬೆಲೆಯನ್ನು ಹೊಂದಿದೆ. ಇನ್ನು ಎಂಡೆಫೊ ಡಬಲ್ ಬ್ಯಾರೆಲ್ ಪಾರ್ಟಿ ಸ್ಪೀಕರ್ ಬೆಲೆ 5,999ರೂ ಆಗಿದೆ. ಇದಲ್ಲದೆ 21ನೇ ಜನವರಿ 2024 ರಂದು ಸಂಗೀತ ಮೊಬೈಲ್ಸ್, ಸುಪ್ರೀಂ ಪ್ಯಾರಡೈಸ್, ಲಾಟ್ ಮೊಬೈಲ್, ನಂದಿಲತ್ ಡಿಜಿಟಲ್, ಐಡಿಯಲ್ ಗೃಹೋಪಯೋಗಿ ವಸ್ತುಗಳು, ಈಸಿ ಸ್ಟೋರ್, ಗಲ್ಫ್ ಓನ್ ಡಿಜಿಟಲ್, ಇಮೇಜ್ ಮೊಬೈಲ್‌ಗಳು ಮತ್ತು ಕಂಪ್ಯೂಟರ್‌ಗಳು ಸೇರಿದಂತೆ ದೇಶದಾದ್ಯಂತ 2000+ ಚಿಲ್ಲರೆ ಅಂಗಡಿಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
ಇನ್ನು ಪಾರ್ಟಿ ಸ್ಪೀಕರ್‌ಗಳ ವಿಚಾರದಲ್ಲಿ ಸೋನಿ ಕಂಪೆನಿ ಕೂಡ ಮುಂಚೂಣಿಯಲ್ಲಿದೆ. ಅದರಂತೆ ಸೋನಿ ಕಂಪೆನಿ ಕಳೆದ ವರ್ಷದ ಅಂತ್ಯದಲ್ಲಿ ಭಾರತದ ಮಾರುಕಟ್ಟೆಗೆ ಸೋನಿ SRS-XV900 ಪಾರ್ಟಿ ಸ್ಪೀಕರ್ ಎಂಟ್ರಿ ನೀಡಿತ್ತು. ಈ ಸ್ಪೀಕರ್ ಒಮ್ನಿ ಡೈರೆಕ್ಷನಲ್ ಸೌಂಡ್ ಅನ್ನು ಒದಗಿಸಲಿದೆ. ಜೊತೆಗೆ ಡೀಪ್ ಮತ್ತು ಪಂಚಿಯರ್ ಬಾಸ್ ಔಟ್‌ಪುಟ್ ಅನ್ನು ಆಕ್ಟಿವ್ ಮಾಡಲು ವೃತ್ತಾಕಾರದ ಡಾಯಾಫ್ರಾಮ್ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಪೀಕರ್‌ನಲ್ಲಿ ಮಿಡ್‌ರೇಂಜ್ ಡ್ರೈವರ್‌ಗಳು ಮತ್ತು ಟ್ವಿಟರ್‌ಗಳನ್ನು ಸಹ ನೀಡಲಾಗಿದೆ. ಈ ಸ್ಪೀಕರ್ ಟಿವಿ ಸೌಂಡ್ ಬೂಸ್ಟರ್ ಫೀಚರ್ಸ್ ಕೂಡ ಹೊಂದಿದ್ದು, ಸ್ಪೀಕರ್ ಟಿವಿಗೆ ಕನೆಕ್ಟ್ ಆಗಿದ್ದಾಗ ಆಡಿಯೊ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡಲಿದೆ.


Click it and Unblock the Notifications








