ಕರ್ನಾಟಕ ವಿದ್ಯಾರ್ಥಿಗಳಿಂದ ಅದ್ಬುತ ''ಬ್ಲೂಟೂತ್ ಹೆಲ್ಮೆಟ್'' ಅವಿಷ್ಕಾರ!..ರಾಷ್ಟ್ರವ್ಯಾಪಿ ಸುದ್ದಿ!!

ಕಲಬುರಗಿ ಮೂಲದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಂಡುಹಿಡಿದಿರುವ ನೂತನ ತಂತ್ರಜ್ಞಾನ ರಾಷ್ಟ್ರವ್ಯಾಪಿ ಸುದ್ದಿಗೆ ಗ್ರಾಸವಾಗಿದೆ.!!

|

ತಂತ್ರಜ್ಞಾನ ಕ್ಷೇತ್ರಕ್ಕೆ ಬೆಂಗಳೂರಿನ ಕೊಡುಗೆ ಹೆಚ್ಚಿದ್ದರೂ ಕೂಡ ಕರ್ನಾಟಕದ ಇತರೆ ಭಾಗಗಳಲ್ಲಿ ತಂತ್ರಜ್ಞಾನದ ಪಸರಿಸುವಿಕೆ ಕಡಿಮೆ ಇದೆ ಎನ್ನಬಹುದು. ಆದರೆ, ಕಲಬುರಗಿ ಮೂಲದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಂಡುಹಿಡಿದಿರುವ ನೂತನ ತಂತ್ರಜ್ಞಾನ ರಾಷ್ಟ್ರವ್ಯಾಪಿ ಸುದ್ದಿಗೆ ಗ್ರಾಸವಾಗಿದೆ.!!

ಕರ್ನಾಟಕ ವಿದ್ಯಾರ್ಥಿಗಳಿಂದ ಅದ್ಬುತ ''ಬ್ಲೂಟೂತ್ ಹೆಲ್ಮೆಟ್'' ಅವಿಷ್ಕಾರ!!

ಹೌದು, ಕಲಬುರಗಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಯೋಗೇಶ್ ಮತ್ತು ಅಭಿಜಿತ್ ಎಂಬ ವಿದ್ಯಾರ್ಥಿಗಳು ಬ್ಲೂಟೂತ್ ಆಧಾರಿತ ವಿಶಿಷ್ಟ ಹೆಲ್ಮೆಟ್ ಆವಿಷ್ಕರಿಸಿ ದೇಶದ ಗಮನ ಸೆಳೆದಿದ್ದಾರೆ. ಹಾಗಾದರೆ, ಬೈಕ್ ಸವಾರರಿಗೆ ವರದಾನವಾಗಿರುವ ಈ ವಿಶಿಷ್ಟ ಬ್ಲೂಟೂತ್ ಆಧಾರಿತ ವಿಶಿಷ್ಟ ಹೆಲ್ಮೆಟ್ ಹೇಗಿದೆ ಎಂಬುದನ್ನು ಮುಂದೆ ತಿಳಿಯಿರಿ.!!

ಬ್ಲೂಟೂತ್ ಆಧಾರಿತ ಹೆಲ್ಮೆಟ್!!

ಬ್ಲೂಟೂತ್ ಆಧಾರಿತ ಹೆಲ್ಮೆಟ್!!

ಬೈಕ್ ಸವಾರರಿಗೆ ಮ್ಯಾಪ್ ತಿಳಿಯಲು ಸಹಾಯವಾಗುವಂತೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಯೋಗೇಶ್ ಮತ್ತು ಅಭಿಜಿತ್ ಅವರು ಬ್ಲೂಟೂತ್ ಆಧಾರಿತ ರೂಟ್ ಗೈಡೆಡ್ ಹೆಲ್ಮೆಟ್ ಅನ್ನು ಆವಿಷ್ಕರಿಸಿದ್ದಾರೆ. ಈ ಹೆಲ್ಮೆಟ್ ಮೂಲಕ ಬ್ಲೂಟೂತ್ ಆಧಾರಿತ ರೂಟ್ ಮ್ಯಾಪ್ ಗೈಡ್ ಪಡೆಯಬಹುದು ಎಂದು ತಿಳಿಸಿದ್ದಾರೆ.!!

ಹೆಲ್ಮೆಟ್ ಹೇಗೆ ರಚನೆಯಾಗಿದೆ.!!

ಹೆಲ್ಮೆಟ್ ಹೇಗೆ ರಚನೆಯಾಗಿದೆ.!!

ಹೆಲ್ಮೆಟ್‌ನಲ್ಲಿ ಇನ್ ಬಿಲ್ಟ್ ಬ್ಲೂಟೂತ್ ಪೋರ್ಟ್‌ಗಳನ್ನು ನೀಡಲಾಗಿದೆ. ಬರೊಬ್ಬರಿ 6 ಗಂಟೆಗಳ ವರೆಗೂ ಕಾರ್ಯ ನಿರ್ವಹಿಸಬಲ್ಲ ಬ್ಲೂಟೂತ್ ಡಿವೈಸ್ ಬ್ಯಾಟರಿ ಧೀರ್ಘಾವಧಿಯ ಸಾಮರ್ಥ್ಯ ಹೊಂದಿದೆ. ಜತೆಗೆ ಹೆಲ್ಮೆಟ್‌ನಲ್ಲಿ ಕೂಲಿಂಗ್ ಶೀಲ್ಡ್ ಇದ್ದು ನೈಟ್ ವಿಷನ್ ಮೋಡ್ ಅನ್ನು ಕೂಡ ಹೆಲ್ಮೆಟ್ ಹೊಂದಿದೆಯಂತೆ.!!

ಹೆಲ್ಮೆಟ್ ತಂತ್ರಜ್ಞಾನ ಹೇಗಿದೆ?

ಹೆಲ್ಮೆಟ್ ತಂತ್ರಜ್ಞಾನ ಹೇಗಿದೆ?

ಈ ಬ್ಲೂಟೂತ್ ಹೆಲ್ಮೆಟ್‌ಗೆ ಸ್ಮಾರ್ಟ್‌ಫೋನ್ ಮೂಲಕ ಸಂಪರ್ಕ ಪಡೆಯಬಹುದಾಗಿದ್ದು, ಪ್ರಸ್ತುತ ಗೂಗಲ್ ಒಕೆ ಅಪ್‌ನಲ್ಲಿರುವಂತೆಯೇ ಈ ಡಿವೈಸ್‌ಗೂ ವಾಯ್ಸ್ ಕಮಾಂಡ್ ನೀಡುವ ಮೂಲಕ ನಮಗೆ ಬೇಕಾದ ಮಾರ್ಗದ ಮಾಹಿತಿ ಪಡೆಯಬಹುದಾಗಿದೆ.!!

ಹೆಲ್ಮೆಟ್ ಸೇವೆ ಪಡೆಯುವುದು ಹೇಗೆ?

ಹೆಲ್ಮೆಟ್ ಸೇವೆ ಪಡೆಯುವುದು ಹೇಗೆ?

ಬೈಕ್ ಚಾಲಕ ತನ್ನ ಮೊಬೈಲ್ ನಲ್ಲಿರುವ ಬ್ಲೂಟೂತ್ ಆನ್ ಮಾಡಿದ ನಂತರ ಹೆಲ್ಮೆಟ್ ಮೂಲಕ ಬ್ಲೂಟೂತ್ ಆಧಾರಿತ ಡಿವೈಸ್ ಅನ್ನು ಕನೆಕ್ಟ್ ಮಾಡಿಕೊಳ್ಳಬೇಕು. ಹೀಗೆ ಕನೆಕ್ಟ್ ಆದ ನಂತರ ಹೆಲ್ಮೆಟ್ ಒಳಗಿನ ಸ್ಪೀಕರ್‌ನಲ್ಲಿ ರೋಡ್ ಮ್ಯಾಪ್ ಗೈಡ್, ಕರೆ ನಿರ್ವಹಣೆ ಎಲ್ಲವನ್ನು ಹೆಲ್ಮೆಟ್ ಮೂಲಕವೇ ಮಾಡಬಹುದು.!!

How to check PF Balance in online (TAMIL)
ಬೈಕ್ ಸವಾರರಿಗೆ ವರದಾನ!!

ಬೈಕ್ ಸವಾರರಿಗೆ ವರದಾನ!!

ಕಲಬುರಗಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಯೋಗೇಶ್ ಮತ್ತು ಅಭಿಜಿತ್ ಎಂಬ ವಿದ್ಯಾರ್ಥಿಗಳು ತಯಾರಿಸಿರುವ ಈ ವಿಶೇಷ ಹೆಲ್ಮೆಟ್ ಬೈಕ್ ಸವಾರರಿಗೆ ವರದಾನವಾಗಿದೆ. ಪ್ರಯಾಣದ ಸಂದರ್ಭದಲ್ಲಯೇ ಕರೆ ಸ್ವೀಕರಿಸುವುದರ ಜತೆಗೆ ರೂಡುಗಳ ಬಗ್ಗೆಯೂ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ.!!

ವಿಶ್ವದಲ್ಲಿಯೇ ಹೆಚ್ಚು ಸಾಮರ್ಥ್ಯದ 'ಎಸ್‌ಎಸ್‌ಡಿ' ರಿಲೀಸ್!..ತಲೆತಿರುಗುವಂತಿದೆ ಸ್ಟೋರೇಜ್ ಕೆಪಾಸಿಟಿ!!ವಿಶ್ವದಲ್ಲಿಯೇ ಹೆಚ್ಚು ಸಾಮರ್ಥ್ಯದ 'ಎಸ್‌ಎಸ್‌ಡಿ' ರಿಲೀಸ್!..ತಲೆತಿರುಗುವಂತಿದೆ ಸ್ಟೋರೇಜ್ ಕೆಪಾಸಿಟಿ!!

Best Mobiles in India

English summary
In an innovative move, two engineering students in Karnataka's Kalaburagi district have created a 'bluetooth enabled route guiding helmet'.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X