ಡಿ.29 ರಂದು ಕೇಬಲ್ ಟಿವಿ ಸ್ಥಗಿತ?..ಟ್ರಾಯ್ ಹೇಳಿದ್ದೇನು ಗೊತ್ತಾ?
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧಿಸೂಚನೆ ಪ್ರಕಾರ ಇದೇ ಡಿಸೆಂಬರ್ 29 ರಿಂದ ಕೇಬಲ್ ಸೇವೆಗಳಲ್ಲಿ ಭಾರೀ ಬದಲಾವಣೆಗಳಾಗುತ್ತಿವೆ. ಕೇಬಲ್ ಟಿ.ವಿಗಳಿಗೆ ಸಂಬಂಧಿಸಿದಂತೆ ನೂತನ ಟ್ಯಾರಿಫ್ ಸಿಸ್ಟಮ್(ಶುಲ್ಕ ವ್ಯವಸ್ಥೆ) ಡಿ.29ರಿಂದ ಜಾರಿಗೆ ಬರುತ್ತಿರುವುದು ಗ್ರಾಹಕರಿಗೆ ಗೊಂದಲವನ್ನು ಮೂಡಿಸಿದೆ. ತಾವು ಹೊಸ ಸೇವೆಗೆ ನೋಂದಣಿ ಮಾಡಿಸದೇ ಹೋದರೆ, ಕೇಬಲ್ ಸೇವೆ ಸ್ಥಗಿತಗೊಳ್ಳಬಹುದೇ ಎನ್ನುವ ಪ್ರಶ್ನೆಗಳಿವೆ. ಆದರೆ, ಗ್ರಾಹಕರು ಆತಂಕಗೊಳ್ಳುವ ಅವಶ್ಯಕತೆಯಿಲ್ಲ. ಡಿ.29ರ ಬಳಿಕವೂ ಟಿ.ವಿ ಬಂದ್ ಆಗುವುದಿಲ್ಲ ಎಂದು ಟ್ರಾಯ್ ಹೇಳಿದೆ.
ಹೌದು, ಡಿಸೆಂಬರ್ 29ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಆದರೆ, ಅದರ ಅನುಷ್ಠಾನಕ್ಕೆ 20 ದಿನಗಳ ಯೋಜನೆ ರೂಪಿಸಲಾಗಿದೆ. ಹೀಗಾಗಿ ಡಿ.29ರಿಂದ ಟಿ.ವಿ ಬಂದ್ ಆಗುತ್ತದೆ ಎನ್ನುವ ಕಳವಳ ಬೇಡ ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ಹೇಳಿದ್ದಾರೆ. ಸುಸೂತ್ರವಾಗಿ ಹಳೆಯ ವ್ಯವಸ್ಥೆಯಿಂದ ಹೊಸ ವ್ಯವಸ್ಥೆಗೆ ಗ್ರಾಹಕರು ಬರಲು ಅವಕಾಶ ಕಲ್ಪಿಸುವಂತೆ ಕೇಬಲ್ ನಿರ್ವಾಹಕರಿಗೆ ಆರ್.ಎಸ್. ಶರ್ಮಾ ಸೂಚಿಸಿದ್ದಾರೆ. ಚಾನೆಲ್‌ಗಳ ಪ್ರಸಾರ ಸ್ಥಗಿತಗೊಂಡರೆ ಯಾರಿಗೂ ಉಪಯೋಗವಿಲ್ಲ, ಆ ರೀತಿ ಆಗುವ ಸಾಧ್ಯತೆ ಇಲ್ಲ ಎಂದಿದ್ದಾರೆ.

ಗ್ರಾಹಕರಿಗೆ ಅನಗತ್ಯ ಚಾನೆಲ್ ಸೇವೆಯನ್ನು ತಪ್ಪಿಸಲು ಹಾಗೂ ಅವರ ಇಷ್ಟದ ವಾಹಿನಿ ನೋಡಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಹೊಸ ದರ ಜಾರಿಗೊಳಿಸಲಾಗಿದೆ' ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ಈ ಬಗ್ಗೆ ತಿಳಿಸಿದ್ದಾರೆ. ಆದರೆ, ಇದರಿಂದ ಕೇಬಲ್ ಬಿಲ್‌ಗಳು ಮಾತ್ರ ಗಗನಕ್ಕೇ ಏರಲಿವೆ ಎಂಬ ಮಾತುಗಳು ಸಹ ಇವೆ. ಹಾಗಾದರೆ, ಇನ್ಮುಂದೆ ಕೇಬಲ್ ಬಿಲ್‌ಗಳು ಎಷ್ಟು ಹೆಚ್ಚಾಗಬಹುದು? ಇದು ಟಿವಿ ವೀಕ್ಷಕರಿಗೆ ಉತ್ತಮವೇ? ಕೇಬಲ್ ಮಾಲಿಕರು ಏನೆಂದು ಹೇಳುತ್ತಿದ್ದಾರೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಹೊಸ ಕೇಬಲ್ ಮತ್ತು ಡಿಟಿಹೆಚ್ ನಿಯಮ?
ಈ ಮೊದಲು ಕೇಬಲ್ ಮತ್ತು ಡಿಟಿಹೆಚ್ ಮಾಲಿಕರು ಹಣ ನಿಗದಿ ಮಾಡುತ್ತಿದ್ದರು. ಆದರೆ, ಈಗ ಪ್ರಸಾರ ಸಂಸ್ಥೆಗಳು ಪ್ರತಿ ಚಾನೆಲ್ ಅನ್ನೂ ಬಿಡಿಯಾಗಿ ವಿತರಕರಿಗೆ ನೀಡುವಂತಹ ಆಯ್ಕೆಯನ್ನು ಈ ತರಲಾಗಿದೆ. ಇದರಿಂದ, ಟಿವಿ ಗ್ರಾಹಕ ತನಗೆ ಬೇಕಾದ ಒಂದು ಚಾನೆಲ್ ಪಡೆಯಲು ಇಡೀ ಗುಂಪನ್ನು ಅಥವಾ ಪ್ರೀಮಿಯಂ ಚಾನೆಲ್‌ಗಳ ಸಮೂಹವನ್ನು ಕೊಳ್ಳುವುದರಿಂದ ಪಾರಾಗಬಹುದಾಗಿದ್ದು, ತನ್ನ ಇಚ್ಚೆಯ ಟಿವಿ ಚಾನಲ್ ಅನ್ನು ಚಾನಲ್‌ಗೆ ಹಣನೀಡಿ ನೋಡಬಹುದಾಗಿದೆ. ಇದು ಡಿ. 29 ರಿಂದ ಜಾರಿಯಾಗುತ್ತಿದೆ.

ನೂತನ ಕೇಬಲ್ ಮತ್ತು ಡಿಟಿಹೆಚ್ ನಿಯಮಗಳಲ್ಲಿ ಏನೆಲ್ಲಾ ಇರಲಿದೆ?
ಪ್ರಸಾರ ಸಂಸ್ಥೆಗಳು ಪ್ರತಿ ಚಾನೆಲ್ ಅನ್ನೂ ಬಿಡಿಯಾಗಿ ವಿತರಕರಿಗೆ ನೀಡುವಂತಹ ಆಯ್ಕೆಯನ್ನು ಈ ತರಲಾಗಿದೆ. ಈ ಚಾನೆಲ್‌ಗಳ ಗುಂಪು ರೂಪಿಸುವ ಹೊಣೆ ವಿತರಕರದ್ದಾಗಿದೆ. ಆದರೆ, ಪೇ ಚಾನೆಲ್‌ಗಳನ್ನು ಉಚಿತ ಚಾನೆಲ್‌ಗಳೊಂದಿಗೆ ಜೋಡಿಸಿ ಗುಂಪು ರಚಿಸುವಂತಿಲ್ಲ ಎಂಬುದಾಗಿ ನಿಯಮದಲ್ಲಿ ಹೇಳಲಾಗಿದೆ. ಅಲ್ಲದೆ ಎಸ್‌ಡಿ ಮತ್ತು ಹೈ ಹೆಚ್‌ಡಿ ಚಾನೆಲ್‌ಗಳನ್ನು ಪ್ರತ್ಯೇಕ ಗುಂಪುಗಳಲ್ಲಿ ನೀಡಬೇಕು. 19 ರೂ.ಗಳಿಗಿಂತ ಹೆಚ್ಚು ದರವಿರುವ ಚಾನೆಲ್‌ಗಳನ್ನು ಗ್ರಾಹಕರಿಗೆ ಪ್ರತ್ಯೇಕ ನೀಡಬೇಕು ಎಂಬ ನಿಯಮಗಳನ್ನು ರೂಪಿಸಲಾಗಿದೆ.

130 ರೂ.ಗಳಿಗೆ ನಿಗದಿ ಸೇವೆ!
ನೂತನ ಕೇಬಲ್ ಮತ್ತು ಡಿಟಿಹೆಚ್ ನಿಯಮಗಳು ಜಾರಿಯಾದರೂ 100 'ಉಚಿತ' ಚಾನೆಲ್‌ಗಳು ಗ್ರಾಹಕರಿಗೆ ಲಭ್ಯವಿರಲಿವೆ. ದೂರದರ್ಶನ, ಸ್ಟಾರ್ ಭಾರತ್, ಝೀ ಅನ್ಮೋಲ್ ರೀತಿಯ 100 'ಉಚಿತ' ಚಾನೆಲ್‌ಗಳು ಗ್ರಾಹಕರಿಗೆ ಲಭ್ಯವಿರಲಿದೆ. ಇದಕ್ಕೆ ಕೊಡಬೇಕಾದ ನಿರ್ವಹಣಾ ಮೊತ್ತ 130 ರೂ. ಎಂದು ನಿಗದಿಪಡಿಸಲಾಗಿದೆ. ಗ್ರಾಹಕರಿಗೆ ಇದು ಅತ್ಯುತ್ತಮವಾಗಿದ್ದು, ಕೇಬಲ್ ಮಾಲಿಕರಿಗೆ ಹೆಚ್ಚು ಹೊಡೆತ ಬೀಳಲಿದೆ. ಇವೆಲ್ಲವಕ್ಕಿಂತ ಚಾನೆಲ್‌ಗಳ ದರವನ್ನು ಪ್ರಸಾರ ಸಂಸ್ಥೆಗಳು ನಿರ್ಧರಿಸುವುದರಿಂದ ಕೇಬಲ್ ಬಿಲ್ ಕೂಡ ಹೆಚ್ಚಾಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ. ಇದು ಟಿವಿ ಉದ್ಯಮದ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

ತನ್ನ ಇಚ್ಚೆಯ ಟಿವಿ ಚಾನೆಲ್ ಆಯ್ಕೆ!
ಟ್ರಾಯ್ ಹೊರಡಿಸಿರುವ ಹೊಸ ನಿಯಮದಿಂದ ಅನಗತ್ಯ ಚಾನೆಲ್ಗಳ ಚಂದಾ ಕಟ್ಟುವುದು ತಪ್ಪಲಿದೆ ಎಂದು ಹೇಳಬಹುದು. ಏಕೆಂದರೆ, ಟಿವಿ ಚಾನೆಲ್‌ಗಳ ದರವನ್ನು ಆಯಾ ಪ್ರಸಾರ ಸಂಸ್ಥೆಗಳು ನಿರ್ಧರಿಸಲಿರುವುದರಿಂದ ಎಲ್ಲ ಚಾನೆಲ್‌ಗಳು ತನ್ನ ಎ-ಲಾ-ಕಾರ್ಟೆ ದರವನ್ನು ಪರೀಷ್ಕರಿಸಲಿವೆ. ಗ್ರಾಹಕರು ಬೇಕಾದ ಚಾನಲ್ ಮಾತ್ರ ಆಯ್ಕೆ ಮಾಡಿಕೊಳ್ಳಬಹುದಾದ ಆಯ್ಕೆ ಇನ್ನು ಸಿಗಲಿದೆ. ಹಾಗಾಗಿ, ಜನವರಿಯಿಂದ ಹೊಸ ದರಗಳನ್ನು ನೀಡಬೇಕಾಗುತ್ತದೆ. ಇದು ಗ್ರಾಹಕರಿಗೆ ಹೆಚ್ಚು ಲಾಭವಾಗುವ ಲಕ್ಷಣಗಳನ್ನು ಹೊಂದಿದ್ದರೂ ಸಹ, ಕೆಲವೊಮ್ಮೆ ಇದರಿಂದ ಟಿವಿ ವೀಕ್ಷಕರಿಗೆ ತೊಂದರೆ ಉಂಟಾಗಬಹುದು ಎಂದು ಹೇಳಲಾಗುತ್ತಿದೆ.

ಇದು ಕೇಬಲ್ ಮಾಲಿಕರಿಗೆ ಉರುಳು!
ಆಯಾ ಪ್ರಸಾರ ಸಂಸ್ಥೆಗಳಿಗೆ ನೀಡಿದೆ. ಪ್ರಸಾರ ಸಂಸ್ಥೆಗಳು ಪ್ರತಿ ಚಾನೆಲ್‌ನ್ನು ವಿತರಕರಿಗೆ ಬಿಡಿಯಾಗಿ ನೀಡುವ ಆಯ್ಕೆಯನ್ನು ಒದಗಿಸಿರುವುದು ಕೇಬಲ್ ಮಾಲಿಕರಿಗೆ ಉರುಳಾಗಿದೆ. ಕೇವಲ 130 ರೂ.ಗೆ ಕೇಬಲ್ ಸೇವೆಯನ್ನು ನೀಡಬೇಕಾದ ಪರಿಸ್ಥಿತಿ ಅವರಿಗೆ ಬರುತ್ತದೆ ಎಂದು ಹೇಳಲಾಗಿದೆ. ಗ್ರಾಹಕರಿಗೆ ಹೆಚ್ಚೇನು ಉಪಯೋಗವಾಗದ ಈ ನಿಯಮದಿಂದ ಟಿವಿ ವೀಕ್ಷಕ ಹಾಗೂ ಪ್ರಸಾರಕರ ನಡುವೆ ದಲ್ಲಾಳಿಗಳಂತೆ ಇದ್ದ ಕೇಬಲ್ ಮಾಲಿಕರಿಗೆ ಇದು ನುಂಗಲಾರದ ತುತ್ತಾಗಬಹುದು. ಇದರಿಂದ ಕೇಬಲ್ ಸೇವೆಯಲ್ಲಿ ವ್ಯತ್ಯಾಸ ಕೂಡ ಆಗಬಹುದು ಮತ್ತು ಪ್ರಸ್ತುತ ಉದ್ಯಮ ನೆಲ ಕಚ್ಚಬಹುದು ಎಂದು ಅಭಿಪ್ರಾಯಪಡಲಾಗಿದೆ.

ಕೇಬಲ್ ಮಾಲಿಕರು ಹೇಳುವುದೇನು?
ಸರ್ಕಾರದ ಹೊಸ ನಿಯಮದಿಂದ ಈಗ ಟಿವಿ ಚಾನೆಲ್ಗಳ ಪ್ರಸಾರಕರು ಹೆಗ್ಗಿಲ್ಲದೆ ಹೊಸದಾಗಿ ಪ್ರಕಟಿಸುತ್ತಿರುವ ಚಾನೆಲ್ಗಳ ದರವನ್ನು ಕಂಡ ಗ್ರಾಹಕರು ಹಾಗೂ ಕೇಬಲ್ ಟಿವಿ ಆಪರೇಟರ್ಗಳು ಬೆಚ್ಚಿ ಬಿದ್ದಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಮನೊರಂಜನೆ ಬಯಸುವ ಪ್ರತಿ ಕುಟುಂಬಕ್ಕೆ ಕಡಿಮೆ ದರದಲ್ಲಿ ಚಾನೆಲ್ಗಳನ್ನು ನೀಡುತ್ತ ಬದುಕು ಕಟ್ಟಿಕೊಂಡ ಈ ಕೇಬಲ್ ಉದ್ಯಮದ ಸಾವಿರಾರು ಉದ್ಯೋಗಿಗಳು ಬೀದಿಪಾಲಾಗುವ ಆತಂಕದಲ್ಲಿದ್ದಾರೆ. ಒಂದು ಕಾಲದಲ್ಲಿ ಬಡವರು ಉಳ್ಳವರ ಮನೆಗಳಿಗೋಗಿ ಟಿವಿ ವೀಕ್ಷಿಸುತ್ತಿದ್ದರು. ಆದರೆ ಆ ಕಾಲ ಮತ್ತೆ ಮರಳಿ ಬಂದರು ಆಶ್ಚರ್ಯವಿಲ್ಲ. ಈಗಲಾದರೂ ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಮತ್ತು ಡಿಟಿಎಚ್ ನವರ ತಾಳಕ್ಕೆ ಕುಣಿಯದೆ ಚಾನೆಲ್ಗಳ ಪ್ರಸಾರಕರಿಗೆ ಮೂಗುದಾರ ಹಾಕಲಿ. ತಕ್ಷಣ ಪ್ರಸಾರಕರ ಸಭೆ ಕರೆದು ಚಾನೆಲ್ಗಳನ್ನು ಕಡಿಮೆ ದರದಲ್ಲಿ ನಿಗದಿಗೊಳಿಸಿ ಗ್ರಾಹಕರ ಹಾಗೂ ಕೇಬಲ್ ಟಿವಿ ಉದ್ಯೋಗಿಗಳ ಹಿತ ಕಾಯಲಿ ಎಂದು ಕೇಬಲ್ ಮಾಲಿಕರು ಹೇಳಿದ್ದಾರೆ.

ಟಿವಿ ವೀಕ್ಷಕರಿಗೆ ಇದು ವರವೂ ಹೌದು, ಶಾಪವೂ ಹೌದು!!
ಟ್ರಾಯ್‌ನ ನೂತನ ಕೇಬಲ್ ಮತ್ತು ಡಿಟಿಹೆಚ್ ನಿಯಮ ಗ್ರಾಹಕರಿಗೆ ಹೆಚ್ಚು ಲಾಭವಾಗುವಂತೆ ಕಾಣುತ್ತಿದೆ. ಗ್ರಾಹಕರು 130 ರೂಪಾಯಿಗೆ 100 ಉಚಿತ ಚಾನಲ್‌ಗಳನ್ನು ಪಡೆಯುತ್ತಾರೆ. ಇದರ ಮೇಲೆ ತಮಗೆ ಬೇಕಾದ 4 ರಿಂದ 5 ಚಾನೆಲ್‌ಗಳು ಬೇಕಾದಾಗ ಅವುಗಳಿಗೆ ಹಣ ಪಾವತಿಸಿ ವೀಕ್ಷಿಸಬಹುದು. ಇದರಿಂದ 200 ರೂಪಾಯಿಯ ಒಳಗೆ ಟಿವಿ ಗ್ರಾಹಕನೋರ್ವನ ಇಚ್ಚಾನುಸಾರ ಟಿವಿ ವೀಕ್ಷಣೆ ಸಾಧ್ಯವಾಗುತ್ತದೆ. ಆದರೆ, ಎಲ್ಲಾ ಚಾನಲ್‌ಗಳನ್ನು ನೋಡಲು ಈಗ 350 ರಿಂದ 400 ರೂ. ಹಣ ಪಾವತಿ


Click it and Unblock the Notifications








