ಸಿನಿಮಾ ವೀಕ್ಷಿಸಲು, ರೈಲ್ವೆ ಟಿಕೆಟ್ ಬುಕ್ ಮಾಡಲು ಬಡ್ಡಿ ಇಲ್ಲದೆ ಸಾಲ ನೀಡುವ 'ಆಪ್' ಇದು!!
ಆನ್‌ಲೈನಿನ್ ಪ್ರಪಂಚದ ಕ್ರೇಜ್ ಎಷ್ಟು ಬದಲಾಗಿದೆ ಎಂದರೆ, ಈ ಒಂದು ಆಪ್ ಅನ್ನು ಡೌನ್‌ಲೋಡ್ ಮಾಡಿ ಖಾತೆಯನ್ನು ರಿಜಿಸ್ಟರ್ ಮಾಡಿಕೊಂಡರೆ ಈ ಆಪ್ ನಿಮಗೆ ಥಿಯೇಟರ್‌ನಲ್ಲಿ ಸಿನಿಮಾವನ್ನು ನೋಡಲು ಸಾಲ ನೀಡುತ್ತದೆ. ನೀವು ನೋಡಿದ ಚಿತ್ರದ ಟಿಕೆಟ್ನ ಹಣವನ್ನು ಕೆಲ ದಿನಗಳ ಬಳಿಕ ಪಾವತಿಸುವ ಆಯ್ಕೆಯೊಂದನ್ನು ಈ ಹೊಸ ಆಪ್ ಪ್ರಕಟಿಸಿದೆ.
ಹೌದು, ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಇಪೇ ಲೇಟರ್ (epaylater) ಹೊಸ ಆಪ್ ಇಂತಹ ವಿಶೇಷ ಆಫರ್ ಅನ್ನು ನೀಡಿದೆ. ಒಂದೊಳ್ಳೆ ಸಿನಿಮಾ ಇದ್ದಾಗ ಹಣ ಇರುವುದಿಲ್ಲ ಎಂಬ ಪರಿಸ್ಥಿತಿಯನ್ನು ಮನಗಂಡು ಇಪೇ ಲೇಟರ್ (epaylater) ಆಪ್ ಬಳಕೆದಾರರಿಗೆ ಈ ಅವಕಾಶವನ್ನು ನೀಡುತ್ತಿದೆ. ಚಿತ್ರದ ಟಿಕೆಟ್ನ ಹಣವನ್ನು ಕೆಲ ದಿನಗಳ ಬಳಿಕ ಪಾವತಿಸಬೇಕಾಗುತ್ತದೆ.

ಯಾವುದೇ ಹೆಚ್ಚುವರಿ ಶುಲ್ಕ ನೀಡದೆ, ಕೇವಲ ಈ ಆಪ್‌ನಲ್ಲಿ ನೀವು ಖಾತೆಯನ್ನು ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಸಿನಿಮಾ ವೀಕ್ಷಿಸಬಹುದಾಗಿದೆ. ಹಾಗಾದರೆ, ಇಪೇ ಲೇಟರ್ (epaylater) ಹೊಸ ಆಪ್ ಹೇಗಿದೆ? ಥಿಯೇಟರ್‌ನಲ್ಲಿ ಸಿನಿಮಾವನ್ನು ನೋಡಲು ಸಾಲ ಪಡೆಯಲು ಏನು ಮಾಡಬೇಕು? ಗ್ರಾಹಕರಿಗೆ ಏನು ಲಾಭ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹಣದ ಚಿಂತೆ ಬಿಟ್ಟು ಸಿನಿಮಾ ನೋಡಿ!
ಭಾರತದಲ್ಲಿ ಸಿನಿಮಾ ಕ್ರೇಜ್ ತುಸು ಹೆಚ್ಚು ಎನ್ನಬಹುದು. ಹಣ ಇರುವಾಗ ಒಂದೊಳ್ಳೆ ಸಿನಿಮಾ ಇರುವುದಿಲ್ಲ, ಒಂದೊಳ್ಳೆ ಸಿನಿಮಾ ಇದ್ದಾಗ ಹಣ ಇರುವುದಿಲ್ಲ ಎಂಬ ಪರಿಸ್ಥಿತಿಯನ್ನು ನಿವಾರಿಸಲು ಈ ಆಪ್ ಸಹಾಯ ಮಾಡಲಿದೆ. ಈ ಮೊದಲು ಸಿನಿಮಾಗೆ ಮಾತ್ರ ಸೀಮಿತವಾಗಿದ್ದ ಆಪ್ ಈಗ ರೈಲ್ವೆ ಮತ್ತು ಇತರೆ ಸೇವೆಗಳಿಗೂ ಹಣ ನೀಡುತ್ತಿದೆ.

ಹೆಚ್ಚುವರಿ ಶುಲ್ಕ ಇಲ್ಲ!
ಈ ಆಪ್‌ನಲ್ಲಿ ನೀವು ಖಾತೆಯನ್ನು ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಸಿನಿಮಾ ವೀಕ್ಷಿಸಬಹುದು. ಚಿತ್ರದ ಟಿಕೆಟ್ನ ಹಣವನ್ನು ಕೆಲ ದಿನಗಳ ಬಳಿಕ ಪಾವತಿಸಬೇಕಾಗುತ್ತದೆ. 14 ದಿನಗಳ ಒಳಗೆ ಈ ಮೊತ್ತವನ್ನು ಮರು ಪಾವತಿಸಿದರೆ ಸಾಕು. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ನೀಡಬೇಕಿಲ್ಲ.

14 ದಿನಗಳ ನಂತರ ಬಡ್ಡಿ!
14 ದಿನಗಳ ಒಳಗೆ ಈ ಮೊತ್ತವನ್ನು ಮರು ಪಾವತಿಸಿದರೆ ಯಾವುದೇ ಶುಲ್ಕವನ್ನು ಈ ಆಪ್ ಕೇಳುವುದಿಲ್ಲ. ಆದರೆ, 14 ದಿನಗಳ ನಂತರ ಹಣ ಪಾವತಿಸಿದರೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಈ ದರವು 3% ಆಗಿದ್ದು, ತಿಂಗಳ ಲೆಕ್ಕದಲ್ಲಿ ಹೆಚ್ಚುವರಿ ಶುಲ್ಕವನ್ನು ನೀಡಬೇಕಾಗುತ್ತದೆ.

ಆಪ್‌ಗೆ ರಿಜಿಸ್ಟರ್ ಆಗುವುದು ಹೇಗೆ?
ಇಪೇ ಲೇಟರ್ ಆಪ್‌ನಲ್ಲಿ ಖಾತೆ ರಚಿಸಲು ಪಾನ್ ಕಾರ್ಡ್ ಮತ್ತು ಆಧಾರ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಈ ದಾಖಲೆಗಳು ನಿಮ್ಮಲ್ಲಿದ್ದರೆ ಕೇವಲ 4 ನಿಮಿಷಗಳಲ್ಲಿ ಖಾತೆ ತೆರೆಯಬಹುದು. ಹಾಗೆಯೇ, ಕಂಪನಿ ಕೂಡ ನಿರ್ದೀಷ್ಟ ಮೊತ್ತದ ಸಾಲವನ್ನು ನೀಡುತ್ತದೆ. ನಿಮ್ಮ ವಹಿವಾಟು ಉತ್ತಮವಾಗಿದ್ದರೆ ಈ ಮೊತ್ತದ ಮಿತಿಯನ್ನು ಹೆಚ್ಚಿಸಿಕೊಳ್ಳಬಹುದು.

ಹಣದ ವ್ಯವಹಾರ ಹೇಗಿದೆ?
ಬ್ಯಾಂಕು ಮತ್ತು ಮೊಬೈಲ್ ವಾಲೆಟ್ಗಳ ಮೂಲಕ ಇಪೇ ಲೇಟರ್ ಸಂಸ್ಥೆ ನೀಡಿದ ಹಣವನ್ನು ಹಿಂಪಡೆದುಕೊಳ್ಳುತ್ತದೆ. ಇದಲ್ಲದೆ NEFT ಸೇರಿದಂತೆ ಹಲವು ವಿಧಾನಗಳ ಮೂಲಕ ಕೂಡ ಹಣವನ್ನು ಮರುಪಾವತಿ ಮಾಡಬಹುದು. ಇದಕ್ಕೂ ಸಹ ಯಾವುದೇ ಹೆಚ್ಚುವರಿ ಶುಲ್ಕ ನೀಡಬೇಕಿಲ್ಲ.

ಉತ್ತಮ ವ್ಯವಹಾರಕ್ಕೆ ಬೆಲೆ ಹೆಚ್ಚು!
ಈ ಆಪ್ ಬಳಸಿ ಸಾಲ ಪಡೆದು ಮರುಪಾವತಿ ಮಾಡುತ್ತಿದ್ದರೆ ಸಿಬಿಲ್ ಸ್ಕೋರ್ ನೀಡಲಾಗುತ್ತದೆ. ನಿಮ್ಮ ಪೇಮೆಂಟ್ ಹಿಸ್ಟರಿಗೆ ಅನುಗುಣವಾಗಿ ದೊಡ್ಡ ಮೊತ್ತದ ಸಾಲವನ್ನು ಕೂಡ ಇಪೇ ಲೇಟರ್ ಆಪ್‌ನೀಡುತ್ತದೆ. ನಿರಂತರ ಈ ಆಪ್ ಬಳಸಿ ಸಾಲ ಪಡೆದು ಮರುಪಾವತಿ ಮಾಡುತ್ತಿದ್ದರೆ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚುತ್ತದೆ.


Click it and Unblock the Notifications