EPFO: ಇ-ನಾಮಿನೇಷನ್ ಡೆಡ್‌ಲೈನ್ ವಿಸ್ತರಣೆ!..ನಾಮಿನಿ ಹೆಸರು ಸೇರಿಸೋದು ಹೇಗೆ?

|

ನಿವೃತ್ತಿ ನಿಧಿ ಸಂಸ್ಥೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಈ ಹಿಂದೆ ಎಲ್ಲಾ ಖಾತೆದಾರರು ಡಿಸೆಂಬರ್ 31, 2021 ರೊಳಗೆ ಇ-ನಾಮಿನೇಷನ್ (e-nomination) ಸಲ್ಲಿಸಲು ತಿಳಿಸಿತ್ತು. ಆದರೆ ಇದೀಗ ನಾಮಿನಿಯ ಹೆಸರನ್ನು ಸೇರಿಸಲು ನೀಡಿದ್ದ ಗಡುವನ್ನು ವಿಸ್ತರಿಸಲಾಗಿದೆ. ಈ ಬಗ್ಗೆ ಇಪಿಎಫ್‌ಒ (EPFO) ಸಂಸ್ಥೆಯು ಟ್ವಿಟರ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಕಳೆದ ಕೆಲವು ದಿನಗಳಿಂದ ಇಪಿಎಫ್‌ಒ (EPFO) ಪೋರ್ಟಲ್ ಡೌನ್ ಆಗಿದ್ದು, ಬಳಕೆದಾರರಿಗೆ ಇ-ನಾಮನಿರ್ದೇಶನ ಫೈಲ್ ಮಾಡಲು ಅಡಚಣೆ ಆಗಿತ್ತು.

EPFO: ಇ-ನಾಮಿನೇಷನ್ ಡೆಡ್‌ಲೈನ್ ವಿಸ್ತರಣೆ!..ನಾಮಿನಿ ಹೆಸರು ಸೇರಿಸೋದು ಹೇಗೆ?

'ನೀವು 31ನೇ ಡಿಸೆಂಬರ್ 2021 ರ ನಂತರ ನಾಮನಿರ್ದೇಶನವನ್ನು ಸಲ್ಲಿಸಬಹುದು. ಆದರೆ ಇಂದು ಇ-ನಾಮನಿರ್ದೇಶನವನ್ನು ಸಲ್ಲಿಸಲು ಆಯ್ಕೆಮಾಡಿ.' 'ಈಗ ಇ-ನಾಮನಿರ್ದೇಶನಗಳನ್ನು ಸಲ್ಲಿಸಲು ಯಾವುದೇ ಗಡುವನ್ನು ನಿಗದಿಪಡಿಸಲಾಗಿಲ್ಲ' ಎಂದು ಇಪಿಎಫ್‌ಒ (EPFO) ಟ್ವಿಟರ್ ಪೋಸ್ಟ್ ನಲ್ಲಿ ತಿಳಿಸಿದೆ.

ನಿಗದಿ ಮಾಡಿದ ಗಡುವಿನ ದಿನಾಂಕದೊಳಗೆ ನಾಮಿನಿಯ ಹೆಸರನ್ನು ಸೇರಿಸಲು ವಿಫಲರಾದ ಖಾತೆದಾರರು ಇಪಿಎಫ್‌ಒ ಸಂಸ್ಥೆ ನೀಡುವ ವಿವಿಧ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಸಂಸ್ಥೆ ಈ ಹಿಂದೆ ವಿವರಿಸಿದೆ. ಇನ್ನು ಖಾತೆದಾರರು ನಾಮಿನಿ ಸದಸ್ಯರ ಹೆಸರನ್ನು ಸೇರಿಸಲು ಅಧಿಕೃತ EPFO ವೆಬ್‌ಸೈಟ್‌ ನಲ್ಲಿ ಅವಕಾಶ ನೀಡಲಾಗಿದೆ. ಹಾಗಾದರೇ EPFO ವೆಬ್‌ಸೈಟ್‌ ನಲ್ಲಿ ಖಾತೆದಾರರು ಇ-ನಾಮನಿರ್ದೇಶನ ಸೇರಿಸಲು ಅನುಸರಿಸಬೇಕಾದ ಹಂತಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

EPFO ವೆಬ್‌ಸೈಟ್‌ ನಲ್ಲಿ ಇ-ನಾಮಿನೇಷನ್ ಅನ್ನು ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ:

* https://www.epfindia.gov.in/site_en/index.php ಗೆ ಭೇಟಿ ನೀಡಿ ಮತ್ತು 'ಸೇವೆ' ಕ್ಲಿಕ್ ಮಾಡಿ.
* 'ಉದ್ಯೋಗಿಗಳಿಗಾಗಿ' ಬಟನ್ ಕ್ಲಿಕ್ ಮಾಡಿ.
* ಮರುನಿರ್ದೇಶಿಸಿದ ನಂತರ, 'ಸದಸ್ಯ UAN / ಆನ್‌ಲೈನ್ ಸೇವೆ' ಆಯ್ಕೆಯನ್ನು ಕ್ಲಿಕ್ ಮಾಡಿ.
* ಈಗ, ನಿಮ್ಮ UAN ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ ಮಾಡಿ.
* ಡ್ರಾಪ್-ಡೌನ್ ಮೆನುವಿನಲ್ಲಿ 'ಮ್ಯಾನೇಜ್' ಟ್ಯಾಬ್‌ಗೆ ಹೋಗಿ ಮತ್ತು 'ಇ-ನಾಮನಿರ್ದೇಶನ' ಆಯ್ಕೆಮಾಡಿ.
* 'ಹೌದು' ಆಯ್ಕೆಮಾಡಿ ಮತ್ತು ಕುಟುಂಬದ ಘೋಷಣೆಯನ್ನು ನವೀಕರಿಸಿ.

EPFO: ಇ-ನಾಮಿನೇಷನ್ ಡೆಡ್‌ಲೈನ್ ವಿಸ್ತರಣೆ!..ನಾಮಿನಿ ಹೆಸರು ಸೇರಿಸೋದು ಹೇಗೆ?

* ಈಗ, 'ಕುಟುಂಬದ ವಿವರಗಳನ್ನು ಸೇರಿಸಿ' ಕ್ಲಿಕ್ ಮಾಡಿ ಮತ್ತು 'ನಾಮನಿರ್ದೇಶನ ವಿವರಗಳು' ಆಯ್ಕೆಮಾಡಿ ಇದರಿಂದ ನೀವು ಹಂಚಿಕೊಳ್ಳಬೇಕಾದ ಒಟ್ಟು ಮೊತ್ತವನ್ನು ಘೋಷಿಸಬಹುದು.
* ಇದರ ನಂತರ, 'ಸೇವ್ ಇಪಿಎಫ್ ನಾಮನಿರ್ದೇಶನ' ಕ್ಲಿಕ್ ಮಾಡಿ.
* ಮುಂದಿನ ಪುಟದಲ್ಲಿ, 'e-sign' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಗೆ ನೀವು ಓಟಿಪಿ (OTP) ಅನ್ನು ಸ್ವೀಕರಿಸುತ್ತೀರಿ
* ಒಮ್ಮೆ ನೀವು ಓಟಿಪಿ (OTP) ಅನ್ನು ಫೀಡ್ ಮಾಡಿ ಮತ್ತು 'ಸಲ್ಲಿಸು' ಬಟನ್ ಕ್ಲಿಕ್ ಮಾಡಿದರೆ, ನಿಮ್ಮ ನಾಮನಿರ್ದೇಶನ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.

ವಾಟ್ಸಾಪ್‌ನಲ್ಲಿ ಬ್ಯಾಂಕ್ ಬ್ಯಾಲೆನ್ಸ್‌ ಚೆಕ್ ಮಾಡಲು ಈ ಕ್ರಮ ಅನುಸರಿಸಿ:

ಹಂತ 1: ಫೋನಿನಲ್ಲಿ ವಾಟ್ಸಾಪ್‌ ಆಪ್‌ಗೆ ಹೋಗಿ ಮತ್ತು ನಂತರ ಮುಖ್ಯ ಪರದೆಯ ಮೇಲಿನ ಬಲ ಭಾಗದಲ್ಲಿರುವ ಮೂರು ಡಾಟ್ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ 'ಸೆಟ್ಟಿಂಗ್‌ಗಳು' ಗೆ ಹೋಗಿ,
ಹಂತ 2: ನಂತರ, 'ಪಾವತಿಗಳು' ಆಯ್ಕೆಮಾಡಿ ಮತ್ತು ಸಂಬಂಧಿತ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ.
ಹಂತ 3: 'ಖಾತೆ ಬ್ಯಾಲೆನ್ಸ್ ವೀಕ್ಷಿಸಿ' ಮೇಲೆ ಟ್ಯಾಪ್ ಮಾಡಿ ಮತ್ತು ಪಿನ್ ಇನ್‌ಪುಟ್ ಮಾಡಿ.
ಹಂತ 4: ನೀವು ಪಿನ್ ನಮೂದಿಸಿದ ನಂತರ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪ್ರದರ್ಶಿಸಲಾಗುತ್ತದೆ.

Best Mobiles in India

Read more about:
English summary
EPFO e-nomination Deadline Extended: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X