ಪಿಎಫ್‌ ಖಾತೆದಾರರಿಗೆ ಗುಡ್‌ ನ್ಯೂಸ್‌! ಮುಂಗಡವಾಗಿ ಹಣ ಪಡೆಯಲು ಅವಕಾಶ!

|

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌ ನೀಡಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಕಾರಣದಿಂದಾಗಿ ಸಂಕಷ್ಟದಲ್ಲಿರುವ ಕಾರ್ಮಿಕರ ನೆರವಿಗೆ EPFO ದಾವಿಸಿದೆ. EPFO ತನ್ನ ಚಂದಾದಾರರಿಗೆ ಮುಂಗಡವಾಗಿ ತಮ್ಮ ಖಾತೆಯಿಂದ ಹೆಚ್ಚಿನ ಹಣವನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ಎರಡನೇ ಬಾರಿಗೆ ಮುಂಗಡವಾಗಿ ಹಣ ಪಡೆದುಕೊಳ್ಳುವ ಅವಕಾಶ ಮಾಡಿಕೊಟ್ಟಿದೆ ಎಂದು EPFO ಅಧಿಕೃತ ಪ್ರಕಟಣೆ ತಿಳಿಸಿದೆ.

EPFO

ಹೌದು, ಕೊರೊನಾ ಎರಡನೇ ಅಲೆ ಕಾರಣದಿಂದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ EPFO ನೆರವಿಗೆ ಬಂದಿದೆ. ಪಿಎಫ್‌ ಖಾತೆದಾರರು ತಮ್ಮ ಖಾತೆಯಿಂದ ಎರಡನೇ ಬಾರಿಗೆ ಮುಂಗಡ ಹಣವನ್ನು ಪಡೆಯಲು ಅವಕಾಶ ಕಲ್ಪಿಸಿದೆ. ಪ್ರಸ್ತುತ ಸಮಯದಲ್ಲಿ ಆರ್ಥಿಕ ಸಹಾಯಕ್ಕಾಗಿ ಸದಸ್ಯರ ತುರ್ತು ಅಗತ್ಯವನ್ನು ಪರಿಗಣಿಸಿ, ನೌಕರರಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈ ಕ್ಲೇಮ್ಸ್‌ಗಳನ್ನು ಅರ್ಜಿ ಸ್ವೀಕರಿಸಿದ ಮೂರು ದಿನಗಳಲ್ಲಿ ಇತ್ಯರ್ಥಪಡಿಸಲು EPFO ಬದ್ಧವಾಗಿದೆ. ಹಾಗಾದ್ರೆ ಈ ಸೇವೆ ಯಾರಿಗೆ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

EPFO

EPFO ಎಲ್ಲಾ ರೀತಿಯ ಸದಸ್ಯರಿಗೆ ಸಂಬಂಧಿಸಿದಂತೆ ಸಿಸ್ಟಮ್ ಚಾಲಿತ ಆಟೋ-ಕ್ಲೇಮ್ಸ್‌ ಇತ್ಯರ್ಥ ಪ್ರಕ್ರಿಯೆಯನ್ನು ನಿಯೋಜಿಸಿದೆ. ಸ್ವಯಂ-ಮೋಡ್ ಆಫ್ ಸೆಟಲ್ಮೆಂಟ್ EPFOಗೆ ಕ್ಲೈಮ್ ಸೆಟಲ್ಮೆಂಟ್ ಅನ್ನು ಕೇವಲ 3 ದಿನಗಳ ಒಳಗೆ ಮಾಡಿಕೊಡಲು ಶಕ್ತಗೊಳಿಸುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಮುಂಗಡವಾಗಿ ನೀಡಲಾಗುವ ಹಣ ಇಪಿಎಫ್ ಸದಸ್ಯರಿಗೆ ಉತ್ತಮ ಸಹಾಯವಾಗಿದೆ. ಅದರಲ್ಲೂ ವಿಶೇಷವಾಗಿ ತಿಂಗಳಿಗೆ 15,000.ರೂ ವೇತನ ಪಡೆಯುವ ನೌಕರರಿಗೆ ಇದು ಸಾಕಷ್ಟು ಉಪಯುಕ್ತವಾಗಿದೆ.

ಇಪಿಎಫ್‌ಒ

ಇನ್ನು ಇಪಿಎಫ್‌ಒ ಇಲ್ಲಿಯವರೆಗೆ 76.31 ಲಕ್ಷಕ್ಕೂ ಹೆಚ್ಚು ಕೋವಿಡ್‌-19 ಮುಂಗಡ ಕ್ಲೇಮ್ಸ್‌ ಅನ್ನು ಇತ್ಯರ್ಥಪಡಿಸಿದೆ. ಈ ಮೂಲಕ ಒಟ್ಟು 18,698.15 ಕೋಟಿ ರೂ. ಪಿಎಫ್ ಕ್ಲೇಮ್‌ ಮಾಡಿದೆ. ಇನ್ನು ಈ ಯೋಜನೆಯಡಿಯಲ್ಲಿ ಸದಸ್ಯರು ಮೂರು ತಿಂಗಳವರೆಗಿನ ಮೂಲ ವೇತನ ಮತ್ತು ತುಟ್ಟಿಭತ್ಯೆ ಪ್ರಮಾಣದಷ್ಟು ಅಥವಾ ಇಪಿಎಫ್‌ ಖಾತೆಗೆ ಜಮೆ ಮಾಡಲಾದ ಕಳೆದ ವರ್ಷದ ಶೇಖಡ 75% ರಷ್ಟು ಹಣವನ್ನು ಹಿಂಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಕೂಡ ಹೇಳಿದೆ. 2020 ರಲ್ಲಿ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಮೊದಲ ಬಾರಿ ಈ ಸೇವೆಯನ್ನು ಅನುಷ್ಠಾನಗೊಳಿಸಲಾಗಿತ್ತು.

ಎರಡನೇ

ಕೋವಿಡ್ -19 ಎರಡನೇ ಅಲೆಯ ಸಮಯದಲ್ಲಿ, ‘ಮ್ಯೂಕಾರ್ಮೈಕೋಸಿಸ್' ಅಥವಾ ಕಪ್ಪು ಶಿಲೀಂಧ್ರವನ್ನು ಇತ್ತೀಚೆಗೆ ಸಾಂಕ್ರಾಮಿಕ ರೋಗವೆಂದು ಘೋಷಿಸಲಾಗಿದೆ. ಅಂತಹ ಪ್ರಯತ್ನದ ಸಮಯದಲ್ಲಿ, ಇಪಿಎಫ್‌ಒ ತನ್ನ ಸದಸ್ಯರಿಗೆ ಅವರ ಹಣಕಾಸಿನ ಅಗತ್ಯಗಳನ್ನು ಪೂರೈಸುವ ಮೂಲಕ ಸಹಾಯ ಹಸ್ತ ನೀಡಲು ಪ್ರಯತ್ನಿಸುತ್ತದೆ. ಈಗಾಗಲೇ ಮೊದಲ COVID-19 ಮುಂಗಡವನ್ನು ಪಡೆದ ಸದಸ್ಯರು ಈಗ ಎರಡನೇ ಮುಂಗಡವನ್ನು ಸಹ ಆರಿಸಿಕೊಳ್ಳಬಹುದು. ಎರಡನೇ COVID-19 ಮುಂಗಡವನ್ನು ಹಿಂಪಡೆಯುವ ಅವಕಾಶ ಮತ್ತು ಪ್ರಕ್ರಿಯೆಯು ಮೊದಲ ಮುಂಗಡದಂತೆಯೇ ಇರುತ್ತದೆ ಎನ್ನಲಾಗಿದೆ.

Best Mobiles in India

Read more about:
English summary
Under this provision, non-refundable withdrawal to the extent of the basic wages and dearness allowances for three months or up to 75% of the amount standing to member's credit in the EPF account.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X