Home
ಸುದ್ದಿಜಾಲ

ನೀವು PF ಅಕೌಂಟ್ ಹೊಂದಿದ್ದೀರಾ?..ಹಾಗಾದರೆ, ನೋಡಿ ಈ ಭರ್ಜರಿ ಸಿಹಿಸುದ್ದಿ!

ಪ್ರಸ್ತುತ PF ಹಣವನ್ನು ಹಿಂಪಡೆಯುವ ಪ್ರಕ್ರಿಯೆ ಹಲವಾರು ಹಂತಗಳನ್ನು ಒಳಗೊಂಡಿದ್ದು, ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತಿತ್ತು. ಆದರೆ, ಇನ್ನು ಮುಂದೆ ಇದು ಹೀಗಿರುವುದಿಲ್ಲ.! ಹೌದು, ಇದೀಗ PF ಹಣವನ್ನು ಹಿಂಪಡೆಯುವುದು ಬಹಳ ಸುಲಭವಾಗಿದೆ. ಏಕೆಂದರೆ, PF ಹಣವನ್ನು ಹಿಂಪಡೆಯಲು ಚಂದಾದಾರರು ಇನ್ನುಮುಂದೆ ಆನ್‌ಲೈನಿನಲ್ಲಿ ರದ್ದು ಮಾಡಲಾದ ಚೆಕ್ ಅನ್ನು ಅಪ್‌ಲೋಡ್ ಮಾಡಬೇಕಿಲ್ಲ. ಜೊತೆಗೆ, ಚಂದಾದಾರರ ಬ್ಯಾಂಕ್ ಖಾತೆಯನ್ನು ಉದ್ಯೋಗದಾತ ಕಂಪೆನಿಯು ದೃಢೀಕರಿಸುವ ಅಗತ್ಯವಿಲ್ಲ ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತಿಳಿಸಿದೆ. ಗುರುವಾರದಂದು ಈ ಕುರಿತು ಮಾಹಿತಿ ನೀಡಿರುವ ನೌಕರರ ಭವಿಷ್ಯ ನಿಧಿ ಸಂಸ್ಥೆಯು, ಈ ಹೊಸ ಕ್ರಮದಿಂದಾಗಿ ತ್ವರಿತವಾಗಿ ​​ಕ್ಲೈಮ್ ಪ್ರಕ್ರಿಯೆ ನಡೆಯಲಿದೆ. ಮತ್ತು ಇದರಿಂದ ಸುಮಾರು 8 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದೆ.!

ಪ್ರಸ್ತುತ PF ಚಂದಾದಾರರು ಆನ್‌ಲೈನ್ ಮೂಲಕ PF ಹಣವನ್ನು ಹಿಂಪಡೆಯಲು ಅರ್ಜಿ ಸಲ್ಲಿಸುವ ವೇಳೆ ಕ್ಯಾನ್ಸಲ್ ಮಾಡಲಾದ ಚೆಕ್ ಪ್ರತಿಯನ್ನು ಅಪ್‌ಲೋಡ್ ಮಾಡಬೇಕಿತ್ತು. ಅಥವಾ PF ಖಾತೆಯೊಂದಿಗೆ ಜೋಡಣೆಯಾಗಿದ್ದ ಬ್ಯಾಂಕ್ ಖಾತೆಯ ಪಾಸ್‌ಬುಕ್ ಪ್ರತಿಯನ್ನು ಅಪ್‌ಲೋಡ್ ಮಾಡಬೇಕಿತ್ತು. ಜೊತೆಗೆ ಚಂದಾದಾರರ ಬ್ಯಾಂಕ್ ಖಾತೆಯನ್ನು ಉದ್ಯೋಗದಾತ ಕಂಪೆನಿಯು ದೃಢೀಕರಿಸಬೇಕಿತ್ತು. ಇದರಿಂದ ಹಲವಾರು PF ಚಂದಾದಾರರ ಸಮಸ್ಯೆಗೆ ಒಳಗಾಗುತ್ತಿದ್ದರು. ಮತ್ತು ಹಣ ಪಡೆಯುವುದು ವಿಳಂಬವಾಗುತ್ತಿತ್ತು. ಇನ್ಮುಂದೆ ಹೀಗೇ ಆಗುವುದಿಲ್ಲ.! ಈ ಸಿಹಿಸುದ್ದಿ ಜೊತೆಗೆ ನಿಮಗೆ ಮತ್ತೊಂದು ಸಿಹಿಸುದ್ದಿ ಕೂಡ ಇದೆ. PF ಹಣವನ್ನುATM ಗಳಲ್ಲಿ ಪಡೆಯುವ ದಿನವು ಇನ್ನೇನು ಬರುತ್ತಿದೆ. ಈ ವರ್ಷದ ಮೇ ಅಂತ್ಯ ಅಥವಾ ಜೂನ್ ವೇಳೆಗೆ EPFO ಸದಸ್ಯರು UPI ಮತ್ತು ATM ಮೂಲಕ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ

ಕೆಲ ದಿನಗಳ ಹಿಂದೆಯಷ್ಟೇ, PF ಹಣವನ್ನು ATM ಮೂಲಕ ಪಡೆಯುವ ಕುರಿತು ಎಎನ್‌ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು, EPFO ಸದಸ್ಯರು ಮುಂಬರುವ ಮೇ ತಿಂಗಳ ಅಂತ್ಯ ಅಥವಾ ಜೂನ್ ವೇಳೆಗೆ ತಮ್ಮ ಭವಿಷ್ಯ ನಿಧಿ ಖಾತೆಗೆ ಸುಲಭವಾಗಿ ಪ್ರವೇಶಿಸಬಹುದೆಂದು ತಿಳಿಸಿದ್ದಾರೆ. EPFO ಸದಸ್ಯರು ತಮ್ಮ ಪಿಎಫ್ ಖಾತೆಯಲ್ಲಿರುವ ಮೊತ್ತವನ್ನು ನೇರವಾಗಿ ATM ಮತ್ತು UPI ಮೂಲಕ ವೀಕ್ಷಿಸಬಹುದು. ಅವರು ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ತಕ್ಷಣವೇ 1 ಲಕ್ಷ ರೂ.ವರೆಗೆ ಹಣ ಹಿಂಪಡೆಯಲು ಮತ್ತು ವರ್ಗಾವಣೆ ಮಾಡಲು ತಮ್ಮ ಆದ್ಯತೆಯ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬಹುದು ಎಂದು ತಿಳಿಸಿದ್ದಾರೆ. ಇದರಿಂದಾಗಿ, PF ಹಣವನ್ನು ಹಣವನ್ನು ATM ಮತ್ತು UPI ಮೂಲಕ ಪಡೆಯಲು ಹೊಸ ವ್ಯವಸ್ಥೆ ಯು ಶೀಘ್ರದಲ್ಲೇ ಜಾರಿಗೆ ಬರುವುದು ನಿಶ್ಚಿತವಾಗಿದೆ.

ನೀವು PF ಅಕೌಂಟ್ ಹೊಂದಿದ್ದೀರಾ?..ಹಾಗಾದರೆ, ನೋಡಿ ಈ ಭರ್ಜರಿ ಸಿಹಿಸುದ್ದಿ!

ಏನಿದು EPF ವ್ಯವಸ್ಥೆ?
EPF (ಎಂಪ್ಲಾಯೀಸ್ ಪ್ರೊವಿಡೆಂಟ್ ಫಂಡ್) ಭಾರತದಲ್ಲಿ ಉದ್ಯೋಗಿಗಳಿಗೆ ಕಡ್ಡಾಯ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ, ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಉದ್ಯೋಗಿಯ ವೇತನದ ಒಂದು ಭಾಗವನ್ನು EPF ಖಾತೆಗೆ ಜಮಾ ಮಾಡುತ್ತಾರೆ. ಈ ಹಣವು ಬಡ್ಡಿಯೊಂದಿಗೆ ಬೆಳೆಯುತ್ತದೆ ಮತ್ತು ಉದ್ಯೋಗಿ ನಿವೃತ್ತಿಯಾದಾಗ ಅಥವಾ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ (ಉದ್ಯೋಗ ಬದಲಾವಣೆ, ವೈದ್ಯಕೀಯ ತುರ್ತು ಪರಿಸ್ಥಿತಿಗಳು) ಪಡೆಯಬಹುದು. ಪ್ರಸ್ತುತ, EPF ಹಿಂಪಡೆಯುವ ಪ್ರಕ್ರಿಯೆ ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನಗಳನ್ನು ಒಳಗೊಂಡಿದ್ದು, ಇದು ಕೆಲವೊಮ್ಮೆ ಸಮಯ ತೆಗೆದುಕೊಳ್ಳುತ್ತದೆ. ಆದರೆ, ATM ಗಳ ಮೂಲಕ EPF ಹಣವನ್ನು ಪಡೆಯುವ ಆಯ್ಕೆಯು ಈ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತಿದ್ದು, ನೌಕರರಿಗೆ ತ್ವರಿತವಾಗಿ ಹಣವನ್ನು ಪಡೆಯಲು ಸಹಾಯ ಮಾಡುತ್ತದೆ.

ATM ಗಳ ಮೂಲಕ PF ಹಣವನ್ನು ಪಡೆಯುವ ಪ್ರಯೋಜನಗಳು ಹೀಗಿವೆ,
ಸುಲಭ ಲಭ್ಯತೆ: ನೌಕರರು ಅಗತ್ಯವಿರುವ ಸಮಯದಲ್ಲಿ ATM ಗಳಿಂದ ತ್ವರಿತವಾಗಿ ಹಣವನ್ನು ಪಡೆಯಬಹುದು.
ತ್ವರಿತ ಹಿಂಪಡೆಯುವಿಕೆ: ಪ್ರಸ್ತುತ ಪ್ರಕ್ರಿಯೆಗಿಂತ ಭಿನ್ನವಾಗಿ, ATM ಗಳ ಮೂಲಕ ಹಿಂಪಡೆಯುವಿಕೆ ತ್ವರಿತವಾಗಿರುತ್ತದೆ.
ಗ್ರಾಮೀಣ ಪ್ರದೇಶಗಳಿಗೆ ಅನುಕೂಲ: ಇಂಟರ್ನೆಟ್ ಸೌಲಭ್ಯವಿಲ್ಲದ ಗ್ರಾಮೀಣ ಪ್ರದೇಶದ ನೌಕರರಿಗೆ ಇದು ತುಂಬಾ ಅನುಕೂಲಕರವಾಗಿರುತ್ತದೆ.
ಪಾರದರ್ಶಕತೆ ಮತ್ತು ಭದ್ರತೆ: ಆಧಾರ್ ಲಿಂಕ್ಡ್ ಖಾತೆಗಳು ಮತ್ತು ದೃಢೀಕರಣದಂತಹ ಭದ್ರತಾ ಕ್ರಮಗಳು ಈ ಪ್ರಕ್ರಿಯೆಯನ್ನು ಸುರಕ್ಷಿತವಾಗಿಸುತ್ತವೆ.

ಈ ಪ್ರಕ್ರಿಯೆ ಹೇಗೆ ಕಾರ್ಯನಿರ್ವಹಿಸುತ್ತದೆ?
ATM ಗಳ ಮೂಲಕ EPF ಹಿಂಪಡೆಯುವ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರಬಹುದು ಎನ್ನಲಾಗಿದೆ,
EPF ಖಾತೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು.
ATM ನಲ್ಲಿ ದೃಢೀಕರಣ (ATM ಕಾರ್ಡ್ ಮತ್ತು ಪಿನ್ ಬಳಸಿ).
EPF ಮೊತ್ತವನ್ನು ಹಿಂಪಡೆಯುವುದು.
ನಗದು ವಹಿವಾಟು ಶುಲ್ಕಗಳು ಅನ್ವಯಿಸಬಹುದು.

ATM ಮೂಲಕ ಎಷ್ಟು PF ಹಣ ಪಡೆಯಬಹುದು?
ಕೇಂದ್ರ ಕಾರ್ಮಿಕ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು "ಹಕ್ಕುದಾರರು, ಫಲಾನುಭವಿಗಳು ಅಥವಾ ವಿಮೆದಾರರು ತಮ್ಮ ಹಕ್ಕಿನ ಹಣವನ್ನು ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ತಕ್ಷಣವೇ 1 ಲಕ್ಷ ರೂ.ವರೆಗೆ ATM ಮೂಲಕ ಪಡೆಯಬಹುದು." ಎಂದು ಹೇಳಿದ್ದಾರೆ. ಆದರೆ, ಕೆಲವು ಮಾಧ್ಯಮ ವರದಿಗಳ ಪ್ರಕಾರ, PF ಬ್ಯಾಲೆನ್ಸ್‌ನ ಶೇಕಡಾ 50 ರಷ್ಟು ಮಾತ್ರ ATM ಮೂಲಕ ವಿತ್‌ಡ್ರಾ ಮಾಡಬಹುದಾಗಿದೆ. PF ಖಾತೆದಾರನ ಮರಣದ ಸಂದರ್ಭದಲ್ಲಿ, ನಾಮಿನಿಯು ನೇರವಾಗಿ ATM ನಿಂದ ಹಣ ಹಿಂಪಡೆಯಬಹುದು, ಆದರೆ ಇದಕ್ಕಾಗಿ ಫಲಾನುಭವಿಯ ಬ್ಯಾಂಕ್ ಖಾತೆಯನ್ನು ಮೃತ ಇಪಿಎಫ್‌ಒ ಖಾತೆದಾರನ ಖಾತೆಗೆ ಲಿಂಕ್ ಮಾಡಬೇಕಾಗಿದೆ. ಈ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ, ಆದರೆ ಸರ್ಕಾರ ಮತ್ತು EPFO ಈ ವಿಷಯದಲ್ಲಿ ಚರ್ಚೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.

Best Mobiles in India

English summary
EPFO simplifies the withdrawal process by eliminating the need for bank account verification and a cancelled cheque.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+